Ugadi Horoscope 2025: ಯುಗಾದಿ ಭವಿಷ್ಯ 2025: ವಿಶ್ವಾವಸು ಸಂವತ್ಸರದಲ್ಲಿ ಅದೃಷ್ಟ ರಾಶಿ- ಸಾಕಷ್ಟು ಶುಭ ಫಲಗಳು

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷ ಅಂದರೆ ಯುಗಾದಿ. ಯುಗಾದಿ ಹಬ್ಬ ಆಚರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ವಿಶ್ವವಸು ನಾಮ ಸಂವತ್ಸರದಲ್ಲಿ ಗ್ರಹಗತಿಗಳು ಬದಲಾಗುವುದರಿಂದ ದ್ವಾದಶಿ ರಾಶಿಯವರ ಭವಿಷ್ಯ ಕೂಡ ಬದಲಾಗಲಿದೆ. ಹಾಗಾದರೆ ಈ ಯುಗಾದಿ ಯಾರಿಗೆ ಸಂತೋಷ ನೀಡಲಿದೆ ಎಂದು ತಿಳಿಯೋಣ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಯುಗಾದಿಯ ನಂತರ ತುಂಬಾ ಒಳ್ಳೆಯ ದಿನಗಳು ಇವೆ. ವೃಷಭ ರಾಶಿಯವರಿಗೆ ಶನಿ ಗ್ರಹ ಮೀನ ರಾಶಿಗೆ ಸಂಚಾರ ಮಾಡುವುದರಿಂದಲೂ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ವೃಷಭ ರಾಶಿ ರೋಹಿಣಿ, ಕೃತಿಕ, ಮೃಗಶಿರ ನಕ್ಷತ್ರಕ್ಕೆ ಒಳಪಡುತ್ತದೆ. ವೃಷಭ ರಾಶಿಯವರಿಗೆ ಗುರು ಬದಲಾವಣೆಯಿಂದ ಗುರು ಬಲ ಬರುತ್ತದೆ.

Ugadi 2025 predictions lucky zodiac signs vishwavasu nama samvatsara kannada

ಇನ್ನೂ ವೃಷಭ ರಾಶಿಯ ಭಾಗ್ಯ ಸ್ಥಾನವಾದ 11ನೇ ಮನೆಯಲ್ಲಿ ಶನಿ ಬದಲಾವಣೆಯಿಂದ ಶನಿ ಬಲವೂ ಇದೆ. ನೀವು ಯಾರಿಗೇ ಹಣ ನೀಡಿದ್ದರೂ ಮನೆಗೆ ಹಣ ಬರುತ್ತದೆ. ಕೋರ್ಟ್ ಕಚೇರಿ ವಿಚಾರದಲ್ಲಿ ಜಯ ಸಿಗಲಿದೆ. ಸಂಪತ್ತು ಒಲಿದು ಬರಲಿದೆ. ತುಂಬಾ ವರ್ಷಗಳಿಂದ ಕಂಕಣ ಭಾಗ್ಯ ಕೂಡಿ ಬಾರದ ಅವಿವಾಹಿತರಿಗೆ ವಿವಾಹದ ಶುಭ ಕಾರ್ಯಗಳು ನಡೆಯುತ್ತವೆ. ಒಟ್ಟಾರೆಯಾಗಿ ತುಂಬಾ ಶುಭ ದಿನಗಳನ್ನು ಯುಗಾದಿ ನಂತರ ವೃಷಭ ರಾಶಿಯವರು ನೋಡಬಹುದು. ಇನ್ನಷ್ಟು ಶುಭ ಫಲಗಳು ಸಿಗಲೆಂದು ಗಣಪತಿಯ ಆರಾಧನೆ ಮಾಡಿ.

Take a Poll

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಯುಗಾದಿಯ ನಂತರದ ದಿನಗಳು ತುಂಬಾ ಅದ್ಭುತವಾಗಿದೆ. ಗುರು ಬಲದಿಂದ ತೊಂದರೆಗಳು ಕಡಿಮೆ ಇರುತ್ತವೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಅಮದುಕೊಂಡ ಕಾರ್ಯಗಳು ನೆರವೇರಲಿದೆ. ಆಸ್ತಿ, ಅಂತಸ್ತು, ಭೂಮಿ ಖರೀದಿಯಲ್ಲಿ ಸಮಸ್ಯೆಗಳು ಆಗಲಿವೆ. ಮೇ ನಂತರ ಎಲ್ಲಾ ಹಾದಿಗಳು ಸುಗಮವಾಗಲಿದೆ.

Ugadi 2025 predictions lucky zodiac signs vishwavasu nama samvatsara kannada

ತುಲಾ ರಾಶಿ

ತುಲಾ ರಾಶಿಯವರಿಗೆ ಮೇವರೆಗೆ ಸಹಜ ಸ್ಥಿತಿ ಇರುತ್ತದೆ. ಮೇ ನಂತರ ಮದುವೆ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಮೇ ನಂತರ ಸ್ವಾತಿ ನಕ್ಷತ್ರದವರು ವಿದೇಶದಲ್ಲಿ ಕೆಲಸ ಮಾಡುವರು. ಮೇ ವರೆಗೆ ಗುರು ಬಲ ಇಲ್ಲ. ಹೀಗಾಗಿ ಹೊಸ ಕೆಲಸ ಶುರು ಮಾಡಬೇಡಿ. ಮೇ ನಂತರ ನಿಮಗೆ ಶುಭ ದಿನಗಳು ಆರಂಭವಾಗುತ್ತವೆ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಹೆಸರು, ಪಾತ್ರ ಸಿಗಲಿದೆ. ಲಾಭವನ್ನೂ ನಿರೀಕ್ಷೆ ಮಾಡಬಹುದು.

Ugadi 2025 predictions lucky zodiac signs vishwavasu nama samvatsara kannada

ಧನು ರಾಶಿ

ಧನು ರಾಶಿಯವರಿಗೆ ತುಂಬಾ ಅದ್ಭುತ ದಿನಗಳು ಇವೆ. ಮೂಲಾ ನಕ್ಷತ್ರದಲ್ಲಿ ಜನಿಸಿದವರಿಗೆ ಮದುವೆ ಸಮಸ್ಯೆಗಳು ಎದುರಾಗಿದ್ದರೆ, ಈ ಸಮಸ್ಯೆಗಳು ದೂರವಾಗುತ್ತವೆ. ಮೇ ನಂತರ ವಿವಾಹ ಶುಭ ಕಾರ್ಯಗಳು ನಡೆಯುತ್ತವೆ. ಧನು ರಾಶಿಯ ಉತ್ತರಾಷಾಡ ನಕ್ಷತ್ರದಲ್ಲಿ ಜನಿಸಿದವರು ವಾಹನ ವಿಚಾರದಲ್ಲಿ ಜಾಗರೂಕರಾಗಿರಿ. ಹೊಸದಾಗಿ ಬಿಸಿನೆಸ್ ಮಾಡಬೇಡಿ. ಕೆಲಸದಲ್ಲಿ ಒತ್ತಡ ಆಗಿ ಹೂಡಿಕೆ ಮಾಡಲು ಮನಸ್ಸು ಮಾಡಬೇಡಿ. ಇರೋ ಕೆಲಸವನ್ನು ನಡೆಸಿಕೊಂಡು ಹೋಗಿ.

Ugadi 2025 predictions lucky zodiac signs vishwavasu nama samvatsara kannada

ಮಕರ ರಾಶಿ

ಮಕರ ರಾಶಿಯವರಿಗೆ ಸಂಪೂರ್ಣವಾಗಿ ಸಾಡೇಸಾತ್ ಮುಗಿದು ಹೋಗುತ್ತದೆ. ಹಿಂದೆ ಅನುಭವಿಸಿದ ತೊಂದರೆಗಳಿಗೆ ಮೂರು ಪಟ್ಟು ಒಳ್ಳೆಯ ಫಲಗಳು ಸಿಗುತ್ತವೆ. ಬಿಸಿನೆಸ್ ಲಾಸ್ ಮಾಡಿಕೊಂಡವರಿಗೆ ಹಣ ಸಿಗುತ್ತದೆ. ಬೇರೆಯವರಿಗೆ ಒಳ್ಳೆಯದು ಮಾಡಿ ನಿಮಗೆ ಮೋಸ ಆಗಿದ್ದರೆ ಈಗ ಅದರ ದುಪ್ಪಟ್ಟು ಫಲ ಸಿಗಲಿದೆ. ಇದೇ ಯುಗಾದಿಯಿಂದ ನಿಮಗೆ ಉತ್ತಮ ದಿನಗಳು ಶುರುವಾಗಲಿವೆ. ಮಕರ ರಾಶಿಯವರಿಗೆ ಗುರು ಬಲ ಕೂಡ ಇದೆ. ಹೀಗಾಗಿ ತುಂಬಾ ದೊಡ್ಡ ತೊಂದರೆಗಳು ಇಲ್ಲ. ಸೂರ್ಯ ನಮಸ್ಕಾರ ಮಾಡಿದರೆ ತುಂಬಾ ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+