Pitru Paksha 2026: ಪಿತೃ ಪಕ್ಷ ಯಾವಾಗ ಸೆಪ್ಟೆಂಬರ್ 26 ಅಥವಾ 27? ಆರಂಭ, ಸಮಯ ಬಗ್ಗೆ ಪಂಚಾಂಗ ಹೇಳೋದೇನು

Pitru Paksha 2026: ಇನ್ನೇನು ಕೆಲವೇ ದಿನಗಳಲ್ಲಿ ಪಿತೃ ಪಕ್ಷ ಆರಂಭವಾಗಲಿದೆ. ಈ ಬಾರಿ ಪಿತೃ ಪಕ್ಷ ಸೆಪ್ಟೆಂಬರ್ 26ಕ್ಕೋ ಅಥವಾ ಸೆಪ್ಟೆಂಬರ್ 27ಕ್ಕೋ ಎನ್ನುವ ಗೊಂದಲ ಶುರುವಾಗಿದೆ. ಕೆಲವು ಸ್ಥಳಗಳಲ್ಲಿ ಸೆಪ್ಟೆಂಬರ್ 26 ರಂದು ಪಿತೃ ಪಕ್ಷದ ಆರಂಭ ಎಂದು ಹೇಳಲಾಗುತ್ತಿದೆ. ಆ ದಿನ ಭಾದ್ರಪದ ಹುಣ್ಣಿಮೆ. ಕೆಲವರು ಭಾದ್ರಪದ ಪೂರ್ಣಿಮೆಯಂದು, ಅಂದರೆ ಹುಣ್ಣಿಮೆ ತಿಥಿಯಂದು ಪೂರ್ವಜರ ಶ್ರಾದ್ಧ ಮಾಡಿ ತರ್ಪಣ ಬಿಡುತ್ತಾರೆ. ಆದ್ದರಿಂದ ಸೆಪ್ಟೆಂಬರ್ 26 ರಿಂದಲೇ ಪಿತೃ ಪಕ್ಷ ಪ್ರಾರಂಭವಾಗುತ್ತದೆ ಎನ್ನುವುದು ಒಂದು ವಾದ. ಅಶ್ವಿನಿ ಮಾಸದ ಕೃಷ್ಣ ಪಕ್ಷದ ಪ್ರತಿಪದ ತಿಥಿ ಸೆಪ್ಟೆಂಬರ್ 27 ರಂದು ಆರಂಭವಾಗುತ್ತದೆ. ಆದ್ದರಿಂದ ಈ ಆಧಾರದ ಮೇಲೆ, ಪಿತೃ ಪಕ್ಷ ಆ ದಿನದಿಂದ ಪ್ರಾರಂಭವಾಗಬೇಕೇ ಎನ್ನುವ ಗೊಂದಲವೂ ಇದೆ. ಹಾಗಿದ್ದರೆ ನಿಜಕ್ಕೂ ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ ? ಪಿತೃ ಪಕ್ಷದ ಆರಂಭದ ಸರಿಯಾದ ದಿನಾಂಕ ಯಾವುದು? ನೋಡೋಣ.

ಪೂರ್ವಜರ ಪೂಜೆಗೆ ಸರಿಯಾದ ಸಮಯ ಯಾವುದು?

ಇಲ್ಲಿ ಮೊದಲು ಪರಿಗಣಿಸಬೇಕಾದ ವಿಷಯವೆಂದರೆ ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದು. ಅಧಿಕೃತ ಹಿಂದೂ ಧಾರ್ಮಿಕ ಗ್ರಂಥವಾದ ನಿರ್ಣಯ ಸಿಂಧು ಪ್ರಕಾರ, ಪಿತೃ ಪಕ್ಷವು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಪ್ರತಿಪದ ತಿಥಿಯಂದು ಪ್ರಾರಂಭವಾಗುತ್ತದೆ. ಪಿತೃ ಪಕ್ಷವು ಪ್ರತಿಪದದಿಂದ ಅಮಾವಾಸ್ಯೆಯ ದಿನದವರೆಗೆ ಇರುತ್ತದೆ. ತಿಥಿಗಳ ಹೆಚ್ಚಳ ಅಥವಾ ಇಳಿಕೆಯನ್ನು ಅವಲಂಬಿಸಿ, ಪಿತೃ ಪಕ್ಷವು 15 ಅಥವಾ 16 ದಿನಗಳವರೆಗೆ ಇರುತ್ತದೆ.

Pitru Paksha 2026

ಪಂಚಾಂಗದ ಪ್ರಕಾರ, ಈ ವರ್ಷದ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಪ್ರತಿಪದ ತಿಥಿ ಸೆಪ್ಟೆಂಬರ್ 26 ರ ಶನಿವಾರ ರಾತ್ರಿ 10.18 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 27 ರ ಭಾನುವಾರ ರಾತ್ರಿ 8.58 ಕ್ಕೆ ಕೊನೆಗೊಳ್ಳುತ್ತದೆ. ಈ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ 26 ರಂದು ಭಾದ್ರಪದ ಹುಣ್ಣಿಮೆಯನ್ನು ದಿನವಿಡೀ ಆಚರಿಸಲಾಗುತ್ತದೆ. ಆರೋಹಣ ದಿನಾಂಕದ ಆಧಾರದ ಮೇಲೆ, ಅಶ್ವಿನಿ ಮಾಸವು ಸೆಪ್ಟೆಂಬರ್ 27 ರಂದು ಪ್ರಾರಂಭವಾಗುತ್ತದೆ ಮತ್ತು ಆ ದಿನ ಅಶ್ವಿನಿ ಕೃಷ್ಣ ಪ್ರತಿಪದ.

ನಿರ್ಣಯ ಸಿಂಧುವನ್ನು ಆಧರಿಸಿ, ಪಿತೃ ಪಕ್ಷವು ಸೆಪ್ಟೆಂಬರ್ 27 ರ ಭಾನುವಾರದಂದು ಪ್ರಾರಂಭವಾಗುತ್ತದೆ. ಆ ದಿನ ಪ್ರತಿಪದ ಶ್ರಾದ್ಧ. ಅಶ್ವಿನಿ ಮಾಸದ ಸಂಪೂರ್ಣ ಕೃಷ್ಣ ಪಕ್ಷವು ಪೂರ್ವಜರ ಪೂಜೆ ಮತ್ತು ಶ್ರಾದ್ಧಕ್ಕೆ ಮೀಸಲಾಗಿರುತ್ತದೆ. ಆದ್ದರಿಂದ, ಇದನ್ನು ಶ್ರಾದ್ಧ ಪಕ್ಷ ಅಥವಾ ಮಹಾಲಯ ಪಕ್ಷ ಎಂದೂ ಕರೆಯುತ್ತಾರೆ.ಪಿತೃ ಪಕ್ಷದ ನಂತರ ನವರಾತ್ರಿ ಪ್ರಾರಂಭವಾಗುತ್ತದೆ.

ಪ್ರತಿಪದದಂದು ಶ್ರಾದ್ಧ

ಪಿತೃಪಕ್ಷದ ಪ್ರತಿಪದ ತಿಥಿಯಂದು,ಮೃತರಾದ ಪೂರ್ವಜರಿಗೆ ಶ್ರಾದ್ಧ, ತರ್ಪಣ, ಪಿಂಡ ದಾನವನ್ನು ಮಾಡಲಾಗುತ್ತದೆ.

ಪಿತೃ ಪಕ್ಷ 2026: ಪೂರ್ವಜರಿಗೆ ಶ್ರಾದ್ಧ ಮಾಡಲು ಶುಭ ಸಮಯ

ಪಿತೃಪಕ್ಷದ ಸಮಯದಲ್ಲಿ, ಪೂರ್ವಜರಿಗೆ ಶ್ರಾದ್ಧ ವಿಧಿಗಳನ್ನು ಕುತುಪ್ ಮುಹೂರ್ತ ಮತ್ತು ರೋಹಿಣಿ ಮುಹೂರ್ತದ ಸಮಯದಲ್ಲಿ ನಡೆಸಲಾಗುತ್ತದೆ. ರೋಹಿಣಿ ಮುಹೂರ್ತ ಮತ್ತು ಕುತುಪ್ ಮುಹೂರ್ತ ಎರಡೂ 48 ನಿಮಿಷಗಳವರೆಗೆ ಇರುತ್ತದೆ.

ಕುತುಪ್ ಮುಹೂರ್ತ - ಬೆಳಿಗ್ಗೆ 11. 48 ರಿಂದ ಮಧ್ಯಾಹ್ನ 12.36ರವರೆಗೆ
ರೋಹಿಣಿ ಮುಹೂರ್ತ - ಬೆಳಿಗ್ಗೆ 12.36 ರಿಂದ 1.24 ರವರೆಗೆ

2026ರಲ್ಲಿ ಪಿತೃ ಪಕ್ಷದ ಅಂತ್ಯ

ಪಿತೃ ಪಕ್ಷ ಹಿಂದೂ ಚಾಂದ್ರಮಾನ ಮಾಸದ ಅಶ್ವಿನಿ ಅಮಾವಾಸ್ಯೆಯ ದಿನ ಕೊನೆಗೊಳ್ಳುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ದಿನದಂದು, ಪೂರ್ವಜರಿಗೆ ಶ್ರಾದ್ಧ ಮಾಡಲಾಗುತ್ತದೆ.

ಈ ವರ್ಷ, ಅಶ್ವಿನ್ ಕೃಷ್ಣ ಅಮಾವಾಸ್ಯೆ ಅಕ್ಟೋಬರ್ 9 ರಂದು ರಾತ್ರಿ 9.35 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 10 ರಂದು ರಾತ್ರಿ 9.19 ರವರೆಗೆ ಇರುತ್ತದೆ. ಉದಯತಿಥಿ ಲೆಕ್ಕಾಚಾರದ ಆಧಾರದ ಮೇಲೆ, ಅಶ್ವಿನ್ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆ ಅಕ್ಟೋಬರ್ 10 ರಂದು ಬರುತ್ತದೆ. ಆ ದಿನ ಪಿತೃ ಪಕ್ಷ ಕೊನೆಯಾಗುತ್ತದೆ.

ಪಿತೃ ಪಕ್ಷದ ಮಹತ್ವ

ವರ್ಷದಲ್ಲಿ ಹದಿನೈದು ದಿನಗಳು ಪಿತೃಗಳಿಗಾಗಿ ಮೀಸಲು. ಈ ಅವಧಿಯಲ್ಲಿ ಪೂರ್ವಜರ ಪೂಜೆ ಮತ್ತು ಶ್ರಾದ್ಧ ಮಾಡಲಾಗುವುದು. ಈ ಅವಧಿಯಲ್ಲಿ, ಪೂರ್ವಜರು ಭೂಮಿಗೆ ಬರುತ್ತಾರೆ. ತರ್ಪಣ, ಶ್ರಾದ್ಧ, ಪಿಂಡ ದಾನ , ಪಂಚ ಬಲಿ ಮತ್ತು ದಾನಗಳಂತಹ ಅರ್ಪಣೆಗಳಿಂದ ಪ್ರಸನ್ನರಾಗುತ್ತಾರೆ ಎನ್ನುವುದು ನಂಬಿಕೆ ನಾವು ನೀಡುವ ತರ್ಪಣ, ಪೂಜೆಗಳಿಂದ ಪ್ರಸನ್ನರಾಗಿ ಆಶೀರ್ವಾದಗಳನ್ನು ನೀಡುತ್ತಾರೆಯಂತೆ. ಹೀಗಾಗಿ ಪಿತೃ ದೋಷ ನಿವಾರಣೆಯಾಗುತ್ತದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+