• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂರ್ಯಗ್ರಹಣ 2021: ಯಾವ ರಾಶಿ ಮೇಲೆ ಏನು ಪರಿಣಾಮ?

|
Google Oneindia Kannada News

ಬೆಂಗಳೂರು, ಜೂನ್ 04: ಈ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. ಚಂದ್ರಗ್ರಹಣ ಸಂಭವಿಸಿದ 15 ದಿನಗಳೊಳಗಾಗಿ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಚಂದ್ರರು ಪರಸ್ಪರ ಹತ್ತಿರದಲ್ಲಿದ್ದಾಗ ವಾರ್ಷಿಕ ಸೂರ್ಯ ಗ್ರಹಣ ಸಂಭವಿಸುತ್ತದೆ ಮತ್ತು ಆದ್ದರಿಂದ ಚಂದ್ರನು ಇಡೀ ಸೂರ್ಯನನ್ನು ಮರೆ ಮಾಡುವಷ್ಟು ದೊಡ್ಡದಾಗಿರುವುದಿಲ್ಲ. ಹೀಗಾಗಿ, ಚಂದ್ರನು ಸೂರ್ಯನನ್ನು ಮರೆ ಮಾಡಿದಂತೆ, ಸೂರ್ಯನ ಹೊರಭಾಗವು ಇನ್ನೂ ಗೋಚರಿಸುತ್ತದೆ. ಇದನ್ನು ಗೋಲ್ಡನ್‌ ರಿಂಗ್‌ ಅಥವಾ ಚಿನ್ನದ ಉಂಗುರದ ಸ್ಥಿತಿ ಎನ್ನುತ್ತಾರೆ.

ಧರ್ಮಗ್ರಂಥಗಳ ಪ್ರಕಾರ ಪೂರ್ಣಸೂರ್ಯಗ್ರಹಣದಲ್ಲಿ ಮಾತ್ರ ಸೂರ್ಯಗ್ರಹಣದ ಅವಧಿ ಮಾನ್ಯವಾಗಿರುತ್ತದೆ. ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಸೂತಕದ ಅವಧಿ ಪ್ರಾರಂಭವಾಗುತ್ತದೆ. ಜೂನ್‌ 10ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಆಂಶಿಕ ಗ್ರಹಣವಾದ್ದರಿಂದ ಸೂತಕದ ಅವಧಿ ಮಾನ್ಯವಾಗಿಲ್ಲ.

ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ, ಎಲ್ಲೆಲ್ಲಿ ಗೋಚರ?ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ, ಎಲ್ಲೆಲ್ಲಿ ಗೋಚರ?

2021 ರಲ್ಲಿ ವಿಶ್ವವು ಎರಡು ಸೂರ್ಯ ಗ್ರಹಣಗಳಿಗೆ ಸಾಕ್ಷಿಯಾಗಲಿದೆ. 2021ರಲ್ಲಿ ಸಂಭವಿಸಲಿರುವ ಸೂರ್ಯಗ್ರಹಣಗಳ ದಿನಾಂಕ ಮತ್ತು ಅದು ಗೋಚರಿಸುವ ದೇಶಗಳನ್ನು ಉಲ್ಲೇಖಿಸಲಾಗಿದೆ.

ಜೂನ್‌ 10ರಂದು ಸಂಭವಿಸುವ ಸೂರ್ಯಗ್ರಹಣವು ಉತ್ತರ ಅಮೆರಿಕಾ, ಯುರೋಪ್‌ ಮತ್ತು ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರುತ್ತದೆ. ಅಲ್ಲದೇ ಉತ್ತರ ಕೆನಡಾ,ಗ್ರೀನ್‌ಲ್ಯಾಂಡ್‌ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದಾಗಿದೆ.. ಭಾರತದಲ್ಲಿ ಕೂಡಾ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಗೋಚರವಾಗಲಿದೆ.

2021ರ ಎರಡನೆಯ ಮತ್ತು ಕೊನೆಯ ಸೂರ್ಯಗ್ರಹಣವಾಗಿರುತ್ತದೆ. ಇದು ಡಿಸೆಂಬರ್ 4ರಂದು ಗೋಚರವಾಗಲಿದೆ. ಈ ಗ್ರಹಣವು ಸಂಪೂರ್ಣ ಸೂರ್ಯಗ್ರಹಣವಾಗಲಿದ್ದು, ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ, ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ..

 ಸೂರ್ಯಗ್ರಹಣದಿಂದ ಮೇಷ ರಾಶಿ ಮೇಲಾಗುವ ಪರಿಣಾಮ

ಸೂರ್ಯಗ್ರಹಣದಿಂದ ಮೇಷ ರಾಶಿ ಮೇಲಾಗುವ ಪರಿಣಾಮ

ಆರೋಗ್ಯ ದೃಷ್ಟಿಯಿಂದ ಮೇಷರಾಶಿಯವರಿಗೆ ಸೂರ್ಯಗ್ರಹಣ ಉತ್ತಮ ಸಮಯವಲ್ಲ, ಉದರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸರಿಯಾದ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ, ಕೆಲಸದ ವಿಷಯದಲ್ಲಿ ಹೆಚ್ಚಿನ ಬದಲಾವಣೆಯಾಗಲಿದೆ. ಸಾಲವನ್ನು ಯಾವುದೇ ಕಾರಣಕ್ಕೂ ಪಡೆಯಬೇಡಿ.

 ವೃಷಭ ರಾಶಿ

ವೃಷಭ ರಾಶಿ

ಜೂನ್‌ 10ರಂದು ನಡೆಯುವ ಸೂರ್ಯಗ್ರಹಣ ವೃಷಭ ರಾಶಿ, ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ಈ ಗ್ರಹಣವು ವೃಷಭ ರಾಶಿಯಲ್ಲಿ ನಡೆಯುವುದರಿಂದ ಈ ರಾಶಿಯ ಮೇಲೆ ಗ್ರಹಣದ ಗರಿಷ್ಠ ಪರಿಣಾಮ ಕಂಡುಬರುತ್ತದೆ. ಈ ದಿನ ವೃಷಭ ರಾಶಿಯಲ್ಲಿ ಚಂದ್ರನೂ ಇರುತ್ತಾನೆ. ಹಾಗಾಗಿ ಈ ದಿನ ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೇ ಹಣವನ್ನೂ ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಖರ್ಚುಮಾಡಿ.

 ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಗೆ ಸೂರ್ಯಗ್ರಹಣ ಉತ್ತಮ ಫಲವನ್ನು ನೀಡುತ್ತದೆ. ಉದ್ಯೋಗ, ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಸಾಧ್ಯತೆ, ನೀವು ಯಾವುದೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಸಮಯ ನಿಮ್ಮದಾಗಲಿದೆ.

 ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಆಸ್ತಿ ಸಂಬಂಧಿತ ವಿಷಯಗಳಿಗೆ ಇದು ಉತ್ತಮ ಸಮಯ, ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರವಾಗಲಿದೆ. ಚಿನ್ನ ಖರೀದಿ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ನಿಮಗೆ ಉತ್ತಮ ಲಾಭವನ್ನು ತರಲಿದೆ.

 ಸೂರ್ಯಗ್ರಹಣ

ಸೂರ್ಯಗ್ರಹಣ

ಕಂಕಣ ಭಾಗ್ಯ ಕೂಡಿಬರಲಿದೆ, ಉದ್ಯೋಗದಲ್ಲಿ ಉತ್ತಮ ಲಾಭ ಗಳಿಸುತ್ತೀರಿ, ವಿದ್ಯಾರ್ಥಿಗಳಿಗೆ ಕೂಡ ಉತ್ತಮ ದಿನವಾಗಿರಲಿದೆ.ತೂಕದ ಸಮಸ್ಯೆ ಎದುರಿಸುತ್ತೀರಿ, ಹಾಗೆಯೇ ಬೆನ್ನುಹುರಿಗೆ ಸಂಬಂಧಿಸಿದಂತಹ ಸಮಸ್ಯೆಗಳು ಕಾಡಲಿವೆ.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿ ಚಂದ್ರನ ಆವಾಸಸ್ಥಾನವಾಗಿದೆ, ಹಿರಿಯರು ಒಡಹುಟ್ಟಿದವರ ಜತೆಗೆ ಒಳ್ಳೆಯ ಕಾಲ ಕಳೆಯುತ್ತೀರಿ, ಆರ್ಥಿಕತೆ ಸುಧಾರಿಸಲಿದೆ, ಉತ್ತಮ ಉದ್ಯೋಗ ಪಡೆಯಲಿದ್ದೀರಿ.

 ತುಲಾ ರಾಶಿ

ತುಲಾ ರಾಶಿ

ಗರ್ಭಿಣಿಯರು ಹೆಚ್ಚು ಕಾಳಜಿವಹಿಸಬೇಕು, ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಲಿದೆ. ನಿಮ್ಮ ಅತಿಯಾದ ಆಲೋಚನೆಯು ಆತಂಕ ಮತ್ತು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ. ವ್ಯವಹಾರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಒಬ್ಬಂಟಿಯಾಗಿರಲು ಆಲೋಚಿಸುತ್ತೀರಿ, ಹೂಡಿಕೆಗಳು ಸಧ್ಯಕ್ಕೆ ಬೇಡ, ಉದ್ಯೋಗದಲ್ಲಿ ಹೊಡೆತವನ್ನು ಅನುಭವಿಸುವಿರಿ, ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಯಾವುದೇ ಒಳ್ಳೆಯ ಕೆಲಸಕ್ಕೂ ಕೈಹಾಕುವುದು ಬೇಡ.

 ಧನು ರಾಶಿ

ಧನು ರಾಶಿ

ಜೂನ್ ತಿಂಗಳು ಧನು ರಾಶಿ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಶತ್ರುಗಳ ಗೆಲುವಾಗಲಿದೆ, ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಸಂಗಾತಿ ನಡುವಿನ ಸಂಬಂಧವೂ ಉತ್ತಮವಾಗಿರಲಿದೆ. ನಿಮ್ಮ ಹೆತ್ತವರ ಆರೋಗ್ಯದಲ್ಲಿ ಏರುಪೇರಾಗಲಿದೆ.

 ಮಕರ ರಾಶಿ

ಮಕರ ರಾಶಿ

ಮಕ್ಕಳಿಗೆ ತೊಂದರೆಯಾಗಲಿದೆ, ನಿಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನವಹಿಸಬೇಕಾಗುತ್ತದೆ, ನಿಮ್ಮ ಕೆಲಸ ಬದಲಾಯಿಸಲು ಅಥವಾ ಹೊಸ ಕೆಲಸವನ್ನು ಹುಡುಕಲು ಇದು ಉತ್ತಮ ಸಮಯವಲ್ಲ, ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ.

 ಕುಂಭ ರಾಶಿ

ಕುಂಭ ರಾಶಿ

ಹಣ ಹಾಗೂ ಆರೋಗ್ಯ ಸಂಬಂಧಿತ ವಿಷಯಗಳು ಉತ್ತಮವಾಗುತ್ತದೆ, ಹಣಕಾಸಿನ ವಿಚಾರದಲ್ಲಿ ಲಾಭವೂ ಕೂಡ ಇದೆ, ಆದರೆ ಯಾವುದೇ ದುಡುಕಿನ ನಿರ್ಧಾರ ಬೇಡ, ಕೆಲಸದ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಷ್ಟಪಡಬೇಕಾಗುತ್ತದೆ.

  ಶಿಲ್ಪಾ ನಾಗ್ ವಿಚಾರವಾಗಿ ಸ್ಪಷ್ಟನೆ ನೀಡಿದ ರೋಹಿಣಿ ಸಿಂಧೂರಿ | Oneindia Kannada
   ಮೀನ ರಾಶಿ

  ಮೀನ ರಾಶಿ

  ಸೂರ್ಯ ಗ್ರಹಣವು ಹೆಚ್ಚಿನ ಲಾಭವನ್ನು ತರಲಿದೆ, ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ, ಉದರ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರದಿಂದಿರಿ.

  English summary
  Here we talking about the Effects of Solar Eclipse on Different Zodiac Signs in 2021. Read on.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X