Surya Sanchara: ಇವತ್ತಿನಿಂದ ಐದು ರಾಶಿಯವರ ಅದೃಷ್ಟ ಶುರು : ಉನ್ನತ ಹುದ್ದೆ ಭಾಗ್ಯ, ಭೂಮಿ ಖರೀದಿ ಯೋಗ
Surya Sanchara: ಸೂರ್ಯನು ಇದೀಗ ಬುಧನ ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಅಕ್ಟೋಬರ್ 17 ರವರೆಗೆ ಇದೇ ರಾಶಿಯಲ್ಲಿ ಸೂರ್ಯನ ಸಂಚಾರ. ನಂತರ ತುಲಾ ರಾಶಿಗೆ ಕಾಲಿಡಲಿದ್ದಾನೆ. ಕನ್ಯಾರಾಶಿಯಲ್ಲಿ ಸೂರ್ಯ ಸಂಚರಿಸುವ ಮೂಲಕ, ಐದು ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡಲಿದ್ದಾನೆ.
ಈ ಸಂಚಾರದಿಂದಾಗಿ, ಬುಧ ಮತ್ತು ಸೂರ್ಯ ಎರಡು ಗ್ರಹಗಳ ಎನರ್ಜಿ ಸಿಗುವುದು. ಇದರ ಫಲವಾಗಿ ಮುಂದಿನ ಕೆಲವು ದಿನಗಳವರೆಗೆ ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಕೆಲವು ರಾಶಿಯವರಿಗೆ ಪ್ರಯೋಜನವಾಗುವುದು.

ಸೂರ್ಯನ ಸಂಚಾರದಿಂದ ಪ್ರಯೋಜನ ಪಡೆಯುವ ರಾಶಿಗಳು (Surya Sanchara)
ಕರ್ಕಾಟಕ ರಾಶಿ (cancer)
ಕರ್ಕಾಟಕ ರಾಶಿ ಅಧಿಪತಿ ಚಂದ್ರ. ಸೂರ್ಯ ಸಂಚಾರ ಈ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊರಗೆ ಸಿಲುಕಿ ಹಾಕಿಕೊಂಡಿರುವ ಹಣ ಸುಲಭವಾಗಿ ಕೈ ಸೇರುವುದು. ಪೋಕಸ್ಡ್ ಆಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರ ಲಾಭದಾಯಕವಾಗಿರುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ.
ಸಿಂಹ ರಾಶಿ (Leo)
ಈ ರಾಶಿಯವರಿಗೂ ಸೂರ್ಯನ ಸಂಚಾರದಿಂದ ಪ್ರಯೋಜನವಾಗುವುದು. ಇದು ಸೂರ್ಯನ ವಿಶೇಷ ರಾಶಿಯಾಗಿದೆ. ಹಾಗಾಗಿ ಈ ಸಂಚಾರದಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಅಗುವುದು. ಕೆಲಸ ಉತ್ತಮವಾಗಿ ನಡೆಯುವುದು. ಆತ್ಮವಿಶ್ವಾಸದ ಮಟ್ಟ ಹೆಚ್ಚಾಗುತ್ತದೆ. ಕೆಲಸ ಮತ್ತು ಕೆಲಸ ಮಾಡುವ ವಿಧಾನದಲ್ಲಿ ಸಾಕಷ್ಟು ಸುಧಾರಣೆಯಾಗುವುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಾಗುವುದು. ಹಣದ ಸ್ಥಿತಿ ಉತ್ತಮವಾಗಿರುವುದು.
ಕನ್ಯಾರಾಶಿ (Virgo)
ಸೂರ್ಯನ ಸಂಚಾರದಿಂದ ಬುಧ ಕನ್ಯಾ ರಾಶಿಯವರಿಗೂ ಲಾಭವಾಗುವುದು. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. ಹೊಸ ಜವಾಬ್ದಾರಿ ಸಿಗುವ ಮೂಲಕ ಹೊಸ ಅವಕಾಶಗಳು ಎದುರಾಗುವುದು. ಇದೇ ವೇಳೆ, ಇಲ್ಲಿಯವರೆಗೆ ಕೆಲಸದಲ್ಲಿ ಎದುರಾಗಿದ್ದ ಅಡೆತಡೆ ನಿವಾರಣೆಯಾಗುವುದು. ಹೊಸ ಕೆಲಸದ ಆಫರ್ ಸಿಗುವುದು. ಈ ಸಮಯದಲ್ಲಿ ಪ್ರತಿಯೊಂದು ಅಂಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಂತರ ನಿರ್ಧಾರ ತೆಗೆದುಕೊಳ್ಳಿ. ಹೊಸ ವ್ಯವಹಾರ ಶುರು ಮಾಡಬಹುದು ಅಥವಅ ವ್ಯವಹಾರ ವಿಸ್ತರಿಸಬಹುದು. ಇದರಿಂದ ಉತ್ತಮ ಲಾಭವಾಗುವುದು.
ವೃಶ್ಚಿಕ ರಾಶಿ (Scorpio)
ಈ ರಾಶಿಯ ಅಧಿಪತಿ ಮಂಗಳ. ಉದ್ಯೋಗಕ್ಕೆ ಸಂಬಂಧಿಸಿಂತೆ ಒಳ್ಳೆಯ ಸುದ್ದಿ ಸಿಗುವುದು. ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುವುದು. ಹೊಸ ಜವಾಬ್ದಾರಿ ಸಿಗುವುದು. ಹೊಸ ಜವಾಬ್ದಾರಿಯಿಂದ ಮನಸ್ಸಿನ ಸಂತೋಷವೂ ಹೆಚ್ಚಾಗುವುದು. ವ್ಯಾಪಾರ ನಡೆಸುವವರು ಪ್ರಗತಿ ಕಾಣುವರು. ನೀವು ಅಂದುಕೊಂಡಂತೆ ಎಲ್ಲಾ ಕೆಲಸ ಸಮಯಕ್ಕೆ ಸರಿಯಾಗಿ ಮುಕ್ತಾಯವಾಗುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದು. ಹಳೆಯ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಸಾಲದ ಸಮಸ್ಯೆ ನಿವಾರಣೆಯಾಗುವುದು. ಮಕ್ಕಳ ಸಾಧನೆ ಖುಷಿ ತರುವುದು. ಸುಖ ಸಮೃದ್ದಿ ಹೆಚ್ಚಾಗುವುದು.
ಧನು ರಾಶಿ (Sagittarius)
ಗುರುವಿನ ಅಧಿಪತ್ಯದ ಈ ರಾಶಿ ಸೂರ್ಯನ ಸಂಚಾರದಿಂದಲೂ ಪ್ರಯೋಜನ ಪಡೆಯುತ್ತದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಲಾಭವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕೆಲಸದಲ್ಲಿನ ಅಡೆತಡೆ ನಿವಾರಣೆಯಾಗುವುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವ ಮೂಲಕ ಮನಸ್ಸಿನ ನೆಮ್ಮದಿ ಹೆಚ್ಚಾಗುವುದು. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಇಳಿಯಬಹುದು. ಹಣದ ಸಮಸ್ಯೆ ಕಡಿಮೆಯಾಗುವುದು. ಬಡ್ತಿ ಸಿಗುವುದು. ಈ ಮೂಲಕ ಆದಾಯ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು


Click it and Unblock the Notifications
