ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ (ಭಾಗ 3)

By Prasad
|
Google Oneindia Kannada News

ಒಂದು ದಿನ ಸೌಂದರ್ಯ ಹಾಗೂ ಮುಪ್ಪು ಆಕಸ್ಮಿಕವಾಗಿ ಭೇಟಿಯಾದರು. ಸೌಂದರ್ಯ ಹೇಳಿತು- ನಾವಿಬ್ಬರೂ ಈಗ ಭೇಟಿಯಾಗಿಯೇ ಇಲ್ಲ!"

***
ನಾವಿಬ್ಬರೂ ಇನ್ನು ಎಷ್ಟು ದಿನಾಂತ ಹೀಗೇ ಕೇಳ್ತಾ ಇರಬೇಕು?" ಒಂದು ಕಿವಿ, ಮತ್ತೊಂದು ಕಿವಿಗೆ ಹೇಳಿತು. ಅದಕ್ಕೆ ಮತ್ತೊಂದು ಕಿವಿ ಹೇಳಿತು - ಹಾಗಾದ್ರೆ ಕಿವುಡರಾಗಿಬಿಡೋಣ." ಅದಕ್ಕೆ ಮೊದಲ ಕಿವಿ ಹೇಳಿತು - ಅದು ಇನ್ನೂ ಕಷ್ಟ. ಎಲ್ಲರೂ ಹತ್ತಿರ ಬಂದು ಜೋರಾಗಿ ಕಿರುಚುತ್ತಾರೆ. ಎಂಜಲನ್ನು ಸಿಡಿಸುತ್ತಾರೆ."

***
ದಾರಿಯಲ್ಲಿ ಒಬ್ಬ ನಡೆದು ಹೋಗುತ್ತಿದ್ದ. ಅವನ ಕಿಸೆಯಿಂದ ಐದು ರೂ. ನಾಣ್ಯ ಕೆಳಗೆ ಬಿತ್ತು. ಕಟ್ಟೆಯ ಮೇಲೆ ಹಸಿವಿನಿಂದ ಕುಳಿತ ವ್ಯಕ್ತಿ ಅದನ್ನು ಗಮನಿಸಿದ. ಆ ನಾಣ್ಯವನ್ನು ಎತ್ತಿಕೊಳ್ಳಬೇಕೋ, ಬೇಡವೋ ಎಂದು ಯೋಚಿಸಲಾರಂಭಿಸಿದ. ಇಂದಿನ ಅದೃಷ್ಟ ಏನಿದೆಯೋ ಏನೋ. ಯಾಕೆ 5 ರೂಪಾಯಿಯಲ್ಲಿ ಅದೃಷ್ಟ ಕಳೆದುಕೊಳ್ಳಬೇಕೆಂದು ನಾಣ್ಯವನ್ನು ಎತ್ತಿಕೊಳ್ಳಲಿಲ್ಲ. ಮತ್ತೊಬ್ಬ ದಾರಿಹೋಕನಿಗೆ ಆ ನಾಣ್ಯ ಸಿಕ್ಕಿತು. ಆತ ಪಕ್ಕದ ಅಂಗಡಿಯಲ್ಲಿ ಒಂದು ಮುಷ್ಟಿ ಶೇಂಗಾ, ಎರಡು ಬಾಳೆಹಣ್ಣು ಖರೀದಿಸಿ, ಅಲ್ಲಿಯೇ ಸೇವಿಸಿ, ಒಂದು ಲೋಟ ನೀರು ಕುಡಿದು ಡರ್ ಎಂದು ತೇಗಿ ಮುನ್ನಡೆದ. ಕಟ್ಟೆಯ ಮೇಲೆ ಕುಳಿತವನ ಹಸಿವು ಇನ್ನಷ್ಟು ಜಾಸ್ತಿಯಾಗಿತ್ತು.

***
ಮುಂಬಯಿ ಷೇರು ಮಾರುಕಟ್ಟೆಯ ಎತ್ತರದ ಕಟ್ಟಡದ ಸಮೀಪ ಇಬ್ಬರು ಭಿಕ್ಷುಕರು ಕುಳಿತಿದ್ದರು. ಇಬ್ಬರಿಗೂ ಕೈ ತುಂಬಾ ಹಣ ಮಾಡುವ ಆಸೆ. ಒಬ್ಬ ಭಿಕ್ಷುಕ ಹೇಳಿದ -ಷೇರಿನಲ್ಲಿ ಹಣ ವಿನಿಯೋಗಿಸಿ ಒಂದು ಕೋಟಿ ರೂ. ಗಳಿಸಲು ನಾನೇನು ಮಾಡಬೇಕು?' ಅದಕ್ಕೆ ಮತ್ತೊಬ್ಬ ಭಿಕ್ಷುಕ ಹೇಳಿದ - ಎರಡು ಕೋಟಿ ರೂ. ಇನ್‌ವೆಸ್ಟ್ ಮಾಡಬೇಕು."

ಕಥೆಗಳು ಇನ್ನೂ ಮುಗಿದಿಲ್ಲ, ಮುಂದೆ ಓದಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X