ಸಣ್ಣ ವಿಷಯಗಳಿಗೂ ಅತಿಯಾಗಿ ಮುನಿಸಿಕೊಳ್ಳುವರು ಈ ರಾಶಿಯವರು:ಕೋಪವೇ ಇವರ ಏಳಿಗೆಗೆ ಆಗುವುದು ಮುಳ್ಳು

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ಅಂದರೆ ಗ್ರಹ ನಕ್ಷತ್ರಗಳ ರಾಶಿ ಬದಲಾವಣೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹ ನಕ್ಷತ್ರಗಳ ಪ್ರಭಾವದ ಪರಿಣಾಮವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ಭಿನ್ನವಾಗಿರುತ್ತದೆ. ಕೆಲವರು ಸ್ವಭಾವತಃ ಶಾಂತವಾಗಿದ್ದರೆ, ಇನ್ನು ಕೆಲವರು ಸಣ್ಣ ಸಣ್ಣ ವಿಷಯಗಳಿಗೂ ಅತಿಯಾಗಿ ಕೋಪ ಮಾಡಿಕೊಳ್ಳತ್ತಾರೆ. ಇವರ ಕೋಪದ ತೀಕ್ಷ್ಣತೆ ಎಷ್ಟಿರುತ್ತದೆ ಎಂದರೆ ಅವರ ಕೋಪದ ಪರಿಣಾಮ ವರ್ಷಗಳ ಸಂಬಂಧ ನಿಮಿಷಗಳಲ್ಲಿ ಹಾಳಾಗುವುದು. ಮಾತ್ರವಲ್ಲ ವೃತ್ತಿಜೀವನ ಕೂಡಾ ಕ್ಷಣಾರ್ಧದಲ್ಲಿ ನೆಲ ಕಚ್ಚುವುದು.

ಅತಿಯಾಗಿ ಕೋಪ ಮಾಡಿಕೊಳ್ಳುವ ರಾಶಿಗಳು ಮತ್ತು ಇದಕ್ಕಿರುವ ಪರಿಹಾರ ಮಾರ್ಗಗಳು:

Zodiac Signs

ಮೇಷ ರಾಶಿ: ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಅಗ್ನಿ ಗ್ರಹ ಎಂದೂ ಕರೆಯುತ್ತಾರೆ.ಮೇಷ ರಾಶಿಯಲ್ಲಿ ಜನಿಸಿದವರು ಬಹಳ ಧೈರ್ಯವಂತರಾಗಿರುತ್ತಾರೆ.ಇವರಲ್ಲಿ ಸ್ವಲ್ಪವೂ ತಾಳ್ಮೆ ಇರುವುದೇ ಇಲ್ಲ.ಅವರು ಅಂದುಕೊಂಡ ಕೆಲಸ ಆಗದೇ ಇದ್ದಾಗ ಅಥವಾ ತಮ್ಮ ದಾರಿಗೆ ಯಾರಾದರೂ ಅಡ್ಡಿಯಾದರೆ ಸಿಟ್ಟು ಮಾಡಿಕೊಳ್ಳುತ್ತಾರೆ.ಕೋಪದ ಭರದಲ್ಲಿ ಇವರು ಆಡುವ ಮಾತುಗಳು ಎದುರಿಗಿರುವವರ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ.ಹೀಗಾಗಿ ಸಂಬಂಧಗಳು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

Zodiac Signs

ಸಿಂಹ ರಾಶಿ: ಈ ರಾಶಿಯ ಅಧಿಪತಿ ಸೂರ್ಯ.ಇವರು ರಾಜರ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರೂ ತಮ್ಮ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ಬಯಸುವವರು ಈ ರಾಶಿಯವರು. ಇವರ ಮಾತನ್ನು ಯಾರಾದರೂ ಕೇಳದೇ ಹೋದರೆ ಅಥವಾ ನಿರ್ಲಕ್ಷಿಸಿದರೆ ಅವರು ಅದನ್ನು ಸಹಿಸುವುದಿಲ್ಲ. ಬದಲಾಗಿ ಬೇಗನೆ ಕೋಪಗೊಳ್ಳುತ್ತಾರೆ. ಅವರ ದುರಹಂಕಾರ ಮತ್ತು ಕೋಪದ ಕಾರಣದಿಂದ ಯಾರೂ ಇವರ ಜೊತೆ ಉತ್ತಮ ಸಂಬಂಧ ಹೊಂದಲು ಬಯಸುವುದಿಲ್ಲ.

Zodiac Signs

ವೃಶ್ಚಿಕ ರಾಶಿ: ಮೇಷ ರಾಶಿಯಂತೆ ಈ ರಾಶಿಯ ಅಧಿಪತಿ ಕೂಡಾ ಮಂಗಳ ಗ್ರಹ. ಆದರೆ ವೃಶ್ಚಿಕ ರಾಶಿಯವರ ಕೋಪವು ಮೇಷ ರಾಶಿಯವರ ಸಿಟ್ಟಿಗಿಂತ ಭಿನ್ನವಾಗಿರುತ್ತದೆ. ಇವರು ಎಲ್ಲರ ಮುಂದೆ ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ವಿಷಯಗಳನ್ನು ಮುಚ್ಚಿಡುವುದರಲ್ಲಿ ಇವರು ನಿಸ್ಸೀಮರು. ಇವರ ಕೋಪವು ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುತ್ತದೆ. ಇವರು ಸೇಡಿನ ಮನೋಭಾವವನ್ನು ಹೊಂದಿರುತ್ತಾರೆ. ಇವರ ಈ ಸ್ವಭಾವದ ಕಾರಣ ವೈಯಕ್ತಿಕ ಮತ್ತು ವೃತ್ತಿಪರ ಜೀವನ ನೆಲಕಚ್ಚಬಹುದು.

ಗಜಲಕ್ಷ್ಮೀ ರಾಜಯೋಗದಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ: ಹೆಚ್ಚಾಗುವುದು ಸುಖ ಸಮೃದ್ಧಿ
ಗಜಲಕ್ಷ್ಮೀ ರಾಜಯೋಗದಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ: ಹೆಚ್ಚಾಗುವುದು ಸುಖ ಸಮೃದ್ಧಿ

ಕೋಪವನ್ನು ಶಾಂತಗೊಳಿಸಲು 5 ಸುಲಭ ಮಾರ್ಗಗಳು:

ಬೆಳ್ಳಿ ಧರಿಸಿ: ಬೆಳ್ಳಿ ಚಂದ್ರನ ಲೋಹವಾಗಿದ್ದು ಮನಸ್ಸಿಗೆ ಶಾಂತಿ ನೀಡುತ್ತದೆ. ಆದ್ದರಿಂದ, ಅತಿಯಾಗಿ ಕೋಪ ಇರುವವರು ಬೆಳ್ಳಿಯ ಬಳೆ ಅಥವಾ ಬೆಳ್ಳಿಯ ಚೈನ್‌ ಧರಿಸುವುದರಿಂದ ಹೆಚ್ಚಿನ ಪ್ರಯೋಜವಾಗುವುದು.

ಚಂದ್ರನಿಗೆ ಜಲ ಅರ್ಪಿಸಿ: ಸೋಮವಾರ ಅಥವಾ ಹುಣ್ಣಿಮೆಯ ರಾತ್ರಿ ಚಂದ್ರನಿಗೆ ಜಲ ಅರ್ಪಿಸಿ. ಹೀಗೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ
ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ

ತಣ್ಣೀರು ಕುಡಿಯಿರಿ: ನಿಮ್ಮ ಕೋಪ ಹೆಚ್ಚುತ್ತಿದೆ ಎಂದು ಅನಿಸಿದಾಗಲೆಲ್ಲಾ ಕುಳಿತು ಒಂದು ಲೋಟ ತಣ್ಣೀರು ಕುಡಿಯಿರಿ. ಇದು ನಿಮ್ಮ ಮಾನಸಿಕ ಉದ್ರೇಕವನ್ನು ತಕ್ಷಣವೇ ಕಡಿಮೆ ಮಾಡುತ್ತದೆ.

ಮಂತ್ರಗಳನ್ನು ಪಠಿಸುವುದು: ಪ್ರತಿದಿನ ಬೆಳಿಗ್ಗೆ ಶಾಂತ ಮನಸ್ಸಿನಿಂದ "ಓಂ ನಮಃ ಶಿವಾಯ" ಅಥವಾ "ಓಂ ಶಾಂತಿ" ಎಂದು 108 ಬಾರಿ ಪಠಿಸಿ. ಈ ಮಂತ್ರವು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಆಹಾರ ಪದ್ಧತಿ: ಅತಿಯಾದ ಖಾರವಾದ ಆಹಾರಗಳು ಮತ್ತು ಮಾಂಸಾಹಾರ ಸೇವನೆಯನ್ನು ತಪ್ಪಿಸಿದರೆ ಒಳ್ಳೆಯದು. ಸರಳವಾದ, ಸಾತ್ವಿಕ ಆಹಾರಗಳು ಮನಸ್ಸನ್ನು ಸೌಮ್ಯ ಮತ್ತು ಶಾಂತವಾಗಿಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+