ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು?
ಭಾರತದಲ್ಲಿ ವಾಸ್ತು ಶಾಸ್ತ್ರಕ್ಕೆ ತುಂಬಾ ಮಹತ್ವ ಇದೆ. ಮನೆ ನಿರ್ಮಾಣ ಮಾಡಬೇಕಾದಾಗ ಪ್ರತಿಯೊಬ್ಬರು ಪ್ರತಿಯೊಂದಕ್ಕೂ ಅದರದೆ ಆದ ವಿಶೇಷ ಮಹತ್ವ ಕೊಡುತ್ತಾರೆ. ಅದರಲ್ಲೂ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದು ಬಹಳ ಮುಖ್ಯ ಎಂದು ವಾಸ್ತು ತಜ್ಞರ ಅಭಿಪ್ರಾಯ ಆಗಿದೆ.
ನಮ್ಮ ಮನೆಯ ಸುತ್ತಲು ಖಾಲಿ ಜಾಗವಿದ್ದರೆ ಅದನ್ನು ನಾವು ಪಾರ್ಕಿಂಗ್ ಜಾಗವನ್ನಾಗಿ ಬಳಸಬಹುದು. ಇದರಿಂದ ಸಾಮಾನ್ಯವಾಗಿ ಯಾವುದೆ ತೊಂದರೆ ಉಂಟಾಗುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ವಾಹಗಳನ್ನು ನಿಲ್ಲಿಸುವುದಕ್ಕೆ ಕೆಲವು ನಿಯಮಗಳಿವೆ. ಪಾರ್ಕಿಂಗ್ ಸ್ಥಳವನ್ನು ಉತ್ತರ ದಿಕ್ಕಿನಲ್ಲಿ ಮಾಡುವುದು ಉತ್ತಮ ಎಂದು ವಾಸ್ತು ತಜ್ಞರ ಹೇಳುತ್ತಾರೆ. ಆದರೆ ಸ್ಥಳದ ಅಭಾವದಿಂದ ಸ್ವಂತ ಮನೆಗಳಲ್ಲಿ ಇದನ್ನು ಈ ನಿಯಮಾವಳಿಗಳನ್ನು ಪಾಲಿಸುವುದು ಸ್ವಲ್ಪ ಕಷ್ಟಕರ ಮತ್ತು ಕೆಲವರಿಗೆ ಇದನ್ನು ಪಾಲಿಸಲು ಆಗುವುದಿಲ್ಲ. ಅಪಾರ್ಟ್‌ಮೆಂಟಗಳಲ್ಲಿ ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ ಇಂತಹ ಸಮಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಕಷ್ಟ.

ವರಾಂಡಾ ಮನೆಯ ಒಂದು ಪ್ರಮುಖ ಭಾಗವಾಗಿದೆ, ಇದರಿಂದ ಗಾಳಿ ಬೆಳಕು ಸುಲಭವಾಗಿ ಪ್ರವೇಶಿಸುವಂತೆ ಇರಬೇಕು. ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ವರಾಂಡಾ ನಿರ್ಮಿಸುವುದು ತಜ್ಞರ ಪ್ರಕಾರ ಒಳ್ಳೆಯದು. ಬೆಳಿಗ್ಗೆ ಸೂರ್ಯನ ಬೆಳಕು ಮತ್ತು ಗಾಳಿ ಮನೆಯ ಒಳಗೆ ಪ್ರವೇಶಿಸಿದರೆ ಆರೋಗ್ಯಕ್ಕೆ ಮತ್ತು ಆರ್ಥಿಕ ಸಮೃದ್ದಿಗೆ ಒಳ್ಳೆಯದು ಎಂದು ಹೇಳುತ್ತಾರೆ.
ವರಾಂಡಾದ ನೆಲಮಟ್ಟ ಮನೆಗಿಂತ ಸ್ವಲ್ಪ ಕೆಳಗಡೆ ಇದ್ದರೆ ಒಳ್ಳೆಯದು. ಅದರ ಅದರ ಸ್ಲ್ಯಾಬ್ ಕೂಡ ಹೆಚ್ಚು ಎತ್ತರದಲ್ಲಿ ಇರಬಾರದು ಹಾಗೂ ಪೂರ್ವದಿಂದ ಉತ್ತರಕ್ಕೆ ಇಳಿಜಾರು ಇದ್ದರೆ ಮಂಗಳಕರ ಎಂದು ಹೇಳಲಾಗುತ್ತದೆ. ವರಾಂಡಾದಲ್ಲಿ ಸಣ್ಣ ಸಸ್ಯಗಳನ್ನು ಬೆಳೆಸಬಹುದು, ಆದರೆ ದೊಡ್ಡ ಮರಗಳನ್ನು ಬೆಳೆಸುವುದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ವಾಹನ ಪಾರ್ಕಿಂಗ್‌ಗಾಗಿ ವಾಯುವ್ಯ ದಿಕ್ಕು ತುಂಬಾ ಉತ್ತಮ. ಅದು ಸಾಧ್ಯವಾಗದಿದ್ದರೆ ಆಗ್ನೇಯ ದಿಕ್ಕನ್ನು ನಾವು ಆರಿಸಿಕೊಳ್ಳುವುದು ಉತ್ತಮ. ಆದರೆ ಈಶಾನ್ಯ ದಿಕ್ಕಿನಲ್ಲಿ ವಾಹನ ನಿಲ್ಲಿಸುವುದನ್ನು ನಾವು ನಿಲ್ಲಿಸಬೇಕು. ನೈಋತ್ಯದಲ್ಲಿ ಪಾರ್ಕಿಂಗ್ ಮಾಡಿದರೆ ವಾಹನದ ನಿರ್ವಹಣೆ ಖರ್ಚು ವೆಚ್ಚ ಹೆಚ್ಚಾಗಬಹುದು ಎಂಬ ನಂಬಿಕೆ ಇದೆ.
ಪಾರ್ಕಿಂಗ್ ಜಾಗದ ಬಾಗಿಲುಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ಬಾಗಿಲು ತೆರೆಯುವಂತೆ ಇರಬೇಕು. ವಾಹನವನ್ನು ನಿಲ್ಲಿಸುವಾಗ ಗೋಡೆಗಳಿಗೆ ಅಂಟಿಕೊಳ್ಳದಂತೆ ಸ್ವಲ್ಪ ಅಂತರ ಇರಬೇಕು. ಅಲ್ಲದೆ ಪಾರ್ಕಿಂಗ್ ಸ್ಥಳವನ್ನು ಸ್ವಚ್ಛವಾಗಿಡುವುದು ಮುಖ್ಯ. ಹಳೆಯ ವಸ್ತುಗಳು ಅಥವಾ ಕಸ ಸಂಗ್ರಹವಾಗಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.












Click it and Unblock the Notifications