ವಿಳಂಬಿ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರ ಆದಾಯ, ಆರೋಗ್ಯ ಹೇಗಿದೆ?
ಈ ದಿನದ ಲೇಖನದಲ್ಲಿ ವೃಶ್ಚಿಕ ರಾಶಿಯವರ ಯುಗಾದಿ ಫಲವನ್ನು ನೋಡೋಣ. ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧ ನಕ್ಷತ್ರ ಒಂದು, ಎರಡು, ಮೂರು, ನಾಲ್ಕನೇ ಪಾದ ಹಾಗೂ ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದಗಳು ಸೇರಿ ವೃಶ್ಚಿಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ.
ವಿಳಂಬಿ ನಾಮ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರಿಗೆ ಆದಾಯ 2 ಇದ್ದರೆ, ವ್ಯಯ 14 ಇದೆ. ಆರೋಗ್ಯ 3 ಹಾಗೂ ಅನಾರೋಗ್ಯ 0 ಇದೆ. ನಿಮಗೆ ಸಿಗುವ ಮನ್ನಣೆ- ಗೌರವದ ಪ್ರಮಾಣ 5 ಇದ್ದರೆ, ಅವಮಾನದ ಪ್ರಮಾಣ 6 ಇದೆ. ಇನ್ನು ಸುಖ 3, ದುಃಖ 3 ಇದೆ. ಇನ್ನು ನಾಲ್ಕು ತಿಂಗಳಂತೆ ಮೂರು ಭಾಗ ಮಾಡಿ, ಕಂದಾಯ ಫಲದ ಕಡೆ ನೋಡೋಣ.
ವಿಶಾಖ ನಕ್ಷತ್ರಕ್ಕೆ 7 0 2, ಅನೂರಾಧ ನಕ್ಷತ್ರಕ್ಕೆ 2 1 0, ಜ್ಯೇಷ್ಠಾ ನಕ್ಷತ್ರಕ್ಕೆ 5 2 3 ಇದೆ. ವಿಶಾಖ, ಅನೂರಾಧ ಹಾಗೂ ಜ್ಯೇಷ್ಠಾ ನಕ್ಷತ್ರದವರಿಗೆ ಸಂವತ್ಸರದ ಆದಿಯ ಮೊದಲ ನಾಲ್ಕು ತಿಂಗಳು ಆದಾಯದ ದೃಷ್ಟಿಯಿಂದ ಅಡ್ಡಿ ಇಲ್ಲ. ಆದರೆ, ವಿಶಾಖ ಮತ್ತು ಅನೂರಾಧ ನಕ್ಷತ್ರದರಿಗೆ ಉಳಿದ ಎಂಟು ತಿಂಗಳು ಆದಾಯ ವಿಚಾರದಲ್ಲಿ ಹೆಚ್ಚು ಆಶಾದಾಯಕ ಆಗಿಲ್ಲ. ಇದ್ದುದರಲ್ಲಿ ಜ್ಯೇಷ್ಠಾ ನಕ್ಷತ್ರದವರಿಗೆ ಸ್ವಲ್ಪ ಪರವಾಗಿಲ್ಲ.

ಸದ್ಯದ ಗೋಚಾರ ಫಲ
ಗೋಚಾರ ವಿಚಾರದಲ್ಲಿ ಗಮನಿಸಿದಾಗ ವೃಶ್ಚಿಕ ರಾಶಿಯವರಿಗೆ ಈಗ ಸಾಡೇಸಾತ್ ನಡೆಯುತ್ತಿದೆ. ಹನ್ನೆರಡನೇ ಮನೆಯಲ್ಲಿ ಗುರು ಇದ್ದಾನೆ, ಮುಂದಿನ ಅಕ್ಟೋಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ನಿಮ್ಮ ಜನ್ಮ ರಾಶಿಗೆ ಪ್ರವೇಶ ಆಗುತ್ತದೆ. ಇನ್ನು ಶನಿ ಎರಡನೇ ಮನೆಯಲ್ಲಿದ್ದು, ರಾಹು ಮೂರನೇ ಸ್ಥಾನ, ಕೇತು ಒಂಬತ್ತನೇ ಸ್ಥಾನದಲ್ಲಿ ಸ್ಥಿತವಾಗಿದೆ.

ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ
ಹನ್ನೆರಡನೇ ಮನೆಯ ಗುರು, ಎರಡನೇ ಸ್ಥಾನದಲ್ಲಿರುವ ಶನಿ ಎರಡೂ ಗ್ರಹವೂ ಖರ್ಚನ್ನೇ ಸೂಚಿಸುತ್ತಿವೆ. ಮುಖ್ಯವಾಗಿ ಕುಟುಂಬದವರ ಆರೋಗ್ಯ ಅಥವಾ ನಿಮ್ಮದೇ ಆರೋಗ್ಯದಲ್ಲಿ ಸಮಸ್ಯೆಯಾಗಿ ಖರ್ಚು- ವೆಚ್ಚ ಹೆಚ್ಚಾಗುತ್ತದೆ. ಮಾಡಿಟ್ಟುಕೊಂಡಿದ್ದ ಲೆಕ್ಕಾಚಾರವೆಲ್ಲ ಏರುಪೇರಾಗಿ ಖರ್ಚು ಹೆಚ್ಚಾಗಿ, ಸಾಲ ಮಾಡುವ ಸ್ಥಿತಿ ಏರ್ಪಡುತ್ತದೆ.

ಮಧುಮೇಹ, ರಕ್ತದೊತ್ತಡ ಇರುವವರು ಎಚ್ಚರ
ಕೋರ್ಟ್-ಕಚೇರಿ ವ್ಯಾಜ್ಯಗಳಿಗೆ ಹೊಸದಾಗಿ ಹಾಕಬೇಡಿ. ಯಾರದೋ ಮಾತು ನಂಬಿ ವಿದೇಶ ಪ್ರಯಾಣದ ಸಲುವಾಗಿ ಖರ್ಚು ಮಾಡದಿರುವುದು ಒಳಿತು. ಮದುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ಔಷಧ-ಮಾತ್ರೆ, ವೈದ್ಯರ ನಿಯಮಿತ ಭೇಟಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಮದ್ಯ- ಸಿಗರೇಟಿನ ಚಟ ವಿಪರೀತ ಇರುವವರು ಆರೋಗ್ಯದ ಬಗ್ಗೆ ಗಮನ ಕೊಡಿ.

ವಿವೇಚನೆ ಬಳಸಿ ಖರ್ಚು ಮಾಡಿ
ಒಳ್ಳೆ ದಶಾ-ಭುಕ್ತಿ ನಡೆಯುತ್ತಿರುವವರಿದ್ದರೆ ಶುಭ ಕಾರ್ಯಗಳಿಗೆ, ಅಭರಣ-ಮನೆ ಖರೀದಿಗೆ ಹಣ ಸಾಲ ಮಾಡಬೇಕಾಗಿ ಬರುತ್ತದೆ. ಈ ಸಂವತ್ಸರದ ಒಟ್ಟಾರೆ ಫಲ ಏನೆಂದರೆ, ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಿನ ಪ್ರಮಾಣದಲ್ಲಿ ತೋರುತ್ತಿದೆ. ಆದ್ದರಿಂದ ಸ್ವಲ್ಪ ವಿವೇಚನೆ ಬಳಸಿ, ಖರ್ಚು ಮಾಡಿ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications