Get Updates
Get notified of breaking news, exclusive insights, and must-see stories!

ಧನುಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ; ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ

ಧನುಸ್ಸು ರಾಶಿಯವರಿಗೆ ಉಪದೇಶ ಬಹಳ ಇಷ್ಟ. ಒಳ್ಳೆಯ ಮೇಷ್ಟ್ರುಗಳು ಆಗಬಲ್ಲವರು ಇವರು. ಶಿಕ್ಷಣ ಸಂಸ್ಥೆಗಳಲ್ಲಿ ಇವರಿಗೆ ಏಳ್ಗೆ ಹೆಚ್ಚು. ಮೂಲಾ (4 ಪಾದ), ಪೂರ್ವಾಷಾಢ (4 ಪಾದ) ಮತ್ತು ಉತ್ತರಾಷಾಢ (1ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದವರು ಧನುಸ್ಸು ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 3,.ಇವರಿಗೆ ಹಳದಿ ಶುಭ ಬಣ್ಣ, ಈಶಾನ್ಯ ಶುಭ ದಿಕ್ಕು. ದತ್ತಾತ್ರೇಯನ ಆರಾಧನೆ ಧನುಸ್ಸು ರಾಶಿಯವರಿಗೆ ಶ್ರೇಯಸ್ಕರ.

ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಧನು ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.

ಧನು ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)

ಆದಾಯ: 14
ವ್ಯಯ: 10
ರಾಜಮರ್ಯಾದೆ: 6
ಅವಮಾನ: 2

ಪರಾಭವ ನಾಮ ಸಂವತ್ಸರವು ಧನು ರಾಶಿಯವರಿಗೆ ಪ್ರಗತಿ, ಧೈರ್ಯ ಮತ್ತು ವಿಸ್ತರಣೆಯ ಸಂಕೇತವಾಗಿದೆ. ಆದಾಯದಲ್ಲಿ ಸ್ಪಷ್ಟ ಏರಿಕೆ ಕಂಡುಬರುತ್ತದೆ. ಹಳೆಯ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಹೊಸ ಯೋಜನೆಗಳು ಉತ್ತಮ ಲಾಭ ತರಬಹುದು. ಖರ್ಚು ನಿಯಂತ್ರಣದಲ್ಲಿ ಇರುವುದು ಉಳಿತಾಯ ಹೆಚ್ಚಿಸಲು ಸಹಾಯಕ. ಹೂಡಿಕೆಗಳಲ್ಲಿ ವಿಶೇಷವಾಗಿ ಭೂಮಿ, ಶಿಕ್ಷಣ ಅಥವಾ ದೀರ್ಘಕಾಲಿಕ ಯೋಜನೆಗಳಲ್ಲಿ ಲಾಭ ಸಾಧ್ಯ.

Ugadi 2026

ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಎದುರಾಗುತ್ತವೆ. ಪದೋನ್ನತಿ, ವೇತನ ಹೆಚ್ಚಳ ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ವಿದೇಶ ಸಂಬಂಧಿತ ಉದ್ಯೋಗ ಅಥವಾ ವ್ಯವಹಾರಗಳಲ್ಲಿ ಯಶಸ್ಸು ಸಾಧ್ಯ. ಸ್ವಂತ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದರೆ ಈ ವರ್ಷ ಅನುಕೂಲಕರ. ನಿಮ್ಮ ನೈತಿಕತೆ ಮತ್ತು ಸ್ಪಷ್ಟ ನಿಲುವು ಗೌರವ ತರುತ್ತದೆ.

ಕುಟುಂಬ ಜೀವನದಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಮನೆದಲ್ಲಿ ಶುಭಕಾರ್ಯಗಳು ನಡೆಯಬಹುದು. ದಾಂಪತ್ಯದಲ್ಲಿ ಹೊಂದಾಣಿಕೆ ಹೆಚ್ಚುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹಾಗೂ ಉನ್ನತ ಶಿಕ್ಷಣದ ಅವಕಾಶ ಸಿಗುತ್ತದೆ.

ಆರೋಗ್ಯದ ದೃಷ್ಟಿಯಿಂದ ಶಕ್ತಿ ಮತ್ತು ಉತ್ಸಾಹ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಯೋಗದಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಮಾನಸಿಕವಾಗಿ ಸಹ ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

ಧಾರ್ಮಿಕ ಚಟುವಟಿಕೆಗಳು, ಗುರು ಪೂಜೆ ಅಥವಾ ದಾನ ಧರ್ಮಗಳು ಹೆಚ್ಚು ಶುಭಫಲ ನೀಡುತ್ತವೆ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮ ಜೀವನದ ದಿಕ್ಕು ಸ್ಪಷ್ಟಗೊಳಿಸುತ್ತವೆ. ಒಟ್ಟಾರೆ ಈ ವರ್ಷ ಧನು ರಾಶಿಯವರಿಗೆ ಸಾಧನೆ, ಆರ್ಥಿಕ ಸ್ಥಿರತೆ ಮತ್ತು ಗೌರವವನ್ನು ನೀಡುವ ಅತ್ಯಂತ ಪ್ರಗತಿದಾಯಕ ಸಂವತ್ಸರವಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+