Tripushkara Yoga 18 June Horoscope: ಇಂದು ತ್ರಿಪುಷ್ಕರ ಯೋಗ: ಧನು ಸೇರಿದಂತೆ ಈ ರಾಶಿಯವರಿಗೆ ಮೂರು ಪಟ್ಟು ಧನಲಾಭ
ನಾಳೆ ಜೂನ್ 18 ರಂದು ತ್ರಿಪುಷ್ಕರ ಯೋಗದ ಮಂಗಳಕರ ಸಂಯೋಜನೆಯು ಧನು ರಾಶಿ ಸೇರಿದಂತೆ ಈ 5 ರಾಶಿಯವರಿಗೆ ಮೂರು ಪಟ್ಟು ಲಾಭವನ್ನು ನೀಡುತ್ತದೆ.
ಜೂನ್ 18 ಮಂಗಳವಾರ ಚಂದ್ರನು ತುಲಾ ರಾಶಿಗೆ ಸಂಚಾರ ಮಾಡಲಿದೆ. ಮಿಥುನ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಬುಧದ ಸಂಯೋಗ ರೂಪುಗೊಳ್ಳುತ್ತದೆ. ಅಲ್ಲದೆ ಇಂದು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಾಗಿದ್ದು ಈ ದಿನಾಂಕದಂದು ನಿರ್ಜಲ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ.
ನಿರ್ಜಲ ಏಕಾದಶಿ ವ್ರತದ ದಿನದಂದು ತ್ರಿಪುಷ್ಕರ ಯೋಗ, ತ್ರಿಗ್ರಹ ಯೋಗ, ಶಿವಯೋಗ, ಸಿದ್ಧಯೋಗ, ಸ್ವಾತಿ ನಕ್ಷತ್ರಗಳ ಶುಭ ಸಂಯೋಗ ನಡೆಯುತ್ತದೆ. ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿರ್ಜಲ ಏಕಾದಶಿ ಉಪವಾಸದ ದಿನದಂದು 5 ರಾಶಿಗಳು ಶುಭ ಯೋಗದಿಂದ ಪ್ರಯೋಜನ ಪಡೆಯಲಿವೆ. ಈ ರಾಶಿಯವರ ಜೀವನದಲ್ಲಿ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷ ಹೆಚ್ಚಾಗುತ್ತದೆ.
ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನ ಬಲಗೊಳ್ಳುತ್ತದೆ. ಶತ್ರುಗಳ ತೊಂದರೆಗಳಿಂದ ಪರಿಹಾರ ಸಿಗಲಿದೆ. ಹನುಮಂತನ ಆಶೀರ್ವಾದ ಈ 5 ರಾಶಿಗಳ ಮೇಲೆ ಇರುತ್ತದೆ. ಹಾಗಾದರೆ ಇಂದು ಅಂದರೆ ಜೂನ್ 18 ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ತಿಳಿಯೋಣ.

*ಜೂನ್ 18 ಮಿಥುನ ರಾಶಿಯವರಿಗೆ ಹೇಗಿರುತ್ತದೆ?
ಮಿಥುನ ರಾಶಿಯವರಿಗೆ ಜೂನ್ 18 ಹೊಸ ಅವಕಾಶಗಳನ್ನು ತರಲಿದೆ. ಮಿಥುನ ರಾಶಿಯ ಜನರು ಸಂಪತ್ತು, ಆಸ್ತಿ ಮತ್ತು ವಾಹನ ಖರೀದಿ ಮಾಡುವ ಸಾಧ್ಯತೆಯಿದೆ. ಅವರ ಸಂವಹನ ಕೌಶಲ್ಯ ಉತ್ತಮವಾಗಿರಲಿದೆ. ನೀವು ಮೊದಲೇ ಹೂಡಿಕೆ ಮಾಡಿದ್ದರೆ ಅದರಿಂದ ಲಾಟರಿ ಹೊಡೆಯಲಿದೆ. ನೀವು ಹಣದ ಸಂಬಂಧಿತ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ ಇದಕ್ಕೆ ಪರಿಹಾರ ಪಡೆಯುತ್ತೀರಿ.
ಉದ್ಯೋಗಸ್ಥರು ಇಂದು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ನಿಮ್ಮ ಕುಟುಂಬದ ಸದಸ್ಯರ ಸಹಾಯದಿಂದ ನಿಮ್ಮ ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಪ್ರೀತಿಯ ಜೀವನವನ್ನು ಪ್ರಾರಂಭಿಸಬಹುದು.
ಮಿಥುನ ರಾಶಿಯವರಿಗೆ ಮಂಗಳವಾರದ ಪರಿಹಾರ: ತೊಂದರೆಗಳಿಂದ ಮುಕ್ತಿ ಪಡೆಯಲು 11 ಆಲದ ಎಲೆಗಳನ್ನು ಶುಚಿಗೊಳಿಸಿ ಶ್ರೀರಾಮನ ಹೆಸರನ್ನು ಶ್ರೀಗಂಧದಿಂದ ಬರೆದು ಹನುಮಂತನಿಗೆ ಅರ್ಪಿಸಿ.

*ಕನ್ಯಾ ರಾಶಿಯವರಿಗೆ ಜೂನ್ 18 ಹೇಗಿರುತ್ತದೆ?
ಕನ್ಯಾ ರಾಶಿಯವರಿಗೆ ಈ ದಿನ ಮಂಗಳಕರವಾಗಿರುತ್ತದೆ. ಇಂದು ಕನ್ಯಾ ರಾಶಿಯವರಿಗೆ ಸೌಕರ್ಯಗಳು ಹೆಚ್ಚಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗಬಹುದು.
ಆಸ್ತಿ ಸಂಬಂಧಿತ ವಿವಾದಗಳು ನಡೆಯುತ್ತಿದ್ದರೆ ಅದು ಇಂದು ಕೊನೆಗೊಳ್ಳುತ್ತದೆ. ಇಂದು ಅಧಿಕಾರಿಗಳು ಈ ರಾಶಿಯ ಉದ್ಯೋಗಿಗಳ ಕೆಲಸದಿಂದ ಬಹಳ ಸಂತೋಷಪಡುತ್ತಾರೆ. ಹೊಸ ಕೆಲಸದ ಹುಡುಕಾಟವೂ ಪೂರ್ಣಗೊಂಡು ನೀವಂದುಕೊಂಡ ಕೆಲಸ ನಿಮಗೆ ಸಿಗಲಿದೆ.
ವ್ಯಾಪಾರ ಮಾಡುವವರು ಇಂದು ಲಾಭವನ್ನು ಪಡೆಯುತ್ತಾರೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಲು ಸಹ ಅವಕಾಶವನ್ನು ಪಡೆಯುತ್ತಾರೆ. ಇಂದು ವಿದ್ಯಾರ್ಥಿಗಳಿಗೆ ಶುಭ ದಿನ. ಶಿಕ್ಷಕರ ಸಹಾಯದಿಂದ ವಿದೇಶಕ್ಕೆ ಹೋಗುವ ಅವಕಾಶ ಪಡೆಯುತ್ತಾರೆ. ನಿಮ್ಮ ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಪೂಜೆಗಳಲ್ಲಿ ತೊಡಗಿದ್ದು ಮಾನಸಿಕ ನೆಮ್ಮದಿಯನ್ನು ತರುತ್ತದೆ.
ಕನ್ಯಾ ರಾಶಿಯವರಿಗೆ ಮಂಗಳವಾರದ ಪರಿಹಾರ: ಆರ್ಥಿಕ ಪ್ರಗತಿಗಾಗಿ ಐದು ಮಂಗಳವಾರಗಳ ಕಾಲ ದೇವಸ್ಥಾನದಲ್ಲಿ ಪೂಜೆ ಮಾಡಿ. ಹಸುವಿಗೆ ಆಹಾರ ನೀಡಿ.

*ವೃಶ್ಚಿಕ ರಾಶಿಯವರಿಗೆ ಜೂನ್ 18 ಹೇಗಿರಲಿದೆ?
ವೃಶ್ಚಿಕ ರಾಶಿಯವರಿಗೆ ಈ ದಿನ ವಿಶೇಷವಾಗಿದೆ. ವೃಶ್ಚಿಕ ರಾಶಿಯವರು ಇಂದು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಸಿಕ್ಕಿಹಾಕಿಕೊಂಡ ಹಣವನ್ನು ಪಡೆಯುತ್ತಾರೆ.
ಇಂದು ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭ ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. ಉದ್ಯೋಗಸ್ಥರು ಇಂದು ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ.
ವ್ಯಾಪಾರ ಒಪ್ಪಂದವನ್ನು ಪಡೆಯುತ್ತಾರೆ. ವ್ಯಾಪಾರ ವಿಸ್ತರಣೆಗೆ ಸಹ ಯೋಜಿಸಬಹುದು. ನೀವು ಅನಾರೋಗ್ಯ ಅಥವಾ ಗಾಯದಿಂದ ಹೋರಾಡುತ್ತಿದ್ದರೆ ನಿಮ್ಮ ಆರೋಗ್ಯ ಇಂದು ಸುಧಾರಿಸುತ್ತದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ.
ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಸಹೋದರರ ಸಹಾಯದಿಂದ ಅನೇಕ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ರಜೆಗಾಗಿ ಹೊರಗೆ ಹೋಗಬಹುದು.
ವೃಶ್ಚಿಕ ರಾಶಿಯವರಿಗೆ ಮಂಗಳವಾರದ ಪರಿಹಾರ: ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸಲು ಕೆಂಪು ಬಟ್ಟೆಯನ್ನು ಧರಿಸಿ ಅಥವಾ ಕೆಂಪು ಬಟ್ಟೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಹನುಮಂಜಿಗೆ ಕೆಂಪು ಹೂವುಗಳನ್ನು ಅರ್ಪಿಸಿ.
*ಧನು ರಾಶಿಯವರಿಗೆ ಜೂನ್ 18 ಹೇಗಿರುತ್ತದೆ?
ಧನು ರಾಶಿಯವರಿಗೆ ಜೂನ್ 18 ಬಹಳ ವಿಶೇಷವಾದ ದಿನವಾಗಿರುತ್ತದೆ. ಧನು ರಾಶಿಯವತಿಗೆ ಮೂರು ಪಟ್ಟು ಧನಲಾಭ ಸಿಗಲಿದೆ. ಅತ್ಯಂತ ಕಷ್ಟಕರವಾದ ಕಾರ್ಯಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಉದ್ಯೋಗದಲ್ಲಿರುವ ಜನರು ಇಂದು ಅದ್ಭುತ ಅವಕಾಶಗಳನ್ನು ಪಡೆಯುತ್ತಾರೆ.
ನಿಮ್ಮ ಕೆಲಸದಿಂದಾಗಿ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುವಿರಿ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಹೂಡಿಕೆ ಮಾಡಲು ಬಯಸಿದರೆ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಏಕಾದಶಿಯ ಕಾರಣ ನೀವು ಇಡೀ ಕುಟುಂಬದೊಂದಿಗೆ ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಅದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ.
ವ್ಯವಹಾರದಲ್ಲಿ ವಿವೇಕ ಮತ್ತು ತಿಳುವಳಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ. ವ್ಯಾಪಾರದ ಖ್ಯಾತಿಯೂ ಹೆಚ್ಚಾಗುತ್ತದೆ.
ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಯಾವುದೇ ಶುಭ ಕಾರ್ಯಕ್ರಮವನ್ನು ಆಯೋಜಿಸುವ ಕೆಲಸದ ಬಗ್ಗೆ ಹಿರಿಯರೊಂದಿಗೆ ಚರ್ಚಿಸಬಹುದು.
ಧನು ರಾಶಿಗೆ ಮಂಗಳವಾರದ ಪರಿಹಾರ: ವಿವಾದಗಳಿಂದ ಮುಕ್ತಿ ಪಡೆಯಲು, ಹನುಮಂಜಿಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯಿರಿ. ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಹನುಮಾನ್ ಮಂತ್ರಗಳನ್ನು ಪಠಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications