ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!
Recommended Video

ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಮೋಹ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹವೇ ನಮ್ಮ ಗುಣ ಸ್ವಭಾವವನ್ನೂ ಹೇಳಬಲ್ಲದು ಎಂದರೆ ನಂಬುತ್ತೀರಾ?
ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಎಂಬುದರ ಮೇಲೆ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದಂತೆ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರಾದರೆ, ಕೆಂಪು ಬಣ್ಣ ಇಷ್ಟಪಡುವವರು ಶಾಣೆ ಬುದ್ಧಿವಂತರಂತೆ! ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳಾದರೆ, ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ!
ಹೀಗೇ ಒಂದೊದು ಬಣ್ಣಕ್ಕೆ ಒಂದೊಂದು ಅರ್ಥ. ಅಷ್ಟಕ್ಕೂ ನಿಮ್ಮಿಷ್ಟದ ಬಣ್ಣ ಯಾವುದು? ಮತ್ತು ಆ ಬಣ್ಣ ನಿಮ್ಮ ಗುಣವನ್ನು ಹೇಗೆ ವಿವರಿಸುತ್ತದೆ ಎಂಬ ವಿವರ ಇಲ್ಲಿದೆ ನೋಡಿ. ಬಣ್ಣ ಮನುಷ್ಯನ ಅಭಿರುಚಿಗೆ ಬಿಟ್ಟಿದ್ದು. ಆದರೆ ಆ ಅಭಿರುಚಿಯಿಂದಲೇ ಮನುಷ್ಯನ ಸ್ವಭಾವ ತಿಳಿಯುವುದಕ್ಕೆ ಸಾಧ್ಯ ಎಂಬುದಕ್ಕೆ ಇದೊಂದು ಉದಾಹರಣೆ.

ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರು!
ಕಪ್ಪು ಬಣ್ಣವನ್ನು ಇಷ್ಟಪಡುವವರು ಹುಟ್ಟಾ ನಾಯಕರು. ಅವರು ಎಲ್ಲೇ ಹೋಗಲಿ ನಾಯಕರಾಗುತ್ತಾರೆ. ಅಷ್ಟೇ ಅಲ್ಲ, ಈ ಬಣ್ಣವನ್ನು ಇಷ್ಟಪಡುವವರು ತಮ್ಮ ಬುದ್ಧಿಯಿಂದ ಮಾತನಾಡುತ್ತಾರೆಯೇ ಹೊರತು, ಹೃದಯದಿಂದಲ್ಲ. ಕಪ್ಪು ಬಣ್ಣ ಇಷ್ಟಪಡುವವರು ಎಲ್ಲರೊಂದಿಗೂ ಅತ್ಯಂತ ಆತ್ಮಿಯವಾಗಿ ಬೆರೆಯುವವರು. ವಿಶಾಲ ಮನೋಭಾವ ಉಳ್ಳವರು. ಜೀವನವನ್ನು ಯಾವಾಗಲೂ ಪ್ರಾಕ್ಟಿಕಲ್ ಆಗಿ ನೋಡುವವರು. ಆದರೆ ಕೆಲವೊಮ್ಮೆ ನಿಮ್ಮ್ ಈ ಮನೋಭಾವವೇ ನಿಮಗೆ ಉಲ್ಟಾ ಹೊಡೆಯುವ ಸಂಭವವೂ ಹೆಚ್ಚು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ನಿಮಗೆ ಇಷ್ಟವಿಲ್ಲ, ಅದನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ನಿಮ್ಮ ಸ್ವಭಾವ.

ಕೆಂಪು ಬಣ್ಣ ಇಷ್ಟಪಡುವವರು ಬಹಳ ಬುದ್ಧಿವಂತರು!
ಕೆಂಪು ಬಣ್ಣವನ್ನು ಇಷ್ಟಪಡುವವರು ಸಾಕಷ್ಟು ಬುದ್ಧಿವಂತರು. ನಿಮಗೆ ಯಾವುದೇ ಹೊಸ ಹೊಸ ಕೆಲಸ ಮಾಡುವುದರಲ್ಲಿ ಆಸಕ್ತಿ. ಪ್ರವಾಸ ಅಂದ್ರೆ ನಿಮಗೆ ಎಲ್ಲಿಲ್ಲದ ಇಷ್ಟ. ಅಷ್ಟೇ ಅಲ್ಲ, ನೀವೊಬ್ಬ ವಿಧೇಯ ಗೆಳೆಯರು ಸಹ. ನಿಮಗೆ ಹೊಸ ಹೊಸ, ವಿಭಿನ್ನ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಅಂದ್ರೆ ತುಂಬಾ ಇಷ್ಟ. ನೀವೊಬ್ಬ ಕನಸುಗಾರ. ಮತ್ತು ಕನಸುಗಾರರೆಂದರೆ ನಿಮಗೆ ಬಹಳ ಇಷ್ಟ.

ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳು
ಹಳದಿ ಬಣ್ಣವನ್ನು ಇಷ್ಟಪಡುವವರು ಮೃದು ಹೃದಯಿಗಳು. ಜೊತೆಗೆ ತಮ್ಮ ಜೊತೆ ಇರುವ ಜನರ ಬಗ್ಗೆ ಅತೀವ ಕಾಳಜಿ ತೋರುವವರು. ನಿಮ್ಮ ಕ್ರಿಯಾಶಿಲತೆಗೆ ಎಲ್ಲೆ ಇಲ್ಲ. ನಿಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನೀವು ಸದಾ ಭವಿಷ್ಯದ ಬಗ್ಗೆ ಯೋಚನೆ ಮಾಡುವ ವ್ಯಕ್ತಿ. ನಿಮ್ಮದು ನಾಚಿಕೆಯ ಸ್ವಭಾವ. ಎಷ್ಟೋ ಬಾರಿ ನಿಮ್ಮ ಮನಸ್ಸಿನಲ್ಲಿರುವ ಎಲ್ಲವನ್ನೂ ನೀವು ಹೇಳಲು ಇಷ್ಟಪಡುವುದಿಲ್ಲ.

ಗುಲಾಬಿ ಬಣ್ಣ ಇಷ್ಟಪಡುವವರು ಸಮತೋಲನ ಕಾಯ್ದುಕೊಳ್ಳುವವರು
ಗುಲಾಬಿ ಬಣ್ಣವನ್ನು ಇಷ್ಟಪಡುವವರು ಎಂದಿಗೂ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಇಷ್ಟಪಡುವವರು. ನೀವು ಯಾವಾಗಲೂ ಆಶಾವಾದಿಗಳು. ದ್ವೇಷವನ್ನು ಇಷ್ಟಪಡದವರು. ಉತ್ತಮ ಗೆಳೆಯರನ್ನು ಹೊಂದಿರುವವರು ಮತ್ತು ಎಲ್ಲಾ ಕಡೆಗಳಲ್ಲೂ ಸ್ಥಿರತೆಯನ್ನು ಬಯಸುವವರು. ನಿಮ್ಮದು ಅತ್ಯಂತ ಚಟುವಟಿಕೆಯ, ಕ್ರಿಯಾಶೀಲ ವ್ಯಕ್ತಿತ್ವ. ಸದಾ ಸ್ವಾವಲಂಬಿಯಾಗಿ ಬದುಕಲು ಇಷ್ಟಪಡುವ ನೀವು, ನಿಮ್ಮ ಸುತ್ತ ಇರುವ ಜನರನ್ನು ಬಹುವಾಗಿ ಪ್ರೀತಿಸುವವರು. ಮತ್ತೊಬ್ಬರು ನಿಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಎಂಬುದು ನಿಮಗೆ ಬೇಕಿಲ್ಲ.

ಕಿತ್ತಳೆ ಬಣ್ಣ ಇಷ್ಟಪಡುವವರು ಪಾತರಗಿತ್ತಿಯಂತೆ!
ಕಿತ್ತಳೆ ಬಣ್ಣ ಇಷ್ಟಪಡುವವರು ಪಾತರಗಿತ್ತಿಯಂತೆ. ಅವರಿಗೆ ಸಾಮಾಜಿಕ ಬದುಕಂದ್ರೆ ಇಷ್ಟ. ಮಾತ್ರವಲ್ಲ ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯುವುದು ಎಂದರೆ ಪ್ರೀತಿ. ಈ ಬಣ್ಣ ಇಷ್ಟಪಡುವವರಿಗೂ ಹಳದಿ ಬಣ್ಣ ಇಷ್ಟಪಡುವವರಿಗೂ ಗುಣದಲ್ಲಿ ಸಾಕಷ್ಟು ಹೋಲಿಕೆ ಇರುತ್ತದೆ. ನೀವು ಮತ್ತೊಬ್ಬರ ಬಗ್ಗೆ ಬಹಳ ಕಾಳಜಿ ತೋರುವವರು. ನಿಮಗೆ ಬದುಕು ಥ್ರಿಲ್ ಆಗಿರಬೇಕೆಂಬ ಇರಾದೆ. ನೀವು ನಾಚಿಕೆಯ ಸ್ವಭಾವದವರು ಸಹ. ಆದರೆ ಸದಾ ಎಲ್ಲರೊಂದಿಗೂ ಬೆರೆಯಲು ನೀವು ಇಷ್ಟಪಡುವುದರಿಂದ ನಿಮಗೆ ಸಾಕಷ್ಟು ಸ್ನೇಹಿತರೂ ದೊರಕುತ್ತಾರೆ. ಆದರೆ ನೀವು ನಿಮ್ಮೊಳಗಿನ ನೋವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ.

ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ!
ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ! ನಿಮ್ಮ ದಾರಿಯನ್ನು ಎಂದಿಗೂ ನೀವೇ ಕಂಡುಕೊಳ್ಳುವವರು ಮತ್ತು ನೀವು ಎಂದಿಗೂ ಸ್ವತಂತ್ರವಾಗಿ ಬದುಕಲು ಇಷ್ಟಪಡುವವರು. ನಿರ್ಭೀತ ವ್ಯಕ್ತಿತ್ವದವರು. ಕೆಲವೊಮ್ಮೆ ನಿಮ್ಮದು ತೀರಾ ಬೇಜವಾಬ್ದಾರಿ ವ್ಯಕ್ತಿತ್ವ ಅನ್ನಿಸಬಹುದು. ನಿಮಗೆ ಅನ್ನಿಸಿದ್ದನ್ನು ಮಾಡಿಯೇ ತೀರುವ ವ್ಯಕ್ತಿತ್ವ ನಿಮ್ಮದು. ಇದು ನಿಮ್ಮನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತದೆ.

ಹಸಿರನ್ನು ಇಷ್ಟಪಡುವವರು ಸಾಹಸಿಗಳು!
ಹಸಿರು ಬಣ್ಣವನ್ನು ಇಷ್ಟಪಡುವವರು ಸಾಹಸೀ ಮನೋಭಾವದವರು. ಯಾವಾಗಲೂ ಬದುಕಿನಲ್ಲಿ ಥ್ರಿಲ್ ಬೇಕು ಎಂಬ ಮನೋಭಾವ ನಿಮ್ಮದು. ನೀವು ನಿಮ್ಮ ಬಗ್ಗೆಯೇ ಕೊಚ್ಚಿಕೊಳ್ಳುವುದು ತುಸು ಹೆಚ್ಚು. ಇದು ಕೆಲವರಿಗೆ ಇಷ್ಟವಾಗದೆ ಇರಬಹುದು. ನೀವು ಎಲ್ಲ ಜನರೊಂದಿಗೂ ಬೆರೆಯುವವರು, ಅದಮ್ಯ ಉತ್ಸಾಹಿಗಳು ಮತ್ತು ಜನರನ್ನು ರಂಜಿಸುವುದರಲ್ಲಿ ನಿಮಗೆ ಎಲ್ಲಿಲ್ಲದ ಆಸಕ್ತಿ.

ನೇರಳೆ ಬಣ್ಣ ಇಷ್ಟಪಡುವವರು ಗಂಭೀರ ಸ್ವಭಾವದವರು
ನೇರಳೆ ಬಣ್ಣವನ್ನು ಇಷ್ಟಪಡುವವರು ಗಂಭೀರ ಸ್ವಭಾವದವರು. ಯಾವ ವಿಷಯಕ್ಕೂ ಅವರು ಉದ್ವೇಗಗೊಳ್ಳುವವರಲ್ಲ. ಯಾವುದೇ ಸನ್ನಿವೇಶವನ್ನೂ ಸಮಚಿತ್ತದಿಂದ ಎದುರಿಸುವವರು. ಮನಸ್ಸಲ್ಲಿ ಸಾಕಷ್ಟು ಭಾವನೆಗಳಿದ್ದರೂ ಅದನ್ನು ಹೊರಹಾಕುವುದು ಅವರಿಗೆ ಇಷ್ಟವಿಲ್ಲ. ಬದುಕನ್ನು ತೀರಾ ಗಂಭೀರವಾಗಿ ನೋಡುವವರು ಮತ್ತು ಪ್ರತಿಯೊಂದರಲ್ಲೂ ಪರಿಪೂರ್ಣತೆ ಬಯಸುವವರು ಇವರು.

ಕಂದುಬಣ್ಣ ಇಷ್ಟಪಡುವವರು 'ಡೌನ್ ಟು ಅರ್ಥ್' ಮನೋಭಾವದವರು
ಕಂದುಬಣ್ಣವನ್ನು ಇಷ್ಟಪಡುವವರು ಡೌನ್ ಟು ಅರ್ಥ್ ಸ್ವಭಾವದವರು. ತುಂಬ ಸರಳ ಸಹ. ಜೊತೆಗೆ ಪರಿಪೂರ್ಣತೆಯನ್ನು ಬಯಸುವವರು. ನೀವು ಮತ್ತೊಬ್ಬರಿಂದ ನಿರೀಕ್ಷಿಸುವುದು ಜಾಸ್ತಿ. ಅದೇ ನಿಮ್ಮ ದೌರ್ಬಲ್ಯವೂ ಹೌದು. ನಿಮ್ಮ ನಿರೀಕ್ಷೆಯಂತೆ ಆಗದೆ ಇದ್ದಾಗ ನೀವು ಬೇಸರಗೊಳ್ಳುತ್ತೀರಿ! ನೀವು ಸುಭದ್ರವಾದ ಜೀವನ ಪಡೆದು, ಯಾವ ಕೊರತೆಯೂ ಇಲ್ಲದಂತೆ ಬದುಕುತ್ತಿದ್ದರೂ ಮನಸ್ಸಿನಲ್ಲಿ ಆಗಾಗ ಖಿನ್ನತೆ ಅನುಭವಿಸುತ್ತಿರುತ್ತೀರಿ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications