ಬವಾರಿಯಾ ಗ್ಯಾಂಗ್ ಸದಸ್ಯರು ಬಂಧನ: ಬವಾರಿಯಾ ಗ್ಯಾಂಗ್ ಬಗ್ಗೆ ಹುಷಾರ್!
ಬೆಂಗಳೂರು,
ಆ. 26: ಹೈವೇ ರಾಬರಿ, ಒಂಟಿ ಮನೆಯ ಅಟ್ಯಾಕ್, ಅತ್ಯಾಚಾರ, ಸರಗಳ್ಳತನಕ್ಕೆ ದೇಶದಲ್ಲಿಯೇ ಕುಖ್ಯಾತಿ ಪಡೆದಿರುವ ಬವಾರಿಯಾ ಗ್ಯಾಂಗ್‌ನ್ನು ಬಂಧಿಸಿದ್ದಾರೆ. ಆದರೆ, ವಿಜಯನಗರದಲ್ಲಿ ವೃದ್ಧೆಯ ಸರಗಳ್ಳತನ ಪ್ರಕರಣ ಬೆನ್ನಟ್ಟಿ ತನಿಖೆ ಆರಂಭಿಸಿದ ವಿಜಯನಗರ ಪೊಲೀಸರು ಬರೋಬ್ಬರಿ ಸಿನಿಮೀಯ ರೀತಿಯಲ್ಲಿ ಬವಾರಿಯಾ ಗ್ಯಾಂಗ್‌ನ್ನು ಬೇಟೆಯಾಡಿದ್ದಾರೆ. ಹನ್ನೆರಡು ಕಿ.ಮೀ. ಅಂತರದಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬವಾರಿಯಾ ಗ್ಯಾಂಗ್ ಎಂದ ಕೂಡಲೇ ಭಯ ಮೂಡಿಸುತ್ತದೆ.ಆ ಗ್ಯಾಂಗ್ ವಿವರ ಇಲ್ಲಿದೆ. id="toptextpromo"> id='are-slot-1' class='oiad oi-axt oiadv'>ಕೆಲ
ದಿನಗಳ ಹಿಂದೆ ವಿಜಯನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ಬ್ಲಾಕ್ ಪಲ್ಸರ್‌ನಲ್ಲಿ ಹಿಂಬಾಲಿಸಿದ್ದ ಇಬ್ಬರು ಕಿರಾತಕರು ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ಯಾವಾಗ ಬ್ಲಾಕ್ ಪಲ್ಸರ್‌ನಲ್ಲಿ ಹಾಡ ಹಗಲೇ ಈ ಕೃತ್ಯ ಎಸಗಿದ್ದರೂ ವೃತ್ತಿಪರ ಗ್ಯಾಂಗ್ ಬಗ್ಗೆ ಅನುಮಾನ ಮೂಡಿಸಿತ್ತು. ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದರು. ಅಂತೂ ಸರಗಳ್ಳತನ ಪ್ರಕರಣ ಎಳೆ ಆಧರಿಸಿ ತನಿಖೆ ನಡೆಸಿದ ವಿಜಯನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳು ಊರು ಬಿಡುವ ಮೊದಲೇ ಬಂಧಿಸಿದ್ದಾರೆ. id='are-slot-2' class='oiad oi-axt oiadv'>
ಬವಾರಿಯಾ ಗ್ಯಾಂಗ್ ಸದಸ್ಯರ ಸೆರೆ
ಸರಗಳ್ಳತನ ಬೆನ್ನಟ್ಟಿ ಸುಮಾರು ಹನ್ನೆರಡು ಕಿ.ಮೀ. ದೂರದ ವರೆಗೂ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದರು. ಬ್ಲಾಕ್ ಪಲ್ಸರ್ ಜಾಡು ಹಿಡಿದು ವಿಜಯನಗರದಿಂದ ಸುಬ್ರಮಣ್ಯನಗರದ ವರೆಗೂ ಸುಮಾರು ಹನ್ನೆರಡು ಕಿ.ಮೀ. ವರೆಗೂ ಹಾಕಿರುವ ನೂರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಬ್ಲಾಕ್ ಪಲ್ಸರ್ ಸುಳಿವು ಸಿಕ್ಕಿತ್ತು. ಅದರ ಜಾಡು ಹಿಡಿದು ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಪಲ್ಸರ್ ವಾಹನ ಪತ್ತೆಯಾಗಿತ್ತು. ಆದರೆ, ನಂಬರ್ ಇಲ್ಲದ ಕಾರಣ ಇದನ್ನೇ ಬಳಸಿದ್ದಾರೆ ಎಂಬುದಕ್ಕೆ ಪೊಲೀಸರಿಗೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಸುಬ್ರಮಣ್ಯನಗರದ ಸ್ಲಂ ನಲ್ಲಿ ಸಿಕ್ಕಿದ ಹೊಸ ಪಲ್ಸರ್ ಬೈಕ್ ಗೆ ನಂಬರ್ ಪ್ಲೇಟ್ ಇಲ್ಲದ ಜಾಡು ಹಿಡಿದು ಮೂರು ಕಿ.ಮೀ. ಸುತ್ತ ಶೋಧ ನಡೆಸಿದಾಗ ಬವಾರಿಯಾ ಗ್ಯಾಂಗ್ ನ ಐವರು ಸದಸ್ಯರು ಸಿಕ್ಕಿಬಿದ್ದಿದ್ದಾರೆ. ರಾಹುಲ್, ಗೌರವ್, ನಿತಿನ್, ರಿಯಾಜ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಹದಿಮೂರು ಲಕ್ಷ ರೂ. ಮೌಲ್ಯದ ಚಿನ್ನಭರಣ ವಶಪಡಿಸಿಕೊಂಡಿದ್ದಾರೆ. ಕೆಂಗೇರಿ, ತಿಲಕ್ ನಗರ ಮತ್ತಿತರ ಕಡೆ ಸರ ದೋಚಿರುವುದು ತನಿಖೆ ವೇಳೆ ಬಂದಿದೆ.

ಬವಾರಿಯಾ ಗ್ಯಾಂಗ್ ಏನಿದು?
ಬವಾರಿಯಾ ಒಂದು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನಾಂಗ. ಸ್ವಾತಂತ್ರ್ಯ ಪೂರ್ವದಿಂದಲೂ ಲೂಟಿ, ದರೋಡೆ, ಸರಗಳ್ಳತನ, ಹೈವೇ ಸಮೀಪದ ಒಂಟಿ ಮನೆಗಳಿಗೆ ಅಟ್ಯಾಕ್ ಮಾಡುವುದಕ್ಕೆ ಇವರು ಫೇಮಸ್. ದೃಢಕಾಯಕ ಮೈಕಟ್ಟು ಹೊಂದಿರುವ ಇವರು, ಕೆಲವಡೆ ಪೊಲೀಸರ ಸೋಗಿನಲ್ಲೂ ಚಿನ್ನದ ಸರಗಳನ್ನು ಬಿಚ್ಚಿಸಿಕೊಂಡು ಎಸ್ಕೇಪ್ ಆಗುತ್ತಾರೆ. ಈ ಗ್ಯಾಂಗ್ ಇರುವುದು ಉತ್ತರ ಪ್ರದೇಶದ ಮೀರತ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ. ಇದೀಗ ರಾಜಸ್ತಾನ ಮತ್ತು ಹರ್ಯಾಣದಲ್ಲೂ ಇದ್ದಾರೆ. ಈ ಬವಾರಿಯಾ ಗ್ಯಾಂಗ್ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೆ ಭಯ. ಯಾಕೆಂದರೆ ಒಂಟಿಯಾಗಿ ಹೋಗುವ ಪೊಲೀಸರಿಗೆ ಕಲ್ಲು ಹೊಡೆದು ಕೊಲೆ ಮಾಡುವುದಕ್ಕೂ ಹಿಂಜರಿಯುವುದಿಲ್ಲ.

ಹದಿನೆಂಟು ಮಂದಿ ಕೊಲೆ ಮಾಡಿದ್ದ ಬವಾರಿಯಾ
ಹೈವೇ ಬಳಿ ಮನೆಗಳನ್ನು ಟಾರ್ಗೆಟ್ ಮಾಡಿ ಲೂಟಿ ಮಾಡುವ ಬವಾರಿಯಾ ಗ್ಯಾಂಗ್ ದಕ್ಷಿಣ ಭಾರತದಲ್ಲಿ ಲಾರಿ ಗ್ಯಾಂಗ್ ಅಂತಲೇ ಕುಖ್ಯಾತಿ ಪಡೆದಿದ್ದಾರೆ. 1995 ರ ದಶಕದಲ್ಲಿ ಬವಾರಿಯಾ ಗ್ಯಾಂಗ್ ಉಪಟಳ ತಟ್ಟಿಕೊಳ್ಳಲಾಗದೇ ತಮಿಳುನಾಡು ಪೊಲೀಸರು ವಿಶೇಷವಾಗಿ ಆಪರೇಷನ್ ಬವಾರಿಯಾ ಗ್ಯಾಂಗ್ ಕಾರ್ಯಾಚರಣೆ ನಡೆಸಿದ್ದರು. ಎಐಎಡಿಎಮ್ ಕೆ ಶಾಸಕ ಗುಮ್ಮಡಿಪುಡಿ ಸುದರ್ಶನ್‌ನ ಮನೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದರು. ಮನೆ ಲೂಟಿ ಮಾಡಿದ್ದರು. ತಮಿಳುನಾಡಿನಲ್ಲಿ ರಾಜಕಾರಣಿಗಳು, ಉದ್ಯಮಿಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡಿತ್ತು. ಹೀಗಾಗಿ ಅಂದಿನ ಸಿಎಂ ಜಯಲಲಿತಾ ಅವರೇ ಈ ಗ್ಯಾಂಗ್ ಹುಟ್ಟು ಅಡಗಿಸಲು ಎಸ್ಐಟಿ ರಚನೆಗೆ ಆದೇಶಿಸಿದ್ದರು. ಅಂದಿನ ಐಪಿಎಸ್ ಅಧಿಕಾರಿ ಸಂಜಯ್ ಅರೋರಾ ಎಂಬುವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಆ ಬಳಿಕ ಉತ್ತರ ಪ್ರದೇಶದ ಪೊಲೀಸರು ಹಾಗೂ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನ ಮೇರೆಗೆ ಉತ್ತರ ಪ್ರದೇಶದ ಕನೂಜ್ ಮೇಲೆ ತಮಿಳುನಾಡು ಪೊಲೀಸರು ದಾಳಿ ಮಾಡಿದ್ದರು. ಬವಾರಿಯ ಗ್ಯಾಂಗ್‌ನ ಪ್ರಮುಖ ಸದಸ್ಯ ಹಾಗೂ ಆತನ ಪತ್ನಿ ಸೇರಿ ಗ್ಯಾಂಗ್ ಬಂಧನವಾಗಿತ್ತು. 1995 ರಿಂದ 2005 ರ ವರೆಗೆ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ನಿದ್ದೆಗೆಡಿಸಿದ್ದ ಲಾರಿಗ್ಯಾಂಗ್ ಅಲಿಯಾಸ್ ಬವಾರಿಯಾ ಗ್ಯಾಂಗ್‌ಗೆ ಮುಕ್ತಿ ನೀಡಲಾಗಿತ್ತು.

18 ಹತ್ಯೆ : 64 ಅಟ್ಯಾಕ್ ಮಾಡಿದ್ದ ಲಾರಿ ಗ್ಯಾಂಗ್
ಬಟ್ಟೆ ಮಾಡುವ ಸೋಗಿನಲ್ಲಿ ಬವಾರಿಯಾ ಗ್ಯಾಂಗ್‌ನ ಮಹಿಳಾ ಸದಸ್ಯರು ಹೈವೇ, ರೈಲ್ವೇ ಟ್ರಾಕ್ ಸಮೀಪದ ಒಂಟಿ ಮನೆಗಳನ್ನು ಗುರುತಿಸುತ್ತಿದ್ದರು. ಯಾರೂ ಇಲ್ಲದ ವೇಳೆ ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಿದ್ದರು. ಪ್ರತಿರೋಧ ತೋರಿದವರನ್ನು ಕರುಣೆಯಿಲ್ಲದೇ ಕೊಲ್ಲುತ್ತಿದ್ದರು. ಹೆಣ್ಣು ಮಕ್ಕಳು ಸಿಕ್ಕರೆ ಅತ್ಯಾಚಾರ ಮಾಡುತ್ತಿದ್ದರು. ಲೂಟಿ ಮಾಡಿದ ಕೂಡಲೇ ಜಾಗ ಖಾಲಿ ಮಾಡುತ್ತಿದ್ದರು. 1995 ರಿಂದ 2005 ರ ವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ಹದಿನೆಂಟಕ್ಕೂ ಹೆಚ್ಚು ಹತ್ಯೆಗಳನ್ನು ಬವಾರಿಯ ಗ್ಯಾಂಗ್ ಮಾಡಿತ್ತು. ಡಿಎಂಕೆ ನಾಯಕ ಗಜೇಂದ್ರನ್, ಕಾಂಗ್ರೆಸ್ ನಾಯಕ ನಟರಾಜನ್, ಎಐಡಿಎಂಕೆ ಸುದರ್ಶನ್ ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳೇ ಈ ಗ್ಯಾಂಗ್ ದಾಳಿಗೆ ಒಳಗಾಗಿ ಜೀವ ಕಳೆದುಕೊಂಡಿದ್ದರು. 64 ಕ್ಕೂ ಹೆಚ್ಚು ದಾಳಿ ಮಾಡಿದ್ದರು. ಲಾರಿ ಗ್ಯಾಂಗ್ ದಾಳಿ ಜಯಲಲಿತಾ ಸರ್ಕಾರವನ್ನೇ ಬೆಚ್ಚಿ ಬೀಳಿಸಿತ್ತು. ಬವಾರಿಯಾ ಗ್ಯಾಂಗ್ ಕಾರ್ಯಾಚರಣೆ ಆಧರಸಿ ತಮಿಳಿನಲ್ಲಿ ಥೇರನ್ ಎಂಬ ಸಿನಿಮಾ ಕೂಡ ಬಂದಿದೆ.

ಬವಾರಿ ಗ್ಯಾಂಗ್ ಲೀಡರ್ ಗೆ ಮರಣ ದಂಡನೆ
ಒಂದು ದಶಕ ಮೂರು ರಾಜ್ಯಗಳನ್ನು ನಡಗುಸಿದ್ದ ಬವಾರಿಯ ಗ್ಯಾಂಗ್ ಲೀಡರ್ ಒಮಾ ಬವಾರಿಯಾ, ಲಕ್ಷ್ಮಣ್ ಬವಾರಿಯಾಗೆ ತಮಿಳುನಾಡಿನ ವಿಶೇಷ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿತ್ತು. ಇನ್ನು ಈ ಗ್ಯಾಂಗ್ ನ ಮತ್ತಿಬ್ಬರು ಸದಸ್ಯರಾದ ಬುರ್ರಾ ಬವಾರಿಯಾ ಹಾಗೂ ವಿಜಯ್ ಬವಾರಿಯಾ ಗ್ಯಾಂಗ್ ತಮಿಳುನಾಡು ಪೊಲೀಸರ ಎನ್ ಕೌಂಟರ್‌ಗೆ ಬಲಿಯಾಗಿದ್ದರು. ಆನಂತರ ತಮಿಳುನಾಡಿನಲ್ಲಿ ಬವಾರಿಯಾ ಗ್ಯಾಂಗ್ ಉಪಟಳ ಬದಲಾಗಿತ್ತು. ಈ ಆಪರೇಷನ್ ಬಳಿಕ ದಕ್ಷಿಣ ಭಾರತದಲ್ಲಿ ಕಾರ್ಯಾಚರಣೆ ಮಾಡಲು ಭಯ ಬೀಳುತ್ತಿತ್ತು. ಇದೀಗ ಕಾರ್ಯ ಶೈಲಿಯನ್ನು ಬದಲಿಸಿಕೊಂಡು ಮತ್ತೆ ದಕ್ಷಿಣ ಭಾರತಕ್ಕೆ ಬವಾರಿಯಾ ಗ್ಯಾಂಗ್ ಕಾಲಿಟ್ಟಿದೆ.

ಮಾರಕಾಸ್ತ್ರಗಳಿಂದ ಲೂಟಿಗೆ ಇಳಿತಾರೆ
ಸಾಮಾನ್ಯವಾಗಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಬಟ್ಟೆ, ಬೆಡ್ ಶೀಟ್‌ಗಳನ್ನು ಮಾರಾಟ ಮಾಡುವರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಬಟ್ಟೆ ಮಾರಾಟ ಮಾಡುವ ಸೋಗಿನಲ್ಲಿ ಬವಾರಿಯಾ ಗ್ಯಾಂಗ್‌ನ ಮಹಿಳಾ ಸದಸ್ಯರು ಮನೆಗಳನ್ನು ಗುರುತು ಮಾಡುತ್ತಾರೆ. ಆ ಬಳಿಕ ಜಾಗ ಖಾಲಿ ಮಾಡಿ ಹೊರಟು ಹೋದ ಹದಿನೈದು ದಿನಕ್ಕೆ ಗ್ಯಾಂಗ್ ಸದಸ್ಯರು ಹೈವೇ ಪಕ್ಕದ ಮನೆಗಳ ಮೇಲೆ ದಾಳಿ ಮಾಡಿ ಕಳ್ಳತನ ಮಾಡಬಹುದು. ಇಲ್ಲವೇ ದರೋಡೆ ಮಾಡಬಹುದು. ಈ ಬವಾರಿಯಾ ಗ್ಯಾಂಗ್ ವಿಕೃತ ಅಪರಾಧ ಮನೋಭಾವನೆ ಹೊಂದಿದರು, ಕರುಣೆ ಇಲ್ಲದೇ ಅಪರಾಧ ಕೃತ್ಯ ಎಸಗುತ್ತಾರೆ. ರಾಜ್ಯದ ಮೇಲ್ಸೇತುವೆ, ಹೈವೇ ಸಮೀಪ ಬಟ್ಟೆಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಸಮೀಪ ಬರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಒಂದೊಂದು ಹೆಸರಿನಲ್ಲಿ ಕಾರ್ಯಾಚರಣೆ
ಬವಾರಿಯಾ ಗ್ಯಾಂಗ್ ಒಂದೊಂದು ಏರಿಯಾದಲ್ಲಿ ಒಂದೊಂದು ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಒಂದೊಂದು ಗ್ಯಾಂಗ್ ನಲ್ಲಿ ಒಂದೊಂದು ಹೆಸರು ಇಟ್ಟುಕೊಂಡು ಅಪರಾಧ ಕೃತ್ಯ ಎಸಗುತ್ತಾರೆ. ಹೀಗಾಗಿ ಈ ಗ್ಯಾಂಗ್ ಪತ್ತೆ ಮಾಡುವುದು ಪೊಲೀಸರಿಗೂ ಕಷ್ಟ. ಮಿಗಿಲಾಗಿ ಬವಾರಿಯಾ ಗ್ಯಾಂಗ್ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಳೆಗಾಲದಲ್ಲಿ ಅಪರಾಧ ಕತ್ಯ ಎಸಗಲು ಆಯ್ಕೆ ಮಾಡಿಕೊಳ್ಳುತ್ತಾರೆ. ಲಾರಿ ಗ್ಯಾಂಗ್ ಅಂತಲ್ಲ, ಒಂದೊಂದು ಏರಿಯಾಗೂ ಒಂದೊಂದು ಹೆಸರು ಇಟ್ಟುಕೊಂಡು ಕಾರ್ಯಾಚರಣೆ ಮಾಡುತ್ತಾರೆ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಳೆಗಾಲವನ್ನು ಇವರು ಆಯ್ಕೆ ಮಾಡಿಕೊಳ್ಳುವುದು ವಿಶೇಷ.

ಮೈಗೆ ಎಣ್ಣೆ ಅಚ್ಚಿಕೊಂಡು ಕಾರ್ಯಾಚರಣೆ
ಬವಾರಿಯಾ ಗ್ಯಾಂಗ್ ನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟ. ಒಂದು ಬವಾರಿಯಾ ಗ್ಯಾಂಗ್ ಕಾರ್ಯಾಚರಣೆ ನಡೆಸುವಾಗ ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ. ಯಾರಾದರೂ ಹಿಡಿದುಕೊಳ್ಳಲು ಹೋದರೆ ತಪ್ಪಿಸಿಕೊಳ್ಳಲುತ್ತಾರೆ. ಇವರು ಮೊಬೈಲ್‌ಗಳನ್ನು ಬಳಸುವುದಿಲ್ಲ. ಹೀಗಾಗಿ ಪೊಲೀಸರಿಗೆ ಸುಲಭವಾಗಿ ಸಿಗುವುದಿಲ್ಲ. ಇನ್ನು ಇವರು ಮಾಡುವ ಅಪರಾಧ ಕೃತ್ಯಕ್ಕೆ ಪ್ರತಿರೋಧ ತೋರಿದವರನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ. ಸದ್ಯ ಬೆಂಗಳೂರಿನ ಅನೇಕ ಸಿಗ್ನಲ್ ಹಾಗೂ ಹೈವೇ ಸಮೀಪ ಬವಾರಿಯಾ ಗ್ಯಾಂಗ್ ಕಾಣಿಸಿಕೊಳ್ಳುತ್ತಿದೆ. ಪಾಪ ಬಟ್ಟೆ ವ್ಯಾಪಾರ ಎಂದು ಕರುಣೆ ತೋರಿಸಿ ಅವರ ಮುಂದೆ ನಿಮ್ಮ ಆಭರಣ ತೋರಿಸಿದರೋ ನಿಮ್ಮ ಕಥೆ ಮುಗಿಯಿತು. ಯಾವುದಕ್ಕೂ ಎಚ್ಚರಿಕೆಯಿಂದ ಇರಿ. ಸದ್ಯ ವಿಜಯನಗರ ಪೊಲೀಸರು ಐವರು ಬವಾರಿಯಾ ಗ್ಯಾಂಗ್ ಸದಸ್ಯರನ್ನು ಬಂಧಿಸಿರುವುದು ಪಶ್ಚಿಮ ವಿಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications