Weekly Horoscope 2025: ಈ ವಾರ 12 ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ?
ಮೇ ತಿಂಗಳ ಮೂರನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.
ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಸ್ವಾತಿಯವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತುವಿನಲ್ಲಿ ವೈಶಾಖ ಮಾಸದ ಶುದ್ಧ ಸಪ್ತಮಿಯಿಂದ ಚತುರ್ದಶಿಯವರೆಗೆ ಅಂದರೆ 11.05.25 ರಿಂದ 18.05.25ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

ಮೇಷರಾಶಿ
ಸೂರ್ಯ ಬುಧ ನಿಮ್ಮ ರಾಶಿಯಲ್ಲೇ ಇದ್ದಾರೆ. ಈವಾರದ ಮಧ್ಯದಲ್ಲಿ ಸೂರ್ಯ ಎರಡನೇ ಮನೆಗೆ ಹಾಗೂ ಗುರು ಮೂರನೇ ಮನೆಗೆ ಪ್ರವೇಶವಾಗುತ್ತಾರೆ. ಇದು ನಿಮಗೆ ಜೀವನದಲ್ಲಿ ಒಂದು ಬದಲಾವಣೆ ತರುತ್ತದೆ. ಹಣಕಾಸು ಸ್ಥಿತಿಯಲ್ಲಿ ಕೊಂಚ ಸುಧಾರಣೆ ಇದೆ. ತಂದೆಯ ಆರೋಗ್ಯಕ್ಕೆ ತೊಂದರೆ ಇದೆ. ಇನ್ನೂ ಒಂದು ವಾರ ಕಳೆದರೆ ರಾಹು ಲಾಭಸ್ಥಾನಕ್ಕೆ ಬಂದು ಹಣಕಾಸು ಪರಿಸ್ಥಿತಿ ಇನ್ನಷ್ಡು ಸುಧಾರಿಸುತ್ತದೆ.

ವೃಷಭರಾಶಿ
ವೃಷಭ ರಾಶಿಯವರಿಗೆ ಈಗ ನಿಮಗೆ ಬಂಪರ್ ಲಾಭ. ಲಾಭಸ್ಥಾನದಲ್ಲಿ ಶನಿ ಇರುವುದರ ಜೊತೆಗೆ ಈವಾರ ಗುರು ಎರಡನೇ ಮನೆಗೆ ಪ್ರವೇಶವಾಗಿ ಗುರುಬಲ ಸಿಗುತ್ತದೆ. ಒಳ್ಳೆಯ ಅದೃಷ್ಟ ಅವಕಾಶ ನಿಮ್ಮದಾಗುತ್ತದೆ. ಹಣಕಾಸು ಸ್ಥಿತಿ ಉತ್ತಮವಾಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಬಡ್ತಿ ಹೊಸಕೆಲಸ ಸಿಗುವುದು ವಿದೇಶ ಪ್ರವಾಸ ಮುಂತಾದ ಶುಭಫಲಗಳು ಇವೆ.

ಮಿಥುನರಾಶಿ
ಈ ವಾರದಲ್ಲಿ ಗುರು ನಿಮ್ಮ ರಾಶಿಗೇ ಬರುತ್ತಾನೆ. ಸ್ವಲ್ಪ ಒತ್ತಡದ ಸಮಯ. ಧೈರ್ಯ ಇರಲಿ. ಭಯ ಬೇಡ. ಲಾಭಸ್ಥಾನದಲ್ಲಿ ಬುಧ ಇರುವುದು ನಿಮಗೆ ಕೊಂಚ ಬಲ ಸಿಗುತ್ತದೆ. ಹತ್ತನೇ ಮನೆಯಲ್ಲಿ ರಾಹು ಶನಿ ಉಚ್ಛ ಶುಕ್ರನ ಜೊತೆ ಇದ್ದಾರೆ. ಇದು ವೃತ್ತಿಯಲ್ಲಿ ಅಭಿವೃದ್ಧಿ ಸೂಚಿಸುತ್ತದೆ. ಇನ್ನೊಂದೆರಡು ವಾರದಲ್ಲಿ ಕೇತು ಮೂರನೇ ಮನೆಗೆ ಪ್ರವೇಶವಾದಾಗ ದೈಹಿಕ ಶಕ್ತಿ ಹಣಕಾಸು ಬಲ ದೊರೆಯುತ್ತದೆ.

ಕಟಕರಾಶಿ
ಹನ್ನೊಂದನೇ ಮನೆಯಲ್ಲಿ ಇರುವ ಗುರು 12 ನೇ ಮನೆಗೆ ಬರುತ್ತಾನೆ. ಜಾಗ ಬದಲಾವಣೆ ಸಂಭವ ಇದೆ. ಸೂರ್ಯ ಈ ವಾರ ಲಾಭಸ್ಥಾನಕ್ಕೆ ಬರುತ್ತಾನೆ ಇದು ನಿಮಗೆ ಧನಲಾಭ ಸರ್ಕಾರದಿಂದ ಅನುಕೂಲ ಇದೆ. ಒಂಬತ್ತನೇ ಮನೆಯಲ್ಲಿ ಉಚ್ಛ ಶುಕ್ರನ ಜೊತೆ ಶನಿ ರಾಹು ಇದ್ದಾರೆ. ಆಧ್ಯಾತ್ಮಿಕ ಭಾವನೆ ಹೆಚ್ಚಾಗುತ್ತದೆ. ಎರಡನೇ ಮನೆಯಲ್ಲಿ ಕೇತು ಪ್ರವೇಶವಾಗಿತ್ತಾನೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಶುರುವಾಗುತ್ತದೆ. ಅಂತೂಈ ವಾರ ನಿಮಗೆ ಮಿಶ್ರಫಲ.

ಸಿಂಹ ರಾಶಿ
ಈ ವಾರದಲ್ಲಿ ಗುರು ಒಂಬತ್ತನೇ ಮನೆ ಭಾಗ್ಯಸ್ಥಾನಕ್ಕೆ ಬಂದು ನಿಮಗೆ ಲಾಭವನ್ನು ತಂದು ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಅಷ್ಠಮಶನಿಯ ಪ್ರಭಾವ ಇದ್ದರೂ ಗುರುಬಲ ಬರುವುದರಿಂದ ಎಷ್ಟೂ ಸಮಸ್ಯೆಗಳು ಸರಳವಾಗುತ್ತದೆ. ಪರಿಹಾರಗಳು ದೊರೆತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ನವಮದಲ್ಲಿ ಬುಧ ಲಾಭಸ್ಥಾನದಲ್ಲಿ ಗುರು ಇದ್ದು ವೃತ್ತಿಯಲ್ಲಿ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತದೆ.

ಕನ್ಯಾ ರಾಶಿ
ಈಗ ಭಾಗ್ಯ ಸ್ಥಾನದಲ್ಲಿಇರುವ ಗುರು ದಶಮಮಸ್ಥಾನಕ್ಕೆ ಬಂದು ಪರಿಸ್ಥಿತಿ ಕೊಂಚ ಬಿಗಡಾಯಿಸುತ್ತದೆ. ಏಳನೇ ಮನೆಯಲ್ಲಿ ರಾಹು ಶನಿ ಶುಕ್ರ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ಮುಂದಿನ ವಾರ ಕಳೆದ ಮೇಲೆ ರಾಹು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಪ್ರಯೋಜನಗಳು ಸಿಗುತ್ತದೆ. ಯಾವುದೋ ಮೂಲದಿಂದ ಧನಸಹಾಯ ಒದಗಿಬರುತ್ತದೆ. ಕೇತು ನಿಮ್ಮ ರಾಶಿ ಬಿಟ್ಡು ಸಿಂಹರಾಶಿ ಗೆ ಪ್ರವೇಶವಾಗುತ್ತಾನೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಇಕ್ಕಟ್ಡುಗಳೂ ಬಿಕ್ಕಟ್ಡುಗಳೂ ಇದ್ದರೂ ಕೊಂಚ ಮಟ್ಟಿಗೆ ಸಹಾಯ ಸಹಕಾರಗಳೂ ದೊರೆತು ಸಮಸ್ಯೆಗಳು ಹಗುರವಾಗುತ್ತದೆ.

ತುಲಾ ರಾಶಿ
ಈ ವಾರದಲ್ಲೇ ಗುರುಬಲ ಬಂದು ನಿಮ್ಮ ಸಕಲ ಸಂಕಷ್ಟಗಳೂ ನಿವಾರಣೆ ಯಾಗುತ್ತದೆ. ಶನಿ ಕೂಡ ನಿಮಗೆ ಸಹಾಯ ಮಾಡಲು ಆರನೇ ಮನೆಯಲ್ಲಿಇದ್ದಾನೆ. ಬುಧ ಏಳನೇಮನೆಗೆ ಪ್ರವೇಶವಾಗಿದ್ದಾನೆ. ಬುಧನ ನೇರ ದೃಷ್ಡಿ ನಿಮ್ಮ ರಾಶಿಯ ಮೇಲಿದೆ. ಇದು ನಿಮಗೆ ರಕ್ಷೆಯನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ಕೇತು ಲಾಭಸ್ಥಾನಕ್ಕೆ ಬಂದಾಗ ಹಣದ ಹರಿವು ಉತ್ತಮವಾಗುತ್ತದೆ.

ವೃಶ್ಚಿಕ ರಾಶಿ
ಈ ವಾರದಲ್ಲಿ ಗುರು ಮುಂದಕ್ಕೆ ಚಲಿಸಿ ನಿಮಗೆ ಇದುವರೆಗೂ ಇದ್ದ ಗುರುಬಲ ಕಡಿಮೆ ಆಗುತ್ತದೆ. ಶನಿ ಕೂಡ ಪಂಚಮದಲ್ಲಿದ್ದು ಒತ್ತಡಗಳನ್ನು ಕೊಡುತ್ತಾನೆ. ಕಾರ್ಯಕ್ಷೇತ್ರದಲ್ಲಿ ಜಗಳಗಳು ಮನಸ್ತಾಪಗಳು ಬಂದು ಕೆಲಸ ಮಾಡುವ ಮನಸ್ಥಿತಿಗೆ ಹಿನ್ನಡೆ ಆಗುತ್ತದೆ. ಹಣಕಾಸಿನ ಅಡಚಣೆ ತಲೆದೋರಬಹುದು. ಆರೋಗ್ಯ ಜೋಪಾನ. ಸಾಧ್ಯವಾದಷ್ಡು ಸಹನೆಯಿಂದ ಇರಿ. ದೇವರ ಧ್ಯಾನ ಮಾಡಿ

ಧನಸ್ಸು ರಾಶಿ
ಈ ವಾರದಲ್ಲಿ ಗುರುಬಲ ಬರುತ್ತದೆ. ಎಷ್ಟೋ ಸಮಸ್ಯೆಗಳು ಕಡಿಮೆಯಾಗುತ್ತದೆ. ಕಚೇರಿಯಲ್ಲಿ ವಾತಾವರಣ ತಿಳಿಯಾಗಿರುತ್ತದೆ. ಕೌಟುಂಬಿಕ ಸುಖಶಾಂತಿ ಇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಅವಕಾಶಗಳಿವೆ. ಶನಿ ನಾಲ್ಕನೇ ಮನೆಯಲ್ಲಿಇದ್ದಾನೆ. ಇದು ಅಷ್ಟು ಒಳ್ಳೆಯದಲ್ಲ. ನೆಮ್ಮದಿ ಗೆ ಭಂಗ. ಆದರೆ ರಾಹು ನಾಲ್ಕನೇ ಮನೆಯಿಂದ ಮೂರನೇ ಮನೆಗೆ ಬರುವುದು ನಿಮಗೆ ಲಾಭ ತರುತ್ತದೆ.

ಮಕರ ರಾಶಿ
ಶನಿ ಮೂರನೇ ಮನೆಯಲ್ಲಿ ಲಾಭ ಕೊಡುತ್ತಾನೆ. ಆದರೆ ಇದುವರೆಗೂ ಇದ್ದ ಗುರುಬಲ ಈಗ ಕಡಿಮೆಯಾಗುತ್ತದೆ. ರಾಹು ಎರಡನೇ ಮನೆಗೆ ಕೇತು ಎಂಟನೇ ಮನೆಗೆ ಬರುತ್ತಾರೆ. ಕೇತು ಎಂಟನೇ ಮನೆಗೆ ಬರುವುದು ತೊಂದರೆ ಏನೂಇಲ್ಲ. ರಾಹು ಸಹ ಕುಂಭದಲ್ಲಿ ನಿಮಗೆ ಸಹಕಾರಿಯೇ ಆಗಿರುತ್ತಾನೆ. ವಿವಾಹ ಕೆಲಸದಲ್ಲಿ ಬಡ್ತಿ ಇವೆಲ್ಲ ಮುಂದೆ ಹೋಗುತ್ತದೆ ಆದರೆ ಹಣದ ಹರಿವು ಉತ್ತಮವಾಗಿರುತ್ತದೆ.

ಕುಂಭ ರಾಶಿ
ಶನಿ ನಿಮ್ಮ ರಾಶಿ ಬಿಟ್ಟು ಮುಂದೆ ಹೋಗಿದ್ದಾನೆ. ಈ ವಾರದಲ್ಲಿ ಗುರು ಐದನೇ ಮನೆಗೆ ಬಂದು ನಿಮಗೆ ಸಂಪೂರ್ಣ ಗುರುಬಲ ಬರುತ್ತದೆ. ಅರ್ಧ ನಿಂತ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಂದುವರೆಯುತ್ತದೆ. ವೃತ್ತಿಯಲ್ಲಿ ಶುಭಫಲಗಳು ಇವೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹಣಕಾಸಿನ ಹರಿವು ಉತ್ತಮವಾಗಿದೆ.

ಮೀನ ರಾಶಿ
ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ. ಗುರುಬಲ ಕಡಿಮೆ ಇದೆ. ಪ್ರತಿಯೊಂದು ವಿಚಾರದಲ್ಲೂ ನೀವು ಮುನ್ನೆಚ್ಚರಿಕೆ ವಹಿಸಬೇಕು. ಹಣಕಾಸಿನ ಕಷ್ಟಗಳು ಇರುತ್ತದೆ. ಯಾವುದೇ ಕೆಲಸ ಶೀಘ್ರ ಬೆಳವಣಿಗೆ ಆಗುವುದಿಲ್ಲ. ಪ್ರಯತ್ನ ಬಹಳ ಫಲ ಅಲ್ಪ. ಆದಷ್ಡು ದೇವರ ಧ್ಯಾನ ಮಾಡಿ. ಜಪತಪ ಮಾಡಿ.












Click it and Unblock the Notifications