keyboard_backspace

ಏನಿದು ಬಿಕ್ಕಟ್ಟು: ಕಲ್ಲಿದ್ದಲು ಇಲ್ಲದೇ ಕತ್ತಲೆಯತ್ತ ಸಾಗುತ್ತಿದೆಯಾ ಭಾರತ?

Google Oneindia Kannada News

ನವದೆಹಲಿ, ಅಕ್ಟೋಬರ್ 11: ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಉಷ್ಟ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಒಂದು ಕಡೆಯಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡುತ್ತಿದೆ.

ಕೇಂದ್ರ ಸರ್ಕಾರದ ಭರವಸೆ ಒಂದು ಕಡೆಯಾದರೆ ಇನ್ನೊಂದು ದಿಕ್ಕಿನಲ್ಲಿ ಉಷ್ಟ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯಿಂದ ಬಾಗಿಲು ಮುಚ್ಚುತ್ತಿವೆ. ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ಪಂಜಾಬಿನಲ್ಲಿ ಮೂರು ಉಷ್ಣ ವಿದ್ಯುತ್ ಸ್ಥಾವರ, ಕೇರಳದಲ್ಲಿ ನಾಲ್ಕು ಹಾಗೂ ಮಹಾರಾಷ್ಟ್ರದಲ್ಲಿ 13 ಉಷ್ಟ ವಿದ್ಯುತ್ ಸ್ಥಾವರಗಳು ಸ್ಥಗಿತಗೊಂಡಿವೆ.

ಕರ್ನಾಟಕ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ದೇಶದಲ್ಲಿ ಕಲ್ಲಿದ್ದಲು ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ದೂಷಿಸಿದೆ. ಪೆಟ್ರೋಲ್ ಬೆಲೆ ಏರಿಕೆಯ ನಂತರ ಈಗ ವಿದ್ಯುತ್ ದರಗಳನ್ನು ಹೆಚ್ಚಿಸಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ. ಕಲ್ಲಿದ್ದಲು ಕೊರತೆಯಿಂದ ಇಡೀ ಭಾರತ ಕಗ್ಗತ್ತಲಿನತ್ತ ಸಾಗುತ್ತಿದೆಯಾ ಎಂಬ ಭಯ ಹುಟ್ಟಿಕೊಳ್ಳುತ್ತಿದೆ. ಈ ಭೀತಿಗೆ ಪೂರಕ ಎನಿಸುವ ಪ್ರಮುಖ ಅಂಶಗಳು ಇಲ್ಲಿವೆ ಓದಿ.

Coal Shortage in India: 20 thermal power stations shut, Centre says no coal shortage

ಕಲ್ಲಿದ್ದಲು ಕೊರತೆಯಿಂದ ಕಗ್ಗತ್ತಲಿನತ್ತ ಭಾರತ:

* ಭಾರತದಲ್ಲಿ ವಿದ್ಯುತ್ ಬಿಕ್ಕಟ್ಟಿನ ಭೀತಿ ಮಿತಿಮೀರಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಕಲ್ಲಿದ್ದಲು ಸಚಿವಾಲಯವು "ದೇಶದಲ್ಲಿ ಬೇಡಿಕೆಯನ್ನು ಪೂರೈಸುವಷ್ಟು ಕಲ್ಲಿದ್ದಲು ಲಭ್ಯವಿದೆ" ಎಂದು ಹೇಳಿದೆ.

* ಭಾನುವಾರ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆಯನ್ನು ಪರಿಶೀಲಿಸಿದರು. ಭಾರತದ ಅರ್ಧದಷ್ಟು ವಿದ್ಯುತ್ ಸರಬರಾಜು ಮಾಡುವ 135 ಕಲ್ಲಿದ್ದಲು ಆಧಾರಿತ ಯುಟಿಲಿಟಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವು ಇಂಧನ ದಾಸ್ತಾನು ಕೇವಲ ಮೂರು ದಿನಗಳವರೆಗೆ ಇರುತ್ತದೆ, ಎಂದು ಈ ಮೊದಲು ವರದಿಗಳು ಹೇಳಿವೆ.

* ಕೇಂದ್ರ ಸರ್ಕಾರವು ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಕೊರತೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ ದೆಹಲಿ ವಿದ್ಯುತ್ ಕಡಿತವನ್ನು ಎದುರಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಸಿದರು. ವಿದ್ಯುತ್ ಬಿಕ್ಕಟ್ಟು ಬಗೆಹರಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದರು.

Coal Shortage in India: 20 thermal power stations shut, Centre says no coal shortage

* ಕೇಂದ್ರ ವಿದ್ಯುತ್ ಸಚಿವಾಲಯದ ಹೇಳಿಕೆಯ ನಂತರ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಲ್ಲಿದ್ದಲು ಬಿಕ್ಕಟ್ಟನ್ನು ಒಪ್ಪಿಕೊಳ್ಳಲು ಕೇಂದ್ರ ಸಿದ್ಧವಿಲ್ಲ. ಪ್ರತಿಯೊಂದು ಸಮಸ್ಯೆಗೂ "ಕಣ್ಣುಮುಚ್ಚಿ ಕುಳಿತುಕೊಳ್ಳುವ" ನೀತಿಯಿಂದ ದೇಶಕ್ಕೆ ಕೆಟ್ಟದ್ದಾಗಿದೆ ಎಂದು ಅವರು ದೂಷಿಸಿದರು.

* ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಲ್ಲಿದ್ದಲು ಕೊರತೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.

* ಮಧ್ಯಪ್ರದೇಶ ಇಂಧನ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಭಾನುವಾರ ರಾಜ್ಯವು ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರ ತನ್ನ ವಿದ್ಯುತ್ ಕೇಂದ್ರಗಳಿಗಾಗಿ ಎಂಟು ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಖರೀದಿಸಲು ಟೆಂಡರ್‌ಗಳನ್ನು ಕರೆದಿದೆ ಎಂದು ಸಚಿವರು ಹೇಳಿದ್ದಾರೆ.

* ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಟೀಕಿಸಿದರು. ಪ್ರಸ್ತುತ ಬಿಕ್ಕಟ್ಟು ಸಂಪೂರ್ಣವಾಗಿ "ಮಾನವ ನಿರ್ಮಿತ" ಮತ್ತು ಆಡಳಿತದ ವಿತರಣೆಯ "ಸಂಪೂರ್ಣ ನಿರ್ಲಕ್ಷ್ಯ ಮತ್ತು ನೇರ ಯೋಜನೆ ಮತ್ತು ಸಿದ್ಧತೆಯ ಅನುಪಸ್ಥಿತಿಯ ನೇರ ಪರಿಣಾಮವಾಗಿದೆ," ಎಂದು ಆರೋಪಿಸಿದ್ದಾರೆ.

* ಪಂಜಾಬ್‌ನಲ್ಲಿ ವಿದ್ಯುತ್ ಸರಬರಾಜು ಪರಿಸ್ಥಿತಿ ಭೀಕರವಾಗಿದೆ, ಅಕ್ಟೋಬರ್ 13 ರವರೆಗೆ ರಾಜ್ಯದಲ್ಲಿ ಮೂರು ಗಂಟೆಗಳ ದೈನಂದಿನ ವಿದ್ಯುತ್ ಕಡಿತ ಇರುತ್ತದೆ, ಎಂದು ಸರ್ಕಾರಿ ಸ್ವಾಮ್ಯದ ಪಿಎಸ್‌ಪಿಸಿಎಲ್ ಭಾನುವಾರ ಹೇಳಿದೆ.

* ದೇಶದಲ್ಲಿ ಒಂದು ವರ್ಷ ದಾಖಲೆ ಮಟ್ಟದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿತ್ತು. ಅತಿಹೆಚ್ಚು ಮಳೆಯಿಂದಾಗಿ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಇಂಧನ ಚಲನೆಗೆ ಪೆಟ್ಟು ಬಿದ್ದಿತು. ಇದರಿಂದಾಗಿ ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು.

* ಪ್ರಸ್ತುತ ಬಿಕ್ಕಟ್ಟಿಗೆ ಇನ್ನೊಂದು ಅಂಶ ಕಾರಣವಾಗಿದೆ. ವಿದ್ಯುತ್ ಉತ್ಪಾದಿಸಲು ಆಮದು ಮಾಡಿದ ಕಲ್ಲಿದ್ದಲನ್ನು ಬಳಸಿದ ವಿದ್ಯುತ್ ಸ್ಥಾವರಗಳು, ಉತ್ಪಾದನೆಯನ್ನು ಮೊಟಕುಗೊಳಿಸಿದವು ಅಥವಾ ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಏರಿಕೆಯಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

English summary
Coal Shortage in India: 20 thermal power stations shut, Centre says no coal shortage; Here are the 10 points on this. Read on
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X