ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ!

By * ವಿಶ್ವೇಶ್ವರ ಭಟ್
|
Google Oneindia Kannada News

Short stories
ಕತೆಯೆಂದರೆ ಸಾಕು ಮನಸ್ಸು ಅಲ್ಲಿಯೇ ಕುಳಿತು ಬಿಡುತ್ತದೆ. ಮತ್ತೊಂದು ಕತೆಗೆ ಅಲ್ಲಿಯೇ ಬಿಡುಬೀಸಾಗಿ ಹಾಯಾಗಿ ಆತುಕೊಂಡು ಕುಳಿತುಕೊಳ್ಳುತ್ತದೆ. ಯಾವತ್ತೂ ಮನಸ್ಸು ಒಂದು ಕತೆಗೆ ಎದ್ದೇಳುವುದಿಲ್ಲ. ಒಂದಾದ ನಂತರ ಮತ್ತೊಂದು ಕತೆ ಬೇಕು. ಕತೆ ಕತೆಯಾಗಿ ಸಾಗಬೇಕು. ಅಂವ ಹೇಳ್ತಿದ್ದ ಕತೆಗಳನ್ನು ಕೇಳ್ತಾ ಇದ್ರೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಕತೆ ಕೇಳ್ತಾ ಕೇಳ್ತಾ ದಿಲ್ಲಿ ಬಂದಿದ್ದೇ ಗೊತ್ತಾಗಲಿಲ್ಲ" ಎನ್ನುತ್ತೇವಲ್ಲ ಇದೇ ಕಾರಣಕ್ಕೆ.

ಕತೆ ಅಂದ್ರೆ ಸಾಕು ಎಂಥ ಮನಸ್ಸಾದರೂ ಬಿರಿದುಕೊಳ್ಳುತ್ತದೆ. ಕತೆ ಶುರುವಾದರೆ ಸಾಕು ಮನಸ್ಸು ಕತೆಯ ಪಾತ್ರಗಳನ್ನು ಅರಸುತ್ತಾ ಪಾತ್ರದೊಳಗೆ ಇಳಿದುಕೊಳ್ಳುತ್ತದೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಕತೆ ಯಾವಜ್ಜೀವ ನೆನಪಾಗಿ ಕಾಡುತ್ತದೆ. ಪದೇ ಪದೆ ಮನದೊಳಗೆ ಬಂದು ಹೋಗುತ್ತಿರುತ್ತದೆ. ಹೀಗಾಗಿ ನಾನು ಪ್ರತಿ ಕತೆಗಳ ಮುಂದೆ ಮೈಚೆಲ್ಲಿಕೊಂಡು ಕೂತುಬಿಡುತ್ತೇನೆ" ಅಂತ ಗ್ವಾಟೆಮಾಲಾದ ಖ್ಯಾತ ಕವಿ ಮನಸಾಂಡೋ ಅತಿಗುವೆವಾ ತಾನು ಮೆಚ್ಚಿದ ಸಣ್ಣಕತೆಗಳ ಸಂಗ್ರಹಕ್ಕೆ ಮುನ್ನುಡಿ ಬರೆಯುತ್ತಾ ಹೇಳುತ್ತಾನೆ.

ಕತೆ ಯಾವುದಾದರೇನು, ಯಾರದಾದರೇನು ಅದು ಇದ್ದಷ್ಟು ಹೊತ್ತು, ಅದರ ಮುಂದೆ ಕುಳಿತಷ್ಟು ಹೊತ್ತು ಅದು ನಮ್ಮದೇ ಆಗಿರುತ್ತದೆ. ಅದರ ಯಾವುದೋ ಒಂದು ಪಾತ್ರ ಸಂಪೂರ್ಣ ನಮ್ಮದೇ ಆಗಿರದಿದ್ದರೂ ಕೆಲ ಭಾವನೆಗಳು ನಮ್ಮದೇ ಆಗಿರುತ್ತದೆ ಅಥವಾ ಅವುಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುತ್ತೇವೆ. ಕತೆಗಳೆಂದರೆ ಪಾತರಗಿತ್ತಿಗಳಂತೆ. ಕೆಲವು ಕೈಗೆ ಸಿಗುತ್ತವೆ. ಉಳಿದವು ಹಾರಿಹೋಗುತ್ತವೆ. ಹಾಗೆ ಕೈಗೆ ಸಿಕ್ಕ ಕೆಲವು ಕತೆಗಳಿವೆ. ನಿಮಗೆಷ್ಟು ದಕ್ಕುತ್ತವೋ ಗೊತ್ತಿಲ್ಲ. ಆದರೆ ಯಾರೂ ಇಲ್ಲದ ಸಮಯದಲ್ಲಿ, ನೀವು ಏಕಾಂಗಿಯೆಂದು ಪರಿತಪಿಸುವ ಹೊತ್ತಿನಲ್ಲಿ ಈ ಕತೆಗಳೆಂಬ ಜತೆಗಾರ ನಿಮ್ಮೊಂದಿಗೆ ಇರುತ್ತಾನೆ. ಈ ಕಾರಣಕ್ಕಾಗಿ ಕೆಲವು ಕತೆಗಳನ್ನಾದರೂ ಪಕ್ಕಕ್ಕಿಟ್ಟುಕೊಳ್ಳಬೇಕು.

ಸಣ್ಣಸಣ್ಣ ಕಥೆಗಳನ್ನು ಓದಲು ಶುರುಹಚ್ಚಿಕೊಳ್ಳಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X