• search
  • Live TV
keyboard_backspace

ಬೆಂಗಳೂರು ಜೈಲಿನ ಕೈದಿಗಳಿಂದ ಫೆನಾಯಿಲ್ ಉದ್ಯಮ ಆರಂಭ

Google Oneindia Kannada News

ಬೆಂಗಳೂರು, ಸೆ. 10: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸನ್ನಡತೆ ಕೈದಿಗಳು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದಾರೆ. ಜೈಲಿನಲ್ಲಿಯೇ ಸುಗಂಧ ಭರಿತ ಫಿನಾಯಿಲ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ತಯರಿಸಿರುವ ಫೆನಾಯಿಲ್‌ಗೆ ಈಗ ಎಲ್ಲಿಲ್ಲದ ಬೇಡಿಕೆ ಉಂಟಾಗಿ ಸಾರ್ವಜನಿಕರು ಕೂಡ ಖರೀದಿಗೆ ಸಾಲುಗಟ್ಟಿ ನಿಂತಿದ್ದಾರೆ. ಸನ್ನಡತೆ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಡುವ ಜೈಲು ಅಧಿಕಾರಿಗಳ ಭಿನ್ನ ಪ್ರಯತ್ನ ಪುಟ್ಟದಾಗಿ ಫಲಕೊಟ್ಟಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಯಾವಾಗಲೂ ಕೆಟ್ಟ ವಿಚಾರಕ್ಕೆ ಸುದ್ದಿಯಾಗುತ್ತದೆ. ಜೈಲಿನಲ್ಲಿ ರೌಡಿಗಳ ಹಾವಳಿ. ಜೈಲಿನಲ್ಲಿಯೇ ಕೈದಿಗಳ ಮಾರಾಮರಿ. ಜೈಲಿನಲ್ಲಿ ಗಾಂಜಾ ವ್ಯಾಪಾರ, ಜೈಲಿನಲ್ಲಿ ಮೊಬೈಲ್ ದಂಧೆ ಹೀಗೆ ಒಂದಲ್ಲಾ ಒಂದು ಕೆಟ್ಟ ಅವಘಡಗಳು ಅಲ್ಲಿ ಪದೇ ಪದೇ ವರದಿಯಾಗುತ್ತಲೇ ಇರುತ್ತವೆ. ಆದರೆ ಈ ಭಾರಿ ಸನ್ನಡತೆ ಕೈದಿಗಳು ಮಾಡಿದ ಸಣ್ಣ ಪ್ರಯತ್ನ ಜೈಲಿನ ಬಗ್ಗೆ ಖುಷಿ ಪಡುವಂತಾಗಿದೆ.

ಎಚ್‌ಎನ್ ಎಸ್ ಅವರ ಮಹತ್ವಾಕಾಂಕ್ಷಿ ಯೋಜನೆ

ಎಚ್‌ಎನ್ ಎಸ್ ಅವರ ಮಹತ್ವಾಕಾಂಕ್ಷಿ ಯೋಜನೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ತರಕಾರಿ ಬೆಳೆಯಲು ಅವಕಾಶವಿದೆ. ಮೊದಲಿನಿಂದಲೂ ಟೈಲರಿಂಗ್ ಕೆಲಸ ಮಾಡುವರು ಇದ್ದಾರೆ. ಅಲ್ಲಿ ಸನ್ನಡತೆ ಮಹಿಳಾ ಕೈದಿಗಳು ಕರ ಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಈ ಹಿಂದೆ ಚಪಾತಿ ತಯಾರಿಸುವ ಪ್ರಯತ್ನ ನಡೆದಿತ್ತು. ಆ ಬಳಿಕ ದೊಡ್ಡ ಬೇಕರಿ ಆರಂಭಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಎಚ್‌. ಎನ್. ಸತ್ಯನಾರಾಯಣರಾವ್ ಕೈದಿಗಳಿಗೆ ಹೊಸ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದರು. ರಾಜ್ಯದಲ್ಲಿ ಪ್ಲಾಸ್ಟಿಕ್ ರದ್ದಾದ ಕೂಡಲೇ ಜೈಲಿನಲ್ಲಿಯೇ ಪೇಪರ್ ಬ್ಯಾಗ್ ತಯಾರಿಕೆಗೆ ನಾಂದಿ ಹಾಡಿದ್ದರು. ಅದರೆ, ಶಶಿಕಲಾಗೆ ಐಷಾರಾಮಿ ಸೌಲಭ್ಯ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂತಹ ಪ್ರಗತಿಶೀಲ ಆಲೋಚನೆಗಳು ಜೈಲಿನಲ್ಲಿ ಸ್ಥಗಿತಗೊಂಡಿದ್ದವು. ಸೆಂಟ್ರಲ್ ಜೈಲ್ ಹಳೇ ಪದ್ಧತಿಗೆ ಮಾರ್ಪಟ್ಟಿತ್ತು.

ಫೆನಾಯಿಲ್ ಜತೆಗೆ ಸಮವಸ್ತ್ರವೂ ಸಿಗುತ್ತೆ

ಫೆನಾಯಿಲ್ ಜತೆಗೆ ಸಮವಸ್ತ್ರವೂ ಸಿಗುತ್ತೆ

ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ದೌಲತ್ತು ಬೆಳಕಿಗೆ ಬಂದಿತ್ತು. ಅಲ್ಲಿ ನಡೆಯುವ ಅನಾಚಾರಗಳಿಗೆ ದೊಡ್ಡ ಸುದ್ದಿಯಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಶುಚಿತ್ವ ಮಾಡುವ ದಿಸೆಯಲ್ಲಿ ಹೊಳೆದ ಆಲೋಚನೆ ಹೊಸ ಉದ್ಯಮಕ್ಕೆ ನಾಂದಿ ಹಾಡಿದೆ. ಜೈಲಿನ ಶುಚಿತ್ವ ಕಾಪಾಡಲು ಜೈಲಿಗೆ ಆಗುವಷ್ಟು ಫೆನಾಯಿಲ್ ತಯಾರಿಸುವ ಕೈದಿಗಳ ಸಾಹಸ ಇದೀಗ ದೊಡ್ಡ ಉದ್ಯಮವನ್ನೇ ಸೃಷ್ಟಿಸಿದೆ. ಸನ್ನಡತೆ ಕೈದಿಗಳು ತಯಾರಿಸಿದ ಫೆನಾಯಿಲ್ ಆರಂಭದಲ್ಲಿ ಸೆಂಟ್ರಲ್ ಜೈಲಿನಲ್ಲಿ ಬಳಕೆ ಮಾಡಲಾಗುತ್ತಿತ್ತು. ಆನಂತರ ಕಾಲೇಜುಗಳು ಹಾಗೂ ಕೋರ್ಟ್ ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಜೈಲಿನಲ್ಲಿ ತಯಾರಿಸುವ ಗುಣಮಟ್ಟದ ಫೆನಾಯಿಲ್ ಗೆ ಸಾರ್ವಜನಿಕರಿಂದಲೂ ಬೇಡಿಕೆ ಉಂಟಾಗಿದೆ. ಇದರಿಂದ ಸನ್ನಡತೆ ಕೈದಿಗಳು ಖುಷಿಯಾಗಿದ್ದಾರೆ. ಕೈದಿಗಳ ಈ ಉದ್ಯಮದ ಯಶೋಗಾಥೆ ನೋಡಿ ಜೈಲಿನ ಅಧಿಕಾರಿಗಳು ಸಂತಸಗೊಂಡಿದ್ದಾರೆ.

ಗುಣಮಟ್ಟದ ಫೆನಾಯಿಲ್ ಜೈಲಿನಲ್ಲಿ ಸಿಗುತ್ತೆ

ಗುಣಮಟ್ಟದ ಫೆನಾಯಿಲ್ ಜೈಲಿನಲ್ಲಿ ಸಿಗುತ್ತೆ

ಸಾಮಾನ್ಯವಾಗಿ ಹೊರಗೆ ಸಿಗುವ ಫಿನಾಯಿಲ್ 30 ರಿಂದ 50 ರೂ.ಗೆ ಲಭ್ಯವಾಗುತ್ತದೆ. ಆದರೆ ಆ ಫೆನಾಯಿಲ್ ನಲ್ಲಿ ನೀರಿಗೆ ಬಣ್ಣ ತುಂಬಿ ಕಳಫೆ ಗುಣಮಟ್ಟದ್ದು ಮಾರಾಟ ಮಾಡಲಾಗುತ್ತದೆ. ಗುಣಮಟ್ಟದ ಫೆನಾಯಿಲ್ ಒಂದು ಲೀಟರ್‌ಗೆ ನೂರು ರೂ. ನೀಡಬೇಕು. ಆದರೆ, ಸಜಾ ಬಂಧಿಗಳು ತಯಾರಿಸುವ ಒಂದು ಲೀಟರ್ ಫೆನಾಯಿಲ್ 60 ರೂ.ಗೆ ಮಾರಾಟವಾಗುತ್ತಿದೆ. ಕೆಲಸಗಾರರಂತೆ ಸನ್ನಡತೆ ಕೈದಿಗಳು ಕೂಡ ದಿನಪೂರ್ತಿ ಬೆವರು ಸುರಿಸಿ ದುಡಿಮೆ ಜತೆಗೆ ಜೈಲುಶಿಕ್ಷೆಯಿಂದ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಜೈಲಿನ ಇನ್ನೊಂದು ಮುಖಕ್ಕೆ ಬ್ರೇಕ್ ಯಾವಾಗ

ಜೈಲಿನ ಇನ್ನೊಂದು ಮುಖಕ್ಕೆ ಬ್ರೇಕ್ ಯಾವಾಗ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಫೆನಾಯಿಲ್ ಮಾತ್ರವಲ್ಲ, ಕುರ್ಚಿ, ಟೇಬಲ್, ಸಮವಸ್ತ್ರ, ಮಾಸ್ಕ್, ಟವಲ್ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಶಾಲೆಗಳು, ಕಾಲೇಜುಗಳು ಸಾರ್ವಜನಿಕರು ದೊಡ್ಡ ಮಟ್ಟದ ಆರ್ಡರ್ ನೀಡಬೇಕು. ಇತ್ತೀಚೆಗೆ ಹದಿನೆಂಟು ಸಾವಿರ ಸಮವಸ್ತ್ರ ತಯಾರಿಕೆ ಗುತ್ತಿಗೆ ಪಡೆದ ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೈದಿಗಳ ಪರಿವರ್ತಿತ ಬದುಕು ನೋಡಿ ಸಂತಸಗೊಂಡಿದ್ದಾರೆ. ವಿಪರ್ಯಾಸವೆಂದರೆ ಯಾವುದೇ ಕೌಟುಂಬಿಕ, ಆಸ್ತಿ ಕಲಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಜನ ಸಾಮಾನ್ಯರು ಇಂತಹ ಪರಿವರ್ತಿತ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಇಲ್ಲಿರುವ ರೌಡಿಗಳು, ರೌಡಿ ಹಿಂಬಾಲಕರು ಜೈಲಿನಲ್ಲಿದ್ದುಕೊಂಡೇ ಅಪರಾಧ ಕೃತ್ಯಗಳನ್ನು ಎಸಗಿ ಜೈಲಿಗೆ ಮಸಿ ಬಳಿಯುತ್ತಾರೆ. ಇನ್ನೂ ಕೆಲವರು ಜೈಲಿನಲ್ಲೇ ಗಾಂಜಾ, ಸಿಗರೇಟು, ಮೊಬೈಲ್ ವ್ಯಾಪಾರ ಮಾಡಿ ದಂಧೆಗಳನ್ನು ಎಸಗುತ್ತಾರೆ. ಸದ್ಯ ಸನ್ನಡತೆ ಕೈದಿಗಳ ಫೆನಾಯಿಲ್ ಉದ್ಯಮ ಜೈಲಿಗೂ ಜೈಲಿನ ಅಧಿಕಾರಿಗಳ ಬಗ್ಗೆ ಜನರು ಖುಷಿ ಪಡುವಂತಾಗಿದೆ.

English summary
Convicted inmates of Parappana agrahara central jail manufacturing scented phenyls to be sold to the public. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X