Surya Sankramana: ನಾಳೆಯಿಂದ ಈ ರಾಶಿಯವರಿಗೆ ಕುಬೇರ ಯೋಗ: ಕೋಟ್ಯಾಧಿಪತಿಯಾಗುವ ಭಾಗ್ಯ, ಮುಟ್ಟಿದ್ದೆಲ್ಲವೂ ಚಿನ್ನ!
Surya Sankramana: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ನಾಳೆ ಅಂದರೆ ಸೆಪ್ಟೆಂಬರ್ 27ಕ್ಕೆ ಮಧ್ಯಾಹ್ನ, ಸೂರ್ಯನು ಉತ್ತರ ಫಲ್ಗುಣಿ ನಕ್ಷತ್ರವನ್ನು ಬಿಟ್ಟು ಹಸ್ತ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಸೂರ್ಯನ ನಕ್ಷತ್ರ ಬದಲಾವಣೆ ಮಧ್ಯಾಹ್ನ 1.45 ಕ್ಕೆ ಆಗುತ್ತದೆ. ಇದರ ನಂತರ, ಅಕ್ಟೋಬರ್ 11, 2026 ರವರೆಗೆ ಸೂರ್ಯನು ಹಸ್ತ ನಕ್ಷತ್ರದಲ್ಲಿಯೇ ಸಂಚಾರ ಮಾಡ್ತಾ ಇರುವನು.
ಹಸ್ತ ನಕ್ಷತ್ರದ ಅಧಿಪತಿ ಗ್ರಹ ಚಂದ್ರ. ಇದನ್ನು ಜ್ಯೋತಿಷ್ಯದಲ್ಲಿ ಸೂರ್ಯನ ಸ್ನೇಹಿತ ಎಂದು ಕರೆಯಲಾಗುತ್ತದೆ. ಹಾಗಾಗಿ ಹಸ್ತ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಕೆಲವು ರಾಶಿಯವರ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಇವರ ಜೀವನದಲ್ಲಿ ನಾಳೆಯಿಂದ ಅದೃಷ್ಟದ ಹೊನಲು ಹರಿಯುವುದು. ಆರ್ಥಿಕ ಲಾಭವಾಗುವ ಸಾಧ್ಯತೆಗಳೂ ಇರಬಹುದು.

Surya Sankramana: ಸೂರ್ಯನಿಂದ ಬೆಳಗುವುದು ಈ ರಾಶಿಯವರ ಅದೃಷ್ಟ
ವೃಷಭ ರಾಶಿ (Taurus)
ಹಸ್ತಾ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಈ ರಾಶಿಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅತ್ಯಂತ ಶುಭವಾಗಿರುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಈ ಮೂಲಕ ಉನ್ನತ ಸ್ಥಾನಕ್ಕೆ ಏರುವ ಕನಸು ನನಸಾಗುವುದು. ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಗುವುದು. ಉದ್ಯಮಿಗಳು ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಆರ್ಥಿಕ ಲಾಭ ಪಡೆಯುವರು. ವಿದ್ಯಾರ್ಥಿಗಳ ಏಕಾಗ್ರತೆ ಸುಧಾರಿಸುವುದು. ಇದು ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುವುದು. ಹೊಸ ಕೆಲಸಕ್ಕೆ ಪ್ರಯತ್ನಿಸುವವರಿಗೆ ಫಲ ಸಿಗುವುದು. ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.
ಸಿಂಹ ರಾಶಿ (Leo)
ಸಿಂಹ ರಾಶಿಯ ಅಧಿಪತಿಯೇ ಸೂರ್ಯ. ಹಾಗಾಗಿ ಸೂರ್ಯನ ನಕ್ಷತ್ರ ಬದಲಾವಣೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಈ ರಾಶಿಯಲ್ಲಿ ಜನಿಸಿದವರು ತಾವು ಮಾಡುವ ಕೆಲಸಕ್ಕೆ ಪ್ರಶಂಸೆ ಪಡೆಯುವರು. ಬಹಳ ಕಾಲದಿಂದ ನಿಂತು ಹೋಗಿರುವ ಯೋಜನೆಗಳು ವೇಗ ಪಡೆಯುವುದು. ಅದೃಷ್ಟವು ನಿಮ್ಮ ಜೊತೆ ಇರುವುದು. ಹಾಗಾಗಿ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಹೊಸ ಕೆಲಸಕ್ಕೆ ಪ್ರಯತ್ನಿಸುವವರಿಗೆ ಈ ಅವಧಿ ಪ್ರಯೋಜನಕಾರಿಯಾಗಿರುವುದು. ಪ್ರಸ್ತುತ, ಸೂರ್ಯನು ನಿಮ್ಮ ಎರಡನೇ ಮನೆಯಲ್ಲಿದ್ದಾನೆ. ಆದ್ದರಿಂದ ಕೆಲವು ಜನರು ಪೂರ್ವಜರ ಆಸ್ತಿಯಿಂದ ಲಾಭ ಪಡೆಯಬಹುದು. ಈ ಅವಧಿಯಲ್ಲಿ ನಿಮಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.
ಧನು ರಾಶಿ (Sagittarius)
ನಿಮ್ಮ ರಾಶಿಯ ಅಧಿಪತಿ ಗ್ರಹವಾಗಿರುವ ಸೂರ್ಯ ಮತ್ತು ಗುರು ಸ್ನೇಹಿತರು. ಆದ್ದರಿಂದ, ಸೂರ್ಯನ ನಕ್ಷತ್ರ ಬದಲಾವಣೆಯು ನಿಮಗೂ ಪ್ರಯೋಜನಕಾರಿಯಾಗಿರುವುದು.ಈ ರಾಶಿಯ ಕೆಲವರು ತಾವು ಬಯಸಿದ ಕೆಲಸವನ್ನೇ ಪಡೆಯುವರು. ನಿಮಗೆ ಬೇಕಾದ ಸ್ಥಳದಲ್ಲಿಯೇ ಹೊಸ ಕೆಲಸ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಹಿಂದಿನ ಕಠಿಣ ಪರಿಶ್ರಮದಿಂದ ಸಕಾರಾತ್ಮಕ ಫಲಿತಾಂಶಗಳನ್ನು ಕಾಣುವಿರಿ. ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ವರ್ಗಾವಣೆಯಾಗುವುದು. ಈ ವರ್ಗಾವಣೆಯಿಂದ ಲಾಭವೇ ಆಗುವುದು. ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರುವುದು. ಆಸ್ತಿ ಖರೀದಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು.
ಮಕರ ರಾಶಿ (Capricorn)
ಸೂರ್ಯನ ಸಂಚಾರವು ಮಕರ ರಾಶಿಯವರಿಗೆ ಅದೃಷ್ಟಶಾಲಿಯಾಗಿರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸ ಮಾಡುವ ರೀತಿಗೆ ಮೆಚ್ಚುಗೆ ಪಡೆಯುವರು. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು. ಈಗಾಗಲೇ ಕೆಲಸದಲ್ಲಕಿ ಇರುವವರಿಗೂ ಒಳ್ಳೆಯ ಕೆಲಸದ ಆಫರ್ ಬರುವುದು. ಆರ್ಥಿಕ ಪರಿಸ್ಥಿತಿಯಲ್ಲಿ ನೀವು ಸಕಾರಾತ್ಮಕ ಬದಲಾವಣೆಗಳಾಗುವುದು. ಸಾಲದಿಂದ ಮುಕ್ತಿ ಸಿಗುವುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ.


Click it and Unblock the Notifications
