Surya Gochar February 2023: ಕುಂಭ ರಾಶಿಗೆ ಸೂರ್ಯನ ಪ್ರವೇಶ: 12 ರಾಶಿಗಳ ಮೇಲಾಗುವ ಪ್ರಭಾವವೇನು?
ಸೋಮವಾರ ಫೆಬ್ರವರಿ 13, 2023 ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತಾನೆ.
ಸೋಮವಾರ
ಫೆಬ್ರವರಿ 13, 2023 ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತಾನೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮದ ಗ್ರಹ ಎಂದು ಕರೆಯಲಾಗುತ್ತದೆ. ಸೂರ್ಯ ದೇವ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಂಚಾರ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಂಚಾರ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. id="toptextpromo"> id='are-slot-1' class='oiad oi-axt oiadv'>ಜ್ಯೋತಿಷ್ಯದಲ್ಲಿ
ಸೂರ್ಯನನ್ನು ಆತ್ಮದ ಗ್ರಹವೆಂದು ಪರಿಗಣಿಸಲಾಗಿದೆ. ಸೌರ ಮಂಡಲದ ಅಧಿಪತಿಯಾದ ಸೂರ್ಯದೇವನು ಕುಂಭ ರಾಶಿಗೆ 13 ಫೆಬ್ರವರಿ 2023 ರಂದು ಬೆಳಿಗ್ಗೆ 9:21 ಕ್ಕೆ ಸಾಗುತ್ತಾನೆ. 2023 ರ ಮಾರ್ಚ್ 15 ರಂದು ಬೆಳಿಗ್ಗೆ 6:13 ರವರೆಗೆ ಸೂರ್ಯ ಕುಂಭ ರಾಶಿಯಲ್ಲಿ ಇರುತ್ತದೆ. ನಂತರ ಮೀನ ರಾಶಿಗೆ ಸಾಗುತ್ತದೆ. ಇದು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವುದರಿಂದ ಪ್ರಮುಖ ಸಂಚಾರ ಎಂದು ಪರಿಗಣಿಸಲಾಗಿದೆ. ಈ ಸಂಚಾರ ನಿಮ್ಮ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. id='are-slot-2' class='oiad oi-axt oiadv'>
ಮೇಷ: ವೃತ್ತಿ ಮತ್ತು ಉದ್ಯೋಗದಲ್ಲಿ ಯಶಸ್ಸು
ಕುಂಭ ರಾಶಿಗೆ ಸೂರ್ಯನ ಪ್ರವೇಶದಿಂದ ಮೇಷ ರಾಶಿಗೆ ಶುಭವಾಗಲಿದೆ. ನಿಮ್ಮ ಆಸೆಗಳು ಈಡೇರುತ್ತವೆ. ನೀವು ವೃತ್ತಿ ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ವ್ಯಾಪಾರಸ್ಥರಾಗಿದ್ದರೆ ಲಾಭ ಇರುತ್ತದೆ. ನಿಮ್ಮ ಸಾಮಾಜಿಕ ವಲಯವು ವಿಸ್ತರಿಸುತ್ತದೆ. ಆತ್ಮಸ್ಥೈರ್ಯ ವೃದ್ಧಿಯಾಗಲಿದೆ. ಈ ಸಮಯದಲ್ಲಿ ಅಹಂಕಾರ ಹೆಚ್ಚಾಗಬಹುದು. ಇದರಿಂದ ನೀವು ನಷ್ಟವನ್ನು ಅನುಭವಿಸಬಹುದು. ಅದನ್ನು ಸಹಿಸಿಕೊಳ್ಳಬೇಕಾಗಬಹುದು. ಪ್ರಯಾಣದ ಅವಕಾಶವಿರುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡು.

ವೃಷಭ: ವ್ಯಾಪಾರಿಗಳಿಗೆ ನೆಮ್ಮದಿ ಜೀವನ
ವೃಷಭ ರಾಶಿಯವರ ಜಾತಕದಲ್ಲಿ ಸೂರ್ಯನ ಅನುಗ್ರಹವಿದೆ. ಕೆಲಸದ ಸ್ಥಳದಲ್ಲಿ ಗೌರವದ ಜೊತೆಗೆ ಸಂಬಳವೂ ಹೆಚ್ಚಳವಾಗುತ್ತದೆ. ನೀವು ಉದ್ಯೋಗ ಮತ್ತು ವೃತ್ತಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ನೀವು ಅನಗತ್ಯ ವೆಚ್ಚಗಳತ್ತ ಗಮನ ಹರಿಸಬೇಕು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಮನೆಯಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಮೆಕಾನಿಕ್ ಆಗಿರುವವರಿಗೆ ಮಂಗಳಕರ ಸಮಯವಿದು. ವ್ಯಾಪಾರಿಗಳು ಈ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಾರೆ.

ಮಿಥುನ: ಮಾನಸಿಕ ಶಾಂತಿ
ಸೂರ್ಯನ ಸಂಚಾರ ಮಿಥುನ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಂಬಂಧಗಳು ಸುಧಾರಿಸುತ್ತವೆ. ನೀವು ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯುತ್ತೀರಿ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಾನಸಿಕ ಶಾಂತಿ ಇರುತ್ತದೆ. ಗ್ರಹಗಳ ಪ್ರಭಾವದಿಂದ ಕೆಲಸದ ಸ್ಥಳದಲ್ಲಿ ವಿಶೇಷ ಅಧಿಕಾರವನ್ನು ಪಡೆಯುವಿರಿ. ಇದರಿಂದಾಗಿ ನಿಮ್ಮ ಅಧಿಕಾರ ಹಾಗೂ ಪ್ರಭಾವವು ಹೆಚ್ಚಾಗುವುದು.

ಕರ್ಕ: ವೃತ್ತಿಯಲ್ಲಿ ಖ್ಯಾತಿ
ಸೂರ್ಯನ ಸಂಚಾರ ಕಟಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಅನಗತ್ಯ ಖರ್ಚುಗಳಿಂದ ದೂರವಿರಬೇಕು. ಹೂಡಿಕೆಯಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇದು ನಿಮ್ಮನ್ನು ವೃತ್ತಿಯಲ್ಲಿ ಗುರುತಿಸುವಂತೆ ಹಾಗೂ ಖ್ಯಾತಿಯನ್ನು ಗಳಿಸುವಂತೆ ಮಾಡುತ್ತದೆ. ನಿಮ್ಮ ವೇತನದಲ್ಲೂ ಹೆಚ್ಚಳವನ್ನು ಕಾಣುವಿರಿ. ಸರ್ಕಾರಿ ವೃತ್ತಿಯಲ್ಲಿರುವವರು ಸರ್ಕಾರಿ ವಾಹನ ಅಥವಾ ಮನೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಸಾಧನೆಯ ಬಗ್ಗೆ ಕುಟುಂಬ ಸದಸ್ಯರೂ ಹೆಮ್ಮೆ ಪಡುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಸಿಂಹ: ವ್ಯವಹಾರದಲ್ಲಿ ಸಮಸ್ಯೆ
ಸೂರ್ಯನ ಸಂಚಾರ ವೈವಾಹಿಕ ಜೀವನ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು. ನೀವು ಉದ್ಯೋಗದಲ್ಲಿದ್ದರೆ ಮಿಶ್ರ ಸಮಯವಿರುತ್ತದೆ. ಕುಟುಂಬದಲ್ಲಿ ವಾದ ವಿವಾದಗಳಿಂದ ದೂರವಿರಿ. ಈ ಚಲನೆಯಿಂದ ಸಮಾಜದಲ್ಲಿ ನಿಮ್ಮ ಸ್ಥಾನವು ಸುಧಾರಿಸುತ್ತದೆ ಜೊತೆಗೆ ಸ್ಥಾನಮಾನವೂ ಹೆಚ್ಚುವುದು. ಹಣ ಹಾಗೂ ಸಂಪತ್ತು ಹೇರಳವಾಗಿ ಬರುವುದು. ವಿವಿಧ ಕ್ಷೇತ್ರಗಳಲ್ಲಿ ಸಿಗುವಂತಹ ಯಶಸ್ಸಿನಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಸರ್ಕಾರಿ ವಲಯದಿಂದಲೂ ಲಾಭವನ್ನು ಗಳಿಸುವಿರಿ.

ಕನ್ಯಾ: ಶತ್ರುಗಳ ಮೇಲೆ ಜಯ
ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಶತ್ರುಗಳ ಮೇಲೆ ಜಯ ದೊರೆಯಲಿದೆ. ಆದರೂ ಖರ್ಚು ಹೆಚ್ಚಾಗಲಿದೆ. ದೂರ ಪ್ರಯಾಣದ ಅವಕಾಶವಿರುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಸ್ವಲ್ಪ ತೊಂದರೆಯ ನಂತರ ನೀವು ಯಶಸ್ವಿಯಾಗುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಯೋಗವಿದೆ. ಮತ್ತೊಂದೆಡೆ ಹಿರಿಯರ ಆರೋಗ್ಯವೂ ಕೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಅವಧಿಯಲ್ಲಿ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಡರೆ ಅದರ ಬೆಲೆಯನ್ನು ಪಾವತಿ ಮಾಡಬೇಕಾದ ಸಂದರ್ಭ ಬರಬಹುದು.

ತುಲಾ: ಉದ್ಯೋಗದಲ್ಲಿ ಬದಲಾವಣೆ
ಈ ಸಂಚಾರದಿಂದ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗದಲ್ಲಿ ಬದಲಾವಣೆಯ ಪರಿಸ್ಥಿತಿ ಉಂಟಾಗಬಹುದು. ವ್ಯವಹಾರದಲ್ಲಿ ಚಿಂತನಶೀಲವಾಗಿ ಮುಂದುವರಿಯಿರಿ. ನಿಮ್ಮ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಾಣಲಿದೆ. ದೈಹಿಕವಾಗಿ ಸ್ಥಿರತೆಯನ್ನು ಪಡೆಯುವಿರಿ. ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳೂ ನಿವಾರಣೆಯಾಗುವುದು. ಸಂಗಾತಿಯ ಮೇಲೆ ನೀವು ಬದ್ಧವಾಗಿದ್ದರೂ ನಿಮ್ಮ ಸಂಗಾತಿಯ ಅಹಂ ಹಾಗೂ ಉದ್ವೇಗದ ಸ್ವಭಾವದಿಂದಾಗಿ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವೃಶ್ಚಿಕ: ವ್ಯವಹಾರದಲ್ಲಿ ಇರಲಿ ಬುದ್ಧಿವಂತಿಕೆ
ಈ ಸಮಯದಲ್ಲಿ ಕುಟುಂಬದಲ್ಲಿ ಚರ್ಚೆಯನ್ನು ತಪ್ಪಿಸಿ. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡು. ಉದ್ಯೋಗ ಮತ್ತು ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.ನೀವು ಮೊದಲಿಗಿಂತ ಹೆಚ್ಚು ಸದೃಢರಾಗಿರುತ್ತೀರಿ ಮತ್ತು ನೀವು ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಮತ್ತೊಂದೆಡೆ, ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿ ಪರವಾಗಿ ವರ್ತಿಸುತ್ತೀರಿ, ಆದರೆ ಇದು ಸಂಗಾತಿಯ ಅಹಂ ಮತ್ತು ಕೋಪದ ಭಾವನೆಯನ್ನು ಹೆಚ್ಚಿಸುತ್ತದೆ.

ಧನು: ಶತ್ರುಗಳ ಸೋಲು
ಸೂರ್ಯನ ಸಂಚಾರ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಒಡಹುಟ್ಟಿದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಪ್ರಯಾಣವನ್ನು ಮುಂದೂಡಿದರೆ ಉತ್ತಮ. ಬಂಧುಗಳೊಂದಿಗೆ ಚರ್ಚೆಯಿಂದ ದೂರವಿರಿ. ಉದ್ಯೋಗಸ್ಥರು ತಮ್ಮ ಸಹೋದ್ಯೋಗಿಗಳನ್ನು ಚೆನ್ನಾಗಿ ನಡೆಸಿಕೊಳ್ಳಬೇಕು. ಕೂಲಂಕುಷವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ವ್ಯಾಪಾರಿಗಳಿಗೂ ಲಾಭವಾಗುತ್ತದೆ. ನಿಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದವರಿಗೆ ಸೋಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಖರ್ಚಿನ ಮೇಲೆ ಗಮನ ಇರಲಿ. ಏಕೆಂದರೆ ನೀವು ಮೊದಲಿಗಿಂತ ಹೆಚ್ಚು ಖರ್ಚು ಮಾಡಬಹುದು. ನೀವು ಕಡಿಮೆ ಖರ್ಚು ಮಾಡಿದರೆ ನಿಮ್ಮ ಹಣಕಾಸಿನ ಸ್ಥಿತಿ ಬಲಗೊಳ್ಳುತ್ತದೆ.

ಮಕರ: ಉದ್ಯೋಗದಲ್ಲಿ ಪ್ರಗತಿ
ಸೂರ್ಯನ ಸಂಚಾರ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಆಹಾರದ ಬಗ್ಗೆ ಗಮನ ಕೊಡಿ, ಇಲ್ಲದಿದ್ದರೆ ಆರೋಗ್ಯವು ಹದಗೆಡಬಹುದು. ದಾಂಪತ್ಯ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಲಾಭ ಪಡೆಯುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಸರ್ಕಾರದ ಕಡೆಯಿಂದ ಪ್ರಯೋಜನಗಳಾಗಲಿದೆ. ಇದು ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಕೆಲವು ಜನರು ಅಕಾಲಿಕ ವರ್ಗಾವಣೆಯನ್ನು ಎದುರಿಸಬಹುದಾದರೂ, ಆ ವರ್ಗಾವಣೆಯು ನಂತರವೂ ಅವರಿಗೆ ಫಲ ನೀಡುತ್ತದೆ, ಇದರಿಂದ ಅವರಿಗೆ ಸಂತೋಷವಾಗುತ್ತದೆ.

ಕುಂಭ: ಕುಟುಂಬದಲ್ಲಿ ಇರಲಿ ಉತ್ತಮ ವಾತಾವರಣ
ಸೂರ್ಯನ ಸಂಚಾರ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರಕೃತಿಯಲ್ಲಿ ಉಗ್ರತೆ ಹೆಚ್ಚಾಗುತ್ತದೆ. ಜಾಗರೂಕರಾಗಿರಬೇಕು. ಉದ್ಯಮಿಗಳಿಗೆ ಇದು ಉತ್ತಮ ಸಮಯ. ನೀವು ಉದ್ಯೋಗದಲ್ಲಿದ್ದರೆ ಈ ಸಮಯ ಅನುಕೂಲಕರವಾಗಿರುತ್ತದೆ. ನೀವು ಶ್ರೇಷ್ಠ ಎಂಬುದನ್ನುಸಾಬೀತುಪಡಿಸಲು ಈ ಸಮಯ ಒಳ್ಳೆಯದಾಗಿದೆ. ನೀವು ಉತ್ಪ್ರೇಕ್ಷೆಯಿಂದ ಮಾತನಾಡುತ್ತೀರಿ, ಅದು ಕುಟುಂಬದ ವಾತಾವರಣವನ್ನು ಹಾಳು ಮಾಡುತ್ತದೆ. ಈ ವಿಷಯದಲ್ಲಿ ನಿಮ್ಮ ತಾಯಿಯೊಂದಿಗೆ ಜಗಳವೂ ಆಗಬಹುದು, ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಕ್ಷೇತ್ರದಲ್ಲಿ ಗೌರವವೂ ಹೆಚ್ಚಾಗುತ್ತದೆ.

ಮೀನ: ದೂರ ಪ್ರಯಾಣ ಸಾಧ್ಯತೆ
ಈ ಸಂಚಾರ ಖರ್ಚುಗಳನ್ನು ಹೆಚ್ಚಿಸುವುದರ ಜೊತೆಗೆ ಆತಂಕವನ್ನು ಹೆಚ್ಚಿಸುತ್ತದೆ. ದೂರ ಪ್ರಯಾಣ ಮಾಡಬಹುದು. ವಿದೇಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ಲಾಭ ಪಡೆಯಬಹುದು. ವಿರೋಧಿಗಳೊಂದಿಗೆ ಎಚ್ಚರಿಕೆಯಿಂದ ಇರಬೇಕು. ಕೆಲಸದ ಮೇಲೆಯೇ ಗಮನ ಹರಿಸಬೇಕು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಸಮಾಜದಲ್ಲಿ ಗೌರವ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಅದರ ಅನುಗ್ರಹದಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಇದರಿಂದ ನೀವು ಸಹ ಪ್ರಯೋಜನಗಳನ್ನು ಪಡೆಯುತ್ತೀರಿ. ಸಮಾಜದಲ್ಲಿ ಉತ್ತಮ ಗೌರವವನ್ನೂ ಪಡೆಯುತ್ತೀರಿ.












Click it and Unblock the Notifications