Vastu vs Horoscope: ಮನೆ ವಾಸ್ತು ಪರ್ಫೆಕ್ಟ್ ಆದರೂ ಏಕೆ ಕಿರಿಕಿರಿ? ತಿಳಿಯಿರಿ

ಮನೆ ಎಂದರೆ ಬರಿ ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಕೂಡಿದ ಕಟ್ಟಡ ಅಷ್ಟೆ ಅಲ್ಲ, ಅದು ನಮ್ಮ ಜೀವಮಾನದ ಕನಸಿನ ಪ್ರತಿರೂಪ ಎಂದೆ ಹೇಳಬಹುದು. ನಾವು ಮನೆ ಕಟ್ಟುವಾಗ ಎಲ್ಲಾ ರೀತಿಯ ವಾಸ್ತು ಶಾಸ್ತ್ರಗಳನ್ನು ಪಾಲಿಸಿದರು ಕೆಲವರಿಗೆ ಇದರಿಂದ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ, ಆದರೆ ಇನ್ನು ಕೆಲವರಿಗೆ ಅಶಾಂತಿ ಮತ್ತು ಮನೆಯಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಮುಖ್ಯ ಕಾರಣ ವಾಸ್ತು ಮತ್ತು ವೈಯಕ್ತಿಕ ಜಾತಕದ ಹೊಂದಾಣಿಕೆಯ ಕಾರಣವು ಕೂಡ ತುಂಬಾ ಮುಖ್ಯ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ವಾಸ್ತು ಮತ್ತು ಜಾತಕ

ವಾಸ್ತು ಶಾಸ್ತ್ರದ ಪ್ರಕಾರ ಎಲ್ಲ ದಿಕ್ಕುಗಳು ಸರಿಯಾಗಿದ್ದರು ಅವುಗಳ ಪರಿಣಾಮ ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ. ವಾಸ್ತು ತಜ್ಞರು ಸಾಮಾನ್ಯವಾಗಿ ಪೂರ್ವ ಮತ್ತು ಉತ್ತರ ದಿಕ್ಕುಗಳನ್ನು ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಅಥವಾ ಬುಧ ಗ್ರಹಗಳು ದುರ್ಬಲವಾಗಿದ್ದರೆ, ಈ ದಿಕ್ಕುಗಳ ಲಾಭ ಸಂಪೂರ್ಣವಾಗಿ ದೊರೆಯುವುದಿಲ್ಲ ಎಂದು ತಜ್ಞರ ಅಭಿಪ್ರಾಯ ಆಗಿದೆ.

Vastu vs Horoscope

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಭ್ರಮೆ

ಅನೇಕರು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳನ್ನು ಅಶುಭವೆಂದು ತಿಳಿದುಕೊಂಡಿದ್ದಾರೆ. ಆದರೆ ಜಾತಕದಲ್ಲಿ ಮಂಗಳ ಅಥವಾ ಶನಿ ಬಲವಾಗಿದ್ದರೆ ಈ ದಿಕ್ಕುಗಳು ಹೆಚ್ಚು ಲಾಭದಾಯಕವಾಗಬಹುದು. ದಕ್ಷಿಣ ಅಥವಾ ಪಶ್ಚಿಮಾಭಿಮುಖ ಮನೆಗಳಲ್ಲಿ ವಾಸಿಸುವವರು ಅಧಿಕಾರ, ಸಂಪತ್ತು ಗಳಿಸುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಇಲ್ಲಿ 'ಲಗ್ನ ಬಲ' ಮುಖ್ಯ ಪಾತ್ರವಹಿಸುತ್ತದೆ.

ಈಶಾನ್ಯ ದಿಕ್ಕಿನ ಲಾಭ

ಈಶಾನ್ಯ ದಿಕ್ಕಿನಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ತಜ್ಞರ ಪ್ರಕಾರ ಈಶಾನ್ಯ ದಿಕ್ಕು ಸಾತ್ವಿಕ ಶಕ್ತಿ ಮನೆಗೆ ಪ್ರವೇಶಿಸುವ ದ್ವಾರ ಆಗಿದೆ. ಆದ್ದರಿಂದ ಇದು ಆಧ್ಯಾತ್ಮಿಕತೆ ಮತ್ತು ಪರಿಶುದ್ಧತೆಯನ್ನು ಬಿಂಬಿಸುತ್ತದೆ.

ವಾಸ್ತು vs ಜಾತಕ: ಯಾವುದು ಮುಖ್ಯ?

ಮನೆ ಒಂದು ದೇಹದಂತಿದ್ದರೆ, ಜಾತಕವೆ ಅದರ ಮೂಲ ಜೀವಶಕ್ತಿ. ಜಾತಕ ಉತ್ತಮವಾಗಿದ್ದರೆ ವಾಸ್ತು ದೋಷಗಳ ಪರಿಣಾಮ ಕಡಿಮೆಯಾಗಬಹುದು. ಅದೇ ರೀತಿ ವಾಸ್ತು ಉತ್ತಮವಾಗಿದ್ದರೂ ಜಾತಕ ದುರ್ಬಲವಾಗಿದ್ದರೆ ಸಂಪೂರ್ಣವಾಗಿ ಸಂತೋಷ ಸಿಗದೇ ಇರಬಹುದು.

ಮನೆ ನಿರ್ಮಿಸುವಾಗ ಕೇವಲ ವಾಸ್ತು ತಜ್ಞರ ಸಲಹೆ ಅಷ್ಟೆ ಸಾಕಾಗುವುದಿಲ್ಲ, ಜ್ಯೋತಿಷಿಗಳ ಸಲಹೆಯೊಂದಿಗೆ ನಿಮ್ಮ ಜಾತಕಕ್ಕೆ ತಕ್ಕ ದಿಕ್ಕು ಮತ್ತು ವಿನ್ಯಾಸವನ್ನು ಮಾಡಿಕೊಳ್ಳವುದು ಒಳ್ಳೆಯದು. ದಶಾ, ಅಂತರ್ದಶಾ ಮತ್ತು ಲಗ್ನಕ್ಕೆ ಹೊಂದುವಂತೆ ಮನೆ ನಿರ್ಮಿಸಿದಾಗ ಮಾತ್ರ ನಿಜವಾದ ಸಂತೋಷ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+