Get Updates
Get notified of breaking news, exclusive insights, and must-see stories!

2015 ವರ್ಷ ಭವಿಷ್ಯ : ಮಕರ ರಾಶಿಗೆ ಲಕಲಕ ಲಕ್

ಉತ್ತರಷಾಢಾ ನಕ್ಷತ್ರದ 2, 3, 4ನೇ ಚರಣ, ಶ್ರವಣ ಮತ್ತು ಧನಿಷ್ಠ ನಕ್ಷತ್ರದ 1, 2ನೇ ಚರಣದಲ್ಲಿ ಜನಿಸಿದವರದು ಮಕರ ರಾಶಿ. ಬೊ, ಜ, ಜಿ, ಶಿ, ಶು, ಶೆ, ಶೊ, ಗ, ಗಿ ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.

ಮಕರ ರಾಶಿಯವರಿಗೆ 2015ನೇ ಹೊಸ ವರ್ಷವು ಲಕ್ ತರುತ್ತದೆ. ಏಕೆಂದರೆ, ಇತ್ತ ಗುರುಬಲ ಅತ್ತ ಶನಿಬಲ. "ಯಾರಿಗುಂಟು ಯಾರಿಗಿಲ್ಲ" ಎನ್ನುವ ಸುಯೋಗ ಮಕರದವರಿಗೆ. ಇವರಿಗೆ ಅದೃಷ್ಟ ಒದ್ದುಕೊಂಡು ಬಂದಿದೆ. ಬಂದಿರುವ ಅದೃಷ್ಟವನ್ನು ಸೂಕ್ತವಾಗಿ ದೈವಬಲದಿಂದ ಉಪಯೋಗಿಸಿಕೊಂಡು ಪ್ರಯತ್ನಪಟ್ಟು ಯಶಸ್ಸು ಹೊಂದಬೇಕು ಈ ವರ್ಷ. ಜುಲೈವರೆಗೂ ತುಂಬಾ ಚೆನ್ನಾಗಿದೆ ಎಲ್ಲ ರೀತಿಯಿಂದಲೂ. ದಿನಗಳು ಬೇಗ ಬೇಗ ಉರುಳುವುದರಿಂದ ಹೊಸ ಯೋಜನೆಗೆ ಚಾಲನೆ ನೀಡಿ ಪ್ರತಿಫಲ ಪಡೆದುಕೊಳ್ಳಬೇಕು ಶೀಘ್ರ.

ಅದೃಷ್ಟ ಬಂದರೆ ಎಂಥವರು ಕೂಡ ಏನೇನೋ ಆಗಬಹುದು ಎಂಬುದಕ್ಕೆ ಈಗ ಮಕರ ರಾಶಿಯವರು ಸಾಕ್ಷಿಯಾಗಲಿದ್ದಾರೆ. ಮೊದಲೇ ಈ ರಾಶಿಯವರಿಗೆ ಶನಿದೇವ ಅದೃಷ್ಟ ತರುವ ದೇವರಾಗಿದ್ದಾನೆ. ಈಗ ಗೋಚಾರದಲ್ಲಿ 11ನೇ ಮನೆಗೆ ಬಂದು ಕುಳಿತಿದ್ದಾನೆ. ಮಕರ ರಾಶಿಯವರಿಗೆ ಏನು ಬೇಕೋ ಅದೆಲ್ಲವೂ ಸಿಗುತ್ತದೆ. ಆದರೆ ನ್ಯಾಯವಾಗಿ ದುಡಿಯಬೇಕು. ಶನಿಬಲ ಬಂದಿದೆ ಎಂದುಕೊಂಡು ಬೇಕಾಬಿಟ್ಟಿಯಾಗಿ ಅಧರ್ಮದ ಕೆಲಸ ಮಾಡಿದವರಿಗೆ ಮುಂದೆ ಶನಿದೇವನು ಸಾಡೇಸಾತಿಯಾಗಿ ಬರಲಿದ್ದಾನೆ ಎಂಬುದರ ಅರಿವಿರಲಿ.

Yearly horoscope and prediction 2015 for Capricorn

ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಎಲ್ಲ ರೀತಿಯಿಂದಲೂ ಸವಲತ್ತು ಸಿಗುತ್ತವೆ. ಕೈ ತುಂಬ ದುಡ್ಡು ಸಂಪಾದಿಸುವ ಸುವರ್ಣ ದಿನಗಳಿವು. ಎಲ್ಲ ರೀತಿಯಿಂದಲೂ ಲಾಭದ ಹೊಳೆ ಇವರಿಗೆ. ಆರೋಗ್ಯ ನಳನಳಿಸುತ್ತಿರುತ್ತದೆ. ಕಂಕಣಭಾಗ್ಯಕ್ಕಾಗಿ ಕಾದಿರುವವರಿಗೆ ಮತ್ತು ಸಂತಾನಾಪೇಕ್ಷಿಗಳಿಗೆ ಶುಭಕರವಿದೆ. ವ್ಯವಹಾರದಲ್ಲಿ ಮೀರಿಸುವವರೇ ಇಲ್ಲ. ಅಷ್ಟೊಂದು ಏರಿಕೆಯ ಸಮಯವಿದು. ಹಲವಾರು ಮೂಲಗಳಿಂದ ಹಣದ ಅನುಕೂಲತೆ ಸಿಗುವುದರಿಂದ ಸ್ವಂತಕ್ಕೆ ಬಳಸಿಕೊಳ್ಳಬಹುದು. ಇಷ್ಟಪಟ್ಟಂಗೆ ಇರಬಹುದು. ಆದರೆ ಸತ್ಯ, ನ್ಯಾಯ, ನೀತಿ, ಧರ್ಮದಿಂದಿರಬೇಕು. ಇಲ್ಲಾಂದ್ರೆ, ಇದ್ದದ್ದೂ ಹೋಗುವುದಲ್ಲದೆ ಬೀದಿ ಪಾಲಾಗಬೇಕಾಗುತ್ತದೆ. ಆ ದಿನಗಳೂ ಬರುವ ಸಮಯ ದೂರವಿಲ್ಲ ನೆನಪಿಡಿ.

ಜುಲೈ ನಂತರ ಗುರುಬಲವಿಲ್ಲ, ಶನಿಬಲವಿರಲಿದೆ : ಜುಲೈ ನಂತರ ಗುರುಬಲ ಹೊರಟು ಹೋಗುವುದರಿಂದ ಕೆಲಸದಲ್ಲಿ ತೊಂದರೆಗಳು ಕಾಣಿಸಬಹುದು. ಮನೆಯವರೊಂದಿಗೆ ಹೊಂದಾಣಿಕೆಯ ಕೊರತೆಯಿಂದ ನೋವು ಅನುಭವಿಸಬಹುದು. ಆದ್ದರಿಂದ ಈ ಒಳ್ಳೆಯ ಸಮಯದಲ್ಲಿಯೇ ಎಲ್ಲ ಮುಖ್ಯವಾದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಆ ನಂತರ ಅಂತಾ ಏನೂ ತೊಂದರೆ ಬರುವುದಿಲ್ಲವಾದರೂ ಶನಿಬಲ ನಿಮಗಿದೆ. ಒಂದು ವೇಳೆ ಕೆಲವೊಮ್ಮೆ ಗುರುಬಲದ ಫಲ ಸಿಗದೇ ಇರಬಹುದು. ಆದರೆ ಶನಿಬಲ ಮಾತ್ರ ಸಿಗೋದು ಗ್ಯಾರಂಟೀನೆ. ಏಕೆಂದರೆ ಶನಿದೇವನಿಗೆ ಕೊಡುವುದು ಗೊತ್ತೂ, ಇದ್ದಬದ್ದದ್ದನ್ನು ಕಿತ್ತುಕೊಳ್ಳೋದು ಗೊತ್ತು.

ಸದ್ಯ ಮೂರು ವರ್ಷದವರೆಗೂ ಶನಿಬಲ ಈ ರಾಶಿಯವರಿಗಿದೆ. ಈ ಸಮಯದಲ್ಲಿ ಯಶಸ್ಸಿಗಾಗಿ ಪರದಾಡುತ್ತಿರುವವರಿಗೆ ಜಯ ಸಿಗುತ್ತದೆ. ಸುಲಭದಲ್ಲಿಯೇ ಎಲ್ಲ ಕೆಲಸ ಕಾರ್ಯಗಳು ಶುಭಕರವಾಗಿ ಮುಗಿಯುತ್ತವೆ. ತುಂಬಾ ಹೆಸರು ಮಾಡಿಕೊಳ್ಳಬಹುದು. ಕೆಲಸದಲ್ಲಿ ಕೆಲವರಿಗೆ ಹೆಚ್ಚಿನ ಜವಾಬ್ದಾರಿ ಬಂದರೆ, ಕೆಲಸಕ್ಕಾಗಿ ಅಲೆದಾಡುವವರಿಗೆ ಇಷ್ಟಪಟ್ಟ ಕೆಲಸ ಸಿಗುತ್ತದೆ, ಅರ್ಜಿ ಹಾಕಿದ್ದರೆ. ಹಲವಾರು ಮೂಲಗಳಿಂದ ಲಾಭಗಳೇ ಬರುವುದರಿಂದ ಮನೆ ಕಟ್ಟುವ, ಸೈಟ್ ತೆಗೆದುಕೊಳ್ಳುವ ಮತ್ತು ಸ್ವಂತ ವಾಹನದಲ್ಲಿ ಓಡಾಡುವ ಯೋಗ ಕೂಡ ಒದಗಿ ಬರುತ್ತದೆ. ಆದರೆ ಬಂದಿರುವ ಈ ಸುವರ್ಷವನ್ನು ಸದುಪಯೋಗ ಪಡಿಸಿಕೊಂಡವರಿಗೆ ಮಾತ್ರ ಈ ಫಲ ಅನ್ವಯಿಸುತ್ತದೆ. ಎಲ್ಲಾ ತಾನಾಗಿಯೇ ಬರಲಿ ಬಿಡು ಎಂದು ಕುಳಿತವರು ಜೀವನದಲ್ಲಿ ಮೇಲೆಳಲಾರದಷ್ಟು ನಷ್ಟ ಮಾಡಿಕೊಳ್ಳುತ್ತಿದ್ದಾರೆ ಎಂದೇ ಅರ್ಥ.

ಹಲವಾರು ದಿನಗಳಿಂದ ಬರದ ಪರಿಚಿತರು ಸಹಾಯ ಮತ್ತು ಬೆಂಬಲಕ್ಕೆ ಈ ಸಮಯದಲ್ಲಿ ಬರುತ್ತಾರೆ. ಕೆಲವರಂತೂ ಹುಡುಕಿಕೊಂಡು ಬಂದು ಲಾಭ ಮಾಡಿಕೊಳ್ಳುವ ಬಗೆ ತಿಳಿಸುತ್ತಾರೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸರಕಾರದ ಅನುಕೂಲತೆ ಪಡೆದುಕೊಳ್ಳಬೇಕೆನ್ನುವವರಿಗೆ ಈಗ ಅದೃಷ್ಟದ ದಿನಗಳು. ಅಧಿಕಾರದ ರುಚಿ ಅನುಭವಿಸಬಹುದು ಈಗ. ಈ ಹಿಂದೆಯೇ ಹಾಕಿಕೊಂಡ ಯೋಜನೆಗಳು ಕಾರ್ಯಗತಗೊಂಡು ಗೌರವ, ಮರ್ಯಾದೆ ಹೆಚ್ಚುವಂತಾಗುತ್ತದೆ. ಸ್ಥಗಿತಗೊಂಡ ಕಾರ್ಯಗಳು ಪುನರ್ಜೀವ ಪಡೆದುಕೊಳ್ಳುತ್ತವೆ.

"ದೇವರಿದ್ದಾನೆ" ನನಗೆ ಎಂದುಕೊಳ್ಳುವಂತಾಗಿ ಇದ್ದಬದ್ದ ದೇವಾಲಯದಲ್ಲಿರುವ ದೇವರನ್ನು ದರ್ಶನ ಮಾಡಿಕೊಳ್ಳುವ ಹಂಬಲ ಹೆಚ್ಚಾಗುತ್ತದೆ. "ಅಂತೂ ದೇವರು ಕಣ್ಣು ಬಿಟ್ಟಾ" ಎಂದು ಎಲ್ಲರಿಗೂ ಹೇಳುತ್ತ ಸಂತಸ ಅನುಭವಿಸುವ ಸಮಯ ಮಕರ ರಾಶಿಯವರಿಗೆ.

ಯಶಸ್ಸಿನ ಮೆಟ್ಟಿಲ ಮೇಲೆ ಮಕರ : ಕುಟುಂಬದಲ್ಲೂ ತುಂಬಾ ಗೌರವ ಲಭಿಸಲಾರಂಭಿಸುತ್ತದೆ. ಎಲ್ಲ ಸಂಬಂಧಿಕರಲ್ಲಿಯೇ ಇವರಂಥವರು ಇಲ್ಲ ಎಂದು ಆಡಿಕೊಳ್ಳುತ್ತಾರೆ ಹಿರಿಯರು. ಏಕೆಂದರೆ ಎಲ್ಲರೂ ನಮ್ಮ ಬಗ್ಗೆ ಮಾತನಾಡಲಾರಂಭಿಸುವುದು ನಾವು ಯಶಸ್ಸಿನ ಏಣಿ ಹತ್ತುತ್ತಿರುವಾಗ. ಬಿದ್ದಾಗ ಒಬ್ಬರೂ ಬರಲ್ಲ. ಹತ್ತುತ್ತಿರುವಾಗ ನನ್ನ ಕೈ ಹಿಡಕೋ ನಾನೂ ಬರುತ್ತೇನೆ ಎಂದು ಗೋಳು ಹೊಯ್ದುಕೊಳ್ಳಲಾರಂಭಿಸುತ್ತಾರೆ. ಅಷ್ಟೊಂದು ಯಶಸ್ಸಿನ ಮೆಟ್ಟಿಲು ಏರುತ್ತಾರೆ ಮಕರ ರಾಶಿಯವರು.

ಬಯಸುವ ಪ್ರಕೃತಿಯ ಸುಂದರ ಪ್ರದೇಶಗಳನ್ನು ಕಣ್ತುಂಬ ನೋಡಿ ಆನಂದಿಸುವ ಸುಯೋಗ. "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಎಂಬ ಗಾದೆ ಮಾತಿನಂತೆ ಮಕರ ರಾಶಿಯವರು ನಡೆದುಕೊಳ್ಳುತ್ತಾರೆ. ಅಷ್ಟೊಂದು ಅನುಕೂಲ ಇವರಿಗೆ ತಾನಾಗಿಯೇ ಒಲಿದು ಬರುತ್ತದೆ.

ಆದರೆ, ಕೆಟ್ಟವರು ಸಹವಾಸದಲ್ಲಿ ಬಂದರೆ ಅವರನ್ನು ದೂರವಿಡಿ. ಏಕೆಂದರೆ ಈ ವರ್ಷದ ಅತ್ಯುತ್ತಮ ಸಮಯವನ್ನು ಅಂಥವರು ಹಾಳು ಮಾಡಬಹುದು. ಅಥವಾ ಅವರಿಂದ ನಿಮಗೆ ಬರುವ ಅದೃಷ್ಟವೂ ದೂರವಾಗಬಹುದು.

ಇನ್ನೊಂದು ವಿಷಯವೇನೆಂದರೆ ನ್ಯಾಯಾಲಯದಲ್ಲಿ ಇದ್ದ ವಿಚಾರಣೆಗಳು ಆದಷ್ಟು ಬೇಗ ನಿಮ್ಮ ಪರವಾಗಿ ಆಗುತ್ತವೆ ನ್ಯಾಯವಾಗಿದ್ದವುಗಳು ಮಾತ್ರ. ಕೆಲವರು ನಿಮ್ಮ ಏಳ್ಗೆ ಸಹಿಸದೆ ನಿಮಗೇ ಕೇಡು ಮಾಡಲು ಹರಸಾಹಸ ಪಡಬಹುದು. ಅಂಥವರ ಮೇಲೆ ಒಂದು ಕಣ್ಣಿಡಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ ಮಾಡುತ್ತಿರಬೇಕು.

ಶನಿಬಲ ಬಂದರೆ ವ್ಯಕ್ತಿ ಹೇಗಿದ್ದವ ಹೇಗಾಗುತ್ತಾನೆ ಎಂಬುದಕ್ಕೆ ಈಗ ಮಕರ ರಾಶಿಯವರು ಜೀವಂತ ನಿದರ್ಶನವಾಗುತ್ತಾರೆ. ಬೇಕಿದ್ದವರು ಪರೀಕ್ಷಿಸಬಹುದು. ಇನ್ನು ಮಕರ ರಾಶಿಯವರು ಸ್ವಲ್ಪ ಸಂಶಯ ಸ್ವಭಾವ ಹೊಂದಿರುತ್ತಾರೆ. ಜತೆಗೆ ತಮ್ಮದೇ ಮಾತು ನಡೆಯಬೇಕೆನ್ನುವ ಹಠ ಬೇರೆ. ಇಂಥ ಗುಣಗಳನ್ನು ಕಡಿಮೆ ಮಾಡಿಕೊಳ್ಳಬೇಕು ಈಗ. ಮೊದಲೇ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುವುದೆಂದರೆ ಇವರಿಗಿಷ್ಟ. ಎಲ್ಲವನ್ನೂ ಅಳೆದು ತೂಗಿ ನೋಡುವ ಇವರ ಬುದ್ಧಿ ಎಲ್ಲರಿಗೂ ಇಷ್ಟವಾಗುತ್ತದೆ.

ಹಲವಾರು ಕೆಲಸಗಾರರನ್ನು ಒಂದೇ ಮಾತಿನಲ್ಲಿ ಕಂಟ್ರೋಲ್ ಮಾಡುವ ಸಾಮರ್ಥ್ಯವಿರುವುದು ಇವರ ಪ್ಲಸ್ ಪಾಯಿಂಟ್. ಕೆಲಸಗಾರರಿಗೂ ಇವರೆಂದರೆ ಇಷ್ಟ. ಏಕೆಂದರೆ ಕೆಲಸಗಾರರ ಮಾತಿಗೂ ಬೆಲೆ ಕೊಟ್ಟು ಅವರಿಗೆ ಬೇಕಾದ ಅನುಕೂಲ ಮಾಡಿಕೊಡುತ್ತಾರೆ.

ಅದೃಷ್ಟದ ಸಂಖ್ಯೆ ಮತ್ತು ದಿನಗಳು : ನೀಲಿ, ತಿಳುನೀಲಿ, ಕಪ್ಪು ಬಣ್ಣ ಇವರಿಗೆ ಇಷ್ಟವೆನಿಸುತ್ತವೆ. ಇಂಥಹ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬಹುದು. ಶುಕ್ರವಾರ ಮತ್ತು ಶನಿವಾರ ಇವರಿಗೆ ಸಂತಸ ಹೆಚ್ಚು. ಈ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಬಹುದು. 6, 7, 8 ನಂಬರ್ಗಳು ಇವರಿಗೆ ಓಕೆ. 8, 17, 26 ತಾರೀಖುಗಳು ಶುಭಕರ.

ಕುಂಭ ರಾಶಿಯವರೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆದರೆ ಸಿಂಹ ರಾಶಿಯವರೊಂದಿಗೆ ಅಷ್ಟೊಂದು ಆತ್ಮೀಯತೆ ಇರಲ್ಲ. ಇದನ್ನು ಈ ಬಾರಿ ಪರೀಕ್ಷಿಸಿ ನೋಡಿಕೊಳ್ಳಿ ಬೇಕಾದವರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+