ಟಾರೋ ಕಾರ್ಡ್ ಭವಿಷ್ಯ: ಮಾಗಡಿ ಲಡಾಯಿಯಲ್ಲಿ ಗೆಲುವು ಯಾರಿಗೆ?
Recommended Video

ಟಾರೋ ಕಾರ್ಡ್ ರೀಡಿಂಗ್ ಬಹಳ ಕುತೂಹಲಕರವಾದ ಭವಿಷ್ಯ ನುಡಿಯುವ ಪದ್ಧತಿ. ಇದರ ಪ್ರಕಾರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಪೈಪೋಟಿ ಇರುವಂಥ ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬುದನ್ನು ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ತಿಳಿಸಲಿದ್ದಾರೆ.
ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಒನ್ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ. -ಸಂಪಾದಕ
ಜೆಡಿಎಸ್ ನಿಂದ ಹೊರಬಂದು, ಕಾಂಗ್ರೆಸ್ ಗೆ ಸೇರಿ ಸ್ಪರ್ಧೆ ಮಾಡಿರುವಂಥ ಏಳು ಶಾಸಕರ ಪೈಕಿ ರಾಮನಗರ ಜಿಲ್ಲೆ ಮಾಗಡಿಯ ಬಾಲಕೃಷ್ಣ ಅವರ ಬಗ್ಗೆ ಟಾರೋ ಕಾರ್ಡ್ ರೀಡಿಂಗ್ ಏನು ಹೇಳುತ್ತದೆ? ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಲಡಾಯಿಯಲ್ಲಿ ಜೆಡಿಎಸ್ ನ ಎ.ಮಂಜು ಹಾಗೂ ಕಾಂಗ್ರೆಸ್ ನ ಎಚ್.ಸಿ.ಬಾಲಕೃಷ್ಣ ಎದ್ದು ಕಾಣುತ್ತಿದ್ದಾರೆ.
ಈ ಸ್ಪರ್ಧೆ ಕೂಡ ಸ್ವಲ್ಪ ವಿಚಿತ್ರವಾದದ್ದು. ಹೋದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಯಾಚಿಸಿದ್ದ ಎ.ಮಂಜು ಈ ಸಲ ಜೆಡಿಎಸ್ ನ ಅಭ್ಯರ್ಥಿ. ಇನ್ನು ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ, ವಿಜಯಿಯಾಗಿದ್ದ ಎಚ್.ಸಿ.ಬಾಲಕೃಷ್ಣ ಈ ಸಲ ಕಾಂಗ್ರೆಸ್ ನ ಹುರಿಯಾಳು. ಜತೆಗೆ ಶತಾಯಗತಾಯ ಬಾಲಕೃಷ್ಣರನ್ನು ಮಣಿಸಲು ಜೆಡಿಎಸ್ ನ ಅತಿರಥ- ಮಹಾರಥರೆಲ್ಲ ಟೊಂಕ ಕಟ್ಟಿ ನಿಂತಿದ್ದಾರೆ.

ಈ ಸಲ ವಿಪರೀತವಾದಂಥ ಸ್ಪರ್ಧೆ ಕಾಣಬಹುದಾದ ಕ್ಷೇತ್ರ ಇದು. ಗೆಲುವಿನ ಅಂತರ ಕೆಲವು ನೂರುಗಳಲ್ಲಿ ಇರುತ್ತದೆ. ಅಥವಾ ಅದಕ್ಕಿಂತ ಕಡಿಮೆ ಆದರೂ ಅಚ್ಚರಿಯಿಲ್ಲ. ಆದರೆ ಈ ಗೆಲುವು ಯಾರದಾಗಬಹುದು ಎಂಬ ಪ್ರಶ್ನೆ ಕೇಳಿದರೆ, ಎಚ್.ಸಿ.ಬಾಲಕೃಷ್ಣ ಅವರ ಕಡೆಗೆ ತೂಕದ ಬಟ್ಟು ಹೆಚ್ಚು ತೂಗುತ್ತದೆ. ಅದೆಂಥ ಪೈಪೋಟಿ ಕಂಡುಬಂದರೂ ಬಾಲಕೃಷ್ಣ ಪರವಾಗಿ ಜನತೆಯ ತೀರ್ಪು ಬರುವ ಸಾಧ್ಯತೆ ಹೆಚ್ಚಿದೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎಚ್.ಸಿ.ಬಾಲಕೃಷ್ಣ 74,821 ಮತ ಗಳಿಸಿ, ವಿಜಯಿಯಾಗಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎ.ಮಂಜು 60,462 ಮತ ಪಡೆದಿದ್ದರು.












Click it and Unblock the Notifications