ಸುಳ್ಳಿನ ಕೋಟೆಗಿಂತ ಸತ್ಯದ ಗುಡಿಸಲೇ ಮೇಲು!

* ಧವಳ
ಮಿಥುನ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ವಿಷಯ ಎಷ್ಟೇ ಚಿಕ್ಕದಾದರೂ ಸಹ ಇಬ್ಬರೂ ತಪ್ಪದೆ ಅದರ ಬಗ್ಗೆ ಗಂಟೆಗಟ್ಟಲೆ ಮಾತಾಡುವ ಗುಣ ಹೊಂದಿರುತ್ತಾರೆ. ಅಂದ್ರೆ ಇಬ್ಬರು ಬ್ಲೇಡ್ ಪಾರ್ಟಿಗಳು. ಆದರೆ ಕನ್ಯಾ ರಾಶಿಯವರ ವಿಚಿತ್ರ ಗುಣ ಅಂದ್ರೆ ತಮ್ಮ ಸಂಗಾತಿ ಏನೇ ಹೇಳಿದ್ರು ಸುಳ್ಳು ಹೇಳ್ತಾ ಇದ್ದಾರೆ ಎಂದು ತಿಳಿಯುವುದು. ಯಾವಾಗ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆಯೋ ಆಗ ಸಿಟ್ಟು ಮೂಗಿನ ಮೇಲೆ ಕುಣಿದಾಡುತ್ತದೆ. ಬೇರೆಯವರ ವಿಷಯ ಪಕ್ಕಕ್ಕೆ ಇಡಿ, ತಮ್ಮ ಸಂಗಾತಿಯನ್ನೇ ಹುರಿದು ಮುಕ್ಕಿಬಿಡ್ತಾರೆ. ತಮ್ಮ ಮೂಗಿನ ನೇರಕ್ಕೆ ನಡೆಯುವ ಗುಣ ಇವರ ಬದುಕಿನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಆಗ ಮೊಟ್ಟ ಮೊದಲು ಈ ಗುಣಕ್ಕೆ ಬಲಿಪಶು ಆಗುವುದು ಸಂಗಾತಿ ಅಲ್ಲದೆ ಮತ್ಯಾರು? ಅದೇನೋ ಹೇಳ್ತಾರೆ, ಜಗಳ ಇದ್ದ ಕಡೆ ಪ್ರೀತಿ ಹೆಚ್ಚು ಅಂತ. ಆದರೆ ಇವರ ವಿಷಯದಲ್ಲೂ ಸಹ ಸಿಕ್ಕಾಪಟ್ಟೆ ಕೋಪತಾಪ ಇದ್ರೂ ಪ್ರೀತಿಗೇನು ಕೊರತೆ ಇರಲ್ಲ. ಕೋಪಿಸಿಕೊಂಡೆ ಪ್ರೀತಿ ಮಾಡುವ ಗುಣ ಈ ಜೋಡಿಯಲ್ಲಿದೆಯಾದ್ರೂ, ನನಗೆ ನೀನಂದ್ರೆ ತುಂಬಾ ಇಷ್ಟ ಕಣೆ ಚಿನ್ನ, ಅಯ್ಯೋ ನೀವೂ ಅಂದ್ರೆ ನನ್ ಜೀವ ದೇವ್ರು ಎಂದು ಒಬ್ಬರಿಗೊಬ್ಬರಿಗೆ ಹೇಳಿಕೊಳ್ಳಲು ಬರೋದೆ ಇಲ್ಲ. ಆ ವಿಷಯದಲ್ಲಿ ಸ್ವಲ್ಪ ಡಲ್ಲು, ತುಂಬಾ ಪೂರು! ಮಾತು ಮಾತಿಗೂ ಜಗಳ ಆಡುವ ಈ ಜೋಡಿಗಳು ತಮ್ಮ ಪ್ರೀತಿಯನ್ನು ಹೇಳಿಕೊಂಡಾಗ ಮಾತ್ರ ಸಂಬಂಧ ಉಳಿಯೋದು. ಕೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಯಾಕೆ ಅಲಿತೀರಿ!
ಮಿಥುನ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ಇವರಿಬ್ಬರ ಆಲೋಚನೆಗಳು, ಭಾವಗಳೆರಡೂ ಒಂದೇ ಆಗಿದೆ. ಇಬ್ಬರೂ ಸಮಾನತೆಗೆ ಆದ್ಯತೆ ಕೊಡ್ತಾರೆ. ಈ ಸಂಗತಿಯು ಜಗಳಕ್ಕೆ ಕಾರಣ ಆಗುತ್ತದೆ. ಮೇಲೆ ಕಂಡಷ್ಟು ಅಮಾಯಕರು ಹಾಗೂ ಶಾಂತ ಸ್ವಭಾವದವರಲ್ಲ ಈ ತುಲಾ ರಾಶಿಯವರು. ಕೇವಲ ಒಂದು ನಿರ್ಣಯ ತೆಗೆದುಕೊಳ್ಳಬೇಕಾದರೆ ವರ್ಷಗಟ್ಟಲೆ ತೆಗೆದುಕೊಂಡರೂ ಆಶ್ಚರ್ಯವಿಲ್ಲ. ತಾವು ಗೆಲ್ಲಲೇಬೇಕು ಎನ್ನುವ ಹಠ ಇವರದು. ಅದಕ್ಕಾಗಿ ಸುಳ್ಳು ಹೇಳುವುದಕ್ಕೂ ಹಿಂದೂ ಮುಂದೆ ನೋಡಲ್ಲ. ಸಂಗಾತಿಯ ಈ ಗುಣವೇ ಮಿಥುನ ರಾಶಿಯವರ ಸ್ತ್ರೀಯರ ಮೈ ಉರಿಯೋದು, ಸಿಟ್ಟು ಬರಲು ಕಾರಣ ಆಗೋದು. ಸಂಸಾರ ಸಾಗರದಲ್ಲಿ ನಿಮ್ಮ ಜೊತೆ ದಡ ಸೇರಲು ಬಂದ ಸಂಗಾತಿಯ ವಿಷಯದಲ್ಲಿ ಸ್ವಲ್ಪ ಗಮನ ಇರಲಿ! ಸುಳ್ಳು ಪೊಳ್ಳಾದ ಕೋಟೆಗಿಂತ ಸತ್ಯದ ಗುಡಿಸಲು ಕಟ್ಟುವ ಪ್ರಯತ್ನ ಮಾಡಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications