ಕುಂಭ ವರ್ಷ ಭವಿಷ್ಯ: ಸಣ್ಣ ಗಾಯವೇ ಘಾಸಿ ತಂದೀತು ಎಚ್ಚರ!
ಕುಂಭ ರಾಶಿಯವರೇ ತಾಳ್ಮೆ ರೂಢಿಸಿಕೊಳ್ಳಿ. ಆರೋಗ್ಯದ ಬಗ್ಗೆ ಸಣ್ಣ ಅವಗಣನೆಯೂ ದೊಡ್ಡ ಬೆಲೆಗೆ ಕಾರಣವಾಗಬಹುದು. ಕೋಪ-ತಾಪ ಕಡಿಮೆ ಮಾಡಿಕೊಳ್ಳಿ. ನಿಮ್ಮ ಪಾಲಿನ ಅವಕಾಶಗಳು ಹುಡುಕಿಕೊಂಡು ಬರುವವರೆಗೂ ಸಮಾಧಾನವಾಗಿರಿ
ಕುಂಭ ರಾಶಿಯವರಿಗೆ ಈ ವರ್ಷ ಕಾಯುವ ಯೋಗ. ಒಂದು ಸರಿಯಾದ ಅವಕಾಶ ಬೇಕು ಎಂದು ಕಾಯಬೇಕು. ಈ ಹಿಂದಿನಂತೆ ನಿಮ್ಮನ್ನು ಅವಕಾಶಗಳು ಹುಡುಕುತ್ತ ಬರುವುದು ಕಡಿಮೆ. ನೀವೇ ಅವಕಾಶಗಳನ್ನು ಹುಡುಕುತ್ತ ಹೋಗುವ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ. ಹಿಂದಿನ ವರ್ಷದ ಮಧ್ಯ ಭಾಗದಿಂದಲೇ ನಿಮಗದು ಅಭ್ಯಾಸ ಆಗಿದೆ.
ಅದನ್ನೇ ಈ ವರ್ಷಾಂತ್ಯದ ತನಕ ಮುಂದುವರಿಸಿಕೊಂಡು ಹೋಗಬೇಕಷ್ಟೆ. ಈ ವರುಷ ನೀವು ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ನಿಮ್ಮ ಆರೋಗ್ಯ. ನಿಮ್ಮ ಆರೋಗ್ಯದಲ್ಲಿ ಚಿಕ್ಕ ಸಮಸ್ಯೆ ಸಹ ಆಗದಂತೆ ಎಚ್ಚರ ವಹಿಸಬೇಕು. ಚಿಕ್ಕದು ವಾಸಿ ಆಗಿಬಿಡುತ್ತದೆ ಎಂದು ನೀವು ಯೋಚಿಸಿ ನಿರ್ಲಕ್ಷಿಸಿದರೆ ಅದೇ ಮುಂದೆ ದೊಡ್ಡ ಸಮಸ್ಯೆ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]
ವಿದೇಶ ಪ್ರಯಾಣದ ಆಸೆಗಳು ಮುಂದೂಡಿದರೆ ಮಾತ್ರ ಉತ್ತಮ. ದೊಡ್ಡ ಜವಾಬ್ದಾರಿಗಳನ್ನು ನೀವೇ ನಿರ್ವಹಿಸುತ್ತೇನೆ ಎಂದು ಮುನ್ನುಗ್ಗಬೇಡಿ, ತಾಳ್ಮೆ ಇರಲಿ. ಹೊಸದಾದ ದೊಡ್ಡ ಸವಾಲುಗಳು ಬಂದರೆ ಇತರರಿಗೆ ಅವಕಾಶ ಕೊಡಿ. ನೀವು ಮಾತ್ರ ಸೆಪ್ಟೆಂಬರ್ ತನಕ ಸುಮ್ಮನಿರಿ. ಯಾರೊಂದಿಗೂ ಕಲಹ ಆಗದಂತೆ ಎಚ್ಚರವಹಿಸಿ.

ನಿಮ್ಮ ಶತ್ರುಗಳ ವಿರುದ್ದ ಸಾಕ್ಷಿ ಸಿಕ್ಕರೂ ಅದೇ ನಂಬಿ ಹೋದರೆ ಮರ್ಯಾದೆ ಮೂರು ಕಾಸು ಆಗುತ್ತದೆ. ನೀವೇ ಸರಿ ಇಲ್ಲ ಎಂದಾಗುತ್ತದೆ. ನ್ಯಾಯಾಲಯದಲ್ಲಿ ಹೊಸ ದಾವೆಗಳನ್ನು ಹೂಡಲು ಹೋಗದಿರಿ. ಹಳೆ ದಾವೆಗಳಿದ್ದಲ್ಲಿ ಸಾಧ್ಯವಾದಷ್ಟು ಒಪ್ಪಂದ ಮಾಡಿಕೊಳ್ಳಿ. ಅಸಾಧ್ಯವಾದರೆ ವರ್ಷಾಂತ್ಯದ ತನಕ ಮುಂದೂಡಲು ಪ್ರಯತ್ನಿಸಿ.
ಅವಿವಾಹಿತರಿಗೆ ವಿವಾಹದ ಪ್ರಯತ್ನಗಳು ಅಷ್ಟಾಗಿ ಫಲಿಸದೆ ದುಃಖಕ್ಕೆ ಕಾರಣವಾಗುತ್ತದೆ. ಬಾಳಸಂಗಾತಿಯೊಂದಿಗೆ ಸಹ ಜಗಳ ಆಗದಂತೆ ಎಚ್ಚರ ವಹಿಸಿ. ಜೂಜು ಇತ್ಯಾದಿ ಅದೃಷ್ಟದ ಮೇಲೆ ನಿರ್ಧಾರವಾದ ಯಾವುದೇ ವಿಚಾರಕ್ಕೂ ಕೈ ಹಾಕದಿರಿ. ಅಧಿಕ ಲಾಭದ ಆಸೆಯಿಂದ ಮೈ- ಕೈಯೆಲ್ಲ ಸಾಲ ಮಾಡಿಕೊಂಡು ಹಣ ಹೂಡಿಕೆ ಮಾಡಬೇಡಿ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]
ವಿದ್ಯಾರ್ಥಿಗಳಿಗೆ ಅಧಿಕವಾದ ಪರಿಶ್ರಮದ ಅವಶ್ಯವಿದೆ. ಹೋದ ವರ್ಷದಂತೆ ಸುಲಭವಾಗಿ ನಿಮ್ಮ ವಿಷಯಗಳು ಕಾಣುವುದಿಲ್ಲ. ಅಂಕಗಳೂ ಹೆಚ್ಚು ಬರುವುದಿಲ್ಲ. ಸ್ನೇಹಿತವರ್ಗ ಹಾಗೂ ಇತರರ ಮುಂದೆ ಸ್ವಲ್ಪ ಅವಮಾನ ಸಹ ಎದುರಿಸ ಬೇಕಾಗುವುದು. ಹೊಸ ವಾಹನ ಖರೀದಿ ಇತ್ಯಾದಿಗಳನ್ನು ಮಾಡುವ ಮೊದಲು ತಾಳ್ಮೆಯಿಂದ ಯೋಚಿಸಿ. ಈಗ ನಿಮಗೆ ಅದರ ಅತ್ಯಂತ ಆವಶ್ಯಕತೆ ಇಲ್ಲ. ವರ್ಷಾಂತ್ಯದಲ್ಲಿ ತೆಗೆದುಕೊಳ್ಳಿ.
ಈಗಿರುವ ಉದ್ಯೋಗ ಮಾತ್ರ ಎಷ್ಟೇ ಕಷ್ಟ ಆದರೂ ಸಹ ಬಿಡಬೇಡಿ. ಕಾರಣ ಹೊಸ ಕೆಲಸಗಳು ಸದ್ಯಕ್ಕೆ ಸಿಗುವುದಿಲ್ಲ. ವ್ಯಾಪಾರಿಗಳು ಆಗುವ ಚಿಕ್ಕ ಪ್ರಮಾಣದ ಲಾಭ ಆಥವಾ ಅಸಲು ಮಾತ್ರ ಬಂದರೂ ಅಷ್ಟರಲ್ಲಿಯೇ ತೃಪ್ತಿ ಪಡಿ.[ಮೂವತ್ತು ವರ್ಷದ ಹಿಂದೆ ವೃಶ್ಚಿಕದಲ್ಲಿ ಶನಿ, ಮಾಡಿದ್ದು ಎಷ್ಟೆಲ್ಲ ಹಾನಿ?]
ವರ್ಷದ ಒಟ್ಟಾರೆ ಫಲ 2.5/5

ಜನವರಿಯಿಂದ ಏಪ್ರಿಲ್ ವರೆಗೆ
ಈ ನಾಲ್ಕು ತಿಂಗಳು ಅಷ್ಟು ಸುಲಭವಾಗಿ ಇರುವುದು ಕಷ್ಟ . ದೂರ ಪ್ರಯಾಣಗಳು ಅನೀರೀಕ್ಷಿತವಾಗಿ ಬರುತ್ತವೆ. ಆದರೆ ಹೆಚ್ಚಿನವು ವ್ಯರ್ಥಗೊಳ್ಳುವ ಸಾಧ್ಯತೆಗಳಿವೆ. ಅದೇ ವಿಧದಲ್ಲಿ ಖರ್ಚು ಸಹ ಅಧಿಕವಾಗುತ್ತದೆ. ಮನಸು ಮಾಡಿದರೂ ಕಣ್ಣಿಗೆ ಕಂಡರೂ ಖರ್ಚುಗಳನ್ನು ಹತೋಟಿಗೆ ತರುವುದು ಅಸಾಧ್ಯವೆನಿಸುತ್ತದೆ. ಸುಖಾ ಸುಮ್ಮನೆ ಇತರರ ಮೇಲೆ ಕೋಪ ಹೆಚ್ಚಾಗುತ್ತದೆ. ಕೆಲ ಅತ್ಯಂತ ಸನಿಹದವರೂ ನಿಮ್ಮಲ್ಲಿ ಕೋಪ ವೃದ್ಧಿಯಾಗಿರುವುದು ಗಮನಿಸಿ ನಿಮಗೆ ತಿಳಿಸುವರು. ಆದರೂ ಅದು ನಿಷ್ಪ್ರಯೋಜಕವಾಗುತ್ತದೆ. ಇದೇ ಸಮಯದಲ್ಲಿ ಭೂಮಿಯಲ್ಲಿ ಹೂಡಿಕೆ ಮಾಡಲು ಹೊಸದಾದ ಅವಕಾಶಗಳು ಬರುತ್ತವೆ. ಅವು ಮಾವಿನ ಹಣ್ಣಿನಂತೆ ಆಕರ್ಷಿಸುತ್ತದೆ. ಮೊದಮೊದಲು ಸ್ವಲ್ಪ ಮಟ್ಟಿಗಿನ ಲಾಭ ಕಾಣಬಹುದು. ಆದರೆ ನಂತರ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೂಡಿದ ಹಣ ಸಿಲುಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚು ಇವೆ. ಆದರೆ ಎಲ್ಲ ಕಷ್ಟಗಳಲ್ಲಿಯೂ ನಿಮಗೆ ಸಹಾಯ ಮಾಡುವವರ ಸಂಖ್ಯೆಯಲ್ಲಿ ಕೊರತೆ ಬರುವುದಿಲ್ಲ.

ಮೇನಿಂದ ಆಗಸ್ಟ್ ವರೆಗೆ
ನಿಮ್ಮ ಕಷ್ಟದ, ಪರೀಕ್ಷೆಯ ಕೊನೆ ನಾಲ್ಕು ತಿಂಗಳು ಇದು ಎನ್ನಬಹುದು. ವಿಚ್ಛೇದನ ಕೋರಿ ಹೋದ ದಂಪತಿಗೆ ಸಂಧಾನ ಮಾಡಲು ಹಿರಿಯರ ಆಗಮನವಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ತಗ್ಗಿ ಬಗ್ಗಿ ನೆಡೆದುಕೊಂಡರೆ ಮಾತ್ರ ನಿಮಗೆ ಹೆಚ್ಚಿನ ಗೌರವ ಪ್ರಾಪ್ತಿ. ನೆನಪಿಡಿ ಅಹಂಕಾರದಿಂದ ಮೆರೆಯಲು ನಿಮ್ಮ ಸಮಯ ಅಥವಾ ಗ್ರಹಚಾರ ಸರಿ ಇಲ್ಲ. ಗಾಜಿನ ಮನೆಯಲ್ಲಿ ಇರುವವರು ಮುಂದಿನ ಮನೆಯತ್ತ ಕಲ್ಲು ತೂರಬಾರದು. ಸಹೋದರರೊಂದಿಗೂ ಸಹ ಈ ನಾಲ್ಕು ತಿಂಗಳು ಮನಸ್ತಾಪ ಅಥವಾ ಜಗಳಗಳು ಆಗುವ ಸಾಧ್ಯತೆಗಳಿವೆ. ಅಂಥ ಸಂದರ್ಭಗಳು ಎದುರಾಗಬಹುದು. ಇಲ್ಲಿಯೂ ತಾಳ್ಮೆಯೇ ನಿಮ್ಮನ್ನು ಕಾಯುವುದು. ಕೆಲಸವಿಲ್ಲದೆ ಖಾಲಿ ಕೂತಿದ್ದಲ್ಲಿ ಬಂದ ಚಿಕ್ಕ- ಪುಟ್ಟ ಅವಕಾಶಗಳನ್ನೂ ಸಹ ಬಿಡದೆ ಬಾಚಿಕೊಳ್ಳಿ. ಅಂಥ ಚಿಕ್ಕ ಅವಕಾಶಗಳಲ್ಲಿಯೂ ಪೂರ್ಣ ತೊಡಗಿಕೊಳ್ಳಿ ಹಾಗೂ ಉತ್ತಮ ಹೆಸರು ಸಂಪಾದಿಸಲು ಪ್ರಯತ್ನಿಸಿ.

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ
ಈ ನಾಲ್ಕು ತಿಂಗಳು ಹರ್ಷದಾಯಕವಾಗಿರುತ್ತದೆ. ನಿಮ್ಮ ಹಿಂದಿನ ಪ್ರಯತ್ನಗಳೆಲ್ಲ ಈಗ ಫಲ ಕೊಡಲು ಪ್ರಾರಂಭಿಸುತ್ತವೆ. ಅವಿವಾಹಿತರಿಗೆ ವಿವಾಹದ ಉತ್ತಮ ಅವಕಾಶಗಳು ಲಭಿಸುತ್ತವೆ. ಸಂತಾನ ಇಲ್ಲದವರು ಮತ್ತೆ ತಮ್ಮ ಪ್ರಯತ್ನ ಆರಂಭಿಸಿದರೆ ಉತ್ತಮ ಫಲವಿದೆ. ನಿಮ್ಮ ನಿಜವಾದ ಶತ್ರುಗಳ ದರ್ಶನವಾಗುತ್ತದೆ. ಇಷ್ಟು ದಿವಸ ಸುಳ್ಳು ಹೇಳಿ ನಿಮಗೆ ಮೋಸ ಮಾಡಿದವರು ಸನಿಹದವರೆಂದು ತಿಳಿದ ಮೇಲೆ ಮನಸಿಗೆ ಬೇಸರವಾಗುತ್ತದೆ. ನಿರುದ್ಯೋಗಿಗಳು ಈ ಸಮಯದಲ್ಲಿ ಪ್ರಯತ್ನಿಸಿದರೆ ಉತ್ತಮ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ಜಾತಕ ಉತ್ತಮವಿರುವ ಕೆಲವರಿಗಂತೂ ಅವಕಾಶಗಳು ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತವೆ. ಇಷ್ಟು ದಿನ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಕ್ಕೂ ಸಾರ್ಥಕವಾಯಿತು ಅನಿಸುತ್ತದೆ. ಆರೋಗ್ಯ ಸುಧಾರಿಸುತ್ತಾ ಬರುತ್ತದೆ. ಉತ್ತಮ ಔಷಧಿಗಳು ಹಾಗೂ ಉಪಚಾರಗಳು ಲಭ್ಯವಾಗಿ ರೋಗ ಮುಕ್ತರಾಗುತ್ತೀರಿ. ವಿದೇಶ ಪ್ರಯಾಣದ ಕನಸ ಹೊತ್ತು ಕಾಯುತ್ತಿರುವವರು ಇನ್ನು ಹೊರಡಬಹುದು. ಯಶಸ್ಸು ಇದೆ.

ಪರಿಹಾರ
ವೈದಿಕ: ಗುರುಗ್ರಹದ ಜಪ ಹಾಗೂ ಹವನ ಸಹಿತ ದೂರ್ವಾ ಮೃತ್ಯುಂಜಯ ಶಾಂತಿ ಹವನ ಮಾಡಿಸುವುದು ಉತ್ತಮ
ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಇರುವ ಕಡತೋಕಾ ಗ್ರಾಮದಲ್ಲಿ ನೆಲೆಸಿರುವ ಸ್ವಯಂಭೇಶ್ವರ ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರ ದರ್ಶನ ಮಾಡಿ ರುದ್ರಾಭಿಷೇಕ ಹಾಗೂ ರುದ್ರ ತ್ರಿಶತಿ ಮಂತ್ರಗಳಿಂದ ಬಿಲ್ವ ಪತ್ರೆಗಳಿಂದ ಅರ್ಚನೆ ಮಾಡಿಸಿ. ದೇವಸ್ಥಾನದ ಫೊನ್: 8970055722, 08387285200
ರತ್ನ: ಉತ್ತಮ ಗುಣಮಟ್ಟದ ನೀಲಿ ಪುಷ್ಯರಾಗ ರತ್ನವನ್ನು ತ್ರಿದಿನ ಶುದ್ಧಿ ಪೂಜೆ ಮಾಡಿಸಿ, ಬೆಳ್ಳಿಯಲ್ಲಿ ಉಂಗುರ ಮಾಡಿಸಿ ಶನಿವಾರ ಧರಿಸಿ
ಸ್ತೋತ್ರ: ಪ್ರತಿ ದಿನ ಶಂಕರಾಚಾರ್ಯ ವಿರಚಿತ ಲಿಂಗಾಷ್ಟಕ ಸ್ತೋತ್ರವನ್ನು ಕನಿಷ್ಠ 11 ಅಥವಾ 28 ಬಾರಿ ಪಠಿಸಿ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications