ರಾಧಿಕಾ ಅವರಿಂದ ನಾಗಮಂಡಲ ಸೇವೆ

ತುಳು ಭಾಷಿಕರು ಬಹು ಭಕ್ತಿ ಭಾವದಿಂದ ನಡೆಸುವ ಅಗ್ರ ಪೂಜೆಗಳಲ್ಲಿ ನಾಗಮಂಡಲ ತುಂಬ ಮುಖ್ಯವಾದದ್ದು. ಸಚಿನ್ ತೆಂಡೂಲ್ಕರ್, ರವಿ ಶಾಸ್ತ್ರೀ, ರಾಹುಲ್ ದ್ರಾವಿಡ್, ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ, ರಿಷಿ ಕಪೂರ್ ಮುಂತಾದವರು ಸರ್ಪದೋಷ ನಿವಾರಣೆಗೆ ಕುಕ್ಕೇ ಸುಬ್ರಮಣ್ಯಕ್ಕೆ ಭೇಟಿ ಕೊಟ್ಟಿದ್ದು ಈಗ ಇತಿಹಾಸ. ಇದರಿಂದಾಗಿ ಮತ್ತು ಸುಬ್ರಮಣ್ಯಸ್ಮಾಮಿಯ ಮಹಿಮೆಯಿಂದಾಗಿ ನಾಗಮಂಡಲ ಪೂಜೆಯ ಸ್ಟಾರ್ ವ್ಯಾಲ್ಯೂ ದಿನೇದಿನೇ ರಾಜ್ಯದಲ್ಲಿ ಏರುಗತಿಯಲ್ಲಿದೆ. ಅಲ್ಲದೆ, ಅನೇಕ ಜ್ಯೋತಿಷಿ, ಕವಡೆಶಾಸ್ತ್ರ, ಹಸ್ತಸಾಮುದ್ರಿಕೆ ಪಂಡಿತರು ದೋಷ ನಿವಾರಣೆಗಾಗಿ ಸುಬ್ರಮಣ್ಯಕ್ಕೆ ಹೋಗಿ ಸೇವೆ ಸಲ್ಲಿಸಿ ಬರಬೇಕೆಂದು ನೊಂದವರಿಗೆ ಸಲಹೆ ನೀಡುವುದು ಸಾಮಾನ್ಯವಾಗಿದೆ.
ಇಂತಹ ಪ್ರಸಿದ್ದ ಹಾಗು ಕಾರಣಿಕ "ಅಸ್ಟಪವಿತ್ರ ನಾಗಮಂಡಲ" ಸೇವೆಯನ್ನು ಖ್ಯಾತ ಚಿತ್ರನಟಿ ರಾಧಿಕಾ ಮತ್ತು ಅವರ ಕುಟುಂಬದವರು ಇಂದು ವಿಟ್ಲ ತಾಲೂಕಿನ ಸಾಲೆತ್ತೂರು ಬಳಿಯ ಪಾಲ್ತಾಜೆಯ ಎನ್ನುವವರ ಮನೆಯಲ್ಲಿ ಏರ್ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಧಿಕ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದಾರೆ.
ಅಂದ ಹಾಗೆ, ರಾಧಿಕಾ ಹುಟ್ಟಿ ಬೆಳೆದಿದ್ದು ಈ ಪಾಲ್ತಾಜೆಯಲ್ಲಿಯೇ. ಅಲ್ಲಿ ಅವರು ಇತ್ತೀಚೆಗೆ ಒಂದು ಫಾರ್ಮ್ ಹೌಸ್ ಕೊಂಡಿದ್ದಾರೆ ಮತ್ತು ಭವ್ಯ ಮನೆಯನ್ನೂ ಕಟ್ಟಿಸಿದ್ದಾರೆ. ಯೋಜಿಸಿದಂತೆ ಘಟಿಸಿದ್ದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಪಾಲ್ತಾಜೆಗೆ ಪಯಣ ಬೆಳೆಸಬೇಕಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಅನಿತಾ ಪ್ರವಾಸ ರದ್ದು ಮಾಡಿದ್ದಾರೆ. ದಕ್ಷಿಣ ಕನ್ನಡಕ್ಕೆ ನಿನ್ನೆ ಬೆಳಿಗ್ಗೆಯೇ ಪಯಣ ಬೆಳೆಸಿದ ಕುಮಾರಸ್ವಾಮಿ ಹಟ್ಟಿನಂಗಡಿಯಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಕೊಲ್ಲೂರಿನಲ್ಲಿ ರಾತ್ರಿ ತಂಗಿ ಇಂದು ಬೆಳಿಗ್ಗೆ ಮೂಕಾಂಬಿಕೆಗೆ ಪೂಜೆಯ ನಂತರ ಪಾಲ್ತಾಜೆಗೆ ತೆರಳಿದರು.
ನಾಗಮಂಡಲ ಅಂದ ತಕ್ಷಣ ನೆನಪಿಗೆ ಬರುವುದು ಜ್ಞಾನಪೀಠ ಪುರಸ್ಕರ ಸಾಹಿತ ಗಿರೀಶ್ ಕಾರ್ನಾಡ್ ರಚಿತ ನಾಗಮಂಡಲ ಕಾದಂಬರಿ. ಈ ಕೃತಿಯನ್ನು ಆಧರಿಸಿ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ನಾಗಮಂಡಲ ಚಿತ್ರ ನಿರ್ದೇಶಿಸಿದ್ದರು. ಪ್ರಕಾಶ ರೈ ಹಾಗೂ ನಟಿ ವಿಜಯಲಕ್ಷ್ಮಿ ಅಭಿಯಿಸಿದ ಈ ಚಿತ್ರ ಅನೇಕ ಜಾಗತಿಕ ಉತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಈ ಚಿತ್ರಕ್ಕೂ ಮೊದಲು ದಿವಂಗತ ಶಂಕರನಾಗ್ ನಿರ್ದೇಶಿಸಿ ಅರಂಧತಿ ನಾಗ್ ಜೊತೆ ನಟಿಸಿದ ನಾಗಮಂಡಲ ನಾಟಕ ಭಾರೀ ಜನಪ್ರಿಯತೆ ಗಳಿಸಿತ್ತು. ಖ್ಯಾತ ಕವಿ ಚಂದ್ರಶೇಖರ ಕಂಬಾರ ಇದೇ ಕಥೆಯಾಧಾರಿಸಿ ಸಿರಿಸಂಪಿಗೆ ನಾಟಕ ಬರೆದಿದ್ದಾರೆಂಬುದು ನಿಮಗೆ ಗೊತ್ತಿರಲಿ.
What is Nagamandala?
Nagamandala is a quaint ritual prevalent mainly in coastal Karnataka region (Dakshina Kannada District and Udupi District). It is an all-night ritual performed as a worship to the serpent god.
Observed mostly by the Brahmins, Nagamandala is performed during December to April, before the monsoon. There are two groups of performers in Nagamandala – the first being 'paatri' (a Brahmin) who after inhaling the areca flowers gets possessed by the cobra God, and the second group is known as 'Naagakannika' identified as 'ardhanari' who dances and sings around an elaborate serpent design drawn with natural colors on the sacred ground.
The 'vaidya' community group draws the designs (a circle of snakes) on the sacred ground using five different colors. The five colors are white (white mud), red (mix of lime powder and turmeric powder), green ('jangama soppu' green leaves powder), yellow (turmeric powder) and black (roasted and powdered paddy husk). The combination of these five colors is called as 'panchavarnahudi' in the local dialect.
Sarpam Tullal of Kerala are the counter parts of Nagamandala.
Nagamandala performed in the Kukke Sri Subramanya Temple is much famous and attracts thousands of devotees. Moodabidri, Brahmavar, Kundapura and Baindur are the other places where this ritual is performed amid much pomp and splendor. (Source : http://www.india9.com/)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications