Today Dwipushkar Yoga: ಇಂದು ದ್ವಿಪುಷ್ಕರ ಯೋಗ: ಕರ್ಕಾಟಕ ರಾಶಿ ಸೇರಿದಂತೆ ಈ 5 ರಾಶಿಯವರಿಗೆ ಮೋಹಿನಿ ಏಕಾದಶಿಯಂದು ವಿಷ್ಣು ಕೃಪೆ

ಭಾನುವಾರ 19ರಂದು ಕನ್ಯಾರಾಶಿಯಲ್ಲಿ ಚಂದ್ರ ಸಾಗುತ್ತದೆ. ಅಲ್ಲದೆ ಇಂದು ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ ಆಗಿದ್ದು ಈ ದಿನ ಮೋಹಿನಿ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ ವಿಷ್ಣು ಈ ದಿನಾಂಕದಂದು ಮೋಹಿನಿ ಅವತಾರವನ್ನು ತಾಳಿದನು. ಮೋಹಿನಿ ಏಕಾದಶಿಯ ದಿನದಂದು ದ್ವಿಪುಷ್ಕರ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಜೊತೆಗೆ ಹಸ್ತಾ ನಕ್ಷತ್ರದ ಶುಭ ಸಂಯೋಗವೂ ನಡೆಯುತ್ತಿದೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಮೋಹಿನಿ ಏಕಾದಶಿಯ ದಿನದಂದ ಐದು ರಾಶಿಗಳು ಶುಭ ಯೋಗದಿಂದ ಪ್ರಯೋಜನ ಪಡೆಯಲಿವೆ. ಈ ರಾಶಿಯವರು ವ್ಯವಹಾರದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಅಲ್ಲದೆ ಈ ರಾಶಿಯವರು ಮತ್ತೊಬ್ಬರಿಗೆ ಸಾಲ ನೀಡುವಷ್ಟು ಬೆಳೆಯುತ್ತಾರೆ. ಹೊಸ ಜ್ಞಾನವನ್ನು ಪಡೆಯುತ್ತಾರೆ.

ರಾಶಿಗಳೊಂದಿಗೆ ಇಲ್ಲಿ ಜ್ಯೋತಿಷ್ಯ ಪರಿಹಾರಗಳನ್ನೂ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸುವುದರಿಂದ ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನವು ಬಲಗೊಳ್ಳುತ್ತದೆ. ಅಲ್ಲದೆ ಸಮಾಜದಲ್ಲಿ ಖ್ಯಾತಿ ಹಾಗೂ ಗೌರವ ಹೆಚ್ಚಾಗಲಿದೆ. ಹಾಗಾದರೆ ಇಂದು ಯಾವ ರಾಶಿಯವರು ಅದೃಷ್ಟಶಾಲಿಗಳು ಎಂದು ತಿಳಿಯೋಣ.

Today is Dwipushkar Yoga 5 zodiac signs including Cancer will be lucky on Mohini Ekadashi

ಮೇಷ ರಾಶಿಯವರಿಗೆ ಮೇ 19 ಹೇಗಿರುತ್ತದೆ?

ಮೇಷ ರಾಶಿಯವರಿಗೆ ಮೇ 19 ಮಂಗಳಕರ ದಿನವಾಗಿದೆ. ಮೇಷ ರಾಶಿಯ ಜನರು ಇಂದು ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ. ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಪ್ರೀತಿಯ ಜೀವನ ಬಲಗೊಳ್ಳುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದು ಸುವರ್ಣಾವಕಾಶ. ಪ್ರೀತಿಪಾತ್ರರು ಮತ್ತು ಸಂಬಂಧಿಕರಲ್ಲಿ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಕೆಲವು ಹೊಸ ವಸ್ತುಗಳನ್ನು ಖರೀದಿಸಿಸುವಿರಿ.

ವ್ಯಾಪಾರಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಕೈಹಿಡಿಯುತ್ತವೆ. ವ್ಯಾಪಾರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಕುಟುಂಬದ ಎಲ್ಲಾ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗಲಿದೆ.

ಮೇಷ ರಾಶಿಯವರಿಗೆ ಭಾನುವಾರದ ಪರಿಹಾರ: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ತಾಮ್ರದ ಪಾತ್ರೆಯಲ್ಲಿ ಅಕ್ಕಿ, ಕೆಂಪು ಮೆಣಸಿನಕಾಯಿ, ಕೆಂಪು ಹೂವುಗಳನ್ನು ನೀರಿನಲ್ಲಿ ಬೆರೆಸಿ ಸೂರ್ಯ ದೇವರಿಗೆ ಅರ್ಪಿಸಿ.

Today is Dwipushkar Yoga 5 zodiac signs including Cancer will be lucky on Mohini Ekadashi

ಕರ್ಕಾಟಕ ರಾಶಿಯವರಿಗೆ ಮೇ19 ಹೇಗಿರುತ್ತದೆ?

ಕರ್ಕಾಟಕ ರಾಶಿಯವರಿಗೆ ಮೇ 19 ಶುಭ ದಿನವಾಗಿದೆ. ಇಂದು ಅಂದುಕೊಂಡಿದ್ದೆಲ್ಲವೂ ಪೂರ್ಣಗೊಳ್ಳುತ್ತವೆ. ನೀವು ಎಲ್ಲಾ ಸವಾಲುಗಳನ್ನು ಎದುರಿಸಲು ಸಮರ್ಥರಾಗಿರುತ್ತೀರಿ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಪ್ರಯತ್ನಿಸಬಹುದು. ಅದೃಷ್ಟ ನಿಮ್ಮ ಪರವಾಗಿದೆ. ಕಠಿಣ ಪರಿಶ್ರಮದ ಲಾಭವನ್ನು ನೀವು ಪಡೆಯುವಿರಿ. ಇದು ನಿಮಗೆ ಯಶಸ್ಸು ತಂದು ಕೊಡುತ್ತದೆ.

ನಿಮ್ಮ ಕ್ಷೇತ್ರದಲ್ಲಿ ನೀವು ಹೆಸರನ್ನು ಮಾಡುವಿರಿ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ವ್ಯಾಪಾರ ಬೆಳವಣಿಗೆಗೆ ಕುಟುಂಬದ ಸಹಕಾರ ಇರುತ್ತದೆ. ಇದರಿಂದ ನೀವು ಬೆಳವಣಿಗೆ ಹೊಂದುವಿರಿ.

ಇಂದು ಮೋಜು ಮಸ್ತಿ ಮಾಡಲು ಸ್ನೇಹಿತರನ್ನು ಭೇಟಿ ಮಾಡುವಿರಿ. ಇದು ನಿಮ್ಮ ಈ ದಿನವನ್ನು ಆಹ್ಲಾದಕರವಾಗಿಸುತ್ತದೆ. ಪೋಷಕರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವ ಅವಕಾಶ ಸಿಗಬಹುದು. ಅದು ನಿಮಗೆ ತುಂಬಾ ಆರಾಮದಾಯಕವಾದ ಅನುಭವ ನೀಡುತ್ತದೆ.

ಕರ್ಕಾಟಕ ರಾಶಿಯವರಿಗೆ ಭಾನುವಾರದ ಪರಿಹಾರ: ಶತ್ರುಗಳ ಅಡೆತಡೆಗಳಿಂದ ಪರಿಹಾರ ಪಡೆಯಲು ಭಾನುವಾರ ಸಂಜೆ ಆಲದ ಮರದ ಕೆಳಗೆ ನಾಲ್ಕು ದೀಪವನ್ನು ಹಚ್ಚಿ ಪೂಜೆ ಮಾಡಿ.

Today is Dwipushkar Yoga 5 zodiac signs including Cancer will be lucky on Mohini Ekadashi

ತುಲಾ ರಾಶಿಯವರಿಗೆ ಮೇ19 ಹೇಗಿರುತ್ತದೆ?

ತುಲಾ ರಾಶಿಯವರಿಗೆ ಮೇ 19 ತುಂಬಾ ಪ್ರಯೋಜನಕಾರಿಯಾಗಿದೆ. ತುಲಾ ರಾಶಿಯ ಜನರು ಹಣ ಗಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗಲಿದೆ. ನೀವು ಪ್ರತಿ ಕ್ಷೇತ್ರದಲ್ಲೂ ಸಹಕಾರವನ್ನು ಪಡೆಯುವಿರಿ.

ಉದ್ಯೋಗಸ್ಥರಿಗೆ ಪ್ರಗತಿಯ ಸೂಚನೆ ಇದೆ. ವಿಷ್ಣವಿನ ಕೃಪೆಯಿಂದ ಈಡೇರದ ಬಯಕೆ ಈಡೇರಲಿದೆ. ವೃತ್ತಿಯನ್ನು ಸರಿಯಾದ ದಿಕ್ಕಿನಲ್ಲಿ ನೀವು ಕೊಂಡೊಯ್ಯುವಿರಿ. ವ್ಯಾಪಾರ ಮಾಡುವ ಸ್ಥಳದಲ್ಲಿ ಅನೇಕ ಅವಕಾಶಗಳನ್ನು ನೀವು ಪಡೆಯುವಿರಿ. ಇದರಿಂದ ನೀವು ಹಣವನ್ನು ಗಳಿಸಬಹುದು. ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ.

ತುಲಾ ರಾಶಿಯವರಿಗೆ ಭಾನುವಾರದ ಪರಿಹಾರ: ನಿಮ್ಮ ಆಸೆಯನ್ನು ಪೂರೈಸಲು ನಿಮ್ಮ ಆಸೆಯನ್ನು ಆಲದ ಮರದ ಎಲೆಯ ಮೇಲೆ ಬರೆದು ಅದನ್ನು ಹರಿಯುವ ನೀರಿನಲ್ಲಿ ತೇಲಿಬಿಡಿ.

Today is Dwipushkar Yoga 5 zodiac signs including Cancer will be lucky on Mohini Ekadashi

ಧನು ರಾಶಿಯವರಿಗೆ 19 ಹೇಗಿರುತ್ತದೆ?

ಧನು ರಾಶಿಯವರಿಗೆ ಮೇ 19 ಅದೃಷ್ಟದ ದಿನವಾಗಿದೆ. ಧನು ರಾಶಿಯವರು ಇಂದು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರಲ್ಲಿ ಕೆಲಸದ ಬಗ್ಗೆ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸಮಾಜದಲ್ಲಿ ಅವರ ಗೌರವ ಹೆಚ್ಚಾಗಲಿದೆ. ನಿಮ್ಮ ಮಾತುಗಳಲ್ಲಿ ಮಾಧುರ್ಯವಿರುತ್ತದೆ. ನಿಮ್ಮ ಮಾತುಗಳಿಂದ ಜನ ಪ್ರಭಾವಿತರಾಗುತ್ತಾರೆ.

ವ್ಯಾಪಾರಸ್ಥರು ಇಂದು ದೊಡ್ಡ ವ್ಯವಹಾರಕ್ಕೆ ಕೈ ಹಾಕಬಹುದು. ಅದರಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ನೀವು ಯಶಸ್ಸು ಕಾಣುವಿರಿ. ಇದು ಆರ್ಥಿಕವಾಗಿ ತುಂಬಾ ಪ್ರಯೋಜನಕಾರಿಯಾಗಿದೆ.

ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಸಂಗಾತಿಗೆ ಇಂದು ಉಡುಗೊರೆಯನ್ನು ನೀಡಬಹುದು. ಅದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಕುಟುಂಬದಲ್ಲಿ ಸಂತೋಷ, ಶಾಂತಿ ಇರುತ್ತದೆ.

ಧನು ರಾಶಿಯವರಿಗೆ ಭಾನುವಾರದ ಪರಿಹಾರಗಳು: ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಾಗಲು ನೀರಿನಲ್ಲಿ ಬೆಲ್ಲ, ತುಪ್ಪವನ್ನು ಬೆರೆಸಿ ಸೂರ್ಯ ದೇವನಿಗೆ ಅರ್ಪಿಸಿ.

Today is Dwipushkar Yoga 5 zodiac signs including Cancer will be lucky on Mohini Ekadashi

ಕುಂಭ ರಾಶಿಯವರಿಗೆ ಮೇ 19 ಹೇಗಿರುತ್ತದೆ?

ಕುಂಭ ರಾಶಿಯವರಿಗೆ ಮೇ 19 ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ದಿನ ನೀವು ಹೆಚ್ಚು ಹಣ ಸಂಪಾದಿಸುವ ಮೂಲಗಳನ್ನು ಕಂಡುಕೊಳ್ಳುವಿರಿ. ನಿಮ್ಮ ಆರೋಗ್ಯ ಫಿಟ್ ಆಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಮತ್ತೊಬ್ಬರಿಗೆ ಮಾದರಿಯಾಗಿರುತ್ತದೆ.

ನಿಮ್ಮ ವೃತ್ತಿ ಜೀವನದಲ್ಲಿ ನೀವು ಅನೇಕ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಇದು ನಿಮ್ಮ ಕನಸನ್ನು ನನಸು ಮಾಡುತ್ತದೆ. ವ್ಯಾಪಾರದಲ್ಲಿ ಹಣ ಗಳಿಸುವ ಅವಕಾಶವನ್ನು ನೀವು ಪಡೆಯುವಿರಿ. ಪ್ರತಿಯೊಂದು ಕಾರ್ಯದಲ್ಲೂ ನೀವು ಉತ್ಸಾಹದಿಂದ ಭಾಗವಹಿಸುವಿರಿ.

ಇಂದು ನೀವು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ಅವಿವಾಹಿತರು ತಮ್ಮ ಪ್ರೇಮ ಸಂಬಂಧದ ಬಗ್ಗೆ ಮನೆಯಲ್ಲಿ ಇಂದು ಪ್ರಸ್ತಾಪಿಸಬಹುದು. ಇಂದು ಕುಟುಂಬಸ್ಥರೊಂದಿಗೆ ಪ್ರವಾಸ ಕೈಗೊಳ್ಳಬಹುದು. ಜೊತೆಗೆ ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ.

ಕುಂಭ ರಾಶಿಯವರಿಗೆ ಭಾನುವಾರದ ಪರಿಹಾರ: ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ, ಆದಿತ್ಯ ಸ್ತೋತ್ರವನ್ನು ಪಠಿಸಿ ಅಲ್ಲದೆ ಉಪ್ಪು ಮುಕ್ತ ಆಹಾರವನ್ನು ಸೇವಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+