Get Updates
Get notified of breaking news, exclusive insights, and must-see stories!

ಮಕರ ರಾಶಿ ಯುಗಾದಿ ವರ್ಷ ಭವಿಷ್ಯ; ಮೇಲಧಿಕಾರಿಗಳ ಮೆಚ್ಚುಗೆ, ಗ್ರಾಹಕರ ಬೆಂಬಲ

ಮಕರ ರಾಶಿಯವರು ಸದಾ ಕರ್ತವ್ಯತತ್ಪರರು. ಇವರಿಗೆ ಒಂದು ಕೆಲಸ ಹೇಳಿದ ಮೇಲೆ ಅಥವಾ ಅವರಾಗಿಯೇ ಒಂದು ಕೆಲಸ ಒಪ್ಪಿಕೊಂಡ ಮೇಲೆ ಮುಗಿಯಿತು. ಅದನ್ನು ಮತ್ತೆ ನೆನಪಿಸಬೇಕು ಎನ್ನುವ ಪ್ರಮೇಯವೇ ಬರುವುದಿಲ್ಲ. ಅಷ್ಟರಮಟ್ಟಿಗೆ ಇರುತ್ತೆ ಅವರ ಕಾರ್ಯಶ್ರದ್ಧೆ. ಉತ್ತರಾಷಾಢ (2, 3, 4ನೇ ಪಾದ), ಶ್ರವಣ (4 ಪಾದ) ಮತ್ತು ಧನಿಷ್ಠ (1, 2ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದವರು ಮಕರ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 8,.ಇವರಿಗೆ ನೀಲಿ ಶುಭ ಬಣ್ಣ, ಪಶ್ಚಿಮ ಶುಭ ದಿಕ್ಕು. ಶನಿದೇವರ ಆರಾಧನೆ ಮಕರ ರಾಶಿಯವರಿಗೆ ಶ್ರೇಯಸ್ಕರ.

ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಮಕರ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.

ಮಕರ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)

ಆದಾಯ: 12
ವ್ಯಯ: 12
ರಾಜಮರ್ಯಾದೆ: 5
ಅವಮಾನ: 3

ಪರಾಭವ ನಾಮ ಸಂವತ್ಸರವು ಮಕರ ರಾಶಿಯವರಿಗೆ ಸಮತೋಲನ ಮತ್ತು ಪರಿಶ್ರಮದ ಫಲವನ್ನು ನೀಡುವ ವರ್ಷವಾಗಿರುತ್ತದೆ. ಆದಾಯ ಮತ್ತು ಖರ್ಚು ಸಮಾನವಾಗಿರುವುದರಿಂದ ಹಣಕಾಸಿನಲ್ಲಿ ಸಮತೋಲನ ಕಾಪಾಡುವುದು ಮುಖ್ಯ. ಅನಾವಶ್ಯಕ ವೆಚ್ಚಗಳನ್ನು ತಪ್ಪಿಸಿ ಉಳಿತಾಯದ ಅಭ್ಯಾಸ ಬೆಳೆಸಿದರೆ ವರ್ಷಾಂತ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಆಸ್ತಿ, ಭೂಮಿ ಅಥವಾ ದೀರ್ಘಕಾಲಿಕ ಹೂಡಿಕೆಗಳಲ್ಲಿ ನಿಧಾನವಾದರೂ ಲಾಭದ ಸೂಚನೆ ಇದೆ.

Ugadi 2026

ಉದ್ಯೋಗ ಕ್ಷೇತ್ರದಲ್ಲಿ ಸ್ಥಿರತೆ ಕಾಣಬಹುದು. ನಿಮ್ಮ ಶಿಸ್ತು, ಜವಾಬ್ದಾರಿ ಮತ್ತು ಸಮಯಪಾಲನೆ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪದೋನ್ನತಿ ತಕ್ಷಣ ಸಿಗದಿದ್ದರೂ ನಿಮ್ಮ ಪ್ರಗತಿಗೆ ಬುನಾದಿ ಬಲವಾಗುತ್ತದೆ. ಸ್ವಂತ ಉದ್ಯಮದಲ್ಲಿರುವವರಿಗೆ ಹಳೆಯ ಗ್ರಾಹಕರಿಂದ ಉತ್ತಮ ಬೆಂಬಲ ಸಿಗುತ್ತದೆ. ಹೊಸ ಒಪ್ಪಂದಗಳನ್ನು ಜಾಗ್ರತೆಯಿಂದ ಪರಿಶೀಲಿಸಿ ಕೈಗೊಳ್ಳುವುದು ಒಳಿತು.

ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಹೊಂದಾಣಿಕೆ ಇರುತ್ತದೆ. ದಾಂಪತ್ಯದಲ್ಲಿ ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧನೆ ಸಂತೋಷ ತರುತ್ತದೆ. ಹಿರಿಯರ ಸಲಹೆ ಅನುಸರಿಸಿದರೆ ಮಹತ್ವದ ನಿರ್ಧಾರಗಳಲ್ಲಿ ಯಶಸ್ಸು ಸಿಗುತ್ತದೆ.

ಆರೋಗ್ಯದ ದೃಷ್ಟಿಯಿಂದ ಸಂಧಿವಾತ, ಬೆನ್ನು ನೋವು ಅಥವಾ ದಣಿವು ಸಮಸ್ಯೆಗಳು ಕಾಣಬಹುದು. ನಿಯಮಿತ ವ್ಯಾಯಾಮ, ಯೋಗ ಮತ್ತು ಸಮತೋಲನ ಆಹಾರ ಅಗತ್ಯ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಸಹಕಾರಿ.

ಧಾರ್ಮಿಕ ಚಟುವಟಿಕೆಗಳು, ಶನಿವಾರ ಶನಿ ಆರಾಧನೆ ಅಥವಾ ದಾನ ಧರ್ಮಗಳು ಶುಭಫಲ ಹೆಚ್ಚಿಸುತ್ತವೆ. ಶ್ರಮ ಮತ್ತು ತಾಳ್ಮೆಯಿಂದ ಮುಂದುವರಿದರೆ ವರ್ಷಾಂತ್ಯದಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ಒಟ್ಟಾರೆ ಈ ವರ್ಷ ಮಕರ ರಾಶಿಯವರಿಗೆ ನಿಧಾನವಾದರೂ ಸ್ಥಿರ ಪ್ರಗತಿ ನೀಡುವ ಸಂವತ್ಸರವಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+