ಕಾರ್ಟೂನು: 75ರ ಹರೆಯದ ಸಿಎಂ ಅಭ್ಯರ್ಥಿ ಬಿಎಸ್ವೈ
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಇಂದು 75ರ ಹುಟ್ಟುಹಬ್ಬದ ಸಂಭ್ರಮ. ದಾವಣಗೆರೆಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವಿಶ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಬಂದಿದ್ದು ವಿಶೇಷ. 'ರೈತ ಬಂಧು' ಎಂಬ ಬಿರುದನ್ನು ಹೊತ್ತುಕೊಂಡಿರುವ ಯಡಿಯೂರಪ್ಪ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ.
ಕಾವೇರಿ ಹೋರಾಟದಿಂದ ರಾಮಜನ್ಮಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್ ಹುಕಂ ಸಮಸ್ಯೆವರೆಗೆ ನಿರಂತರ ಹೋರಾಟ, ಜನಪರ ಕಾಳಜಿ ಹೊಂದಿರುವ ನಾಯಕರಾಗಿ ಇಂದಿಗೂ ಗುರುತಿಸಿಕೊಳ್ಳುತ್ತಾರೆ. ಆದರೆ, ಇತ್ತೀಚಿನ ಮಹದಾಯಿ ಪತ್ರ ಗಲಾಟೆಯಿಂದಾಗಿ ಅವರ 'ರೈತ ಪರ ರಾಜಕಾರಣಿ' ಇಮೇಜ್ ಗೆ ಮತ್ತೆ ಧಕ್ಕೆಯಾಗಿದೆ.
75ರ ಹರೆಯದ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಅವರಿಗೆ ಮತ್ತೊಮ್ಮೆ ಸಿಎಂ ಆಗುವ ಕನಸಿಗಿಂತ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಪ್ರತಿಷ್ಠೆಯ ವಿಷಯವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೆ ಬಂದರೆ, ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆದರೂ ಕೂಡಾ ಎರಡು ವರ್ಷಗಳಿಗೂ ಅಧಿಕ ಕಾಲ ಆ ಸ್ಥಾನದಲ್ಲಿ ಉಳಿಯುವುದಿಲ್ಲ.
ಬಹುಶಃ ಮುಂದಿನ ಲೋಕಸಭೆ ಚುನಾವಣೆ ತನಕ ಇದ್ದರೆ ಹೆಚ್ಚು. ಇದು ಬಿಜೆಪಿಯ ಅಲಿಖಿತ, ಅಘೋಷಿತ ನಿಯಮ, ಗುಜರಾತಿನಲ್ಲಿ ಆನಂದಿ ಬೇನ್ ಗೆ ಆದ ಗತಿಯೆ ಬಿಎಸ್ವೈಗೂ ಆಗುತ್ತದೆ. ಈ ಹಿನ್ನಲೆಯಲ್ಲಿ ಇಂದಿನ ಕಾರ್ಟೂನ್ ರಚಿಸಿದ್ದಾರೆ ಮದನ್ ಸಿ.ಪಿ.












Click it and Unblock the Notifications