ಮಕರ ವರ್ಷ ಭವಿಷ್ಯ: ಸಮಸ್ಯೆಗಳೆಲ್ಲ ಸರಾಗವಾಗಿ ಸರಿದು, ಬದುಕು ಬೊಂಬಾಟ್
ಮಕರ ರಾಶಿಯವರಿಗೆ ಈ ವರ್ಷ ಸಂಪೂರ್ಣ ಉತ್ತಮವಾಗಿದೆ. ದೊಡ್ಡದಾದ ಆರೋಗ್ಯ ಹಾಳಾಗುವ ಸಂದರ್ಭಗಳು ಯಾವುದೂ ಕಾಣುತ್ತಿಲ್ಲ. ನಿಮ್ಮ ಅರಿವಿಗೆ ಬರದಂತೆಯೇ ಎಷ್ಟೋ ಸಮಸ್ಯೆಗಳು ಪರಿಹಾರ ಆಗಿಬಿಡುತ್ತವೆ. ಅವು ಪರಿಹಾರ ಆದ ಮೇಲೆ ಇತರರು ನಿಮಗೆ ತಿಳಿಸಿದ ನಂತರವೇ ತಿಳಿಯುವುದು.
ವಿದ್ಯಾರ್ಥಿಗಳಿಗೆ ಹಾಗೂ ಇನ್ನೂ ಕಲಿಯ ಬೇಕು, ವಿಷಯಗಳನ್ನು ಅರಿಯ ಬೇಕು ಎಂಬ ಆಸೆ ಉಳ್ಳವರಿಗೆ ಈ ವರ್ಷ ಅದ್ಭುತವಾಗಿ ಸಹಕರಿಸುತ್ತದೆ. ವಿದ್ಯಾರ್ಥಿಗಳಿಗೆ ಈ ಹಿಂದಿಗಿಂತಲೂ ಶ್ರಮ ಸ್ವಲ್ಪ ಕಡಿಮೆಯೇ ಸಾಕಾಗುತ್ತದೆ. ಆದರೆ ಮೊದಲೇ ಹೆಚ್ಚಿರುವ ಆಲಸ್ಯದ ಬುದ್ಧಿಯನ್ನು ಮುಂದುವರಿಸಿದರೆ ಮಾತ್ರ ಕಷ್ಟ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]
ಹೊಸದಾದ ಉದ್ಯೋಗಾವಕಾಶಗಳು ಅನಾಯಾಸವಾಗಿ ಲಭಿಸುತ್ತವೆ. ವಿದೇಶ ಪ್ರಯಾಣದ ಕನಸು ನನಸಾಗುವ ಸಮಯ. ಆದರೆ ಪ್ರಯತ್ನ ಮುಖ್ಯ. ಈ ವರ್ಷ ಮಕರ ರಾಶಿಯವರಿಗೆ ಉತ್ತಮವಾಗಿದೆ ಎಂದು ತಿಳಿಸಲು ಕಾರಣ ಇತರರು ಎಷ್ಟೇ ಕಷ್ಟ ಪಟ್ಟರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಆಗದ ಕಾರ್ಯಗಳು ಮಕರ ರಾಶಿಯವರು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಆಗುತ್ತದೆ.

ಇನ್ನು ಸ್ತ್ರೀಯರ ಆರೋಗ್ಯ ಉತ್ತಮವಾಗಿಯೇ ಇರುತ್ತದೆ. ತೀರಾ ಹೆಚ್ಚೆಂದರೆ ಮೊಣಕಾಲಿನ ನೋವು ಬರಬಹುದು ಅಷ್ಟೇ. ಭೂಮಿ, ಬಂಗಾರ ಇತ್ಯಾದಿ ಖರೀದಿಸಲು ಇದು ಅತ್ಯುತ್ತಮ ಸಮಯ. ಅದರಲ್ಲಿಯೂ ಸಾಲ ಮಾಡದೇ ತೆಗೆದುಕೊಳ್ಳುವ ಬಂಗಾರ ಆಗಿದ್ದಲ್ಲಿ ಅವಶ್ಯ ಹೂಡಿಕೆ ಮಾಡಿ.
ಇನ್ನು ಧೈರ್ಯವಿದ್ದಲ್ಲಿ ಬ್ಯಾಂಕ್ ಸಾಲ ಪಡೆದು ಭೂಮಿ, ಗೃಹ, ವಾಹನ ಇತ್ಯಾದಿಗಳನ್ನೂ ಖರೀದಿಸಲು ಸುಸಮಯ. ಉದ್ಯೋಗದಲ್ಲಿ ನಿಮ್ಮ ಶ್ರಮ ಮೇಲಧಿಕಾರಿಗಳ ಗಮನಕ್ಕೆ ಬರುತ್ತದೆ ಹಾಗೂ ಅದರ ಫಲ ಬಡ್ತಿ ಅಥವಾ ಸಂಬಳ ಏರಿಸುವ ಮೂಲಕ ಸಿಗುವುದರಲ್ಲಿ ಸಂಶಯವಿಲ್ಲ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]
ಅದ್ಯಾವುದೂ ಆಗಲಿಲ್ಲವಾದಲ್ಲಿ ನಿಮ್ಮ ಪಕ್ಕದವರು ಉದ್ಯೋಗ ಕಳೆದುಕೊಂಡರೂ ನೀವು ಕೆಲಸ ಕಳೆದುಕೊಳ್ಳುವುದಿಲ್ಲ. ಬಹಳ ಮುಖ್ಯವಾಗಿ ಈ ವರ್ಷ ನಿಮಗೆ ಪ್ರಾಮುಖ್ಯ ಹೆಚ್ಚುತ್ತದೆ. ಹಳೆಯ ಸಾಲಗಳಿದ್ದಲ್ಲಿ ನೀವು ಮನಸು ಮಾಡಿದರೆ ಈ ವರ್ಷ ಖಂಡಿತ ತೀರಿಸಬಹುದು. ಅದೇ ಗಟ್ಟಿ ಮನಸು ಮುಂದುವರಿಸಿದರೆ ಹೊಸ ಸಾಲಗಳನ್ನು ಮಾಡಬೇಕಾದ ಪ್ರಮೇಯವೂ ಬರದೆ ಸಂತೋಷವಾಗಿರಬಹುದು.
ಒಟ್ಟಾರೆ ವರ್ಷಫಲ 4/5

ಜನವರಿಯಿಂದ ಏಪ್ರಿಲ್ ವರೆಗೆ
ಹರುಷ ನಿಮ್ಮಲ್ಲಿ ಇರುತ್ತದೆ. ಕಂಡು ಕಾಣದಂತೆ ಸಂತೋಷದಲ್ಲಿಯೇ ಈ ಮೊದಲ ನಾಲ್ಕು ತಿಂಗಳು ಕಳೆದು ಹೋಗುತ್ತವೆ. ಇನ್ನು ಫೆಬ್ರವರಿ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಹೊಸದೊಂದು ಸಮಸ್ಯೆ ಕಾಡ ಬಹುದು. ಆ ಸಮಸ್ಯೆ ನಿಮ್ಮನ್ನು ವರ್ಷವಿಡೀ ಎಚ್ಚೆತ್ತುಕೊಂಡು ಇರುವಂತೆ ಮಾಡುತ್ತದೆ. ಅದರ ನಂತರ ನೀವು ಯಾರನ್ನೂ ಹೆಚ್ಚಿಗೆ ನಂಬುವುದಿಲ್ಲ. ಆದರೆ ಅದರ ಪರಿಣಾಮ ನಿಮ್ಮ ನಿತ್ಯದ ಸಂತೋಷಗಳ ಮೇಲೆ ಹೆಚ್ಚೇನೂ ಆಗುವುದಿಲ್ಲ. ದೊಡ್ದ ಪ್ರಮಾಣದಲ್ಲಿ ಹೂಡಿಕೆ ಮಾಡಲು ಚಿಂತನೆ ಮಾಡಲು ಪ್ರಾರಂಭಿಸುತ್ತೀರಿ. ಅದಕ್ಕಾಗಿ ಓಡಾಟ ಮಾಡಲು ಶುರು ಆಗುತ್ತದೆ. ವಿದೇಶ ಪ್ರಯಾಣದ ಯೋಚನೆ ಇದ್ದಲ್ಲಿ ಈಗಲೇ ಪ್ರಯತ್ನಿಸಿದರೆ ಅತ್ಯುತ್ತಮ. ಸಾಧಿಸುವ ಹಂಬಲ ಇದ್ದು, ಕಷ್ಟದ ಗುರಿಯನ್ನೂ ಈ ನಾಲ್ಕು ತಿಂಗಳಲ್ಲಿ ಮುಟ್ಟುತ್ತೀರಿ. ನಿಮ್ಮ ಬೆಳವಣಿಗೆ ಕೆಲವರಿಗೆ ಅಸೂಯೆ ಸಹ ಉಂಟು ಮಾಡಬಹುದು. ಆದರೆ ಬುದ್ಧಿವಂತಿಕೆ, ಜಾಣತನದಿಂದ ನೀವು ಕೆಲಸ ಸಾಧಿಸುವ ಪರಿಗೆ ಎಲ್ಲರೂ ಚಕಿತರಾಗಿಯೇ ತೀರುತ್ತಾರೆ. ಈ ಕೆಲವು ವಿಚಾರಗಳೇ ನಿಮಗೆ ನಿಮ್ಮ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ತಂದುಕೊಡುವುದು.

ಮೇನಿಂದ ಆಗಸ್ಟ್ ವರೆಗೆ
ಇದು ನಿಮಗೆ ಬಹಳ ಪ್ರಮುಖವಾದ ಸಮಯ. ನೀವು ಈ ಹಿಂದಿನ ತಿಂಗಳಲ್ಲಿ ಸಾಧಿಸಲಾಗದ ಅಥವಾ ಪಡೆಯಲಾಗದ ವಸ್ತುಗಳನ್ನು, ಸ್ಥಾನಗಳನ್ನು ಸಂಪಾದಿಸಲು ಕೊನೆ ಅವಕಾಶ. ಈ ಸಮಯದ ನಂತರ ಅವಕಾಶಗಳು ಸ್ವಲ್ಪ ಮಟ್ಟಿಗೆ ಕ್ಷೀಣಿಸುತ್ತವೆ. ಅದರಲ್ಲಿಯೂ ಜೂನ್ ಹಾಗೂ ಜುಲೈ ತಿಂಗಳು ನಿಮಗೆ ಅತ್ಯುತ್ತಮ ಸಮಯ, ಸಂಪೂರ್ಣ ಪ್ರಯೋಜನ ಆಗುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ನ್ಯಾಯಾಲದಲ್ಲಿ ಇರುವ ವ್ಯಾಜ್ಯಗಳಲ್ಲಿ ನಿಮ್ಮ ಕಡೆ ಜಯ ಸಿಗುತ್ತದೆ. ಬರಬೇಕಾದ ಹಣ ಮರಳಿ ಬರುತ್ತದೆ. ವ್ಯಾಪಾರಿಗಳಿಗೆ ಲಾಭವಿದೆ. ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳನ್ನು ಹೊರತುಪಡಿಸಿ ಇತರರಿಗೆ ವ್ಯಾಪಾರ ಶುಭದಾಯಕವಾಗಿರುತ್ತದೆ. ತವರು ಮನೆಯಿಂದ ಆಸ್ತಿ ಬಯಸಿರುವ ವಿವಾಹಿತ ಸ್ತ್ರೀಯರಿಗೆ ಅನಾಯಾಸವಾಗಿ ಆಸ್ತಿ ದೊರಕುವ ಯೋಗಫಲವಿದೆ. ಆದರೆ ಅ ವಿಚಾರದಲ್ಲಿ ಪ್ರಸ್ತಾಪ ಹಾಗೂ ಮಾತುಕತೆ ನೀವೇ ಪ್ರಾರಂಭಿಸ ಬೇಕು. ಸಂತಾನ ಅಪೇಕ್ಷಿತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳಿವೆ. ನಾಲ್ಕೂ ತಿಂಗಳ ಅಮಾವಾಸ್ಯೆ ನಂತರ ಹುಣ್ಣಿಮೆ ಒಳಗೆ ಪ್ರಯತ್ನಿಸಿದರೆ ಅವಿವಾಹಿತರಿಗೆ ವಿವಾಹ ಯೋಗ ಸಹ ಇದೆ. ಆದರೆ ಆಗಸ್ಟ್ ಒಳಗೇ ಪ್ರಯತ್ನಿಸಿ.

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ
ಪರೀಕ್ಷೆಗಳಿಲ್ಲದ, ಸ್ಪರ್ಧೆಗಳಿಲ್ಲದ ಜೀವನ ಸಪ್ಪೆ ಅನಿಸುವುದು. ಈ ಹಿಂದೆ ಫೆಬ್ರವರಿಯಲ್ಲಿ ಆದಂತೆ ಘಟನೆಗಳು ವರ್ಷಾಂತ್ಯದಲ್ಲಿ ಸಂಭವಿಸಬಹುದು ಅಥವಾ ಅಪವಾದಗಳು ನಿಮ್ಮ ಬೆನ್ನೇರಬಹುದು. ನಿಮ್ಮ ಮಾತುಗಳಿಗೆ ಈ ಹಿಂದಿನ ತಾಕತ್ತು ಇಲ್ಲ ಅನಿಸುವುದು. ನಿಮ್ಮ ಬುದ್ಧಿವಂತಿಕೆ ಕೈಕೊಡಬಹುದು. ಆದರೂ ಸಹ ಈ ನಾಲ್ಕು ತಿಂಗಳೂ ಸಹ ದೊಡ್ಡ ಪ್ರಮಾಣದ ಸಮಸ್ಯೆಗಳೇನೂ ನಿಮಗೆ ಆಗುವುದಿಲ್ಲ. ಆದರೆ ವರ್ಷದ ಆರಂಭ ಹಾಗೂ ಮಧ್ಯ ಭಾಗ ಕಳೆದ ಪರಿ ಅನುಭವಿಸಿದ ಅನುಕೂಲಗಳು ನಿಮಗೆ ಈ ನಾಲ್ಕು ತಿಂಗಳು ಸಿಗದ ಕಾರಣ ನಿಮಗೆ ಇದು ಕಷ್ಟಕಾಲ ಅನಿಸಬಹುದು. ಮಾಡಬಾರದ ಜಾಗದಲ್ಲಿ ಮಾಡಬಾರದ ವ್ಯಕ್ತಿಯೊಂದಿಗೆ ನೀವು ಮಾಡುವ ಜಗಳ ನಿಮ್ಮ ಯಶಸ್ಸಿನ ಪ್ರಯಾಣಕ್ಕೆ ಸ್ವಲ್ಪ ಮಟ್ಟಿಗೆ ಧಕ್ಕೆ ಕೊಡುತ್ತದೆ. ಸಿಟ್ಟು ಎಷ್ಟು ಸಮಸ್ಯೆದಾಯಕ ಎಂಬ ಅರಿವು ಮೂಡುತ್ತದೆ.

ಪರಿಹಾರ
ವೈದಿಕ: ದುರ್ಗಾ ಸೂಕ್ತ ಜಪ ಹಾಗೂ ಹವನ ಸಹಿತ ರಾಹು ಶಾಂತಿ ತಪ್ಪದೆ ಮಾಡಿಸಿ
ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಅರೇ ಅಂಗಡಿ ಗ್ರಾಮದ ಕರಿಕಾನ ಪರಮೇಶ್ವರೀ ದೇಗುಲದಲ್ಲಿ ಪಂಚಾಮೃತ ಅಭಿಷೇಕ, ತ್ರಿಶತಿ ಕುಂಕುಮಾರ್ಚನೆ ಮಾಡಿಸಿ. ಅಲ್ಲಿ ಸಂಪುಟಿ ವಿಧಾನದಲ್ಲಿ ಚಂಡಿಕಾ ಪಾರಾಯಣ ಮಾಡಿಸಿ
ರತ್ನ: ಈ ವರ್ಷ ಅಘೋರಾಸ್ತ್ರ ರುದ್ರ ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನಗಳ ಮಾಲಾಧಾರಣೆಯಿಂದ ಉತ್ತಮ ಫಲವಿದೆ
ಸ್ತೋತ್ರ: ನಿತ್ಯ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಹೇಳಿರುವ ಲಲಿತಾ ಸಹಸ್ರನಾಮ ಶ್ರವಣ ಮಾಡಿ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications