153697political satireಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ /column/majavani/2009/0112-viniv-inc-sastry-majavani-interview.htmlಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ. ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು ಸ್ವಾರಸ್ಯ ಎರಡೂ ಹಳತಾದರೂ ನಿರ್ಭಿಡೆಯಿಂದ ವರದಿಮಾಡುವ ಮಜಾವಾಣಿ ಪತ್ರಿಕೆ ಈಗಲಾದರೂ ನನ್ನನ್ನು ಸಂಪರ್ಕಿಸಿರುವುದು ಶ್ಲಾಘನೀಯ. ಎಷ್ಟೋ ವರ್ಷಗಳ ಹೋರಾಟದ ನಂತರ ಕನ್ನಡವನ್ನು ಶಾಸ್ತ್ರಿಯ 34017http://kannada.oneindia.com/img/2009/01/12-vinivinc-shastri1e.jpg153697political satireದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg153697political satireಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg153697political satireನ್ನನ್ನತ್ರ ಇನ್ನೂ ಐನಾತಿ ಟೈಲಾಗ್‌ಗಳಿವೆ/column/humor/2009/0402-political-satire-by-natesh-babu.htmlಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ. ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ. ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ 35674http://kannada.oneindia.com/img/2009/04/02-varun-gandhi1.jpg153697political satireಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpg345255ambarishನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಅಂಬರೀಷ್/news/2009/03/16/ambarish-denies-to-contest-in-ls-poll09.htmlಬೆಂಗಳೂರು, ಮಾ. 16 : ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಆದರೆ, ಪಕ್ಷದ ಕೆಲ ಮುಖಂಡದಿಂದ ಮುಖಭಂಗವಾಗಿದೆ ಎಂದು ಮಾಜಿ ಸಂಸದ ಅಂಬರೀಷ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲ ದಿನದಗಳಿಂದ ಬಿಜೆಪಿ ಸೇರುತ್ತಾರೆ. ಬೆಂಗಳೂರಿನಲ್ಲಿರುವ ನಾಲ್ಕು ಲೋಕಸಭೆ ಕ್ಷೇತ್ರದಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 35256http://kannada.oneindia.com/img/2009/03/16-ambarish7.jpg345255ambarishಅಂಬರೀಷ್ ಜೆಡಿಎಸ್ ಸೇರ್ಪಡೆ ಸಾಧ್ಯತೆ/news/2009/03/19/ambarish-likely-to-join-jds-soon-hd-kumaraswamy.htmlಬೆಂಗಳೂರು, ಮಾ. 19 : ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನಗೊಂಡಿರುವ ರೆಬಲ್ ಸ್ಟಾರ್ ಅಂಬರೀಷ್ ಅವರು ಜೆಡಿಎಸ್ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ. ಬುಧವಾರ ಜೆಡಿಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಅಂಬರೀಷ ಅವರನ್ನು ಭೇಟಿ ಮಾಡಿ 4 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ನಂತರ ನಗು ಮುಖದಿಂದ ಹೊರ ಬಂದ ಕುಮಾರಸ್ವಾಮಿ ಮುಂದಿನ 48 35339http://kannada.oneindia.com/img/2009/03/19-ambarish7.jpg345255ambarishಜಗ್ಗೇಶ್, ಅಂಬರೀಷ್ ಅಭಿಮಾನಿಗಳ ಮಾತಿನ ಕಾದಾಟ/movies/controversy/2009/05/09-jaggesh-ambarish-fans-clash-again.htmlಕೆಲದಿನ ತಣ್ಣಗಾಗಿದ್ದ ನಟ ಜಗ್ಗೇಶ್ ಮತ್ತು ಅಂಬರೀಷ್ ನಡುವಿನ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಈ ಬಾರಿ ಜಗ್ಗೇಶ್ ಅಭಿಮಾನಿಗಳು ಮತ್ತು ಅಂಬರೀಷ್ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ. ರಾಜಕೀಯ ಅಂಗಳದಲ್ಲಿ ಕಾಲಿಟ್ಟಿರುವ ಇಬ್ಬರೂ ನಟರ ನಡುವಿನ ವಿವಾದ ಒಬ್ಬರನ್ನೊಬ್ಬರು ದ್ವೇಷಿಸುವ ಹಂತಕ್ಕೆ ಬೆಳೆದು ನಿಂತಿದೆ.'ಜಗ್ಗೇಶ್ ಎಂಥವನೆಂದು ನನಗೆ ಗೊತ್ತು. ನಾನೆಂಥವನೆಂದು ಜಗ್ಗೇಶ್ ಗೂ ಗೊತ್ತು' ಎಂದು 36502http://kannada.oneindia.com/img/2009/05/09-jaggesh-protest2.jpg345255ambarishಮಂಜ ಏಳದಂತೆ ತಡೆಯಲು ಅಂಬಿ ಅಭಿಮಾನಿಗಳ ಸಂಕಲ್ಪ/movies/controversy/2009/07/13-ambi-fans-to-block-eddelu-manjunatha-release.htmlಹಿರಿಯ ಚಿತ್ರನಟ ಮತ್ತು ಕಾಂಗ್ರೆಸ್ ನಾಯಕ ಅಂಬರೀಷ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಕ್ಷಮೆ ಕೋರದಿದ್ದರೆ ಬಿಜೆಪಿ ನಾಯಕ ಜಗ್ಗೇಶ್ ಅವರ ಹೊಸಚಿತ್ರ 'ಎದ್ದೇಳು ಮಂಜುನಾಥ' ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಎಚ್ಚರಿಕೆ ನೀಡಿದೆ. 'ಎದ್ದೇಳು ಮಂಜುನಾಥ' ಚಿತ್ರ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಯಾವ 37950http://kannada.oneindia.com/img/2009/07/13-jaggesh-eddelu1.jpg345255ambarishಸದ್ಯದಲ್ಲೇ'ವಾಯುಪುತ್ರ' ತೆರೆಗೆ ಆಗಮನ/movies/studio/2009/07/13-vaayuputra-to-release-in-august.htmlಕರುನಾಡ ಹೆಮ್ಮೆಯ ಪ್ರತಿಭೆ ಅರ್ಜುನ್ ಸರ್ಜಾ. ನೆರೆ ರಾಜ್ಯಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಜನಮನ್ನಣೆಗಳಿಸಿರುವ ಇವರು ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಹಂಬಲವಿತ್ತು. ಆ ಹಂಬಲವನ್ನು ಸಾಕಾರಗೊಳಿಸಿ 'ವಾಯುಪುತ್ರ' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ.ಚಿತ್ರಕ್ಕೆ ಮಂಗಳೂರು, ಮೈಸೂರು, ಪಾಂಡವಪುರ ಹಾಗೂ ದೂರದ ದುಬೈನಲ್ಲಿ 65 ದಿನಗಳ ಚಿತ್ರೀಕರಣ ನಡೆದಿದೆ. ಆಕಾಶ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪೂರ್ಣವಾದರೆ, ಅಶ್ವಿನಿ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ 37956http://kannada.oneindia.com/img/2009/07/13-chiranjeevi-sarja7.jpgnews"> ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ? | Political satire | Humor | Ambarish meets HDK | LS - ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ? - Kannada Oneindia

ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ?

Venkatesh Dodmane, America
ಲೋಕಸಭೆ ಇನ್ನೇನು ಹೊಸ್ತಿಲಲ್ಲೇ ಇದೆ. ಚುನಾವಣಾ ದಿನಾಂಕವನ್ನೂ ಪ್ರಕಟಿಸಲಾಗಿದೆ. ಗೆಲ್ಲುವ 'ರೇಸ್' ಕುದುರೆಗಳನ್ನು ನಿಲ್ಲಿಸಲು ಎಲ್ಲ ಪಕ್ಷಗಳು ಲೆಕ್ಕಾಚಾರಕ್ಕೆ ಇಳಿದಿವೆ. ಅವರಿವರ ಕೂಡಿಕೆಯ ಸುದ್ದಿ ಅಬಾರ್ಷನ್ ಆಗುವ ಮೊದಲೇ ಅನೇಕ ಪಕ್ಷಗಳು ಆಪರೇಷನ್ ಆರಂಭಿಸಿದ್ದಾರೆ. ಗೆಲ್ಲುವ ಕುದುರೆಯನ್ನು ನಿಲ್ಲಿಸಿದ್ದೇವೆಂಬ ಭ್ರಮೆಯಲ್ಲಿ ಪಕ್ಷದ ನಾಯಕರುಗಳಿದ್ದರೆ, ಅದರ ಮೂಗುದಾಣ ಮತದಾರ ಕೈಯಲ್ಲಿ ಹಿಡಿದುಕೊಂಡಿದ್ದಾನೆ.

* ವೆಂಕಟೇಶ್ ದೊಡ್ಮನೆ, ಅಮೆರಿಕ

"ಓ ಅಡ್ ಬಿದ್ದೆ ಕಣಣ್ಣೋ", ಕುಮಾರಣ್ಣನ್ನ ಕಂಡ್ ಕೂಡ್ಲೆ ಅಂಬಿಗೆ ಎಲ್ಲಿಲ್ಲದ ಚೆಡ್ಡಿದೋಸ್ತಿ ನೆನಪಾಗಿತ್ತು. ಲಗುಬಗೆಯಿಂದಲೇ ಕುಮಾರಣ್ಣನ ಮನೆಯೊಳಗೆ ಕಾಲಿಟ್ಟಿದ್ದರು.
"ಓ ಬರಬೇಕು ಗುರುಗುಳು, ಏನ್ ಇಷ್ಟ್ ದೂರ" ಕುಮಾರು ಏನ್ ಕಮ್ಮಿನಾ, ದೇಶಾವರಿ ನಗು ತೋರ್ಸ್ಕಂಡೇ ಬರ ಮಾಡಿಕೊಂಡ್ರು.
ಥೇಟ್ "ಜಾರ್ಜ್ ಬುಷ್ಶು ಸೋನಿಯಾ" ಕೈಕುಲುಕಿದ ತರ, ಕೈ ಶೇಕ್ ಮಾಡ್ಕಂತಲೇ ಪೂರ್ತಿ ಎರೆಡು ನಿಮಿಷ ಫೋಟೋ ಪೋಸ್ ಕೊಟ್ರು, ಒಹ್... ಪೋಟೋ ತೆಗೆಯೋರಿಲ್ಲ ಅಂತ ಅರಿವಾಗಿ ಈಗ ಕೈಬಿಟ್ರು. ಬರಸೆಳೆದು ಅಪ್ಕೊಳಕ್ಕೆ ಹೋಗಲಿಲ್ಲ, ಹೊಟ್ಟೆ ಮುಂದ್ಬಂದು 'ಎದೆ ಅ೦ಟ್ಕಣಕಿಲ್ಲ' ಅಂತ ಇಬ್ರಿಗೂ ಗೊತ್ತಿತ್ತು!

ಸೋಫಾದ ಮೇಲೆ ಧುಪ್ಪೆಂದು ಕುಳಿತ ಅಂಬಿ ತಟಕ್ಕನೆ ಎದ್ದು ಸೋಫಾ ಮುರಿದು ಹೋಯ್ತಾ ಅಂತ ಒಮ್ಮೆ ಚೆಕ್ ಮಾಡಿದ್ರು.
ಅದಕ್ಕೆ ಕುಮಾರು, "ಏನು ಆಗಕಿಲ್ಲ ಕುಂತ್ಕಳಣೋ, ನೀನೊಳ್ಳೆ, ಮೊನ್ನ್ ಮೊನ್ನೆ ಸಾಬರ ಅಂಗ್ಡಿ೦ದ ಒಸಾದ್ ತರ್ಸಿ ಹಾಕ್ಸಿವ್ನಿ..."
"ಓ ಅಂಗಾ, ನಮ್ಮನ್ಯಾಗೆ ಒಂದಿನ..." ಅಂಬಿ ಕಥೆಯನ್ನ ಮಧ್ಯೆ ತಡೆದು, "ಯೆ... ಎಂಥೆಂಥ ಕರ್ಗೆ ದರ್ಮ್ಸಿಂಗು ಕುಂತ್ರೇ ಏನು ಅಲಿಲ್ವಂತೆ.." ಕುಮಾರು 'ಟೈಮ್ ಟೆಸ್ಟೆಡ್' ಅಂತ ಸಮಜಾಯಿಸಿ ಕೊಂಡರು.

ಅಂಬಿ ಗೋಡೆಯ ಮೇಲಿದ್ದ ತೈಲ ಚಿತ್ರ, ದೇವೇಗೌಡರ ಫೋಟೋ... ಎಲ್ಲ ಕಣ್ಣಾಯಿಸಿ ನೋಡ್ತಿದ್ದಂತೆ, ಕುಮಾರು ಅಂಬಿಯನ್ನೇ ಕುತೂಹಲದಿಂದ ದಿಟ್ಟಿಸಿ, ನೀಡಿದ ಕಾಲು ತೊಡೆ ಕುಣಿಸುತ್ತಾ,
"ಹು.. ಅದಿರ್ಲಿ, ಏನ್ ಸಿವ ಇಟ್ ದೂರ ಈ ಬಡವನ್ ಮನೀಗೆ?" ಅಂಬಿ ಪಿಕ್ಚಚ್ರ್ ತೆಗೆಯಕ್ಕೆ ಇನ್ವೆಷ್ಟಮೆಂಟು ಎಲ್ಲಿ ಕೇಳ್ಬುಡ್ತಾರೋ ಅಂತ ಚಾಣಾಕ್ಷ ಕುಮಾರು ಮೊದ್ಲೇ 'ಬಡವ' ಅಂದ್ಕೊಂಡ್ ಸೇಫ್ ಅಗ್ಬಿಟ್ರು! ಇಲ್ದಿದ್ರೆ ಮೊನ್ನೇನಾಗ, ಅಪ್ಪಾಜಿ ಜೊತೆಗಾಗಿ ಕೂರ್ಸ್ಕಂದು ಪಾರ್ಲಿಮೆಂಟ್ ಎಲೆಕ್ಸನ್ ಬಗ್ಗೆ ತಿಳಿ ಏಳಿದ್ದು ಏನ್ ಪ್ರಯೋಜ್ಞ? ರಾಧಿಕಗೊಸ್ಕರ ಅಷ್ಟೊಂದು ದುಡ್ಡು ಸುಮ್ ಸುಮ್ನೆ ಖರ್ಚ್ ಮಾಡ್ಬೇಡ ಅ೦ತ ಹೇಳಿದ್ದು ಸುಮ್ನೆನ?

"ಯೆ..ಏನಿಲ್ ಕಣಣ್ಣೋ, ಇಂಗೇ ಒಂದಪ ನೊಂಡ್ಕಂಡ ಓಗವ ಅಂತ್ ಬಂದೆ, ಏನ್ ಬರಬಾರದ ಏಳು.. ವೊಂಟೋಯ್ತೀನಿ.." ಅಂಬಿ ಸುಮ್ಮನೆ ಕರಡಿ ಬೆದರು ತೋರ್ಸಿದ್ರು.
"ಐ ಬಿಡ್ತು ಅನ್ನು, ಯಾಕಂಗ್ ಮಾತಾಡೀಯ.. ಸುಮ್ಕೆ ಇಂಗೇ ಕೆಳುದ್ನಪ, ಒಬ್ನೇ ಬಂದ್ಯಲ್ಲ ಹೆಂಗುಸ್ರು ಕರ್ಕಂಡ್ ಬರ್ಬೋದಾಗಿತ್ತು, ನಮ್ ಮೇಡಮ್ನೋರಿಗೂ ಕಂಪ್ನಿ ಆಗ್ತಿತ್ತು ಅಂದೆ..." ಕುಮಾರು ನೆನಪಿಗೆ ಬಂದಿದ್ನ ತಕ್ಷಣ ಬಿಟ್ರು. ಅಸೆ೦ಬ್ಲೀಲಿ ಎ೦ಥೆ೦ಥಾ ದೊಡ್ಡ "ಬೊವ್ ಬೊವ್" ಗಳಿಗೇ ಪಟ್ಟ೦ತ ಉತ್ತರ ಕೊಟ್ಟಿಲ್ವ... "ಅರೆರೆ, ಯಾವಾಗಿಂದ ಮೇಡಮ್ಮು" ಕೇಳಣಾ೦ತ ಬಾಯಿ ತೆಗೆದ ಅಂಬಿ 'ಸುಮ್ನೆ ಯಾಕೆ' ಅವರೂ ಈಗ ಶಾಸಕರಲ್ವೆ ಅಂತ ವಿಷ್ಯಾನ ಚೇಂಜ್ ಮಾಡಿದ್ರು.

ಬಂದ ವಿಷಯಾನ ಹೇಗೆ ಹೇಳೋದು ಅಂತ ಹೊಳೀದೆ ಅಂಬಿ "ಥೂ..ಬೇಜಾರಾಗ್ಬುಟೈತಪ" ಅನ್ನುತ್ತಾ ಎರಡು ಕೈ ಮೇಲೆತ್ತಿ ಮೈ ಮುರಿಯುತ್ತಾ ಆಕಳಿಸಿದರು. ಸೋಫಾದ ಯಾವುದೊ ಮೂಲೆಯಲ್ಲಿ "ಕುರುಕ್... ಕಟ್" ಅಂತ ಶಬ್ದ ಆಯಿತು! ರಾಜಕೀಯದಲ್ಲಿ ಪಳಗಿದ ಕುಮಾರಣ್ಣನಿಗೆ ಈ ನಾಟಕ ಎಲ್ಲಾ ಅರ್ಥ ಆಗಲ್ವಾ, ಸುಮ್ನೆ ಅಡ್ಡ ಸಾಟಿ ಮೇಲೆ ಶುರು ಮಾಡಿದರು.
"ಚುನಾವಣೆ ಬಂತಪೋ, ಎಲ್ಲ ತಯಾರಿ ಮಾಡ್ಬೇಕು..." (ನಾವು ಹುಲ ಮಾನವರು ವಿದ್ಯಾರ್ಥಿ ಆಗಿದ್ದಾಗ anual exam ಬಂತು ಅಂತ ತಯಾರಿ ಮಾಡಲ್ವೇ, ಆತರ) ಅಂಬ್ರೀಶು ಸುಮ್ನೆ ಇದ್ದಿದ್ದು ನೋಡಿ ಕುಮ್ಮಿನೇ ಮುಂದುವರೆಸಿದರು. "ಏನ್ಲಾ, ಯಾ ಪಾರ್ಟಿ ಅಂತ ಏನನ ಡಿಸೈಡ್ ಮಾಡ್ದ?" ಯಾವ್ ಪಾರ್ಟೀಲಿ ನಿಂತರೂ ಗೆಲ್ಲೋ ಕುದುರೆ ಅಂತ ಕುಮ್ಮಿಗೆ ಗೊತ್ತಿಲ್ವ.

"ಅದೇ ಕಣ್ಲ ಸಮಸ್ಯೆ ಅಗ್ಬುತೈತೆ, ಕಾಂಗ್ರೆಸ್ನೋರು ಎಲ್ಲೂ ಹೋಗ್ಬೇಡ ನಿಂಗ್ ಬೇಕಾದ್ ಕೊಡ್ತೀವಿ ಅಂತಾರೆ, ಬಿಜೆಪಿನೋರು ನಮ್ಮೊಟ್ಟಿಗೆ ಬನ್ನಿ ದೇಶ ಕಟ್ಟಣ ಅಂತಾರೆ" ಅಂಬಿ ಮಾತು ಮುಗಿಸೋ ಮೊದ್ಲೇ ಕುತೂಹಲ ತಡೆಯಲಾರದೆ ಕುಮ್ಮಿ,, "ಬಿಜೆಪಿನವರಿಗೆ ಏನಂದೆ?" ಅಂತ ನಗುತ್ತಾ ಮಧ್ಯೆ ತೂರಿಸಿದರು.
"ಯೆ...ತತ್ ತಗಿ ಯಾಕಂತಿಯ, ಬರೀ ಪುಳ್ಚಾರ್ ನನ್ಮಕ್ಳು , 'ಸಂಗಟನೆ, ರಾಷ್ಟ್ರ ಗೀಷ್ಟ್ರ' ಅಂತ ಏನೋ ಕಥೆ ಬಿಡ್ತಾರೆ ಒಬ್ರಿಗೂ ಸೀರಿಯಸ್ ನೆಸ್ ಇಲ್ಲ" ಬಿಜೆಪಿನವರಿಗೆ ರಾಜಕೀಯದ ಬಗ್ಗೆ ಒಂದು ಕ್ಲಾಸ್ ತೊಗೊ೦ಡ್ ಬಿಡಬೇಕೆನ್ನುವಷ್ಟು ಸಿಟ್ಟು ಬಂದಿತ್ತು ಅಂಬಿಗೆ.
"ಹಹಃ ಹಹಃ ಹಹಃ......" ಕುಮಾರಣ್ಣ ಒಂದು ವರ್ಷದ ಹಿಂದೆ ಬಿಜೆಪಿಗೆ ಟೋಪಿ ಹಾಕಿದ್ದನ್ನು ನೆನೆಸಿಕೊಂಡು ಮನಸಾರೆ ಕೇಕೆ ಹಾಕಿ ನಕ್ಕರು. ಅಂಬಿ ಮೊಗದಲ್ಲೂ ನಗುವಿನ ಗೆರೆ ಮೂಡಿತ್ತು. ಈಗ ಪರಿಸ್ತಿತಿ ನಿರಾಳವಾಗಿತ್ತು, ಇಬ್ಬರೂ ಇನ್ನೂ ಕೆಲವನ್ನು ಸ್ನೇಹಿತರ೦ತೆ ಹಂಚಿಕೊಳ್ಳಲು ತಯಾರಾಗಿದ್ದರು.

"ನಿನ್ ಹಾರುವಯ್ಯ ಫ್ರೆಂಡು ಏನಂತಾರೆ" ಇದೇ ವೇಳೆ ವಿಷ್ಣು ಬಗ್ಗೆ ತಿಳ್ಕೊಂಡ್ ಬಿಡಾಣ ಅಂತ ಕುಮ್ಮಿಗೆ.
"ಯೆ.., ಪಾಪ ಅವು೦ದೇನೂ ಇಲ್ಲಪಾ, ನಾನು ಹೆಂಗೆಳ್ತಿನೋ ಅಂಗೆ" ಅಂಬಿಗೆ ವಿಷ್ಣು ಬಗ್ಗೆ ಕೊಂಚವೂ ಅನುಮಾನ ಇರಲಿಲ್ಲ.

ಅಂಬಿ ಈಗಾಗಲೆ ಕಾಗ್ರೆಸ್ಸಿಂದ ಹೊರಗೋಡಲು ತುದಿಗಳ ಮೇಲೆ ನಿಂತಿದ್ದಾರೆ ಅಂತ ಕುಮ್ಮಿಗೆ ಚೆನ್ನಾಗಿ ಗೊತ್ತಿತ್ತು.
"ಅಂಗಾದ್ರೆ ದೊಡ್ಡ ಗೌಡ್ರು ಕರೆದು ಮಾತಾಡ್ ಬುಡಾವ" ಆದಷ್ಟು ಬೇಗ ದೊಡ್ ಖುಳಾನ ಬುಟ್ಟಿಗೆ ಹಾಕಿ ಕೊಂಡ ಬುಡಾವ ಅಂತ ಕುಮ್ಮಿಗೆ.
"ನೋನೋ, ಅವೆಲ್ಲ ಆಮೇಲೆ ಮೊದ್ಲು ನಮ್ ಲೆವೆಲ್ನಾಗೆ ರೂಪುರೇಷೆ ಮಾತಾಡವ, ನಂತ್ರ ದೊಡ್ ಗೌಡ್ರು..." ಸುಮ್ನೆ ಪಾರ್ಟಿಗೆ ಸೇರ್ಕಂಬುಟ್ರೆ ಆತದ, ಪೇಪರ್ನಾಗೆ ಅನೌನ್ಸ್ ಆದಮೇಲೆ, ಬಿಜೆಪಿಗೆ ಹಾಕ್ದಂಗೆ ಪಂಗ ನಾಮ ಹಾಕ್ಬುಟ್ರೆ? ಅ೦ಬೀಗೂ ಅಲ್ಪ ಸ್ವಲ್ಪ ರಾಜಕೀಯ ಗೊತ್ತಿಲ್ವ?
"ಆಯ್ತು ಕಣಣ್ಣೋ, ನೀ ಯಾವ ಕ್ಷೇತ್ರ ನಿಂತ್ಗತಿಯ ಯೇಳು, ಅಲ್ಗೇ ಯವಸ್ತೆ ಮಾಡಾವ....ಸರಿಯೇನಪ..." ಕುಮಾರಣ್ಣ ಸಮಾಧಾನದಿಂದ. ದೇವೇಗೌಡ್ರು ಪರ್ಮಿಶನ್ ಇದಕ್ಕೇನು ಬೇಡ ಅ೦ತ ಕುಮ್ಮಿಗೆ ಗೊತ್ತಿತ್ತು.

"ಅದೇ ಕಣ್ಲ ಬಲೇ ಇಕ್ಕಟ್ಟಿಗೆ ಸಿಕಹಾಕ್ಕ ಬುಟೀವ್ನಿ" ವಯಸ್ಸಾಗಿರುವ ತನಗೆ ಅಭಿಮಾನಿ ಬಳಗವು ಕಡಿಮೆಯಾಗಿದೆ ಅಂತ ಚಿ೦ತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನೆನಪು ಇನ್ನೂ ಹಸಿರಾಗಿತ್ತು. ಹಾಗಾಗಿ ಹೆಚ್ಚು ಡಿಮ್ಯಾಂಡ್ ಮಾಡೋ ಪರಿಸ್ತಿತಿಯಲ್ಲಿರಲಿಲ್ಲ ಅ೦ಬಿ. ಕುಮ್ಮಿಗೆ ಇದು ಗೊತ್ತಿದ್ರೂ ಪಾರ್ಟಿಗೆ ಹೆಂಗಾನ ಮಾಡಿ ಜೀವ ತುಂಬ ಬೇಕಾಗಿದೆ. ಇವನ್ನ ಬುಟ್ಟಿಗೆ ಹಾಕ್ಕಂಡ್ರೆ, ಜೊತೆಗೆ ಆ ಹಾರುವಯ್ಯ ಬತ್ತವ್ನೆ, ಇಬ್ರು ಸೇರಿದ್ರೆ ಪಾರ್ಟಿಗೆ ಒಳ್ಳೆ ಸ್ಟಾರ್ ವ್ಯಾಲ್ಯೂ...ಕೆಲವು ಚೊಟಾ-ಮೋಟಾ ಯಾಕ್ಟ್ರುಗಳನ್ನೂ ಸೆರ್ಸ್ಕ೦ಬೋದು, ಜೊತೆಗೆ ಚಿರ೦ಜೀವಿ ಸಪೋರ್ಟೂ ಇದ್ರೆ ನಮ್ಮನ್ನ ಹಿಡಿಯೋರು ಯಾರು?

"ಆಗ್ಲಿ ಕಣ್ಲ, ನಿಂಗೆ ಯಾವ ಕ್ಷೇತ್ರ ಇಷ್ಟನೋ ಅಲ್ಗೆ ಟಿಕೆಟ್ ಕೊಡೋಣ೦ತೆ, ಯೋಚನೆ ಮಾಡ್ಕಂಡ್ ಬಾ, ಆಮೇಲೆ ಅಪ್ಪಾಜಿ ತಾವು ಕು೦ತ್ ಮಾತಾಡಣ" ಅಷ್ಟೊತ್ ವರೆಗೆ ತನಗೂ ಯೋಚನೆ ಮಾಡೋಕ್ಕೆ ಟೈಮ್ ಸಿಗುತ್ತೆ ಅಂತ ಯೋಚನೆ ಕುಮ್ಮಿಗೆ.
ಕುಮ್ಮಿ ಅಷ್ಟು ಫ್ರೀಡಂ ಕೊಟ್ಟಿದ್ದು ನೋಡಿ, "ಗೆಳೆಯಾ... ನಮ್ದೊಳ್ಳೆ ದೋಸ್ತಿ ಕಣೋ" ಅಂತ ವಿಷ್ಣು ಜೊತೆ ಡ್ಯುಯೆಟ್ ಹಾಡಿದ್ದು ನೆನಪಿಸಿಕೊಂಡು ಕುಮ್ಮಿ ಜೊತೆ ಕುಣುದ್ ಬುಡಾಣ ಅನ್ನೋವಶ್ಟು ಸಂತೋಷವಾಗಿತ್ತು ಅಂಬಿಗೆ. ಆದ್ರೆ ಇಲ್ಲಿ ಕುಣಿಯಕ್ಕೆ ಆಗುತ್ತಾ? ಇನ್ನೇನು ಬ೦ದ ಕೆಲಸ ಎಲ್ಲವೂ ಆಯಿತು, ಅಂಬಿ ಹೊರಡುವ ಸೂಚನೆ ಕೊಡುತ್ತಾ ಗಡಿಯಾರ ನೋಡುತ್ತಿದ್ದಂತೆ, ಕುಮ್ಮಿ,
"ಎಂಗೂ ಮುದ್ದೆ ರೆಡಿ ಐತೆ, ನಿಂಜೊತೆ ಊಟ ಮಾಡಿ ಶಾನೇ ದಿನಗಳಾಯ್ತು, ಅಂಗೇ ಮುದ್ದೆ ಮೆಲ್ಕ೦ಣ್ತ ಮಾತಾಡವ ಬಾ" ಎನ್ನುತ್ತಾ ಅಂಬಿ ಬೇಡವೆಂದರೂ ಒತ್ತಾಯ ಮಾಡಿ ಕೈ ಹಿಡಿದುಕೊಂಡು ಟೇಬಲ್ಲಿನ ಕುರ್ಚಿಗೆ ಕುಳ್ಳಿರಿಸಿದರು ಕುಮಾರಣ್ಣ. ಅಂಬೀಗೂ ಸುಮಾರು ದಿನ ಆಗಿತ್ತು ಮುದ್ದೆ ಬಸ್ಸಾರು ಉಣ್ಣದೆ, ಚಿಕನ್ ಮಸಾಲೆ ವಾಸನೆ ಬೇರೆ ಆಗಲೆ ಮೂಗಿಗೆ ಬಡಿದಿತ್ತು!

ಮುದ್ದೆ ಬಡಿಸುತ್ತ ಕುಮ್ಮಿ "ಮನೆ ಹೆಂಗುಸ್ರು ಮುದ್ದೆ ಮಾಡ್ತವ್ರ?" ಕುಮಾರು ಸುಮ್ಮನೆ ಎನ್ ಕ್ವಯಿರಿ ಮಾಡಿದ್ರು.
"ಯೆ..ಇಲ್ಕಣಣ್ಣೋ, ಆಸೆ ಪಟ್ಕ೦ಡು ದಿನಾ ಅಯ್ಯಂಗಾರ್ ಊಟ ಮಾಡಿ ಮಾಡಿ ಬಾಯಿ ಕೆಟ್ಟೊಗ್ಬುಟೈತೆ.." ಎನ್ನುತ್ತಾ ಒಂದೆರಡು ಚಿಕನ್ ಪೀಸ್ ಗಳನ್ನ ಹೆಚ್ಚಾಗೇ ಬಡಿಸಿಕೊಂಡರು ಅಂಬಿ.
"ಅದಿರ್ಲಿ, ಹೆಂಗೈತೆ, ಮಂಗ್ಳುರಿನ್ ವೊಸಾ ಅಕ್ಕಿ" ಹುಣುಸೆ ಮರಕ್ಕೆ ಮುಪ್ಪುಂಟೆ ಅನ್ನುವ ಧಾಟಿಯಲ್ಲಿ ಮು೦ದುವರೆಸಿದರು ಅಂಬಿ ಕಣ್ಣುಮಿಟುಕಿಸುತ್ತ.
"ಮೆಲ್ಲುಕ್ಕೆ, ಮೆಲ್ಲುಕ್ಕೆ ಮಾತಾಡ್ ಗುರು ಅಮ್ಮಾವ್ರು ವೊರಗೆ ವೋದವರು ಇನ್ನೇನ್ ಬರೋ ಹೊತ್ತಾಯಿತು" ಪಿಸು ಮಾತಿನಲ್ಲಂದರು ಕುಮ್ಮಿ. ಅವೆಲ್ಲ ಮಾಮೂಲಿ ಅನ್ನೋ ಸ್ವರದಲ್ಲಿ, "ಅಲ್ಕಣಯ್ಯ, ಅವಳ ಜೊತೆ ಹೋಗೋದ್ ಹೋಯ್ತಿಯ ಸ್ವಲ್ಪ ಜನಗಳ ಕಣ್ತಪ್ಸಿ ಹೋಗೋದ್ ಅಲ್ವ?" ಅನುಭವೀ ಅಂಬಿಯ ಅಡ್ವೈಸ್.

ಈ ನನ್ಮಕ್ಳು ಸಿನೆಮಾ ಆಕ್ಟ್ರುಗಳಿಗೆ ನಮ್ಕಷ್ಟ ಎಲ್ಲಿ ಅರ್ಥ ಆಗುತ್ತೆ.... ತಡವರಿಸಿಕೊ೦ಡು, "ಹೂ ಕಣಪ್ಪ, ಎಲ್ಲಾ ನೀಟಾಗಿ ಅರೆಂಜ್ ಮಾಡಿದ್ದ ನಮ್ ಏಜೆಂಟು, ಎಲ್ಲೋ ಎಡವಟ್ ಆಗ್ಬುಡ್ತು, ಎಲ್ಲಾ ಯಡ್ಡೀದೆ ಕಿತಾಪತಿ ಇರ್ಬೇಕು" ಮುಂದಿನ ರಾಜಕೀಯದ ಸುಳಿವು ಕೊಟ್ಟರು ಕುಮ್ಮಿ.
"ಅಯ್, ಅದಕ್ಕ್ಯಾಕೆ ಅಷ್ಟು ಸೀರಿಯಸ್ ಆಯ್ತೀಯ, ಹೋಗ್ಲಿ ಬುಡು, ಒಳ್ಳೆ ಅಕ್ಕೀನೆ ಆರ್ಸ್ಕಂಡಿದೀಯ, ಆದ್ರೆ ಇಷ್ಟ್ ಬಯಿರಂಗ ಆದ್ಮೇಲೆ ಅನಿತಕ್ಕ ಏನೂ ಅನ್ಲಿಲ್ವ?" ಪತ್ನಿವ್ರತಾ ಶಿರೋಮಣಿ ಅಂಬಿಯ ಕಿರುನಗೆಯ ನೋಟ!

ಅಷ್ಟೊತ್ತಿಗೆ ಮುಂದಿನ ಬಾಗಿಲಿನ ಬೆಲ್ ಆಯಿತು. ಕೆಲಸದ ಆಳು ಬಾಗಿಲು ತೆಗೆಯಲು ಓಡಿದ. ಕುಮಾರಣ್ಣ ಇನ್ನು ಮಾತು ಮು೦ದುವರೆಸಕ್ಕೆ ಆಗುತ್ತಾ?!....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+