ಸೂರ್ಯನಂತೆ ಹೊಳೆಯುವುದು ಈ ರಾಶಿಯವರ ಭವಿಷ್ಯ: ಈಡೇರುವುದು ಎಲ್ಲಾ ಆಸೆ ಆಕಾಂಕ್ಷೆಗಳು, ಆಸ್ತಿ ಖರೀದಿ ಭಾಗ್ಯ

ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಚಲನೆಯಲ್ಲಿನ ಬದಲಾವಣೆಗೆ ವಿಶೇಷ ಮಹತ್ವ ಇದೆ. ಪ್ರಸ್ತುತ ಸೂರ್ಯ ಬುಧ ಮತ್ತು ಕೇತುವಿನ ಜೊತೆ ಒಂದೇ ರಾಶಿಯಲ್ಲಿ ಸಂಚಾರ ಮಾಡುತ್ತಾ ಇದ್ದಾನೆ. ಸೂರ್ಯನ ಚಲನೆಯಲ್ಲಿನ ಈ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ, ಸೂರ್ಯನು ಕೇತುವಿನ ಮಘಾ ನಕ್ಷತ್ರದಲ್ಲಿದ್ದಾನೆ.

ಆಗಸ್ಟ್ 31ಕ್ಕೆ ಸೂರ್ಯ ಶುಕ್ರನ ಅಧಿಪತ್ಯದ ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಸುಮಾರು 13 ದಿನಗಳವರೆಗೆ ಅದೇ ನಕ್ಷತ್ರದಲ್ಲಿ ಇರುತ್ತಾನೆ. ಸೂರ್ಯನ ನಕ್ಷತ್ರದಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಹೆಚ್ಚು ಶುಭ ಫಲವನ್ನು ನೀಡುತ್ತದೆ. ಸಂಪತ್ತು ಮತ್ತು ಪ್ರತಿಷ್ಠೆಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಯೋಜನಗಳಾಗುವುದು. ಸೂರ್ಯನ ಈ ನಕ್ಷತ್ರ ಬದಲಾವಣೆಯಿಂದ ಯಾವ ರಾಶಿಯವರು ಪ್ರಯೋಜನ ಪಡೆಯುತ್ತವೆ ಎನ್ನುವುದನ್ನು ನೋಡೋಣ.

Surya Sankramana

ನಾಲ್ಕು ರಾಶಿಯವರಿಗೆ ಸೂರ್ಯ ಸಂಕ್ರಮಣದಿಂದ ಲಾಭ

ಕರ್ಕಾಟಕ ರಾಶಿ (Cancer) : ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಈ ರಾಶಿಯಲ್ಲಿ ಹುಟ್ಟಿದವರಿಗೆ ಶುಭ ಫಲ ನೀಡುವುದು. ಈ ಅವಧಿಯಲ್ಲಿ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅಪೇಕ್ಷಿತ ಯಶಸ್ಸು ಸಿಗುವ ಸಾಧ್ಯತೆಯಿದೆ. ಉದ್ಯಮಿಗಳು, ವ್ಯವಹಾರ ಮಾಡುವವರು ಉತ್ತಮ ಲಾಭವನ್ನು ಗಳಿಸುವರು. ಆರ್ಥಿಕ ಪರಿಸ್ಥಿತಿ ಸದೃಢವಾಗುವುದು. ಇಲ್ಲಿವರೆಗೆ ಕಾಡುತ್ತಿದ್ದ ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಕಠಿಣ ಪರಿಶ್ರಮದಿಂದ ನೀವು ಅಂದುಕೊಂಡ ಎಲ್ಲಾ ಕೆಲಸಗಳನ್ನು ಸಾಧಿಸುವಿರಿ. ಮಾಡುವ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲವೇ ಸಿಗುವುದು. ತುಂಬಾ ಸಮಯದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದಲೂ ಮುಕ್ತಿ ಸಿಗುವುದು.

ಸಿಂಹ ರಾಶಿ (Leo) : ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಸಿಂಹ ರಾಶಿಯವರ ಜೀವನದ ದಿಕ್ಕನ್ನೇ ಬದಲಿಸುವುದು. ಈ ಸಮಯದಲ್ಲಿ ಅದೃಷ್ಟ ನಿಮ್ಮ ಜೊತೆ ಇರುವುದು. ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವುದು. ಬಹಳ ಸಮಯದಿಂದ ನಿಂತು ಹೋಗಿದ್ದ ಕೆಲಸ ಕಾರ್ಯಗಳು ಮತ್ತೆ ಚುರುಕು ಪಡೆಯುವುದು. ಯಶಸ್ಸಿನ ಹಾದಿ ತೆರೆದುಕೊಳ್ಳುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ನಿಮ್ಮ ಪ್ರಯತ್ನಗಳಿಗೆ ಸಕಾರಾತ್ಮಕ ಫಲಿತಾಂಶ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆಸ್ತಿ ಖರೀದಿಗೆ ಮುಂದಾಗಬಹುದು.

ವೃಶ್ಚಿಕ ರಾಶಿ (Scorpio) : ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ವೃಶ್ಚಿಕ ರಾಶಿಯವರಿಗೆ ಶುಭವಾಗಿರುವುದು. ಪ್ರಭಾವಿ ಅಥವಾ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. ಇದು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರಯೋಜನಗಳನ್ನು ನೀಡಬಹುದು. ಬಹಳ ದಿನಗಳಿಂದ ಬಾಕಿ ಇರುವ ಒಂದು ಪ್ರಮುಖ ಕೆಲಸದಲ್ಲಿ ಜಯ ಸಿಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಆದಾಯದ ಅವಕಾಶಗಳು ಹುಟ್ಟಿಕೊಳ್ಳುವುದು. ಪ್ರಗತಿಯ ಹಾದಿ ತೆರೆದುಕೊಳ್ಳುವುದು.

ಕುಂಭ ರಾಶಿ (Aquarius): ಕುಂಭ ರಾಶಿಯವರ ಒಳ್ಳೆಯ ದಿನಗಳು ಸೂರ್ಯ ಸಂಕ್ರಮಣದೊಂದಿಗೆ ಆರಂಭವಾಗುವುದು. ಈ ಸಮಯದಲ್ಲಿ, ಅವರ ವ್ಯಕ್ತಿತ್ವ ಸುಧಾರಿಸುವುದು. ಆಕರ್ಷಣೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಜೊತೆಗೆ ಬಡ್ತಿ ಮತ್ತು ಸಂಬಳ ಹೆಚ್ಚಾಗುವ ಅವಕಾಶಗಳು ಕೂಡಾ ಸಿಗುವುದು. ಹೊಸ ಯೋಜನೆಗಳಿಂದ ಉದ್ಯಮಿಗಳಿಗೆ ಲಾಭವಾಗುವುದು. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು. ಸಮಾಜದಲ್ಲಿ ಗೌರವ ಸಿಗುವುದು. ಹೂಡಿಕೆ ವಿಷಯಗಳಲ್ಲಿ ಲಾಭ ಸಿಗುವುದು. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+