ದರ್ಶನ್ ಬಂಧನ: ಸಾಕ್ಷಿಗಳ ಹಿಂದೆ ಬಿದ್ದ ಪೊಲೀಸರು: ಮಹತ್ವದ ಸಾಕ್ಷಿಗಳು ವಶಕ್ಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಡು ಹಿಡಿದು ಜಾಲಾಡುತ್ತಿರುವ ಪೊಲೀಸರಿಗೆ ದಿನವೂ ಹೊಸ ಹೊಸ ಸಾಕ್ಷಿಗಳು ಕೈಗೆ ಸಿಗುತ್ತಿವೆ. ಈ ಸಾಕ್ಷಿಗಳನ್ನು ಈಗಾಗಲೇ ನ್ಯಾಯಾಧಿಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಾಕ್ಷ್ಯಗಳ ಹೇಳಿಕೆಗಳನ್ನು ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.
ದರ್ಶನ್ ಕನ್ನಡ ಚಿತ್ರ ರಂಗ ಸ್ಟಾರ್ ನಟ. ದೊಡ್ಡ ಸೆಲಿಬ್ರಿಟಿ. ಪ್ರಭಾವ ಶಾಲಿ ಕೂಡ ಹೌದು. ಹೀಗಾಗಿ ತಾನು ಮಾಡಿದ ಕೃತ್ಯದ ಸಾಕ್ಷ್ಯಗಳನ್ನು ಏಳು ಸುತ್ತಿನ ಕೋಟೆಯಂತಹ ರಕ್ಷಣೆ ನೀಡಲಾಗಿದೆ. ಈ ಕೋಟೆಯ ಒಂದೊಂದೆ ಬಾಗಿಲುಗಳನ್ನು ತೆರೆದು ಪ್ರಕರಣ ಸಾಕ್ಷಿಗಳನ್ನು ವಶಕ್ಕೆ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಇಂಚಿಂಚು ಬಿಡದ ಪೊಲೀಸರು, ಸಾಕ್ಷ್ಯಗಳ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಸಾಕ್ಷಿಗಳನ್ನು ಈಗಾಗಲೇ 164 ವಿಧಿಯಡಿ ಹೇಳಿಕೆ ದಾಖಲಿಸಲಾಗಿದೆ.

ಹಲವರಿಗೆ ನೋಟಿಸ್
ಪೊಲೀಸರು ಸಣ್ಣ ಎಳೆ ಸಿಕ್ಕರೂ ಅದನ್ನು ಹಿಡಿದುಕೊಂಡು ಮುಂದೆ ನಡೆಯಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಯಾರ ಮೇಲೆ ಎಲ್ಲಾ ಸಂಶಯ ಬಂದಿದೇಯೋ ಅವರಿಗೆಲ್ಲಾ ಖಾಕಿ ಪಡೆ ನೊಟೀಸ್ ನೀಡಿದೆ. ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಆಪ್ತಿ ಸಮತಾಳಿಗೂ ನೊಟೀಸ್ ನೀಡಲಾಗಿದೆ. ಇವರು ಪವಿತ್ರಾಗೆ ಬರುತ್ತಿದ್ದ ಕಮೆಂಟ್‌ಗಳಿಗೆ ಉತ್ತರಿಸುವ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮೋಹನ್ ರಾಜ್ ಸೇರಿದಂತೆ 3 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಖುದ್ದು ಪಲೋಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದರು. ಪೊಲೀಸ್ಟ್ ಕಸ್ಟಡಿಯಲ್ಲಿದ್ದಾಗ ದರ್ಶನ್ 40 ಲಕ್ಷ ಹಣವನ್ನು ಪಡೆದ ಬಗ್ಗೆ ತಿಳಿಸಿದ್ದರು. ಈ ಕುರಿತಾಗಿ ಮೋಹನ್ ರಾಜ್ ವಿಚಾರಣೆ ಎದುರಿಸಬೇಕಾಗಿದೆ. ಹಣ ನೀಡಿದ್ದರ ಹಿಂದಿನ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಹಣದ ಮೂಲದ ಹಿಂದೆ ಬಿದ್ದಿರುವ ಪೊಲೀಸರು
ಪವಿತ್ರಾ ಗೌಡ ಸ್ನೇಹಿತ ಸಮತಾ ಎಲೆಕ್ಟ್ರಿಕಲ್ ಮೆಗ್ಗರ್ ಮಶೀನ್ ತರಲು ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲನ ಪ್ರಕಾಶ್, ಪಬ್ ಕೆಲಸಗಾರ ಪವನ್, ದರ್ಶನ್ ಕೆಲಸಗಾರರಿಗೂ ಪೊಲೀಸ್ ನೋಟಿಸ್ ನೀಡಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆ ಆರೋಪಿಗಳೆಲ್ಲಾ ಬೇರೆಯವರ ಸಿಮ್ ಖರೀದಿಸಿದ್ದರಿಂದ, ಸೀಮ್ ಮಾಲೀಕರಿಗೂ ನೋಟಿಸ್ ನೀಡಲಾಗಿದೆ.

ದರ್ಶನ್‌ಗೆ 40 ಲಕ್ಷ ನೀಡಿದ್ದ ಮಾಜಿ ಉಪಮೇಯರ್ 40 ಲಕ್ಷ ಹಣ ನೀಡಿದ್ದರು ಎನ್ನಲಾಗಿದೆ. ಈ ಹಣವನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಇದೇ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋಹನ್ ರಾಜ್, ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ ಹಣದ ಬಗ್ಗೆ ಹಲವು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications