ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ; ಆದಾಯ ಹೆಚ್ಚಳ, ವ್ಯವಹಾರದಲ್ಲಿ ಲಾಭ
ಕುಂಭ ರಾಶಿಯವರು ತಾವಾಯಿತು, ತಮ್ಮ ಪಾಡಾಯಿತು ಎಂದು ಇರುವ ಪೈಕಿಯವರಲ್ಲ. ಮೇಲ್ನೋಟಕ್ಕೆ ತಣ್ಣಗಿದ್ದರೂ ಅವರ ಆಂತರ್ಯದಲ್ಲಿ ಭಾವನೆಗಳ ಪ್ರವಾಹವೇ ಭೋರ್ಗರೆಯುತ್ತಿರುತ್ತದೆ. ಸದಾ ಬದಲಾವಣೆಗೆ ತುಡಿಯುತ್ತಿರುತ್ತಾರೆ. ಧನಿಷ್ಠ (3, 4ನೇ ಪಾದ), ಶತಭಿಷ (4 ಪಾದ) ಮತ್ತು ಪೂರ್ವಾಭಾದ್ರ (1, 2, 3ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದವರು ಕುಂಭ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 7,.ಇವರಿಗೆ ನೀಲಿ ಶುಭ ಬಣ್ಣ, ಉತ್ತರ ಶುಭ ದಿಕ್ಕು. ಮಹಾಶಿವನ ಆರಾಧನೆ ಕುಂಭ ರಾಶಿಯವರಿಗೆ ಶ್ರೇಯಸ್ಕರ.
ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಕುಂಭ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.
ಕುಂಭ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)
ಆದಾಯ: 13
ವ್ಯಯ: 11
ರಾಜಮರ್ಯಾದೆ: 7
ಅವಮಾನ: 2
ಪರಾಭವ ನಾಮ ಸಂವತ್ಸರವು ಕುಂಭ ರಾಶಿಯವರಿಗೆ ಪ್ರಗತಿ, ಹೊಸ ಆಲೋಚನೆಗಳು ಮತ್ತು ಸಾಧನೆಯ ವರ್ಷವಾಗಿರುತ್ತದೆ. ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ಹೊಸ ವ್ಯವಹಾರ, ತಂತ್ರಜ್ಞಾನ ಅಥವಾ ಸೃಜನಾತ್ಮಕ ಕಾರ್ಯಗಳಿಂದ ಲಾಭ ಸಾಧ್ಯ. ಖರ್ಚು ನಿಯಂತ್ರಣದಲ್ಲಿರುವುದರಿಂದ ಉಳಿತಾಯ ಹೆಚ್ಚಾಗುತ್ತದೆ. ದೀರ್ಘಕಾಲಿಕ ಹೂಡಿಕೆಗಳು ಉತ್ತಮ ಫಲ ನೀಡುವ ಸೂಚನೆ ಇದೆ.

ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ ಅಥವಾ ಪ್ರಮುಖ ಜವಾಬ್ದಾರಿಗಳು ದೊರೆಯಬಹುದು. ನಿಮ್ಮ ಹೊಸ ಆಲೋಚನೆಗಳು ಮತ್ತು ವಿಭಿನ್ನ ದೃಷ್ಟಿಕೋನ ಮೇಲಧಿಕಾರಿಗಳ ಗಮನ ಸೆಳೆಯುತ್ತವೆ. ವಿದೇಶ ಸಂಬಂಧಿತ ಕೆಲಸಗಳು ಅಥವಾ ಆನ್‌ಲೈನ್ ವ್ಯವಹಾರಗಳಲ್ಲಿ ಯಶಸ್ಸು ಸಾಧ್ಯ. ವ್ಯಾಪಾರಸ್ಥರಿಗೆ ಹೊಸ ಪಾಲುದಾರಿಕೆ ಮತ್ತು ವಿಸ್ತರಣೆ ಅವಕಾಶಗಳು ದೊರೆಯುತ್ತವೆ.
ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಹೊಂದಾಣಿಕೆ ಹೆಚ್ಚಾಗುತ್ತದೆ. ಮನೆದಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಫಲ ಹಾಗೂ ಉನ್ನತ ಶಿಕ್ಷಣದ ಅವಕಾಶ ಸಿಗುತ್ತದೆ.
ಆರೋಗ್ಯ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಆದರೂ ನಿದ್ರಾಭಂಗ ಅಥವಾ ಮಾನಸಿಕ ಒತ್ತಡ ತಪ್ಪಿಸಲು ಯೋಗ, ಪ್ರಾಣಾಯಾಮ ಉಪಕಾರಿ.
ಧಾರ್ಮಿಕ ಯಾತ್ರೆ, ಗುರು ಪೂಜೆ ಅಥವಾ ದಾನ ಧರ್ಮಗಳು ಹೆಚ್ಚು ಶುಭಫಲ ನೀಡುತ್ತವೆ. ಶತ್ರುಗಳ ಮೇಲೆ ಜಯ ಸಾಧಿಸಿ ನಿಮ್ಮ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಬಹುದು. ಒಟ್ಟಾರೆ ಈ ವರ್ಷ ಕುಂಭ ರಾಶಿಯವರಿಗೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಸಮಗ್ರ ಯಶಸ್ಸನ್ನು ತರುವ ಶ್ರೇಷ್ಠ ಸಂವತ್ಸರವಾಗಿರುತ್ತದೆ.
-
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications