ಶ್ರಾವಣ ಮಾಸದ ವಾರದ ಪಂಚಾಂಗ : ಆಗಸ್ಟ್ 16ರಿಂದ 22
ಶ್ರಾವಣ ಮಾಸದ ಆಗಸ್ಟ್ 16ರಿಂದ 22ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಆಗಸ್ಟ್ 16, ರವಿವಾರ : ಪೂರ್ವಾಫಾಲ್ಗುಣಿ ನಕ್ಷತ್ರ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಆ.17, ಸೋಮವಾರ : ಪೂರ್ವಾಫಾಲ್ಗುಣಿ. ಮಘಾ ಮಳೆ ಆರಂಭದ ದಿನ. ಹೊಸ ಕಲೆಗಳನ್ನು ಕಲಿಯಲು ಆರಂಭಿಸಲು ಸೂಕ್ತ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಆ.18, ಮಂಗಳವಾರ : ಉತ್ತರಫಾಲ್ಗುಣಿ. ನಾಗಚತುರ್ಥಿ. ಸೀರೆ ಕಾರ್ಯಕ್ರಮ ಮಾಡಲು ಉತ್ತಮ. ದೂರ ಪ್ರಯಾಣದಿಂದ ಶುಭಕರ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಆ.19, ಬುಧವಾರ : ಹಸ್ತಾ. ನಾಗರ ಪಂಚಮಿ. ಜಾಗತಿಕ ಛಾಯಾಚಿತ್ರಗಾರರ ದಿನ. ವ್ಯವಸಾಯಕ್ಕೆ ಸಂಬಂಧಪಟ್ಟ ಕೆಲಸ ಮತ್ತು ಒಡವೆ, ವಸ್ತ್ರ ಖರೀದಿಗೆ ಸೂಕ್ತ. ದೂರ ಪ್ರಯಾಣದಿಂದ ಸಂತಸ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಆ.20, ಗುರುವಾರ : ಚಿತ್ತಾ. ಸದ್ಭಾವನೆ ದಿನ. ಹೊಸ ವಾಹನ, ಸೌಂದರ್ಯಕ್ಕೆ ಸಂಬಂಧಪಟ್ಟ ಮತ್ತು ಕಾಳು-ಕಡಿಗಳನ್ನು ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಆ.21, ಶುಕ್ರವಾರ : ಸ್ವಾತಿ. ಸಂಪತ್ ಶುಕ್ರವಾರ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಆ.22, ಶನಿವಾರ : ವಿಶಾಖಾ. ದೂರ ಪ್ರಯಾಣದಿಂದ ಆನಂದ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.
ಈ ವಾರದ ಗ್ರಹಗತಿ : ಕರ್ಕ: ಶುಕ್ರ+ಸೂರ್ಯ+ಮಂಗಳ. ಸಿಂಹ: ಗುರು+ಬುಧ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.












Click it and Unblock the Notifications