ಕಾರ್ಟೂನ್: ಪ್ರಾಮಾಣಿಕ ರಾಜಕಾರಣಿ ಅಂದ್ರೆ ಎಳ್ಳಿನಲ್ಲಿರೋ ಕಲ್ಲಿನ ಹಾಗೆ!
ನಿಷ್ಠಾವಂತ ರಾಜಕಾರಣಿಗಳನ್ನು ಹುಡುಕೋದಂದ್ರೆ ಎಳ್ಳಿನಲ್ಲಿರುವ ಕಲ್ಲು ಹುಡುಕಿದ ಹಾಗೆ... ಎಂದು ಮತದಾರ ಪರಿತಪಿಸುತ್ತಿರುವ ಈ ಕಾರ್ಟೂನ್ ಪ್ರಸ್ತುತ ರಾಜಕೀಯದ ದುರಂತವನ್ನು ತೋರಿಸುತ್ತದೆ. ಕಾರ್ಟೂನಿಸ್ಟ್ ಶಂಕರ್ ಅವರು ರಚಿಸಿದ ಕಾರ್ಟೂನ್ ಇದು.
'ಹಿಂದೆ ಮಾಡಿದ ತಪ್ಪು ಮತ್ತೆ ಆಗಲ್ಲ, ಓಟು ಕೊಡಿ' ಎಂದು ರಾಜಕಾರಣಿ ಮತದಾರನಲ್ಲಿ ಕೇಳುತ್ತಿದ್ದರೆ ಮತದಾರನಿಗೆ ಯಾವ ಮಾತನ್ನು ನಂಬೇಕು, ಯಾವ ಮಾತನ್ನು ನಂಬಬಾರದು ಎಂಬ ಗೊಂದಲ! ಚುನಾವಣೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವ ಹೊತ್ತಲ್ಲಿ ಮತದಾರನ ಮನಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಿದೆ ಈ ಕಾರ್ಟೂನ್.













Click it and Unblock the Notifications