ಕಾರ್ಟೂನ್: ರಾಜಕಾರಣಿಗಳ ಮಾತಿಂದ ಕರೆಂಟ್ ಉತ್ಪಾದನೆಯಾಗುತ್ತಾ..?
ರಾಜಕಾರಣಿಗಳ ಮಾತಿನ ಕಾವು ಅದೆಷ್ಟು ಶಕ್ತಿಶಾಲಿ ಎಂದರೆ ಅವು ವಿದ್ಯುತ್ ಕಾಂತೀಯ ಅಲೆಸೃಷ್ಟಿಸಬಲ್ಲವಂತೆ! ಹೀಗಾದರೂ ವಿದ್ಯುತ್ ಉಳಿಸೋಣ ಅಂತ ಕಿಲಾಡಿ ಬಾಲಕನೊಬ್ಬ ಬಲ್ಬ್ ಉರಿಸುವುದಕ್ಕೆ ರಾಜಕಾರಣಿಯ ಬಳಿ ಬಂದಿದ್ದಾನೆ!
ಈ ಹಾಸ್ಯಭರಿತ ಕಾರ್ಟೂನ್ ರಚಿಸಿದ್ದು ಕಾರ್ಟೂನಿಸ್ಟ್ ಶಂಕರ್. ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕಾರಣಿಗಳ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನವನ್ನು ಶಂಕರ್ ಮಾಡಿದ್ದಾರೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.











Click it and Unblock the Notifications