Kanya Rashi Bhavishya 2025: ಕನ್ಯಾ ರಾಶಿ 2025 ವರ್ಷ ಭವಿಷ್ಯ: ರಾಜಯೋಗ ಆರಂಭ- ಸಮಸ್ಯೆಗಳಿಗೆ ಮುಕ್ತಾಯ- ಹರಿದು ಬರಲಿದೆ ಹಣ
ಕನ್ಯಾ ರಾಶಿಯವರಿಗೆ 2025ರ ವರ್ಷ ಭವಿಷ್ಯ ತುಂಬಾ ಅದ್ಬುತವಾಗಿದೆ. ಈ ವರ್ಷ ನಿಮ್ಮ ಜೀವನದ ಅತ್ಯಂತ ಸ್ಮರಣೀಯ ವರ್ಷ. ಗುರು ಗ್ರಹದ ಅನುಗ್ರಹದಿಂದ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತಲೇ ಹೋಗುತ್ತವೆ. ವಿದ್ಯಾರ್ಥಿಗಳಿಗೆ ಅತ್ಯಂತ ಅದೃಷ್ಟದ ಸಮಯ ಇದಾಗಿದೆ. ಹಾಗಾದರೆ ಕನ್ಯಾ ರಾಶಿಯವರಿಗೆ ಮುಂದಿನ ವರ್ಷ ಗ್ರಹಗಳ ಬಲ ಹೇಗಿದೆ? ವ್ಯಾಪಾರ, ಉದ್ಯೋಗ, ಶೈಕ್ಷಣಿಕ, ವೈಯಕ್ತಿಕ, ಪ್ರೇಮ, ಕೌಟುಂಬಿಕ, ಆರೋಗ್ಯ, ವೃತ್ತಿ, ಆರ್ಥಿಕ ಜೀವನ ಹೇಗಿದೆ ಎನ್ನುವುದನ್ನು ಇನ್ನಷ್ಟು ವಿವರವಾಗಿ ತಿಳಿಯೋಣ.
1-1-2025ರಿಂದ 31-12-2025ರವರೆಗೆ ಅಂದರೆ 365 ದಿನಗಳ ಕಾಲ ಕನ್ಯಾ ರಾಶಿಯವರ ಭವಿಷ್ಯ ಹಲವಾರು ಯೋಗಗಳಿಂದ ಕೂಡಿದೆ. ಕನ್ಯಾ ರಾಶಿಯ 12ನೇ ಮನೆಯಲ್ಲಿ ಕೇತು, 6ನೇ ಮನೆಯಲ್ಲಿ ರಾಹು, ಅದೇ ರೀತಿ 10ನೇ ಮನೆಯಲ್ಲಿ ಗುರು ಗ್ರಹದ ಸಂಚಾರವಿರುತ್ತದೆ. ಒಂದು ವೈವಿದ್ಯಮಯವಾಗಿರುವ ಜೀವನ ಕನ್ಯಾ ರಾಶಿಯವರಿಗೆ ಇರುತ್ತದೆ. ಗುರು ಸಂಚಾರ ಸಂತೋಷ ತರಲಿದೆ.

ಆರ್ಥಿಕ ಜೀವನ
ಹೊಸ ಮನೆಯನ್ನು ಖರೀದಿ ಮಾಡುವಿರಿ. ನಿಮ್ಮ ಮಕ್ಕಳಿಗೆ ಕಂಕಣಭಾಗ್ಯ ಕೂಡಿ ಬರುವುದರಿಂದ ಶುಭ ಕಾರ್ಯಗಳು ಮನೆಯಲ್ಲಿ ನಡೆಯುತ್ತವೆ. ಕನ್ಯಾ ರಾಶಿಯವರಿಗೆ ಧನಕಾರಕನಾಗಿ ಲಾಭ ಸ್ಥಾನದಲ್ಲಿ ಇರುವುದು ಚಂದ್ರ, ಧನವನ್ನು ಕೊಡುವಂತ ಗ್ರಹ ಶುಕ್ರ. ಚಂದ್ರ ಹಾಗೂ ಶುಕ್ರ ಗ್ರಹಗಳು ತಮ್ಮ ಮನೆಯನ್ನು ರಕ್ಷಣೆ ಮಾಡುವ ಗ್ರಹಗಳು. ಹೀಗಾಗಿ ಇವು ಭಾಗ್ಯಾಧಿಪತಿ ಯೋಗ, ಲಾಭಾಧಿಪತಿ ಯೋಗ, ಧನಾಧಿಪತಿ ಯೋಗ ನೀಡುತ್ತವೆ. ಇದರಿಂದಾಗಿ ಕನ್ಯಾ ರಾಶಿಯವರಿಗೆ ಮುಂದಿನ ವರ್ಷದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ.
ಕನ್ಯಾ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗಜಕೇಸರಿ ಯೋಗ ಆರಂಭವಾಗುತ್ತದೆ. ಈ ಯೋಗದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಧನಾಗಮನ ಉಂಟಾಗುತ್ತದೆ. ಜೀವನದ ಉದ್ದ ಅಗಲಕ್ಕೂ ಕೂಡ ದೈವಾನುಕುಲ ಇರುತ್ತದೆ. ಕನ್ಯಾ ರಾಶಿಯವರಿಗೆ ಬರಬೇಕಾದ ಹಣ ಸಿಗಲಿದೆ. ಲಾಭ ಕೊಡುವ ಮಾರ್ಗಗಳು ತೆರೆದುಕೊಳ್ಳುತ್ತವೆ. ಜಮೀನು, ಸೈಟ್, ಮನೆ ಲಾಭ ತಂದು ಕೊಡುತ್ತವೆ.
ಟೆಂಡರ್‌ನಿಂದ ಬರಬೇಕಾದ ಹಣ, ಕೆಲಸ ಮುಗಿದರೂ ಕೈಸೇರದ ನಿಂತು ಹೋಗಿದ್ದ ಹಣ ನಿಮ್ಮ ಕೈ ಸೇರಲಿದೆ. ಗ್ರಹಯೋಗದಿಂದ 2024ರಲ್ಲಿ ನೋಡಿದ ಸಮಸ್ಯೆಗಳು ಮುಂದಿನ ವರ್ಷ ದೂರವಾಗುತ್ತವೆ. ಹೊಸದಾಗಿ ನಿರ್ಮಾಣ ಮಾಡುವ ಚಲನಚಿತ್ರ, ಇಂಡಸ್ಟ್ರಿಯಲ್ಲಿ ಲಾಭ ಇರುತ್ತದೆ. ಗಣ್ಯ ವ್ಯಕ್ತಿಗಳ ಸಂಬಂಧ ಹೆಚ್ಚಾಗುತ್ತದೆ.

ಕುಟುಂಬ ಜೀವನ
ಜೀವನದಲ್ಲಿ ಮುಂಬರುವ ವರ್ಷ ಆಗಾಗ ಏರುಪೇರು ಉಂಟು ಮಾಡಿದರೂ ಸಹ ಯೋಗಗಳಿಂದಾಗಿ ನಿಮ್ಮ ಕೈಯಲ್ಲಿ ಸದಾ ಹಣ ಇರುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ, ಉದ್ಯೋಗ ಮಾಡುವವರಿಗೆ ಹೊಸ ವಿಷಯ, ವ್ಯವಹಾರದಲ್ಲಿ ಹೆಚ್ಚು ಲಾಭ ಇರುತ್ತದೆ. ದಾಂಪತ್ಯದಲ್ಲಿ ಸಂತೋಷ ನೆಲೆಸಲಿದೆ. ಸಂತೋಷದ ಜೀವನ ನಡೆಸಲು ಮುಂದಿನ ವರ್ಷ ನಿಮಗೆ ಸಾಧ್ಯವಾಗುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಸಹ ಅವು ನಿವಾರಣೆಯಾಗಲಿದೆ.

ಶೈಕ್ಷಣಿಕ ಜೀವನ
ಜೀವನದ ಉದ್ದಗಲಕ್ಕೂ ಕೂಡ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ನಿಮ್ಮ ಕಲಿಕಾ ಸಾಮಾರ್ಥ್ಯ ಹೆಚ್ಚಾಗಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದುಕೊಂಡ ಅಂಕ ಗಳಿಸುವಿರಿ. ಶತ್ರುಗಳ ಕಾಟ ಇರುತ್ತದೆ. ಆದರೆ ಗುರು ಬಲದಿಂದ ಶತ್ರುಗಳನ್ನು ಮಿತ್ರರಾಗಿಸಿಕೊಳ್ಳುವ ಬುದ್ಧಿ ಶಕ್ತಿ ನಿಮಗಿರಲಿದೆ. ಹತ್ತು ಹಲವಾರು ವಿಷಯಗಳನ್ನು ಚಿಂತಿಸಿ ಮುನ್ನಡೆಯುತ್ತೀರಿ.

ವೃತ್ತಿ ಜೀವನ
ಹೀಗೆ ಕನ್ಯಾ ರಾಶಿಯವರಿಗೆ 2025ರಲ್ಲಿ ಅದ್ಭುತವಾಗಿರುವ ಮಹಾಯೋಗವಿದೆ. ಕೃಷಿಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೈನುಗಾರಿಕೆಗಳಲ್ಲಿ ಹೆಚ್ಚು ಅನುಕೂಲಕರವಾಗಿರುತ್ತದೆ. ಉದ್ಯಮ, ವ್ಯವಹಾರ, ಗ್ಯಾಸ್, ಎಣ್ಣೆ ತಯಾರಿಕೆ, ಕಬ್ಬಿಣ, ಮಾಧ್ಯಮ ಹೀಗೆ ಒಂದಿಷ್ಟು ಕ್ಷೇತ್ರದಲ್ಲಿ ಲಾಭ ಹೆಚ್ಚಾಗಿ ಗಳಿಸುವಿರಿ.
ಅಡುಗೆ ಎಣ್ಣೆ ಸೇರಿದಂತೆ ಇತರ ತೈಲ ಉದ್ಯಮ ಲಾಭ ಇರುತ್ತದೆ. ಹೋಟೆಲ್ ಕೆಲಸ ಮಾಡುವವರು, ದಿನಗೂಲಿ ನೌಕರರಿಗೆ ಎಥೆಚ್ಚವಾಗಿ ಧನಲಾಭವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಕೂಡ ನಿರ್ಮಾಣವಾಗಲಿದೆ. ಅಲೆಮಾರಿ ಬದುಕು ದೂರವಾಗುತ್ತದೆ. ಗುರು ಮಂಗಲ ಯೋಗ, ವಾಣಿ ಯೋಗ, ಹಂಸ ಯೋಗ ಮತ್ತು ಗಜಕೇಸರಿ ಯೋಗದಿಂದ ಕನ್ಯಾ ರಾಶಿಯವರು ತುಂಬಾ ಸೊಗಸಾದ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕೋರ್ಟ್ ಕಚೇರಿಯಲ್ಲಿ ಯಾವುದಾದರೂ ವಿವಾದ ಇದ್ದರೆ ಅದು ನಿಮ್ಮ ಪರವಾಗಿರುತ್ತದೆ.

ಪ್ರೇಮ ಜೀವನ
ಕನ್ಯಾ ರಾಶಿಯವರು ತಮ್ಮ ಪ್ರೇಮ ವಿಷಯದ ಬಗ್ಗೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಕುಟುಂಬಸ್ಥರಿಗೆ ತಿಳಿಸಿದರೆ ಒಪ್ಪಿಗೆ ಖಂಡಿತ. ನಿಮ್ಮ ಪ್ರೇಮ ಜೀವನ ಅದ್ಬುತವಾಗಿರುತ್ತದೆ. ಇತರರ ದೃಷ್ಟಿ ತಾಗುವಂತೆ ನೀವು ಜೀವನ ನಡೆಸುವಿರಿ. ಗುರು ಹಿರಿಯರ ಆಶೀರ್ವಾದದಿಂದ 2024ರಲ್ಲಿ ಅನುಭವಿಸಿದ ಸಮಸ್ಯೆಗಳು ದೂರವಾಗುತ್ತವೆ. ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನಿಭಾಯಿಸುವಿರಿ. ಸಣ್ಣಪಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಂತಿಸಬೇಡಿ.

ಕನ್ಯಾ ರಾಶಿಯವರಿಗೆ ಅದೃಷ್ಟ ದಿಕ್ಕು
ಕನ್ಯಾ ರಾಶಿಯವರಿಗೆ ಶುಭಕರವಾದ ದಿಕ್ಕು ಪೂರ್ವ. ಈ ದಿಕ್ಕಿನ್ನು ನೀವು ಸ್ವಚ್ಚವಾಗಿ ಇಟ್ಟುಕೊಂಡಿರಬೇಕು. ಈ ದಿಕ್ಕಿಗೆ ದಿನಾ ಪೂಜೆಯನ್ನು ಸಲ್ಲಿಸಿ ಸೂರ್ಯ ದೇವರ ಆಶೀರ್ವಾದ ಪಡೆಯಬೇಕು. ಕನ್ಯಾ ರಾಶಿಯವರಿಗೆ ಎಲ್ಲಾ ಸಂಕಷ್ಟುಗಳು ದೂರವಾಗಿ ಸೂರ್ಯನ ಕಿರಣದಂತೆ ಮುಂಬರುವ ವರ್ಷ ಹೊಳೆಯಲಿದೆ.
ಕನ್ಯಾ ರಾಶಿ ಅದೃಷ್ಟ ಸಂಖ್ಯೆ
ಇನ್ನೂ ಕನ್ಯಾ ರಾಶಿಯವರಿಗೆ 2025 ಅದೃಷ್ಟ ಸಂಖ್ಯೆ ಅಂದರೆ ಅದು 18,26,28 ಆಗಿದೆ. ಈ ನಂಬರ್ ನಿಂದ ನೀವು ನಿಮ್ಮ ಅದೃಷ್ಟವನ್ನು ವೀಕ್ಷಿಸಬಹುದು. ಒಟ್ಟಿನಲ್ಲಿ 2025ರಲ್ಲಿ ಕನ್ಯಾ ರಾಶಿಯವರು ಸಾಕಷ್ಟು ಅದೃಷ್ಟ ಯೋಗಗಳಿಂದ ಶುಭ ಫಲವನ್ನು ಪಡೆಯಲಿದ್ದಾರೆ. ಅಂದುಕೊಡ್ಡಿದ್ದೆಲ್ಲವೂ ನೆರವೇರುವುದು. ಸಂತೋಷದ ಜೀವನವನ್ನು ನೀವು ನಡೆಸುವಿರಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications