Zodiac Workout : ನಿಮ್ಮ ಜನ್ಮರಾಶಿಗೆ ತಕ್ಕ ವ್ಯಾಯಾಮ ಯಾವುದು? 12 ರಾಶಿಯವರ ಫಿಟ್ನೆಸ್ ರಹಸ್ಯ ಇಲ್ಲಿದೆ

Zodiac Workout: ರಾಶಿಚಕ್ರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ದೇಹದ ಶಕ್ತಿಯ ಮಟ್ಟ, ಆಸಕ್ತಿ ಮತ್ತು ಜೀವನಶೈಲಿಯನ್ನು ಸಾಮಾನ್ಯವಾಗಿ ವಿವರಿಸಲಾಗುತ್ತದೆ. ಅದನ್ನೇ ದೈಹಿಕ ಜ್ಯೋತಿಷ್ಯ ದೃಷ್ಟಿಯಿಂದ ತೆಗೆದುಕೊಂಡರೆ, ಪ್ರತಿಯೊಂದು ರಾಶಿಯವರಿಗೂ ವಿಭಿನ್ನ ರೀತಿಯ ವ್ಯಾಯಾಮ ಸೂಕ್ತವಾಗಬಹುದು. ಆದರೆ ಇದರೊಂದಿಗೆ ನಿಮ್ಮ ಆರೋಗ್ಯ, ನಿದ್ರೆ, ಕೆಲಸದ ಸಮಯ ಮತ್ತು ಫಿಟ್ನೆಸ್ ಮಟ್ಟ ಕೂಡ ನಿಮ್ಮ ವ್ಯಾಯಾಮದ ಸೂಕ್ತ ಸಮಯ ಮತ್ತು ವಿಧಾನವನ್ನು ನಿರ್ಧರಿಸುತ್ತದೆ. ಜನ್ಮರಾಶಿಯು ಒಂದು ಸುಳಿವು ನೀಡುತ್ತದೆ ಅಷ್ಟೇ. ಹಾಗಾದರೆ ಬನ್ನಿ, ನಿಮ್ಮ ಜನ್ಮರಾಶಿಗೆ ಯಾವ ವ್ಯಾಯಾಮ ಅಥವಾ ವರ್ಕೌಟ್‌ ಸೂಕ್ತ ಅಂತ ನೋಡೋಣ.

Zodiac Workout What Exercise best to Your Zodiac Sign Find Your Perfect Workout and Best Time

ಮೇಷ ರಾಶಿ

ನಿಮಗೆ ಸೂಕ್ತ ವ್ಯಾಯಾಮ ರನ್ನಿಂಗ್, ಸ್ಪ್ರಿಂಟ್, ಬಾಕ್ಸಿಂಗ್, ಎಚ್‌ಐಐಟಿ, ಜಿಮ್ ವರ್ಕೌಟ್, ಮೇಷ ರಾಶಿಯವರನ್ನು ಸಾಮಾನ್ಯವಾಗಿ ಚುರುಕು, ಸ್ಪರ್ಧಾತ್ಮಕ ಮತ್ತು ಶಕ್ತಿಯುತರೆಂದು ಪರಿಗಣಿಸಲಾಗುತ್ತದೆ. ವೇಗ ಮತ್ತು ಸವಾಲು ಇರುವ ವ್ಯಾಯಾಮಗಳು ಇವರಿಗೆ ಬೇಸರ ತರದೆ ಇರಬಹುದು. ವರ್ಕೌಟ್‌ಗೆ ಸೂಕ್ತ ಸಮಯ ಬೆಳಿಗ್ಗೆ 6 ರಿಂದ 9 ಗಂಟೆ ಅಥವಾ ಸಂಜೆ ಕೆಲಸದ ನಂತರ.

ವೃಷಭ ರಾಶಿ

ನಿಮಗೆ ಸೂಕ್ತ ವ್ಯಾಯಾಮ ವೇಟ್ ಟ್ರೈನಿಂಗ್, ಯೋಗ, ವಾಕಿಂಗ್, ಸೈಕ್ಲಿಂಗ್. ಸ್ಥಿರತೆ ಮತ್ತು ನಿರಂತರತೆಯನ್ನು ಇಷ್ಟಪಡುವ ಸ್ವಭಾವಕ್ಕೆ ನಿಯಮಿತವಾಗಿ ಅನುಸರಿಸಬಹುದಾದ ವ್ಯಾಯಾಮಗಳು ಚೆನ್ನಾಗಿ ಹೊಂದಬಹುದು. ಸೂಕ್ತ ಸಮಯ ಬೆಳಿಗ್ಗೆ 7 ರಿಂದ 9 ಗಂಟೆ.

ಮಿಥುನ ರಾಶಿ

ಡ್ಯಾನ್ಸ್, ಜುಂಬಾ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಗ್ರೂಪ್ ವರ್ಕೌಟ್ ಇವೆಲ್ಲ ನಿಮಗೆ ಸರಿಯಾದ ವರ್ಕೌಟ್‌ಗಳು. ಒಂದೇ ರೀತಿಯ ರೂಟೀನ್ ಬೇಗ ಬೇಸರ ತರಬಹುದು ಎಂಬ ಜ್ಯೋತಿಷ್ಯ ಕಲ್ಪನೆಯಿದೆ. ಹೀಗಾಗಿ ಆಗಾಗ ಹೊಸತನ ಇರುವ ವ್ಯಾಯಾಮಗಳು ಹೆಚ್ಚು ಆಸಕ್ತಿ ಮೂಡಿಸಬಹುದು. ಬೆಳಿಗ್ಗೆ ಅಥವಾ ಸಂಜೆ ಓಕೆ. ಆದರೆ ಪ್ರತಿದಿನ ಒಂದೇ ರೀತಿಯ ರೂಟೀನ್ ಇರಬೇಕೆಂದಿಲ್ಲ.

ಕಟಕ ರಾಶಿ

ಈ ರಾಶಿಗೆ ಸೂಕ್ತ ವ್ಯಾಯಾಮ ಈಜು, ಯೋಗ, ಪಿಲಾಟೀಸ್, ವಾಕಿಂಗ್. ದೇಹದ ಜೊತೆಗೆ ಮನಸ್ಸಿಗೂ ನೆಮ್ಮದಿ ನೀಡುವ ಚಟುವಟಿಕೆಗಳು ಇವರಿಗೆ ಸೂಕ್ತವಾಗಬಹುದು. ಒತ್ತಡ ಕಡಿಮೆ ಮಾಡುವ ವ್ಯಾಯಾಮಗಳು ಉತ್ತಮ ಆಯ್ಕೆ. ಸೂಕ್ತ ಸಮಯ ಬೆಳಗಿನ ಶಾಂತ ಸಮಯ ಅಥವಾ ಸಂಜೆ.

Zodiac Workout : ಸಿಂಹ ರಾಶಿ

ಸೂಕ್ತ ವ್ಯಾಯಾಮ ಜಿಮ್, ವೇಟ್ ಟ್ರೈನಿಂಗ್, ಡ್ಯಾನ್ಸ್, ಕ್ರೀಡೆ, ಗ್ರೂಪ್ ಫಿಟ್ನೆಸ್. ಸವಾಲು, ಪ್ರದರ್ಶನ ಮತ್ತು ಸಾಧನೆಯ ಭಾವನೆ ನೀಡುವ ಚಟುವಟಿಕೆಗಳು ಇವರನ್ನು ಹೆಚ್ಚು ಪ್ರೇರೇಪಿಸಬಹುದು. ಸೂಕ್ತ ಸಮಯ ಬೆಳಿಗ್ಗೆ 6ರಿಂದ 9 ಗಂಟೆ ಅಥವಾ ಸಂಜೆ 5ರಿಂದ 8 ಗಂಟೆ.

Zodiac Workout; ಕನ್ಯಾ ರಾಶಿ

ಸೂಕ್ತ ವ್ಯಾಯಾಮ ಯೋಗ, ಪಿಲಾಟೀಸ್, ವಾಕಿಂಗ್, ಸ್ಟ್ರೆಂಗ್ತ್ ಟ್ರೈನಿಂಗ್. ಯೋಜನೆ, ಶಿಸ್ತು ಮತ್ತು ನಿಯಮಿತ ಅಭ್ಯಾಸಕ್ಕೆ ಒತ್ತು ನೀಡುವ ಸ್ವಭಾವಕ್ಕೆ ನಿಗದಿತ ವ್ಯಾಯಾಮ ವೇಳಾಪಟ್ಟಿ ಸೂಕ್ತವಾಗಬಹುದು. ಸೂಕ್ತ ಸಮಯ ಪ್ರತಿದಿನ ಒಂದೇ ನಿಗದಿತ ಸಮಯ. ಬೆಳಿಗ್ಗೆ ಮಾಡುವುದು ಹೆಚ್ಚು ಅನುಕೂಲಕರವಾಗಬಹುದು.

ತುಲಾ ರಾಶಿ

ಯೋಗ, ಡ್ಯಾನ್ಸ್, ಪಿಲಾಟೀಸ್, ಟೆನಿಸ್ ನಿಮಗೆ ಸರಿಯಾದುದು. ಸಮತೋಲನ, ಲಯ ಮತ್ತು ದೇಹದ ಚಲನೆಯ ಸೌಂದರ್ಯ ಇರುವ ವ್ಯಾಯಾಮಗಳು ಇವರಿಗೆ ಹೆಚ್ಚು ಇಷ್ಟವಾಗಬಹುದು. ಸರಿಯಾದ ಸಮಯ ಬೆಳಿಗ್ಗೆ ಅಥವಾ ಸಂಜೆ, ಒತ್ತಡ ಕಡಿಮೆ ಮಾಡಿಕೊಳ್ಳಲು ಅನುಕೂಲವಾದ ಸಮಯ.

ವೃಶ್ಚಿಕ ರಾಶಿ

ನಿಮಗೆ ಸೂಕ್ತ ವ್ಯಾಯಾಮ ಎಂದರೆ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್, ವೇಟ್ ಟ್ರೈನಿಂಗ್, ಎಚ್‌ಐಐಟಿ. ತೀವ್ರತೆ ಮತ್ತು ಸವಾಲು ಇರುವ ವ್ಯಾಯಾಮಗಳು ದೈಹಿಕ ಶಕ್ತಿಯನ್ನು ಬಳಸಿಕೊಳ್ಳಲು ಹಾಗೂ ಒತ್ತಡ ಹೊರಹಾಕಲು ಸೂಕ್ತವಾಗಬಹುದು. ಬೆಳಿಗ್ಗೆ ಅಥವಾ ಸಂಜೆ ಹೆಚ್ಚು ಶಕ್ತಿಯಿರುವ ಸಮಯ ಆಗಬೇಕು.

ಧನು ರಾಶಿ

ಸೂಕ್ತ ವ್ಯಾಯಾಮ ಟ್ರೆಕ್ಕಿಂಗ್, ರನ್ನಿಂಗ್, ಸೈಕ್ಲಿಂಗ್, ಈಜು, ಹೊರಾಂಗಣ ಕ್ರೀಡೆ. ಸ್ವಾತಂತ್ರ್ಯ, ಪ್ರಯಾಣ ಮತ್ತು ಹೊಸ ಅನುಭವಗಳನ್ನು ಇಷ್ಟಪಡುವ ಸ್ವಭಾವಕ್ಕೆ ಹೊರಾಂಗಣ ಚಟುವಟಿಕೆಗಳು ಹೆಚ್ಚು ಆಸಕ್ತಿದಾಯಕವಾಗಬಹುದು. ಸೂಕ್ತ ಸಮಯ ಮುಂಜಾನೆ ಅಥವಾ ಸಂಜೆ. ವಾರಾಂತ್ಯದಲ್ಲಿ ಟ್ರೆಕ್ಕಿಂಗ್ ಅಥವಾ ದೀರ್ಘ ಸೈಕ್ಲಿಂಗ್ ಉತ್ತಮ ಆಯ್ಕೆ.

ಮಕರ ರಾಶಿ

ಸೂಕ್ತ ವ್ಯಾಯಾಮ ವೇಟ್ ಟ್ರೈನಿಂಗ್, ರನ್ನಿಂಗ್, ಲಾಂಗ್ ವಾಕ್, ಗುರಿ ಆಧಾರಿತ ಫಿಟ್ನೆಸ್ ಪ್ರೋಗ್ರಾಂ. ಗುರಿ ಇಟ್ಟುಕೊಂಡು ನಿಧಾನವಾಗಿ ಪ್ರಗತಿ ಸಾಧಿಸುವ ರೀತಿಯ ವ್ಯಾಯಾಮಗಳು ಇವರ ಸ್ವಭಾವಕ್ಕೆ ಹೊಂದಬಹುದು. ಸೂಕ್ತ ಸಮಯ ಬೆಳಿಗ್ಗೆ. ದಿನ ಆರಂಭವಾಗುವ ಮೊದಲು ವ್ಯಾಯಾಮ ಮುಗಿಸುವುದು ನಿಯಮಿತತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಗಬಹುದು.

ಕುಂಭ ರಾಶಿ

ನಿಮಗೆ ಸೂಕ್ತ ವ್ಯಾಯಾಮ ಸೈಕ್ಲಿಂಗ್, ರಾಕ್ ಕ್ಲೈಂಬಿಂಗ್, ಡ್ಯಾನ್ಸ್, ಹೊಸ ಫಿಟ್ನೆಸ್ ವರ್ಕೌಟ್‌ಗಳು. ಹೊಸತನ ಮತ್ತು ವಿಭಿನ್ನ ಅನುಭವಗಳನ್ನು ಇಷ್ಟಪಡುವವರಿಗೆ ಒಂದೇ ರೀತಿಯ ಜಿಮ್ ರೂಟೀನ್‌ಗಿಂತ ವಿಭಿನ್ನ ಚಟುವಟಿಕೆಗಳು ಹೆಚ್ಚು ಆಸಕ್ತಿದಾಯಕವಾಗಬಹುದು. ಕಟ್ಟುನಿಟ್ಟಿನ ಸಮಯಕ್ಕಿಂತ ನಿಮಗೆ ಹೆಚ್ಚು ಅನುಕೂಲವಾದ ಸಮಯ ಮುಖ್ಯ. ಸ್ನೇಹಿತರೊಂದಿಗೆ ಸಂಜೆ ವ್ಯಾಯಾಮವೂ ಉತ್ತಮವಾಗಬಹುದು.

ಮೀನ ರಾಶಿ

ಸೂಕ್ತ ವ್ಯಾಯಾಮ ಈಜು, ಯೋಗ, ಡ್ಯಾನ್ಸ್, ಧ್ಯಾನ, ಆರಾಮದಾಯಕ ವಾಕಿಂಗ್. ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ನೀಡುವ ಚಟುವಟಿಕೆಗಳು ಹೆಚ್ಚು ಸೂಕ್ತವಾಗಬಹುದು. ಸಂಗೀತದೊಂದಿಗೆ ಡ್ಯಾನ್ಸ್ ಕೂಡ ಉತ್ತಮ ಆಯ್ಕೆ. ಸೂಕ್ತ ಸಮಯ ಬೆಳಗಿನ ಶಾಂತ ಸಮಯ ಅಥವಾ ಸಂಜೆ ಸೂರ್ಯಾಸ್ತದ ನಂತರದ ಆರಾಮದಾಯಕ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+