ಸೂರ್ಯನಿಂದ ಹೆಚ್ಚುವುದು ಈ ರಾಶಿಯವರ ಗೌರವ, ಸಂಪತ್ತು :ಇಟ್ಟ ಹೆಜ್ಜೆಯಲ್ಲಿ ಸಿಗುವುದು ಯಶಸ್ಸು
Surya Gochara 2026 : ಸೂರ್ಯನು ಗ್ರಹಗಳ ರಾಜ. ಸೂರ್ಯ ಅಂದರೆ ಆತ್ಮ, ತಂದೆ, ಖ್ಯಾತಿ ಮತ್ತು ಸರ್ಕಾರಿ ಕೆಲಸಗಳಿಗೆ ಸಂಬಂಧಪಟ್ಟ ಅಂಶವೂ ಹೌದು. ಪ್ರತಿ ತಿಂಗಳು ಸೂರ್ಯ ತನ್ನ ರಾಶಿಯನ್ನು ಬದಲಾಯಿಸುವ ಮೂಲಕ, ಎಲ್ಲಾ 12 ರಾಶಿಯವರ ಮೇಲೆ ಶುಭ ಮತ್ತು ಅಶುಭ ಪ್ರಭಾವಗಳನ್ನು ಬೀರುವನು.
ಸೂರ್ಯನು ಗುರುವಾರ, ಅಂದರೆ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 7.58 ಕ್ಕೆ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ. ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಮುಂದಿನ ಒಂದು ತಿಂಗಳು ಅಂದರೆ ಅಕ್ಟೋಬರ್ 17ರವರೆಗೆ ಇರುತ್ತದೆ. ಈ ಒಂದು ತಿಂಗಳ ಅವಧಿಯಲ್ಲಿ, ನಾಲ್ಕು ರಾಶಿಯವರು ಹೆಚ್ಚಿನ ಆರ್ಥಿಕ ಲಾಭಗಳನ್ನು ಗಳಿಸುವರು. ತಮ್ಮ ಜೀವನದಲ್ಲಿ ಗೌರವ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವರು.

ಸೂರ್ಯ ರಾಶಿ ಬದಲಾವಣೆಯಿಂದ ಬೆಳಗುವುದು ಈ ರಾಶಿಯವರ ಅದೃಷ್ಟ
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಸೂರ್ಯನ ಸಂಚಾರವು ಅತ್ಯಂತ ಶುಭವಾಗಿರುವುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಈಡೇರುವುದು. ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನವಾಗುವುದು. ಶಿಕ್ಷಣದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ಮಕ್ಕಳು ನೀವು ಹೆಮ್ಮೆ ಪಡುವ ಕೆಲಸ ಮಾಡುವರು. ಹೊಸ ಕೆಲಸಕ್ಕಾಗಿ ಹುಡುಕಾಟ ಮಾಡುತ್ತಿದ್ದವರ ಪ್ರಯತ್ನ ಫಲ ನೀಡುವುದು. ಹಣಕಾಸಿನ ಸಮಸ್ಯೆ ನೀಗುವುದು.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೂ ಸೂರ್ಯನ ಸಂಚಾರ ಶುಭ ಫಲವನ್ನು ನೀಡುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವುದು. ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿರುವ ಕೆಲಸವನ್ನು ಈ ಸಮಯದಲ್ಲಿ ಸರಾಗವಾಗಿ ಮಾಡಿ ಮುಗಿಸುವಿರಿ. ವ್ಯವಹಾರದಲ್ಲಿ ಲಾಭ ಸಿಗುವುದು. ವ್ಯವಹಾರ ವಿಸ್ತರಿಸುವುದಕ್ಕೂ ಸೂಕ್ತ ಸಮಯ. ಹಸ ಕೆಲಸವನ್ನು ಆರಂಭ ಮಾಡುವುದಕ್ಕೂ ಸಮಯ ಯೋಗ್ಯವಾಗಿದೆ. ಸಮಾಜದಲ್ಲು ಗೌರವ ಹೆಚ್ಚಾಗುವುದು.
ಕನ್ಯಾ ರಾಶಿ (Virgo)
ಈ ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುವುದು. ಮಾಡುವ ಕೆಲಸಗಳಿಗೆ ಸ್ನೇಹಿತರ ಸಂಪೂರ್ಣ ಬೆಂಬಲ ಸಿಗುವುದು. ಈ ರಾಶಿಯವರ ಎಲ್ಲಾ ಕಷ್ಟಗಳು ನಿವಾರಣೆಯಾಗುವುದು. ಪ್ರತಿ ಹಂತದಲ್ಲಿಯೂ ಯಶಸ್ಸು ಸಿಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು. ಬಾಕಿ ಇರುವ ಸರ್ಕಾರಿ ಯೋಜನೆಗಳು ಪೂರ್ಣಗೊಳ್ಳುವುದು. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಮೀನ ರಾಶಿ (Pisces)
ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಮೀನ ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು. ತುಂಬಾ ಸಮಯದಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು. ಉನ್ನತ ಶಿಕ್ಷಣದ ಬಯಕೆ ಈಡೇರುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಗೌರವ ಹೆಚ್ಚಾಗುವುದು. ವ್ಯವಹಾರದಲ್ ಹೆಚ್ಚಿನ ಲಾಭವಾಗುವುದು.
ಸೂರ್ಯನ ನಕ್ಷತ್ರ ಬದಲಾವಣೆ (Sun Star Transit)
ಇನ್ನು ಸೂರ್ಯನ ರಾಶಿ ಬದಲಾವಣೆಗೂ ಮುನ್ನ ನಕ್ಷತ್ರವನ್ನು ಕೂಡಾ ಬದಲಿಸುತ್ತಿದ್ದಾನೆ. ಇನ್ನೆರಡು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 13ಕ್ಕೆ ಸೂರ್ಯನು ತನ್ನ ನಕ್ಷತ್ರವನ್ನು ಬದಲಿಸುತ್ತಾನೆ. ಭಾನುವಾರ ಬೆಳಿಗ್ಗೆ 9.53 ಕ್ಕೆ, ಸೂರ್ಯನು ಉತ್ತರಫಲ್ಗುಣಿ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ. ಸೂರ್ಯನ ನಕ್ಷತ್ರ ಬದಲಾವಣೆಯು ಬಹಳ ಪ್ರಭಾವಶಾಲಿಯಾಗಿರುವುದು. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ ದ್ವಾದಶ ರಾಶಿಯವರ ಮೇಲೆ ಆಗುವುದು. ಸೂರ್ಯನ ಸಂಚಾರವು ಸೆಪ್ಟೆಂಬರ್ 27 ರವರೆಗೆ ಇದೇ ನಕ್ಷತ್ರದಲ್ಲಿ ಸಂಚಾರ ಮುಂದುವರೆಸುತ್ತಾನೆ.
ಸೂರ್ಯನ ನಕ್ಷತ್ರ ಬದಲಾವಣೆಯು ಮೇಷ, ಕಟಕ, ಸಿಂಹ ಮತ್ತು ಮೀನ ರಾಶಿಯವರಿಗೆ ಶುಭ ಫಲವನ್ನು ನೀಡುವುದು. ಇವರಿಗೆ ಹಠಾತ್ ಹಣದ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಕೆಲಸದಲ್ಲಿ ಬಡ್ತಿಯ ಮಾರ್ಗಗಳು ತೆರೆದುಕೊಳ್ಳುವುದು. ಆತ್ಮವಿಶ್ವಾಸವೂ ಹೆಚ್ಚಾಗುವುದು.


Click it and Unblock the Notifications
