ಟಾರೋ ರೀಡಿಂಗ್: ಸಿದ್ದು, ಈಶು, ಕಟ್ಟಾ ಮತ್ತಿತರರ ಫಲಿತಾಂಶ ಏನಾಗಬಹುದು?
Recommended Video

ಟಾರೋ ಕಾರ್ಡ್ ರೀಡಿಂಗ್ ಬಹಳ ಕುತೂಹಲಕರವಾದ ಭವಿಷ್ಯ ನುಡಿಯುವ ಪದ್ಧತಿ. ಇದರ ಪ್ರಕಾರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಪೈಪೋಟಿ ಇರುವಂಥ ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬುದನ್ನು ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ತಿಳಿಸಲಿದ್ದಾರೆ.
ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಒನ್ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ. -ಸಂಪಾದಕ
ಇಂದಿನ ಲೇಖನದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಚಾಮುಂಡೇಶ್ವರಿ- ಬಾದಾಮಿ, ಶಿವಮೊಗ್ಗ, ಸೊರಬ, ಬಳ್ಳಾರಿ ನಗರ, ಶಿವಾಜಿನಗರ, ಹೆಬ್ಬಾಳ, ಬ್ಯಾಟರಾಯನಪುರ, ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಯಾವ ಪಕ್ಷ ಹಾಗೂ ಅಭ್ಯರ್ಥಿಯ ಗೆಲುವು ಟಾರೋ ಕಾರ್ಡ್ ರೀಡಿಂಗ್ ಮೂಲಕ ಸೂಚಿಸುತ್ತಿದೆ ಎಂದು ತಿಳಿಸಲಾಗುತ್ತಿದೆ.
ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ, ನಾನು ಯಾವುದೇ ಪಕ್ಷದ ಪರವಾದ ಆಲೋಚನೆ ಇರುವ ವ್ಯಕ್ತಿಯಲ್ಲ. ಟಾರೋ ಕಾರ್ಡ್ ನಲ್ಲಿ ಏನು ಸೂಚಿಸುತ್ತದೋ ಅದನ್ನು ಹೇಳುತ್ತೇನೆ, ಅಷ್ಟೆ. ಯಾವುದೇ ಅಭ್ಯರ್ಥಿಗಳ ಬಗ್ಗೆ ನಿಮಗೆ ಪ್ರೀತಿ ಇದ್ದರೆ, ನಾನು ಹೇಳಿದ ಫಲಿತಾಂಶಕ್ಕಾಗಿ ಫೋನ್ ಮಾಡಿ, ನನ್ನ ಮೇಲೆ ಸಿಟ್ಟು ತೋರಿಸಬೇಡಿ. ಪ್ರಕಾಶ್ ದಳವಿ ಮೊಬೈಲ್ ಫೋನ್ ಸಂಖ್ಯೆ 8369408344.

ಬಾದಾಮಿ-ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರ
ಮೊದಲಿಗೆ ಸಿದ್ದರಾಮಯ್ಯ ಅವರ ಬಗ್ಗೆ ತಿಳಿದುಕೊಂಡು ಬಿಡೋಣ. ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಆ ಪೈಕಿ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸುಲಭವಾದ ಜಯ ಸಾಧಿಸುತ್ತಾರೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಕಂಡುಬರುತ್ತದೆ. ಕಡಿಮೆ ಅಂತರದಿಂದ ಆದರೂ ಸಿದ್ದರಾಮಯ್ಯ ಅವರೇ ಗೆಲ್ಲುವ ಸೂಚನೆ ಕಾಣುತ್ತಿದೆ. ಇಲ್ಲಿ ಅವರ ಪ್ರಬಲ ಪ್ರತಿಸ್ಪರ್ಧಿ ಜಿ.ಟಿ.ದೇವೇಗೌಡ ಭಾರೀ ಹೋರಾಟ ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಎರಡೂ ಕ್ಷೇತ್ರದಲ್ಲಿ ಗೆಲುವು ಎಂಬುದು ಗೋಚರಿಸುತ್ತಿದೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರ
ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ನ ಕೆ.ಬಿ.ಪ್ರಸನ್ನ್ ಕುಮಾರ್ ಮಧ್ಯೆ ಪೈಪೋಟಿ ಕಂಡುಬರುತ್ತಿದ್ದರೂ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಗೆಲುವು ಸಾಧ್ಯತೆ ಹೆಚ್ಚು ಗೋಚರಿಸುತ್ತಿದೆ. ಅವರು ಗೆದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತಮ ಸ್ಥಾನ-ಮಾನ ದೊರೆಯುವ ಅವಕಾಶ ಇದೆ.

ಸೊರಬ ವಿಧಾನಸಭಾ ಕ್ಷೇತ್ರ
ಜೆಡಿಎಸ್ ನಿಂದ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಕುಮಾರ ಬಂಗಾರಪ್ಪ ಮಧ್ಯೆ ಸೋದರ ಸವಾಲು ಏರ್ಪಟ್ಟಿದೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಕುಮಾರ ಬಂಗಾರಪ್ಪ ಪರವಾಗಿ ಜನತೆಯ ತೀರ್ಪು ಬರುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು ಟಾರೋ ಕಾರ್ಡ್ ಗಳು ಸೂಚಿಸುತ್ತಿವೆ.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ
ಜನಾರ್ದನ ರೆಡ್ಡಿ ಸೋದರ ಸೋಮಶೇಖರ್ ರೆಡ್ಡಿ ಬಿಜೆಪಿ ಹಾಗೂ ಮತ್ತೊಬ್ಬ ಗಣಿ ಉದ್ಯಮಿ ಅನಿಲ್ ಲಾಡ್ ಕಾಂಗ್ರೆಸ್, ಜೆಡಿಎಸ್ ನಿಂದ ಇಕ್ಬಾಲ್ ಅಹ್ಮದ್ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿಯ ಸೋಮಶೇಖಾರ್ ರೆಡ್ಡಿ ಅವರ ಪರವಾಗಿ ಅನುಕೂಲಕರ ಅಂಶಗಳು ಜಾಸ್ತಿ ಇದ್ದು, ಅವರು ವಿಜಯಿ ಆಗುವ ಸಾಧ್ಯತೆ ಹೆಚ್ಚಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಸರಕಾರ ಸಚಿವ ರೋಷನ್ ಬೇಗ್ ವಿರುದ್ಧ ಶಿವಾಜಿನಗರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ಪರವಾಗಿ ಟಾರೋ ಕಾರ್ಡ್ ಅನುಕೂಲಕರ ಅಂಶಗಳಿವೆ ಎಂಬುದನ್ನು ಸೂಚಿಸುತ್ತಿದೆ. ಈ ಕ್ಷೇತ್ರದಿಂದ ಸುಬ್ರಹ್ಮಣ್ಯಂ ನಾಯ್ಡುಗೆ ಗೆಲುವಿನ ಅವಕಾಶಗಳು ಹೆಚ್ಚಿವೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಭಾರೀ ಪೈಪೋಟಿಗೆ ಸಾಕ್ಷಿ ಆಗುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಭೈರತಿ ಸುರೇಶ್ ಅವರು ಬಿಜೆಪಿಯ ವೈ.ಎ.ನಾರಾಯಣಸ್ವಾಮಿಗಿಂತ ಸ್ವಲ್ಪ ಮಟ್ಟಿಗೆ ಅನುಕೂಲಕರ ಅಂಶ ಪಡೆಯುತ್ತಾರೆ. ಆದರೆ ಇಲ್ಲಿ ಗೆಲುವಿನ ಅಂತರ ಬಹಳ ಇರುವಂತೆ ಕಂಡುಬರುತ್ತಿಲ್ಲ. ಜತೆಗೆ ಪೈಪೋಟಿ ಭಾರಿಯಾಗಿ ಇರುತ್ತದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಸದ್ಯಕ್ಕೆ ಇಲ್ಲಿನ ಶಾಸಕರಾಗಿರುವ ಹಾಗೂ ಕಾಂಗ್ರೆಸ್ ಸರಕಾರದಲ್ಲಿ ಸಚಿವರೂ ಆಗಿರುವ, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡರ ವಿಜಯ ಯಾತ್ರೆ ಮುಂದುವರಿಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಟಾರೋ ಕಾರ್ಡ್ ಗಳ ಪ್ರಕಾರ, ಕೃಷ್ಣ ಬೈರೇಗೌಡರ ಗೆಲುವು ಕಂಡುಬರುತ್ತಿದೆ.

ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರ
ಜೆಡಿಎಸ್ ಭಿನ್ನಮತೀಯ ಶಾಸಕ ಹಾಗೂ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಸಡ್ಡು ಹೊಡೆದು, ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಎನ್.ಚಲುವರಾಯಸ್ವಾಮಿ ಅವರಿಗೆ ಜೆಡಿಎಸ್ ನ ಸುರೇಶ್ ಗೌಡರಿಗಿಂತ ಹೆಚ್ಚು ಅನುಕೂಲಕರ ಅಂಶಗಳಾಗಿವೆ. ಅವರ ಗೆಲುವಿನ ಸಾಧ್ಯತೆ ಹೆಚ್ಚಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications