ಯಶ್-ರಾಧಿಕಾ ಮಗಳ ಜಾತಕದಲ್ಲಿರುವ ಆ ಸಿಂಹಾಸನ ಯೋಗದ ಫಲ ಏನು?
Recommended Video

ಸಾಮಾನ್ಯವಾಗಿ ಯಾವುದೇ ಮಗುವಿನ ಜನನವಾದಾಗ ಜನನ ಕಾಲದ ಶಾಂತಿಗಳನ್ನು ಏನಾದರೂ ಮಾಡಿಸಬೇಕಾ ಎಂದು ನೋಡುವುದು ವಾಡಿಕೆ. ಅಂಥದ್ದೇ ಅಧ್ಯಯನಾಸಕ್ತಿಯಿಂದ ಈ ಮಗುವಿನ ಜಾತಕವನ್ನು ನೋಡಿದ್ದೆ. ಆದರೆ ಅದರಲ್ಲಿನ ಆಸಕ್ತಿಕರ ಅಂಶಗಳ ಕಾರಣಕ್ಕೆ ಕೆಲವು ವಿಚಾರಗಳನ್ನಷ್ಟೇ ತಿಳಿಸಿದ್ದೇನೆ. ಯಾವ ಮಗು-ಏನು ವಿಚಾರ ಎಂಬ ಪ್ರಶ್ನೆ ಉದ್ಭವಿಸಿತೆ!
ಮಹಾಲಕ್ಷ್ಮೀ ಸ್ವರೂಪದಲ್ಲಿ ತಾರೆಯರ ಕುಟುಂಬದಲ್ಲಿ ಒಂದು ಪುಟ್ಟ ತಾರೆಯ ಜನನ ಆಗಿದೆ. ಯಶ್ -ರಾಧಿಕಾ ತಾರಾ ದಂಪತಿಗೆ ಡಿಸೆಂಬರ್ 2, 2018ರಂದು ಬೆಳಗ್ಗೆ 6.20ಕ್ಕೆ ಹೆಣ್ಣುಮಗು ಜನನವಾಗಿದೆ. ಈ ಮಗುವಿನ ಜಾತಕ ಹೇಗಿದೆ ಎಂದು ತಿಳಿಸುವ ಲೇಖನ ಇದು. ಕಾರ್ತೀಕ ಮಾಸದ ಕೃಷ್ಣ ದಶಮಿಯಂದು ಆಯುಷ್ಮಾನ್ ಯೋಗ ಹಾಗೂ ಭದ್ರ ಕರಣ, ಹಸ್ತಾ ನಕ್ಷತ್ರದ 1ನೇ ಪಾದ, ಕನ್ಯಾ ರಾಶಿ ಹಾಗೂ ವೃಶ್ಚಿಕ ಲಗ್ನದಲ್ಲಿ ಮಗುವಿನ ಜನನವಾಗಿದೆ.
ಹುಟ್ಟಿದ ಸಮಯಕ್ಕೆ ಜಾತಕವನ್ನು ಸಿದ್ಧಪಡಿಸಿದ ಮೇಲೆ ಲಗ್ನದಿಂದ ಹಾಗೂ ರಾಶಿಯಿಂದ ಹೀಗೆ ಎರಡರಿಂದಲೂ ಫಲ ನುಡಿಯುವ ಪದ್ಧತಿ ಇದೆ. ಈ ಮಗುವಿನ ಜಾತಕವು ಚಂದ್ರನ ಮನೆಯಿಂದ ನೋಡುವಾಗ ಉತ್ತಮವಾದ ಫಲಗಳನ್ನು ಸೂಚಿಸುತ್ತಿದೆ. ಗ್ರಹ ಸ್ಥಿತಿ ಗಮನಿಸುವುದಾದರೆ, ಲಗ್ನದಲ್ಲೇ ರವಿ, ಬುಧ ಹಾಗೂ ಗುರು ಗ್ರಹಗಳಿವೆ.
ಅಲ್ಲಿಂದ ಎರಡನೇ ಮನೆಯಲ್ಲಿ ಶನಿ ಹಾಗೂ ಹನ್ನೆರಡನೇ ಮನೆಯಲ್ಲಿ ಶುಕ್ರ, ಹನ್ನೊಂದರಲ್ಲಿ ಚಂದ್ರ, ಒಂಬತ್ತರಲ್ಲಿ ರಾಹು, ಮೂರರಲ್ಲಿ ಕೇತು, ನಾಲ್ಕರಲ್ಲಿ ಕುಜ ಇದೆ. ಇಷ್ಟು ವಿಚಾರವು ಗ್ರಹ ಸ್ಥಿತಿಯನ್ನು ತಿಳಿಸುವುದಕ್ಕೆ ಸಂಬಂಧಿಸಿದ್ದಾಯಿತು. ಇನ್ನುಳಿದಂತೆ ಆ ಗ್ರಹಗಳು ನೀಡುವ ಫಲವೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಜನ್ಮ ಲಗ್ನದಲ್ಲೇ ಗುರು ಇರುವುದು ಅತ್ಯುತ್ತಮ ವಿಚಾರ
ವೃಶ್ಚಿಕ ಮಾಸದ ಸೂರ್ಯೋದಯ ಕಾಲದಲ್ಲಿ ಶಿಶು ಜನನ ಆಗಿರುವುದರಿಂದ ಮಗುವಿನ ಜನ್ಮ ಲಗ್ನ ವೃಶ್ಚಿಕ ಆಗುತ್ತದೆ. ಆದುದರಿಂದ ಜನ್ಮ ಲಗ್ನದಲ್ಲಿಯೇ ಗುರು ಗ್ರಹ ಸ್ಥಿತ ಆಗಿರುವುದು ಬಹಳ ವಿಶೇಷ ಹಾಗೂ ಉತ್ತಮ ಫಲಗಳನ್ನು ಜೀವನ ಪರ್ಯಂತ ನೀಡುತ್ತವೆ. ಇನ್ನು ಜನ್ಮ ಲಗ್ನದಲ್ಲೇ ಗುರು ಗ್ರಹ ಇದೆ ಇದು ಅತ್ಯುತ್ತಮ ವಿಚಾರ.

ಹಠದ ಸ್ವಭಾವ ಸ್ವಲ್ಪ ಹೆಚ್ಚಾಗಿರುತ್ತದೆ
ಗುರು ಗ್ರಹದಿಂದಾಗಿ ಕೆಡುಕು ಎಂದೂ ಇಲ್ಲ ಹಾಗೂ ವ್ಯಕ್ತಿಯಲ್ಲಿ ಹೆಚ್ಚಿನ ಸದ್ಗುಣಗಳನ್ನು ಗುರು ನೀಡುತ್ತಾನೆ. ವೃಶ್ಚಿಕ ಲಗ್ನ ಸ್ವತಃ ಸ್ವಲ್ಪ ಹಠದ ಸ್ವಭಾವ. ಹಾಗೆ ಹೆಚ್ಚು ಹಠ ಮಾಡಿದರೂ ಎಲ್ಲಿಯೂ ಸಿಟ್ಟು ಹೆಚ್ಚಾಗದಂತೆ ಸಂಪೂರ್ಣವಾಗಿ ಗುರು ನೋಡಿಕೊಳ್ಳುತ್ತಾನೆ. ಯಾವುದೇ ಕೆಟ್ಟ ದೃಷ್ಟಿ ಅಥವಾ ಕೆಟ್ಟ ಸ್ವಭಾವದ ಜನರು ಇವರ ಹತ್ತಿರ ಸಹ ಸುಳಿಯದಂತೆ ಹಾಗೂ ಯಾವುದೇ ದೊಡ್ಡ ದೋಷಗಳು ಇರಲಿ ಅವುಗಳಿಂದ ತಕ್ಕ ಮಟ್ಟಿಗೆ ಗುರು ರಕ್ಷಣೆ ನೀಡುತ್ತಾನೆ.

ಮಗುವಿನ ಜಾತಕದಲ್ಲಿ ಇದೆ ಸಿಂಹಾಸನ ಯೋಗ
ಈ ಪುಟ್ಟ ಲಕ್ಷ್ಮಿಯ ಜನನದಿಂದಾಗಿ ತಂದೆಯವರಾದ ಯಶ್ ಅವರಿಗೆ ಮತ್ತಷ್ಟು ಒಳ್ಳೆಯ ಭವಿಷ್ಯ ಇದೆ. ಅದಕ್ಕೆ ಕಾರಣ ಈ ಮಗುವಿನ ಜಾತಕದಲ್ಲಿ ಇರುವ ಸಿಂಹಾಸನ ಯೋಗ ! ಮಗುವಿನ ಜಾತಕದಲ್ಲಿ ಲಗ್ನ ದಶಮಾಧಿಪತಿ (ಸಿಂಹ ರಾಶಿಯ ಅಧಿಪತಿ) ಆದ ರವಿಯು ಜನ್ಮ ಲಗ್ನದಲ್ಲಿಯೇ ಇರುವುದರಿಂದಾಗಿ ಅದನ್ನು ನಾವು ಸಿಂಹಾಸನ ಯೋಗ ಎಂದು ಕರೆಯುತ್ತೇವೆ ಅಂಥ ಅಧ್ಭುತವಾದ ಸಿಂಹಾಸನ ಯೋಗವನ್ನು ಯಶ್ ಅವರ ಮಗಳ ಜಾತಕದಲ್ಲಿ ಕಾಣಬಹುದು. ಈ ಯೋಗದಿಂದಾಗಿ ಸ್ವತಃ ಮಗುವಿಗೆ ಹಾಗೂ ಮಗುವಿನ ತಂದೆಗೆ ಅದ್ಭುತವಾದ ಯಶಸ್ಸು, ಕೀರ್ತಿ ವೃದ್ಧಿ ಲಭಿಸುತ್ತದೆ.

ಗಣಪತಿ ಆರಾಧನೆ ಬಹಳ ಮುಖ್ಯ
ಇನ್ನು ದೋಷ ಏನಾದರೂ ಇದೆಯೇ ಎಂದು ನೋಡಿದರೆ, ಚಂದ್ರನಿಂದ ಐದನೇ ಮನೆಯಲ್ಲಿ ಅಂದರೆ ಮಕರ ರಾಶಿಯಲ್ಲಿ ಪಾಪ ಗ್ರಹವಾದ ಕೇತು ಇರುವುದರಿಂದ ಪಂಚಮಾರಿಷ್ಟ ಕೇತು ಗ್ರಹ ಶಾಂತಿ ಮಾಡಿಸಬೇಕಾಗುತ್ತದೆ. ಕೇತು ಛಾಯಾಗ್ರಹವಾದ್ದರಿಂದ ಅದಕ್ಕೆ ಬಲವಿಲ್ಲ ಎಂಬ ಅಭಿಪ್ರಾಯ ಕೆಲವು ಜ್ಯೋತಿಷಿಗಳಲ್ಲಿ ಇದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಶಾಂತಿ ಮಾಡಿಸಬೇಕು. ನಾಮಕರಣ ಕಾಲದಲ್ಲಿ ಕೇತು ಗ್ರಹ ಶಾಂತಿ, ಗಣಪತಿ ಆರಾಧನೆ, ಷನ್ನಾರಿಕೇಳ ಫಲ ಗಣಪತಿ ಆರಾಧನೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದನ್ನು ಹೊರತು ಪಡಿಸಿದರೆ ಮಗುವಿನ ಜಾತಕದಿಂದ ಇಡೀ ಕುಟುಂಬಕ್ಕೆ ಒಳಿತಾಗುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications