2015 ವರ್ಷ ಭವಿಷ್ಯ : ಮೀನ ರಾಶಿಗೆ ಶನಿಬಲ
ಪೂರ್ವಾಭಾದ್ರಪದ 4ನೇ ಚರಣ, ಉತ್ತರಾಭಾದ್ರಪದ ಮತ್ತು ರೇವತಿ ನಕ್ಷತ್ರದಲ್ಲಿ ಜನಿಸಿದವರದು ಮೀನ ರಾಶಿ. ದಿ, ದು, ಖ, ಝ, ಥ, ದೆ, ದೊ, ಚ, ಚಿ ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.
ಮೀನ ರಾಶಿಯವರಿಗೆ 2015ನೇ ಹೊಸ ವರ್ಷವು ಉಸ್ಸಪ್ಪ್ ಎಂದು ನಿಟ್ಟುಸಿರು ಬಿಡುವ ಸಮಾಧಾನದ ವರ್ಷವಾಗಿದೆ. ಈಗಾಗಲೇ ಗುರುಬಲ ಹಾಗೂ ಶನಿಬಲವಿಲ್ಲದೇ ಜೀವನದಲ್ಲಿ ಸಾಕಷ್ಟು ಹೋರಾಡಿದ್ದಾಗಿದೆ. ಈಗ ಜೀವನವನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುವ ಸಮಯ. ಯಾಕೆಂದರೆ ಇಷ್ಟು ದಿನ ಅಷ್ಟಮದಲ್ಲಿದ್ದ ಶನಿದೇವನು ಆರೋಗ್ಯಕ್ಕೆ ಪೆಟ್ಟು ಕೊಟ್ಟಿದ್ದಾನೆ ಕೆಲವರಿಗೆ. ಇನ್ನು ಕೆಲವರಿಗೆ ಬೇಕಾಬಿಟ್ಟಿ ಜೀವನ ಮಾಡಿದ್ದಕ್ಕೆ ಹಲವಾರು ರೋಗಗಳನ್ನು ಉಡುಗೊರೆಯಾಗಿಯೂ ನೀಡಿದ್ದಾನೆ. ಇದನ್ನು ಅನುಭವಿಸಿದವರು ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸಿ ತಪ್ಪಿಸದೇ. ಉಳಿದವರಿಗೂ ಗೊತ್ತಾಗಲಿ ಅಷ್ಟಮಶನಿಯು ಕಷ್ಟಕರ ಎಂಬುದು. ಇನ್ನು ಈ ವರ್ಷದಿಂದ ಆರೋಗ್ಯದಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ.
ಸದ್ಯಕಂತೂ ಈ ವರ್ಷದ ಉತ್ತರಾರ್ಧದವರೆಗೂ ಅಂದರೆ ಜುಲೈವರೆಗೂ ಗುರುಬಲವಿದೆ. ಅಲ್ಲಿಯವರೆಗೂ ಯಾವುದೇ ಅಡೆತಡೆಗಳಿರುವುದಿಲ್ಲ. ಈ ಸಮಯದಲ್ಲಿ ಎಲ್ಲ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬವದರೊಂದಿಗೆ ಅತ್ಯಾನಂದದ ಅನುಭವ. ಸಮಾಜದಲ್ಲಿ ಎಲ್ಲರೂ ಗೌರವಾದರ ನೀಡುತ್ತಾರೆ. ವ್ಯವಹಾರಸ್ಥರಿಗೆ ಲಾಭದ ರುಚಿಯಿಂದ ಜೀವನ ಸಾರ್ಥಕವಾಯಿತೆನ್ನುವಂತಾಗುತ್ತದೆ. ಇಷ್ಟು ವರ್ಷ ಕಣ್ಣೀರು ಕೂಳು ತಿಂದವರು ಈಗ ಸುಖ ಅನುಭವಿಸುವ ಸಮಯ. ಕಂಕಣಕ್ಕಾಗಿ ಕಾದಿರುವವರಿಗೆ ಕನಸಿನ ರಾಜಕುಮಾರ ಸಿಕ್ಕಿದ್ದು ಖುಷಿಯಾಗುತ್ತದೆ. ಇನ್ನು ಸುರಸುಂದರಾಂಗಿ ನನ್ನ ಕನ್ಯೆಯಾಗಬೇಕು ಎನ್ನುವವರಿಗೆ ಕೂಡ ಅಂದುಕೊಂಡಂಗೇ ಆಗುತ್ತದೆ. ಕೆಲಸಕ್ಕಾಗಿ ಕಾದಿರುವವರಿಗೆ ಸಂಬಳ ತೆಗೆದುಕೊಳ್ಳುವ ಯೋಗ ಒದಗಿಬಂದರೆ, ಕೆಲಸದಲ್ಲಿ ಬಡ್ತಿ ಬೇಕು ಎಂದು ಬಯಸುವವರಿಗೆ ಸುಲಭವಾಗಿ ದಕ್ಕುತ್ತದೆ ಬಡ್ತಿ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. [ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಜುಲೈ ನಂತರ ಗುರುಬಲದ ಕೊರತೆ : ಜುಲೈ ನಂತರ ಶುರುವಾಗುತ್ತದೆ ನೋಡಿ ಗುರುಬಲದ ಕೊರತೆ. ಆ ಸಮಯದಲ್ಲಿ ಆರೋಗ್ಯದಲ್ಲಿ ಕೊಂಚ ಕಿರಿಕಿರಿ. ಮಾಡಿಕೊಂಡ ಸಾಲ ತೀರಿಸಲಾಗದೆ ಗೊಣಗಾಟ. ಕುಟುಂಬದವರೊಂದಿಗೆ ಹೊಂದಾಣಿಕೆಯ ಕೊರತೆಯಿಂದ ಬೇಸರ. ದುಷ್ಟರ ಸಹವಾಸ ಮಾಡಿದ್ದಕ್ಕೆ ಶಿಕ್ಷೆ ಅನುಭವಿಸುವ ಮುಂತಾದ ಕೆಟ್ಟಫಲಗಳನ್ನು ಅನುಭವಿಸಬೇಕಾಗುತ್ತದೆ.
ಇದೇ ರೀತಿ ಶನಿಯು ಕೂಡ ನವಮದಲ್ಲಿದ್ದಾನೆ. ಏನಾದರೂ ಅಂತಿಂಥ ಸಮಾಜದ್ರೋಹಿ ಮತ್ತು ಸಮಾಜವಿರೋಧಿ ಕೆಲಸ ಮಾಡುವವರಿಗೆ ಕೈ ಜೋಡಿಸಿದವರು ಕೈಕೋಳ ಹಾಕಿಕೊಳ್ಳಲು ಸಿದ್ಧರಾಗಿರಿ ಈಗ. ಏಕೆಂದರೆ ಸರಕಾರಿ ಕಬ್ಬಿಣದಾಭರಣ ಧರಿಸಿಕೊಳ್ಳುವ ಯೋಗ ನೀಡುತ್ತಾನೆ ಶನಿದೇವನು ಕೆಟ್ಟವರಿಗೆ. "ಅಂತೂ ಬಂತಲ್ಲಾ ಇವನಿಗೆ ಕಡೇಗಾಲ" ಎಂದು ನೊಂದವರು ಹೃದಯ ತುಂಬಿಕೊಂಡು ದೇವರನ್ನು ಹರಸುತ್ತಾರೆ. ಇದು ಕೆಟ್ಟ ಜನರಿಗೆ ಮಾತ್ರ ಅನ್ವಯವಾಗುತ್ತದೆ. ಅಂಥವರು ಬಾಡೂಟ ಮರೆತು ಜೈಲೂಟ ಮಾಡಲು ರೆಡಿಯಾಗಿರಿ.
ಇನ್ನು ಶನಿಯು ಕೆಟ್ಟ ಕೆಲಸ ಮಾಡುತ್ತಿದ್ದವರಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಲಿದ್ದಾನೆ ಈ ವರ್ಷ. ಯಾರದೋ ದುಡ್ಡು ಸಾಲ ತೆಗೆದುಕೊಂಡು ಅದನ್ನು ಮುಳುಗಿಸಿದ್ದರೆ ಅಂಥವರು ತಮ್ಮ ಮನೆ ಮಂದಿಯೊಂದಿಗೆ ತಮ್ಮ ಜೀವನದ ಬಂಡಿಯನ್ನು ಮುಳುಗಿಸಿಕೊಂಡರೆಂದೇ ಅರ್ಥ. ಸೊಕ್ಕಿನಿಂದ ಮೆರೆದಾಡುತ್ತಿದ್ದವರಿಗೆ ಬೆನ್ನುಮೂಳೆ ಮುರಿಯಲು ಮತ್ತೊಬ್ಬ ಹುಟ್ಟಿಕೊಂಡಿದ್ದಾನೆ ಎಂಬುದು ಮುರಿಸಿಕೊಂಡ ಮೇಲೆನೇ ಅರ್ಥವಾಗುವುದು. ಹುಟ್ಟಿದ ಧರ್ಮದ ಬಗ್ಗೆ ಅವಹೇಳನ ಮಾಡುತ್ತಾ ಮನೆಯ ಹಿರಿಯರಿಗೂ ಕಿಮ್ಮತ್ತು ಕೊಡದೇ ಉಡಾಳರ ಟಪಾಲಂ ಕಟ್ಟಿಕೊಂಡು ತಿರುಗುವವರ ಪಾಡು ಆ ಶನಿದೇವನಿಗೆ ಗೊತ್ತು. ಧರ್ಮಕ್ಕೆ ಅಪಚಾರವೆಸಗಿದವರ ಪಾಡು ಏನಾಗುತ್ತದೆ ಎಂಬುದಕ್ಕೆ ನಿದರ್ಶನರಾಗುತ್ತಾರೆ ಅಂಥವರು. ಏನಾದರೂ ಆಗಲಿ ನಂಗೇನೂ ಎನ್ನುವವರಿಗೆ ಹಾರ್ಟ್ ಪ್ರಾಬ್ಲಂ ಶುರುವಾದಾಗ ವೈದ್ಯರೂ ಕೂಡ ಏನಾದರಾಗಲಿ ನಂಗೇನೂ ಎಂದು ಅಂದರೆ ಹೆಂಗೇ ಎಂಬುದರ ಅರಿವೂ ಆಗುತ್ತದೆ.
ತಾಳ್ಮೆ ಕಳೆದುಕೊಳ್ಳಬೇಡಿ ಪ್ಲೀಸ್ : ಸಹನೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳುವುದು ಮೀನ ರಾಶಿಯವರ ಅವಗುಣ. ಒಟ್ಟಿನಲ್ಲಿ ಅವಸರವಸರವಾಗಿ ಮುಗಿಯಬೇಕು ಎಲ್ಲವೂ ಇವರಿಗೆ. ಜೊತೆಗೆ ಮಾಡಿದ ಕೆಲಸದಲ್ಲೂ ಅಚ್ಚುಕಟ್ಟಾಗಿರುವುದಿಲ್ಲ. ಈ ತರಹದ ಕೆಲವನ್ನು ಕಮ್ಮಿ ಮಾಡಿಕೊಳ್ಳಬೇಕು. ಮಹಾನ್ ದೈವಭಕ್ತನೆಂಬಂತೆ ಇರುವ ಇವರು ಕನಸು ಕಾಣುವುದರಲ್ಲಿ ನಿಸ್ಸೀಮರು. ಕಂಡ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ತಾಳ್ಮೆ ಮತ್ತು ಸಹನೆ ಬೇಕು ಎನ್ನುವುದು ಅರಿತುಕೊಂಡರೆ ಸಾಕಿವರು.
ತುಂಬಾ ಭಾವಜೀವಿಯಾಗಿರುವ ಇವರಿಗೆ ಮೇಷ, ಸಿಂಹ, ಧನು ರಾಶಿಯವರೆಂದರೆ ಅಷ್ಟಕ್ಕಷ್ಟೇ. ಆದರೆ ಕರ್ಕ, ವೃಶ್ಚಿಕ ರಾಶಿಯವರ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಅವರೂ ಕೂಡ ಇವರನ್ನು ಬಹಳಷ್ಟು ನಂಬುತ್ತಾರೆ. ಪ್ರತಿವರ್ಷವೂ ತಿರುಮಲ ವೇಂಕಪ್ಪನ ದರ್ಶನ ಪಡೆದುಕೊಳ್ಳುವುದು ತುಂಬಾ ಸೂಕ್ತ ಇವರಿಗೆ.
ಹಳದಿ, ಗಿಳಿಹಸಿರು, ಹಸಿರು ಬಣ್ಣ ಇವರಿಗೆ ಇಷ್ಟವೆನಿಸುತ್ತವೆ. ಇಂಥ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬಹುದು. ಬುಧವಾರ, ಗುರುವಾರ ಇವರಿಗೆ ಶುಭಕರ. ಈ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಬಹುದು. 2, 3, 5, 7, 9 ನಂಬರ್ಗಳು ಇವರಿಗೆ ಓಕೆ. 3, 12, 21, 30 ತಾರೀಖುಗಳು ಶುಭಕರ. (ವರ್ಷ ಭವಿಷ್ಯ ಇಲ್ಲಿ ಮುಕ್ತಾಯವಾಗುತ್ತದೆ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications