Surya Grahana 2023: ಸೂರ್ಯಗ್ರಹಣದಂದು ನಿಮ್ಮ ರಾಶಿಗೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಿ..
ಅಕ್ಟೋಬರ್ ಬಹಳ ವಿಶೇಷವಾದ ತಿಂಗಳು. ಏಕೆಂದರೆ ಈ ಮಾಸದಲ್ಲಿ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ, ನವರಾತ್ರಿ, ಚಂದ್ರಗ್ರಹಣ ಇತ್ಯಾದಿಗಳು ಸಂಭವಿಸುತ್ತವೆ. ಇವುಗಳಲ್ಲಿ ಮೊದಲನೆಯದು ಅಕ್ಟೋಬರ್ 14 ರಂದು 2023 ರ ಎರಡನೇ ಸೂರ್ಯಗ್ರಹಣ ನಡೆಯಲಿದೆ. ಈ ದಿನ ಮಹಾಲಯ ಅಮವಾಸ್ಯೆ ಕೂಡ ಇದೆ. ಹೀಗಾಗಿ ಈ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ.
ಈ ಗ್ರಹಣದ ಸಮಯದಲ್ಲಿ ಸೂರ್ಯನು ಕನ್ಯಾರಾಶಿಯಲ್ಲಿದ್ದಾನೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಸೂತಕ ಅವಧಿ ಇರುವುದಿಲ್ಲ. ಇದು ಖಗೋಳ ವಿದ್ಯಮಾನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣದ ಪರಿಣಾಮ ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಕಂಡುಬರುತ್ತದೆ. ಇದು ಕೆಲವು ರಾಶಿಯವರಿಗೆ ಒಳ್ಳೆಯದು ಮತ್ತು ಕೆಲವರಿಗೆ ಕೆಟ್ಟ ಫಲವನ್ನು ನೀಡುತ್ತದೆ.
ವಿಶೇಷವಾಗಿ ಗ್ರಹಣದ ದುಷ್ಪರಿಣಾಮಗಳಿಂದ ದೂರವಿರಲು ಗ್ರಹಣ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಈಗ ಸೂರ್ಯಗ್ರಹಣದಂದು ಏನು ದಾನ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಈ ರಾಶಿಯವರು ಹನುಮಂತನನ್ನು ಪೂಜಿಸುವುದು ಒಳ್ಳೆಯದು. ಗ್ರಹಣದ ದುಷ್ಪರಿಣಾಮಗಳನ್ನು ನಿವಾರಿಸಲು ಮೇಷ ರಾಶಿಯವರು ಬೆಲ್ಲ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ದಾನವಾಗಿ ನೀಡುವುದರಿಂದ ಉತ್ತಮ ಫಲ ಪಡೆಯುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಸೂರ್ಯಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಈ ರಾಶಿಯವರು ಹಾಲು, ಮೊಸರು, ಸಕ್ಕರೆ, ಬಿಳಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಮಿಥುನ ರಾಶಿಯವರು ಸೂರ್ಯಗ್ರಹಣದಲ್ಲಿ ಹಸುವಿಗೆ ಆಹಾರವನ್ನು ನೀಡಬೇಕು. ಇದಲ್ಲದೇ ಹಸಿರು ಸೊಪ್ಪು, ಹಸಿರು ಬಟ್ಟೆ, ಹಸಿರು ತರಕಾರಿ ಇತ್ಯಾದಿಗಳನ್ನು ಗ್ರಹಣ ದಿನದಂದು ದಾನ ಮಾಡಬಹುದು.

ಕರ್ಕಾಟಕ ರಾಶಿ
ಚಂದ್ರ ಗ್ರಹ ಕರ್ಕಾಟಕ ರಾಶಿಯ ಅಧಿಪತಿಯಾಗಿದೆ. ಕರ್ಕಾಟಕ ರಾಶಿಯ ಜನರು ಸೂರ್ಯಗ್ರಹಣದ ದಿನ ಹಾಲು, ಮೊಸರು, ಬಿಳಿ ಬಟ್ಟೆ, ಸಕ್ಕರೆಯಂತಹ ಬಿಳಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ ಗ್ರಹ. ಈ ಸಿಂಹ ರಾಶಿಯವರು ಸೂರ್ಯಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಬೆಲ್ಲ, ಗೋಧಿ, ತಾಮ್ರದ ಪಾತ್ರೆಗಳು, ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು.

ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಈ ರಾಶಿಯವರು ಗ್ರಹಣದ ದಿನ ಹಸಿರು ಸೊಪ್ಪು, ಹಸಿರು ತರಕಾರಿ, ಹಸಿರು ಬಟ್ಟೆ, ಕಂಚಿನ ಪಾತ್ರೆ ಇತ್ಯಾದಿಗಳನ್ನು ದಾನ ಮಾಡುವುದರಿಂದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.

ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಸೂರ್ಯಗ್ರಹಣದಿಂದ ಈ ರಾಶಿಯವರು ಎದುರಿಸುವ ತೊಂದರೆಗಳನ್ನು ತಪ್ಪಿಸಲು ಹಾಲು, ಮೊಸರು, ಸಕ್ಕರೆ, ಬಿಳಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡುವುದು ಉತ್ತಮ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ವೃಶ್ಚಿಕ ರಾಶಿಯವರು ಸೂರ್ಯಗ್ರಹಣದ ದಿನದಂದು ಬೆಲ್ಲ, ಕೆಂಪು ವಸ್ತ್ರ, ಹಣ್ಣು ಇತ್ಯಾದಿಗಳನ್ನು ದಾನ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು ಗ್ರಹವಾಗಿದೆ. ಈ ರಾಶಿಯ ಜನರು ಸೂರ್ಯಗ್ರಹಣದ ದಿನದಂದು ಹಳದಿ ಬಣ್ಣದ ಹಣ್ಣುಗಳು, ಕಡಲೆಕಾಳುಗಳು, ಹಳದಿ ಬಟ್ಟೆಗಳು, ಕಡಲೆಹಿಟ್ಟು, ಅರಿಶಿನ ಪುಡಿ ಮುಂತಾದ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು.

ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿಯಾಗಿದೆ. ಈ ರಾಶಿಯವರು ಶನಿದೇವನಿಗೆ ಸಂಬಂಧಿಸಿದ ಸೂರ್ಯಗ್ರಹಣದ ದಿನದಂದು ಎಳ್ಳು, ಕಪ್ಪು ಬಟ್ಟೆ, ಬಾಚಣಿಗೆ, ಸಾಸಿವೆ ಎಣ್ಣೆ, ಕಬ್ಬಿಣದ ಪಾತ್ರೆಗಳು ಇತ್ಯಾದಿಗಳನ್ನು ದಾನ ಮಾಡದರೆ ತುಂಬಾ ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ ಗ್ರಹ ಆಗಿರುವುದರಿಂದ ಈ ರಾಶಿಯವರು ಮಕರ ರಾಶಿಯವರಿಗೆ ತಿಳಿಸಿದಂತೆ ಎಳ್ಳು, ಕಪ್ಪು ಬಟ್ಟೆ, ಬಾಚಣಿಗೆ, ಸಾಸಿವೆ ಎಣ್ಣೆ, ಕಬ್ಬಿಣದ ಪಾತ್ರೆಗಳನ್ನು ದಾನ ಮಾಡಬೇಕು.

ಮೀನ ರಾಶಿ
ಗುರು ಗ್ರಹ ಮೀನ ರಾಶಿಯ ಅಧಿಪತಿಯಾಗಿದೆ. ಈ ರಾಶಿಗಳ ಜನರು ಸೂರ್ಯಗ್ರಹಣದ ದಿನದಂದು ಗುರು ಗ್ರಹಕ್ಕೆ ಸಂಬಂಧಿಸಿದ ಹಳದಿ ಬಟ್ಟೆ, ಬೇಳೆ, ಹಳದಿ ಹಣ್ಣುಗಳು, ಅರಿಶಿನ ಪುಡಿ, ಬೇಳೆ ಹಿಟ್ಟು ಇತ್ಯಾದಿಗಳನ್ನು ದಾನ ಮಾಡಿದರೆ ಉತ್ತಮ ಫಲ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications