• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಆಗಲಿದೆಯೇ ವಿಕಾರಿನಾಮ ಸಂವತ್ಸರ?

By ಪ್ರಕಾಶ್ ಅಮ್ಮಣ್ಣಾಯ
|
   ವಿಕಾರಿ ನಮ ಸಂವತ್ಸರದಲ್ಲಿ ಈ ದೇಶಕ್ಕೆ ಕಾದಿದೆ ಆಪತ್ತು ಅಂತಾರೆ ಜ್ಯೋತಿಷಿಗಳು

   ಒಂದು ದಿನದಲ್ಲಿ ಇಂತಿಷ್ಟು ಸಮಯ ಅಧ್ಯಯನಕ್ಕೆ ಮೀಸಲಾಗಿ ಇಡುವುದು ನನ್ನ ರೂಢಿ. ಹಾಗೆ ಅಧ್ಯಯನ ಮಾಡುವಾಗ ಹೊಳೆವ, ತಿಳಿವ ಸಂಗತಿಗಳನ್ನು ನಿಮ್ಮ ಮುಂದೆ ಇರಿಸುವುದು ನನ್ನ ಪರಿಪಾಠ. ನಮ್ಮ ನೆರೆಯ ರಾಷ್ಟ್ರವೊಂದು ಅಸ್ತಿತ್ವದಲ್ಲೇ ಇಲ್ಲದಂತಾಗುವ ಸನ್ನಿವೇಶದ ಬಗ್ಗೆ ಈ ದಿನ ತಿಳಿಸಲಿದ್ದೇನೆ. ಇಂಥ ಸಂಗತಿಗಳನ್ನು ಯಾಕೆ ಹೇಳಬೇಕಾಗುತ್ತದೆ ಎಂಬುದನ್ನೂ ತಿಳಿಸಿಬಿಡುತ್ತೇನೆ.

   ಹತಾಶ ಸ್ಥಿತಿಯಲ್ಲಿ ಆ ದೇಶ ನಡೆಸುವ ಆಕ್ರಮಣಗಳನ್ನು ಸಾಮಾನ್ಯ ಜನರು ಬೇರೆ ರೀತಿ ಆಲೋಚಿಸಬಾರದು ಎಂಬ ಕಾರಣಕ್ಕೆ ವಿವರಣೆ ನೀಡುತ್ತಿದ್ದೇನೆ. ಪಾಕಿಸ್ತಾನ ಮತ್ತು ಭಾರತ ಪರಸ್ಪರ ಈವರೆಗೂ ಭಿನ್ನಾಭಿಪ್ರಾಯ ಹೊಂದಿರುವಂತಹ ರಾಷ್ಟ್ರಗಳು. ಇದರಲ್ಲಿ ಈ ವರೆಗೂ ತಕಾರಾರು ಎಬ್ಬಿಸಿ, ಭಾರತದ ಶಾಂತಿಗೆ ಭಂಗ ತರುತ್ತಿರುವುದು ಪಾಕಿಸ್ತಾನ ಎಂಬುದರಲ್ಲಿ ಅನುಮಾನಗಳಿಲ್ಲ.

   ಭಾರತದಲ್ಲಿ ಜೈಷ್ ಉಗ್ರರಿಂದ ದೊಡ್ಡ ದಾಳಿಗೆ ಸಂಚು: ಗುಪ್ತಚರ ಮಾಹಿತಿ

   ಭಾರತವು ಈಗ ಸಾಕಷ್ಟು ಉತ್ತರವನ್ನೂ ನೀಡಿದೆ. ಆ ಉತ್ತರದಿಂದ ಪಾಠ ಕಲಿಯಬೇಕಾದ ಪಾಕಿಸ್ತಾನವು ದ್ವೇಷವನ್ನು ಹೆಚ್ಚಿಸಿಕೊಂಡೇ ಬಂದಿದೆ. ಹಾಗಂತ ಪಾಕಿಸ್ತಾನದ ಪ್ರಜೆಗಳೆಲ್ಲರೂ ದ್ವೇಷ ಸಾಧಿಸುತ್ತಾರೆ ಎಂದರೆ ತಪ್ಪಾಗುತ್ತದೆ. ಅಲ್ಲಿ ಇರುವಷ್ಟು ಅಂತಃಕಲಹ ಬೇರೆ ದೇಶಗಳಲ್ಲಿ ಇಲ್ಲ.

   ದಕ್ಷಿಣದ ಬಲೂಚಿಸ್ತಾನದ ಪ್ರಜೆಗಳಿಗೆ ಈ ದ್ವೇಷ ಬೇಕಾಗಿಲ್ಲ. ಅವರು ಇದಕ್ಕೆ ವಿರೋಧಿಸುತ್ತಾ, ಪಾಕಿಸ್ತಾನದ ದುರ್ಗುಣಗಳನ್ನು ಬಗ್ಗುಬಡಿಯಲು ಈಗಾಗಲೇ ಕ್ರಾಂತಿಗೆ ಹೊರಟಾಗಿದೆ. ಆದರೆ ನಮ್ಮ ಆಡಳಿತವು ಎಲ್ಲಿ ತಪ್ಪಿ ಹೋಗುತ್ತೋ ಎಂಬ ಭಯವು ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಗಿಲ್ಗಿಟ್ ಜನರಿಗೆ ಭಯ ಶುರುವಾಗಿದೆ. ಇವರ ಬಲ ಹೆಚ್ಚಾಗಬೇಕಿದ್ದರೆ ಕೆಳ ಹಂತದವರ ಮನ ಒಲಿಸುವುದು ಕಷ್ಟ.

   ಜಗತ್ತು ಇಸ್ಲಾಮೀಕರಣವೇ ಮುಖ್ಯ ಉದ್ದೇಶ

   ಜಗತ್ತು ಇಸ್ಲಾಮೀಕರಣವೇ ಮುಖ್ಯ ಉದ್ದೇಶ

   ಹಾಗಾಗಿ ಭಾರತವು ಕಾಶ್ಮೀರವನ್ನು ಸ್ವಾಧೀನ ಮಾಡಿಕೊಂಡರೆ ಬಲ ಹೆಚ್ಚು ಎಂಬುದು ಇವರ ಲೆಕ್ಕಾಚಾರ. ಇದಕ್ಕೆ ರಾಜಕೀಯ ಬಲವೂ ಬೇಕು. ಸದ್ಯ ಆಂತರಿಕವಾಗಿ, ವ್ಯವಹಾರ ಉದ್ದೇಶದಿಂದಲೂ ಭಾರತದೊಂಗಿರುವ ಮತ್ಸರದಿಂದ ಚೀನಾ ದೇಶವು ಬೆಂಲ ನೀಡುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಚೀನಾದ ಎಕನಾಮಿಕ್ ಕಾರಿಡಾರ್ ಯೋಜನೆಯು ಪಾಕಿಸ್ತಾನದ ಮೂಲಕ ಸಾಗಿದರೆ ಚೀನಾದ ವ್ಯಾಪಾರ ವೃದ್ಧಿಯಾಗುತ್ತದೆ. ಹಿಂದೆ ಅಮೆರಿಕವು ಪಾಕ್ ನೊಡನೆ ಇದೇ ಮನಸ್ಥಿತಿಯಲ್ಲಿ ಬೆಂಬಲ ನೀಡಿತ್ತು. ಯಾವಾಗ ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್ ಮುಂತಾದ ಭಯೋತ್ಪಾದಕರಿಗೆ ಆಶ್ರಯ ಕೊಟ್ಟಿತೋ, ಮತಾಂಧರ ಅಟ್ಟಹಾಸ ಮೆರೆಯಿತೋ ಆಗಿನಿಂದ ಅಮೆರಿಕ ದೂರ ಸರಿಯಿತು ಮತ್ತು ಚೀನಾವು ಹತ್ತಿರ ಆಯಿತು. ಮತಾಂಧ ಐಸಿಸ್ ಮುಂತಾದ ಮಾರಕ ಸಂಘಟನೆಗಳು ದಿನೇ ದಿನೇ ಬೆಳೆಯುತ್ತಾ ಹೋದವು. ಈ ಇಸ್ಲಾಮಿಕ್ ಸಂಘಟನೆಗಳ ಮುಖ್ಯ ಉದ್ದೇಶವೇ ಜಗತ್ತನ್ನು ಇಸ್ಲಾಮೀಕರಣ ಮಾಡುವುದು. ಈಗ ಹೆಚ್ವಿನ ಸಂಖ್ಯೆಯಲ್ಲಿ ಅದು ವೃದ್ಧಿಯೂ ಆಗಿದೆ.

   72 ವರ್ಷಗಳ ನಂತರ ಮತ್ತೆ ಬಂದಿದೆ

   72 ವರ್ಷಗಳ ನಂತರ ಮತ್ತೆ ಬಂದಿದೆ

   ಭಾರತದಂತಹ ದೇಶದಲ್ಲಿ ಮುಸ್ಲಿಂ ಪ್ರಜೆಗಳ ಕೃಪಾ ಕಟಾಕ್ಷಕ್ಕಾಗಿ ಹಾತೊರೆಯುವ ಅನೇಕ ಪಕ್ಷಗಳು ಈ ಮತಾಂಧರ ಕಾರ್ಯಕ್ಕೆ ಇನ್ನಷ್ಟು ಬಲ ನೀಡಿದೆ. ನಮ್ಮ ದೇಶದಲ್ಲಿ ಶೇ 25 ಮುಸ್ಲಿಂ ಸಂಸದರು ಸಂಸತ್ ಭವನ ಏರಿದರೂ ಸಾಕು. ಇಸ್ಲಾಂ ಪ್ರಭುತ್ವ ಸ್ಥಾಪನೆಗೆ ನಾಂದಿಯಾದೀತು ಎಂಬುದು ಮತಾಂಧರ ಲೆಕ್ಕಾಚಾರ‌. ಅಲ್ಲಿಗೆ ಇಡೀ ಜಗತ್ತನ್ನೇ ಆಳಬಹುದು ಎಂಬುದು ಇವರ ಎಣಿಕೆ. 1945-46 ರ ಮಹಾ ಯುದ್ಧವೂ ಹಿಟ್ಲರನ ನಾಝೀ ಪ್ರಭುತ್ವದ ಪರಿಣಾಮ. ಇಡೀ ಜಗತ್ತನ್ನೇ ಸ್ವಾಧೀನ ಮಾಡಿಕೊಳ್ಳಲು ಒಂದೊಂದು ಜನಾಂಗವನ್ನೇ ಸರ್ವ ನಾಶ ಮಾಡಿದ. ಕೊನೆಗೆ ಅವನ ಅಂತ್ಯವೂ ಆಯ್ತು. ಇದಾದ 72 ವರ್ಷಗಳ ನಂತರದ್ದೇ 2019ನೇ ಇಸವಿಯ ವಿಕಾರಿ ಸಂವತ್ಸರ. ಈಗಾಗಲೇ ಭಾರತದ ಶತ್ರು ರಾಷ್ಟ್ರವಾದ ಪಾಕಿಸ್ತಾನದ ನೇತೃತ್ವವು ಇಮ್ರಾನ್ ಖಾನ್ ನ ಕೈಯಲ್ಲಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಯಾವುದೇ ಪ್ರತಿನಿಧಿಯೂ ಜಗತ್ತಿಗೆ ಮಾರಕವಾಗಿ ವರ್ತಿಸುವುದಿಲ್ಲ.

   ಜಪಾನ್ ಪಕ್ಕದಲ್ಲೇ ಜರ್ಮನಿ ಎಂದ ಇಮ್ರಾನ್ ಖಾನ್ ಮಾತಿಗೆ ಸಿಕ್ಕಾಪಟ್ಟೆ ಟ್ರೋಲ್

   ತಾವೇ ತೋಡಿದ ಖೆಡ್ಡಾಕ್ಕೆ ಬಿದ್ದು ಸಾಯ್ತಾರೆ

   ತಾವೇ ತೋಡಿದ ಖೆಡ್ಡಾಕ್ಕೆ ಬಿದ್ದು ಸಾಯ್ತಾರೆ

   ಆದರೆ, ಆತನ ನಡತೆಯೇ ಜಗತ್ತಿಗೆ ಮಾರಕವಾಗಲೂಬಹುದು. ಈ ಇಮ್ರಾನ್ ಖಾನ್ ನ ಪರಿಸ್ಥಿತಿ ಹಾಗಿದೆ. ಮತಾಂಧರನ್ನು ವಿರೋಧಿಸಿದರೆ ಅವನಿಗೆ ಮತಾಂಧರಿಂದಲೇ ಅಪಾಯ. ಮತಾಂಧರಿಗೆ ಬೆಂಬಲ ನೀಡಿದರೂ ಇಮ್ರಾನ್ ನಿಗೆ ಜಗತ್ತನ್ನೇ ಇದಿರು ಹಾಕಿಕೊಳ್ಳುವ ಪರಿಸ್ಥಿತಿ ಇದಿರಾದೀತು. ಈಗಿನ ಪ್ರಕಾರ, ಒಬ್ಬ ಬಲಿಷ್ಠ ವ್ಯಕ್ತಿಯು ತನ್ನ ಜುಟ್ಟನ್ನು ಭಯೋತ್ಪಾದಕರ ಕೈಗೆ ಕೊಟ್ಟಂತಾಗಿದೆ. ಇಮ್ರಾನ್ ಖಾನ್ ನದ್ದು ವೃಶ್ಚಿಕ ಲಗ್ನ. ಬಲಿಷ್ಠ ಶನಿಯು ಲಾಭದಲ್ಲಿ 29 ಡಿಗ್ರಿ. ಆದರೆ ಯಾರಿಗೆ ಶನಿಯು ಲಾಭದಲ್ಲಿದ್ದು, ಗುರುವೂ ಲಗ್ನಕ್ಕೆ ಷಷ್ಟಾಮದಲ್ಲಿ ಇರುತ್ತಾನೋ ಅಥವಾ ಶನಿಗೂ ಅನನುಕೂಲನಾಗಿರುತ್ತಾನೋ ಆಗ ಬಲಿಷ್ಠ ಶನಿಯ ಮೂರನೆಯ ದೃಷ್ಟಿ ಮಾರಕವಾಗುತ್ತದೆ. ಅಂದರೆ ದುರ್ಬುದ್ಧಿ, ಅತಿಯಾದ ಬುದ್ಧಿಗಳುಂಟಾಗಿ ಅವರು ತೋಡಿದ ಖೆಡ್ಡಾಕ್ಕೆ ಅವರೇ ಬಿದ್ದು ಸಾಯುತ್ತಾರೆ. ರಾಮಾಯಣದಲ್ಲಿ ರಾವಣೇಶ್ವರನಿಗೆ ಲಾಭಸ್ಥಾನದ ಬಲಿಷ್ಠ ಶನಿಯು ಲಗ್ನವನ್ನು ತೃತೀಯ ದೃಷ್ಟಿಯಿಂದ ನೋಡಿ ಏನಾಯಿತು? ಅನವಶ್ಯ ಹೆಣ್ಣಿನ ಹುಚ್ಚಿನಲ್ಲೇ ಪ್ರಾಣ ಕಳೆದುಕೊಂಡ. ಹಾಗಾಗಿ ಈ ಇಮ್ರಾನ್ ಖಾನ್ ಕೂಡ ಯಶಸ್ವಿಯಾಗಲಾರ.

   ಭೂಪಟದಿಂದ ಪಾಕಿಸ್ತಾನ ಕಣ್ಮರೆಯಾಗುವ ಲಕ್ಷಣ

   ಭೂಪಟದಿಂದ ಪಾಕಿಸ್ತಾನ ಕಣ್ಮರೆಯಾಗುವ ಲಕ್ಷಣ

   ಭಯೋತ್ಪಾದಕರಿಗೆ ಬೆಂಬಲ ನೀಡಿ, ತನ್ನಲ್ಲಿದ್ದ ಅಣು ಅಸ್ತ್ರಗಳಿಂದ ತನಗೇ ಮಾರಕ ಆಗುವಂತೆ ಮಾಡಿಕೊಳ್ಳುವುದು ನಿಶ್ಚಿತ. ಇದು ಅತೀ ಬುದ್ಧಿವಂತಿಕೆಯ ಫಲ. ಅದಕ್ಕೆ ಸರಿಯಾದ ಗ್ರಹ ಗೋಚರವೂ 72 ವರ್ಷಗಳಿಗೊಮ್ಮೆ ಸಂಭವಿಸುವ ದುರ್ಘಟನೆಗಳ ಫಲವೂ ಕೂಡಿ ಬರಲಿದೆ. ಧನು ರಾಶಿಯ ಶನಿಯು ಇಂತಹ ಮನುಷ್ಯರಿಂದ ಅಪಾಯ ತಂದೇ ತರುತ್ತಾನೆ. ಇದು ಎಡವಟ್ಟಿನಿಂದ ಸಂಭವುಸುವಂಥದ್ದು. ಏಕೆಂದರೆ, ಇಮ್ರಾನ್ ಜಾತಕದಲ್ಲಿ ಕನ್ಯಾ ರಾಶಿಯಲ್ಲಿ ಶನಿ ಇರುವುದು. ಈ ಶನಿಗೆ ಗೋಚರದ ಶನಿ ನಾಲ್ಕನೆಯ ಮನೆಗೆ ಬಂದಾಗ (ಧನು), ಎಂಟನೆಯ ಮನೆ ಮೇಷಕ್ಕೆ ಬಂದಾಗ ಮರಣ ಸಮಾನ ಯೋಗ ನೀಡುತ್ತಾನೆ. ಈಗ ಧನುವಿನಲ್ಲಿ, ಕನ್ಯಾ ಶನಿಗೆ ನಾಲ್ಕನೆಯ ಮನೆಯವನಾಗಿ ವಿಪರೀತ ಎಡವಟ್ಟು ತಂದೇ ತರುತ್ತಾನೆ‌. ಈ ಎಡವಟ್ಟು ಮತಾಂಧರ ಒತ್ತಡಗಳಿಂದ ಬರಬಹುದು. ಏನೇ ಆಗಲಿ, ಯಾವ ಕಾಲು ಜಾರಿದರೂ ಸೊಂಟಕ್ಕೇ ಪೆಟ್ಟು ಎನ್ನುವಂತೆ, ಇದು ಜಗತ್ತಿನ ಭೂಪಟದಿಂದ ಪಾಕಿಸ್ತಾನವು ಕಣ್ಮರೆಯಾಗುವ ಲಕ್ಷಣವಾಗಿದೆ.

   2019ರ ಲೋಕಸಭೆ ಚುನಾವಣೆ ಸಮೀಕ್ಷೆಗಳೆಲ್ಲವನ್ನೂ ಉಲ್ಟಾ ಮಾಡಲಿದೆಯೇ ಮೋದಿ ಜಾತಕ ಫಲ?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Will Pakistan eradicate from world map in Vikari Samvatsar? Here is an interesting analysis by well known Kannada astrologer Prakash Ammannaya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more