ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ಕುಂಭ ರಾಶಿಯವರಿಗೆ ಈ ಯುಗಾದಿ ಸಮಯವು ಸಮವಾಗಿದೆ ಎಂದೇ ಹೇಳಬಹುದು. ಒಂಥರಾ ಜೀವನ ನಿಂತಲ್ಲೇ ನಿಂತಂಗಿರುತ್ತದೆ. ಏಳ್ಗೆಗೇನೂ ಇಲ್ಲಾ, ಇಳಿಕೇನೂ ಇಲ್ಲಾ. ಹೀಗಾಗಿ ಈ ವರ್ಷ ಅಂಥಾದ್ದೇನೂ ನಿರೀಕ್ಷೆ ಮಾಡದೇ ಇದ್ದುದರಲ್ಲಿಯೇ ಜಮ್ಮಂಗೆ ಇದ್ದರಾಯಿತು ಈ ರಾಶಿಯವರು. ಗಳಿಕೆ ಎಷ್ಟಿರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಖರ್ಚು ಇರುತ್ತದೆ. ಹೀಗಾಗಿ ಗಳಿಕೆಗೂ ಹೆದರಬಾರದು ಖರ್ಚು ಮಾಡಲು ಹೆದರಬಾರದು.
ಈ ರಾಶಿಯ ಧನಿಷ್ಠಾ ನಕ್ಷತ್ರದ ಕೊನೆಯ ಎರಡು ಚರಣದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಇದ್ದುದರಲ್ಲಿಯೇ ಸಮಾಧಾನ ಪಟ್ಟುಕೊಳ್ಳುವಂತಿರುತ್ತದೆ. ನಂತರದ 8 ತಿಂಗಳು ಹಾಗೂ ಹೀಗೂ ಜೀವನ ಸಾಗಿಸಲೇಬೇಕಲ್ಲ ಎಂದುಕೊಂಡು ಜೀವನದ ಬಂಡಿ ಸಾಗಿಸಬೇಕಾಗುತ್ತದೆ.
ಶತತಾರಾ ನಕ್ಷತ್ರದವರು ಮಾತ್ರ ವರ್ಷದ ಮೊದಲ ನಾಲ್ಕು ತಿಂಗಳು ಸುಖಕರವಾಗಿರುವ ಸಂತಸವಿರುತ್ತದೆ. ಆದರೆ ಕೊನೆಯ ಎಂಟು ತಿಂಗಳ ಮಾತ್ರ ಜೀವನವೇ ನಿಂತಂತಾಗುತ್ತದೆ. ಇನ್ನು ಪೂರ್ವಾಭಾದ್ರಪದ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಸೂಪರ್ ಎನಿಸುವಂತೆ ಜೀವನದಲ್ಲಿ ಯಶಸ್ಸು ಕಾಣಬಹುದು. [ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಹೀಗಾಗಿ ಈ ಸಮಯದಲ್ಲಿಯೇ ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಬೇಕು. ಮೇಲಾಗಿ ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡು ಕಾರ್ಯರೂಪಕ್ಕೆ ತಂದುಕೊಂಡು ಸೆಟಲ್ ಆಗಿ ಬಿಡಬೇಕು. ಯಾಕೆಂದರೆ ನಂತರದ ನಾಲ್ಕು ತಿಂಗಳು ಸ್ವಲ್ಪ ಇಳಿಕೆ ಎನಿಸಿದರೂ ಕೊನೆಯ ನಾಲ್ಕು ತಿಂಗಳು ಮತ್ತೆ ಜೀವನ ಸರಿಹಾದಿಗೆ ಬರುತ್ತದೆ. ಒಟ್ಟಿನಲ್ಲಿ ಒಂದೇ ವರ್ಷದಲ್ಲಿ ಏರಿಳಿತಗಳನ್ನು ನೋಡಿಕೊಳ್ಳುವ ಸಮಯವಿದು. [ಅತಿಯಾದ ಸಿಹಿಯೂ ಬಾಳಲ್ಲಿ ಕಹಿಯಾಗಬಲ್ಲದು]
ಆಗಸ್ಟ್ ವರೆಗೂ ಗುರುಬಲ ಸಾಕಷ್ಟಿರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಯಾಕೆಂದರೆ ಆಗಸ್ಟ್ ನಿಂದ ಗುರುಬಲ ಹೊರಟು ಹೋಗುವುದರಿಂದ ಉಳಿದ ಕೆಲವೇ ದಿನಗಳಲ್ಲಿ ಶುಭ ಕಾರ್ಯಕ್ಕೆ ಚಾಲನೆ ನೀಡಬಹುದು. ಆದರೆ ಜನವರಿಯಿಂದ ಶನಿಬಲ ಬರುವುದರಿಂದ ಆ ಸಮಯದಲ್ಲಿ ಉನ್ನತ ಮಟ್ಟದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಶೇ.70ರಷ್ಟು ಶುಭಫಲವಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications