Darshan Thoogudeepa: ದರ್ಶನ್ ವಿಚಾರದಲ್ಲಿ ನಿಜವಾಯ್ತು ವಿದ್ಯಾಶಂಕರಾನಂದ ಗುರೂಜಿ ನುಡಿದ ಭವಿಷ್ಯ...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಕೋರ್ಟ್ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಚಿಕಿತ್ಸೆ ಬಳಿಕ ಮತ್ತೆ ದರ್ಶನ್ ಜೈಲಿಗೆ ಹೋಗಬೇಕಿದೆ. ಈ ಹಿಂದೆ ದರ್ಶನ್ ಜೈಲಿನಿಂದ ಯಾವಾಗಾ ಹೊರ ಬರುತ್ತಾರೆ ಎಂದು ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಈ ಪೈಕಿ ವಿದ್ಯಾಶಂಕರಾನಂದ ಗುರೂಜಿ ಹೇಳಿದ ಭವಿಷ್ಯ ದರ್ಶನ್ ವಿಚಾರದಲ್ಲಿ ನಿಜವಾಗಿದೆ.
ಹೌದು... ಜಾಮೀನು ಪಡೆದು ಜೈಲಿನಿಂದ ಹೊರಬರುವುದು ದರ್ಶನ್ ಅವರಿಗೆ ಸುಲಭವಾಗಿರಲಿಲ್ಲ. ಹೀಗಾಗಿ ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ವಿಚಾರದಲ್ಲಿ ಹಲವಾರು ಜ್ಯೋತಿಷಿಗಳು ದರ್ಶನ್ ಯಾವಾಗ ಜೈಲಿನಿಂದ ಹೊರಬರಲು ಸಮಯ ಯೋಗ್ಯವಾಗಿದೆ ಎಂದು ಹೇಳಿದ್ದರು. ಇದಕ್ಕಾಗಿ ದರ್ಶನ್ ಜಾತಕವನ್ನು ಪರಿಶೀಲನೆ ಮಾಡಲಾಗಿತ್ತು.

ಅಕ್ಟೋಬರ್ ನಂತರವೇ ಜೈಲಿನಿಂದ ಹೊರಬಂದರು ದರ್ಶನ್...
ದರ್ಶನ್ 16 ಫೆಬ್ರವರಿ 1977ರಂದು ಸರಿಸುಮಾರು ಮಧ್ಯಾಹ್ನ 1 ಗಂಟೆಗೆ ಜನಿಸಿದರು. ಅವರದ್ದು ಶ್ರವಣಾ ನಕ್ಷತ್ರ ಹಾಗೂ ಮಕರ ರಾಶಿಯಾಗಿದೆ. ವೃಷಭ ಲಗ್ನದಲ್ಲಿ ಅವರು ಹುಟ್ಟಿದ್ದಾರೆ. ಈ ಒಂದು ಜಾತಕದ ಅನ್ವಯ ದರ್ಶನ್ ಜೈಲುವಾಸದ ಭವಿಷ್ಯ ನುಡಿಯಲಾಗಿತ್ತು.
2011ರಿಂದ ದರ್ಶನ್ ಜಾತಕದಲ್ಲಿ ಗುರುದಶವಿದೆ. 2011ರಿಂದ 2013ರವರೆಗೆ ದರ್ಶನ್ ಅವರ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ. ಹೆಂಡತಿ ಮೇಲೆ ಹಲ್ಲೆ ಮಾಡಿದ ಅಪವಾದದ ಮೇಲೆ ದರ್ಶನ್ ಜೈಲಿಗೆ ಹೋಗಿ ಬಂದರು. ಆ ಸಮಯದಲ್ಲಿ ದರ್ಶನ್ ಜಾತಕದಲ್ಲಿ ಹನ್ನೆರಡನೆ ಮನೆಯಲ್ಲಿ ಇರುವ ಗುರು ಲಾಭಾಧಿಪತಿಯಾಗಿ, ಅಷ್ಟಮಾಧಿಪತಿಯಾಗಿ ವ್ಯಯದಲ್ಲಿ ಕೇತುಯುಕ್ತನಾಗಿ ಇದ್ದನು. ರಾಹು ದೃಷ್ಟಿಗೆ ಒಳಪಟ್ಟಿದ್ದನು. ಇದರಿಂದಾಗಿ ಏನೇ ಇದ್ದರೂ ವ್ಯಕ್ತಿಗೆ ನೆಮ್ಮದಿ ಇರುವುದಿಲ್ಲ. ಹೊರಗಡೆ ನೋಡುವ ದರ್ಶನ್‌ಗೂ ಆಂತರ್ಯದಲ್ಲಿ ನೋಡುವ ದರ್ಶನ್‌ಗೂ ಭಾರೀ ವ್ಯತ್ಯಾಸವಿರುತ್ತದೆ.
ಗುರು ದಶ ಶುರು ಆರಂಭ ನಂತರ ಏರಿಳಿತ..
ದರ್ಶನ್‌ಗೆ ಗುರು ದಶ ಶುರುವಾದಾಗಿನಿಂದ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಾರಂಭಿಸಿದರು. ಇದ್ದಕ್ಕಿದ್ದಂತೆ ಮೇಲೆ ಹೋಗುವುದು ಮತ್ತೆ ಕೆಳಗೆ ಬೀಳುವುದು. ದರ್ಶನ್ ಅವರು 'ಸಾರಥಿ' ಸಿನಿಮಾ ನಂತರದಲ್ಲಿ ಇನ್ಯಾವುದೇ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಕ್ಕೆ ಖ್ಯಾತಿಯನ್ನು ತಂದು ಕೊಡಲಿಲ್ಲ. 2023ರಿಂದ 2024ವರೆಗೆ ಕುಚಲ ಮುಕ್ತಿ ಇತ್ತು. ಇದರಿಂದ ದರ್ಶನ್ ಜೈಲುವಾಸ, ಅಪನಂಬಿಕೆ ಎದುರಿಸಿದರು. ಇದರಿಂದಾಗಿ ದರ್ಶನ್ ಅವರು ಅಕ್ಟೋಬರ್ ತಿಂಗಳವರೆಗೆ ತುಂಬಾ ಕಠಿಣ ಪರಿಸ್ಥಿತಿ ಎದುರಿಸಿದರು.

ಆದರೆ ಅಕ್ಟೋಬರ್ ನಂತರ ದರ್ಶನ್ ಅವರಿಗೆ ರಾಹು ಮುಕ್ತಿ ಶುರುವಾಗಿದೆ. ಇದರಿಂದಾಗಿ ದರ್ಶನ್ ಜೀವನ ಬದಲಾಗಲಿದೆ. ಪುನ: ದರ್ಶನ್ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬದಲಾಗಲಿದ್ದಾರೆ. ಅಕ್ಟೋಬರ್ 28ರವರೆಗೂ ದರ್ಶನ್‌ಗೆ ಜಾಮೀನು ಸಿಗುವುದು ಅಸಾಧ್ಯ ಎಂದು ಗುರೂಜಿ ಭವಿಷ್ಯ ನುಡಿದಿದ್ದರು. ಅದೇ ರೀತಿ ದರ್ಶನ್ ಅವರಿಗೆ ಅಕ್ಟೋಬರ್ 30ರಂದು ಜಾಮೀನು ಸಿಕ್ಕಿದೆ.
ದರ್ಶನ್ ಮುಂದಿನ ಜೀವನ ಹೇಗಿರಲಿದೆ?
ನವೆಂಬರ್ ನಂತರ ದರ್ಶನ್ ಅವರ ಸಿನಿ ಜರ್ನಿ ಮೇಲೆ ಹೋಗುತ್ತದೆ. ಶನಿದಶದ ಕಾಲದಲ್ಲಿ ಒಂದಿಷ್ಟು ಅನುಕೂಲಗಳು ಇದೆ. ಜೈಲಿಗೆ ಹೋಗಿ ಬಂದ ಬಳಿಕ ಅವರಿಗೆ ಅವರ ನಿಜ ಜೀವನದ ಬಗ್ಗೆ ಅರಿವಾಗಲಿದೆ. ಪ್ರೀತಿ, ಕರುಣೆ, ವಾತ್ಸಾಲ್ಯದಿಂದ ದರ್ಶನ್ ಜೀವನ ನಡೆಸಲಿದ್ದಾರೆ ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ನುಡಿದಿದ್ದಾರೆ.
ದರ್ಶನ್ ಜನ್ಮ ಜಾತಕದಲ್ಲಿ ಗುರು ಇದ್ದಾನೆ. ಹಾಗೆ ದರ್ಶನ್ ಅರೆಸ್ಟ್ ಆದಾಗಲೂ 12ನೇ ಮನೆಯಲ್ಲಿ ಗುರು ಇದ್ದಾನೆ. ಅಷ್ಟು ಮಾತ್ರ ಅಲ್ಲದೆ ನೇರವಾಗಿ ರಾಹು ಮತ್ತು ಕೇತುಗಳು 10 ಮತ್ತು 4ನೇ ಮನೆಯಲ್ಲಿ ಇರುತ್ತವೆ. ಇವು ಅನಿಷ್ಟ ಸೂಚನೆಗಳನ್ನು ಕೊಡುತ್ತವೆ. ಜನ್ಮ ಜಾತಕದಲ್ಲಿ 2024 ಅಕ್ಟೋಬರ್ ವರೆಗೂ ಸಹ ತುಂಬಾ ಕಠಿಣದ ಪರಿಸ್ಥಿತಿ ಇತ್ತು.
ಇದಾದ ನಂತರ ಅಂದರೆ ಅಕ್ಟೋಬರ್ ನಂತರ ರಾಹು ಯುಕ್ತಿ ಶುರುವಾಗುತ್ತದೆ. ಈ ಸಮಯದಲ್ಲಿ ಒಳ್ಳೆಯ ಬದಲಾವಣೆಗಳನ್ನು ದರ್ಶನ್ ಅವರಲ್ಲಿ ಕಾಣಬಹುದು. ಪುನ: ದರ್ಶನ್ ಬದಲಾಗಲಿದ್ದಾರೆ. ಮೊದಲಿನಂತೆ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ದಯೆ, ಕರುಣೆಯಿಂದ ಜೀವನ ನಡೆಸಲಿದ್ದಾರೆ.
ಹೇಗೋ ಬದುಕುವ ಮನುಷ್ಯ ನವೆಂಬರ್‌ನಲ್ಲಿ ಬದಲಾಗುತ್ತಾನೆ. ಉದಾ: ಸಲ್ಮಾನ್ ಖಾನ್ ಹೇಗೇಗೋ ಬದುಕುತಿದ್ದ ಮನುಷ್ಯ. ಕರುಣೆ, ಅನುಕಂಪ, ಪ್ರೀತಿ, ವಾತ್ಸಲ್ಯ ಗೊತ್ತಿರಲಿಲ್ಲ. ಯಾರಿಗೂ ಬೆಲೆ ಕೊಡುತ್ತಿರಲಿಲ್ಲ. ಆದರೆ ಇವತ್ತು ಅದೆಲ್ಲವೂ ತನ್ನ ಸ್ವತ್ತು ಎಂದು ಬದುಕುತ್ತಿದ್ದಾರೆ. ಯಾವಾಗ ಜೈಲಿಗೆ ಹೋಗಿ ಬಂದರೋ ಆಗ ಬದಲಾದರು. ಅವರಿಗೆ ಜೀವನದ ಅರಿವಾಯ್ತು. ಅದು ಗ್ರಹಗತಿಗಳ ಸ್ಥಾನದಿಂದ ಮಾತ್ರ ಸಾಧ್ಯವಾಯ್ತು ಎಂದು ಗುರೂಜಿ ಹೇಳಿದರು.
ದರ್ಶನ್ ಅರೋಗ್ಯ ವರದಿ ಕೋರ್ಟ್‌ಗೆ ಸಲ್ಲಿಕೆ
ದರ್ಶನ್ ಅವರು ಸದ್ಯ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇದ್ದಾರೆ. ಆರೋಗ್ಯದ ಕಾರಣ ಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ದರ್ಶನ್ ಆರೋಗ್ಯಕ್ಕೆ ಸಮಭಂಧಿಸಿದ ವೈದ್ಯಕೀಯ ವರದಿಯನ್ನು ಕಳೆದ ದಿನ (ನವೆಂಬರ್ 7) ದರ್ಶನ್ ಪರ ವಕೀಲರು ಸಲ್ಲಿಸಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋರ್ಟ್ ಆದೇಶದಂತೆ ಅವರು ಆರೋಗ್ಯದ ವರದಿಯನ್ನು ಕೂಡ ಸಲ್ಲಿಸಿದ್ದಾರೆ. ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಿರುವ ದರ್ಶನ್ ಅವರ ಆರೋಗ್ಯ ಚೇತರಿಕೆ ಮೇಲೆ ಸರ್ಜರಿ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ದರ್ಶನ್ ಎಲ್ಲಾ ಸಮಸ್ಯೆಗಳಿಂದ ಯಾವಾಗ ಮುಕ್ತರಾಗುತ್ತಾರೆನ್ನುವ ಪ್ರಶ್ನೆಯಾಗಿಯೇ ಉಳಿದಿದೆ.












Click it and Unblock the Notifications