2027ರವರೆಗೆ ಈ ರಾಶಿಯವರಿಗೆ ಅದೃಷ್ಟ : ಮುಟ್ಟಿದ್ದೆಲ್ಲಾ ಚಿನ್ನ, ಭೂಮಿ ವಾಹನ ಖರೀದಿ ಯೋಗ, ಮಾತನಾಡುವಾಗ ಇರಲಿ ಎಚ್ಚರ

ಜ್ಯೋತಿಷ್ಯದಲ್ಲಿ ಶನಿ ಸಂಚಾರ (Shani Nakshatra Gochara) ಮತ್ತು ನಕ್ಷತ್ರ ಬದಲಾವಣೆಗೆ ವಿಶೇಷ ಮಹತ್ವವಿದೆ. ಶನಿಯನ್ನು ಕರ್ಮದ ಗ್ರಹ ಮತ್ತು ಶಿಸ್ತಿನ ಸಂಕೇತ ಎಂದೇ ಹೇಳಲಾಗುತ್ತದೆ. ಶನಿಯು ಹಿಮ್ಮುಖ ಚಲನಯಲ್ಲಿ ಇದ್ದುಕೊಂಡೇ ಉತ್ತರಭಾದ್ರಪದ ನಕ್ಷತ್ರದ ನಾಲ್ಕನೇ ಪಾದವನ್ನು ಪ್ರವೇಶಿಸಿದ್ದಾನೆ. ಮುಂದಿನ ವರ್ಷ ಅಂದರೆ 2027 ಫೆಬ್ರವರಿ 8ರವರೆಗೆ, ಇಲ್ಲೇ ಶನಿಯ ಸಂಚಾರ. ಡಿಸೆಂಬರ್ 11ಕ್ಕೆ ಹಿಮ್ಮುಖ ಚಲನೆಯಿಂದ ಮತ್ತೆ ನೇರ ನಡೆಗೆ ಮರಳುತ್ತಾನೆ.

Shani Nakshatra Gochara In UttarBhadra Fourth Pada Will Bring Luck Opportunities To Four Zodiac Sign

ಶನಿಯ ಈ ಸಂಚಾರ ಬದಲಾವಣೆ ಉದ್ಯೋಗ, ವ್ಯವಹಾರ, ಆದಾಯ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಾಣುವ ನಿರೀಕ್ಷೆಯಿದೆ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಸಾಧ್ಯವಾಗುತ್ತದೆ. ಬಾಕಿ ಇರುವ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ನಿವಾರಣೆಯಾಗುವುದು. ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಈ ಸಂಚಾರದ ಪರಿಣಾಮ ಪ್ರತಿಯೊಂದು ರಾಶಿಯವರ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಗುವುದು.

Shani Nakshatra Gochara: ಮೇಷ ರಾಶಿ:

ಶನಿ ಮೇಷ ರಾಶಿಯವರ 12ನೇ ಮನೆಯಲ್ಲಿದ್ದಾನೆ. ಈ ಮನೆ ಖರ್ಚು, ವಿದೇಶದಲ್ನ ಉದ್ಯೋಗಕ್ಕೆ ಸಂಬಂಧಿಸಿದೆ. ಈ ಸಮಯ ದಿಢೀರ್ ಖರ್ಚು ಹೆಚ್ಚಾಗುವುದಕ್ಕೆ ಕಾರಣವಾಗಬಹುದು. ಹಾಗಾಗಿ ಖರ್ಚು ವೆಚ್ಚದ ಬಗ್ಗೆ ಗಮನ ಇರಲಿ.
ವಿದೇಶಿ ಕಂಪನಿ ಅಥವಾ ಆನ್ ಲೈನ್ ಕೆಲಸಕ್ಕೆ ಸಂಬಂಧಿಸಿದ ಜನರು ಹೊಸ ಜವಾಬ್ದಾರಿ ಪಡೆಯಬಹುದು. ಮತ್ತೆ ಹಳೆಯ ಕೆಲಸ ಪ್ರಾರಂಭಿಸಬೇಕಾಗಬಹುದು. ಮೇಷ ರಾಶಿಯವರು ತಕ್ಷಣ ಫಲ ಸಿಗಬೇಕು ಎಂದು ಆಸೆ ಪಡುವ ಬದಲು ತಮ್ಮ ಕೆಲಸದತ್ತ ಗಮನ ಶ್ರಮ ವಹಿಸುವುದು ಒಳ್ಳೆಯದು. ಹಣಕಾಸಿನ ಲೆಕ್ಕಾಚಾರ, ನಿರ್ವಹಣೆ ಸರಿಯಾಗಿ ಇದ್ದರೆ ಸಮಸ್ಯೆ ಕಡಿಮೆಯಾಗಬಹುದು.

ವೃಷಭ ರಾಶಿ :

ವೃಷಭ ರಾಶಿಯ 11ನೇ ಮನೆಯಲ್ಲಿ ಶನಿ ಇದ್ದಾನೆ. ಈ ಮನೆ ಆದಾಯ, ಲಾಭ, ಸ್ನೇಹಿತರು ಮತ್ತು ವೃತ್ತಿ ವಿಚಾರಕ್ಕೆ ಸಂಬಂಧಿಸಿದೆ. ಹಳೆಯ ಪ್ರಯತ್ನ ಪ್ರಯೋಜನ ತಂದು ಕೊಡುವುದು. ಉದ್ಯೋಗದಲ್ಲಿ ಇರುವವರು ಕಠಿಣ ಪರಿಶ್ರಮದ ಫಲ ಪಡೆಯುವರು. ಹಣ ಸಂಪಾದನೆ ಮಾಡುವ ಹೊಸ ಮಾರ್ಗ ಹುಟ್ಟಿಕೊಳ್ಳುವುದು.
ಆದಾಯ ಹೆಚ್ಚಿಸುವುದರ ಜೊತೆಗೆ, ಉಳಿತಾಯದತ್ತಲೂ ಗಮನ ಹರಿಸಿ.

ಮಿಥುನ ರಾಶಿ :

ಮಿಥುನ ರಾಶಿಯ 10ನೇ ಮನೆಯಲ್ಲಿ ಶನಿ ಇದ್ದಾನೆ. ಈ ಮನೆಯು ಉದ್ಯೋಗ, ವ್ಯವಹಾರ, ವೃತ್ತಿ ಮತ್ತು ಪ್ರಗತಿಗೆ ಸಂಬಂಧಿಸಿದೆ. ಈ ಸಮಯದಲ್ಲಿ, ಕೆಲಸದ ಒತ್ತಡ ಹೆಚ್ಚಾಗಬಹುದು. ನಿಮ್ಮ ಕೌಶಲ್ಯ ತೋರಿಸಲು ಅವಕಾಶ ಸಿಗುವುದು. ಬಾಕಿ ಉಳಿದಿರುವ ಕೆಲಸ ಸರಿಯಾದ ಸಮಯಕ್ಕೆ ಪೂರ್ಣವಾಗುವುದು. ಹೊಸ ಜವಾಬ್ದಾರಿ ಸಿಗುವುದು. ಉದ್ಯೋಗ ಬದಲಾಯಿಸುವುದಕ್ಕೆ ಇದು ಸೂಕ್ತ ಸಮಯ ಅಲ್ಲ. ಕಾಯುವುದು ಒಳ್ಳೆಯದು.

ಕರ್ಕಾಟಕ ರಾಶಿ :

ಕರ್ಕಾಟಕ ರಾಶಿಯವರ ಒಂಭನೇ ಮನೆಯಲ್ಲಿ ಶನಿಯಿದ್ದಾನೆ. ಈ ಮನೆ ಅದೃಷ್ಟ, ಉನ್ನತ ಶಿಕ್ಷಣ, ದೀರ್ಘ ಪ್ರಯಾಣ ಮತ್ತು ಗುರುವಿಗೆ ಸಂಬಂಧಿಸಿದೆ. ಅಧ್ಯಯನ, ಪ್ರಯಾಣ ಅಥವಾ ವಿದೇಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ವಿಳಂಬವಾಗಬಹುದು.
ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನೆಡೆಯಾಗುವುದು. ತಂದೆ ಅಥವಾ ಹಿರಿಯ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮುಡಬಹುದು. ಈ ಸಮಯದಲ್ಲಿ ವಾದಿಸುವುದಕ್ಕಿಂತ ಸುಮ್ಮನೆ ಇರುವುದು ಉತ್ತಮ. ಕೇವಲ ಅದೃಷ್ಟವನ್ನೇ ಅವಲಂಬಿಸುವ ಬದಲು ಕಷ್ಟಪಟ್ಟು ಕೆಲಸ ಮಾಡುವತ್ತ ಗಮನ ಹರಿಸಿ.

ಸಿಂಹ ರಾಶಿ :

ಸಿಂಹ ರಾಶಿಯ ಪಾಲಿಗೆ ಶನಿ ಎಂಟನೇ ಮನೆಯಲ್ಲಿದ್ದಾನೆ. ಹಣದ ವ್ಯವಹಾರದ ಬಗ್ಗೆ ಗಮನ ಹರಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಬಗ್ಗೆ ಎಚ್ಚರ ಇರಲಿ. ಹಣ ಹೂಡಿಕೆ ಮಾಡುವ ಮೊದಲು ಲಾಭ ನಷ್ಟದ ಬಗ್ಗೆ ಸರಿಯಾಗಿ ಲೆಕ್ಕ ಹಾಕಿಕೊಳ್ಳಿ. ಯಾವುದೇ ದೊಡ್ಡ ಆರ್ಥಿಕ ನಿರ್ಧಾರ ತೆಗೆದುಕೊಳ್ಳಬಾರದು. ಈ ಸಮಯ ಹೊಸ ಕೆಲಸಕ್ಕೆ ಸೂಕ್ತ ಅಲ್ಲ.

ಕನ್ಯಾ ರಾಶಿ :

ಕನ್ಯಾರಾಶಿಯವರ ಏಳನೇ ಮನೆಯಲ್ಲಿ ಶನಿ ಇದ್ದಾನೆ. ಈ ಮನೆ ಮದುವೆ, ಜೀವನ ಸಂಗಾತಿ, ವ್ಯವಹಾರ ಮತ್ತು ಗ್ರಾಹಕರಿಗೆ ಸಂಬಂಧಿಸಿದ್ದಾಗಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಇಟ್ಟುಕೊಳ್ಳಿ. ಹಳೆಯ ಒಪ್ಪಂದದಿಂದ ಲಾಭವಾಗುವುದು. ಸಣ್ಣ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಪರಿಹಾರ ಕಂಡುಹಿಡಿಯುವುದು ಉತ್ತಮ.

ತುಲಾ ರಾಶಿ :

ಶನಿಯು ತುಲಾ ರಾಶಿಯವರ ಆರನೇ ಮನೆಯಲ್ಲಿದ್ದಾನೆ. ಈ ಮನೆ ಉದ್ಯೋಗ, ಸ್ಪರ್ಧೆ, ಸಾಲ ಮತ್ತು ದೈನಂದಿನ ಕೆಲಸಕ್ಕೆ ಸಂಬಂಧಿಸಿದೆ.ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಆದರೂ ಎಲ್ಲಾ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವಿರಿ. ನಿಮ್ಮ ಕಾರ್ಯಕ್ಷಮತೆ ಸುಧಾರಿಸಲು ಅವಕಾಶ ಇರುತ್ತದೆ.ಬಾಕಿ ಕೆಲಸ ಸರಿಯಾದ ಸಮಯಕ್ಕೆ ಮುಗಿಯುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ಕಾಣುವರು. ಹಳೆಯ ವಿವಾದ ಅಥವಾ ಸಾಲ ಸಮಸ್ಯೆ ಬಗೆಹರಿಯುವುದು.

ವೃಶ್ಚಿಕ ರಾಶಿ :

ವೃಶ್ಚಿಕ ರಾಶಿಯವರ ಐದನೇ ಮನೆಯಲ್ಲಿದ್ದಾನೆ ಶನಿ . ಈ ಮನೆ ಅಧ್ಯಯನ, ಬುದ್ಧಿವಂತಿಕೆ, ಪ್ರೀತಿ, ಮಕ್ಕಳು ಮತ್ತು ಸೃಜನಶೀಲ ಕೆಲಸಗಳೊಂದಿಗೆ ಸಂಬಂಧ ಹೊಂದಿದೆ. ಮಾಧ್ಯಮ, ಬರವಣಿಗೆ, ವಿನ್ಯಾಸ ಮತ್ತು ಇತರ ಸೃಜನಶೀಲ ಕೆಲಸಗಳಿಗೆ ಸಂಬಂಧಿಸಿದವರಿಗೆ ಉತ್ತಮ ಅವಕಾಶ ಸಿಗುವುದು. ಷೇರು ಮಾರುಕಟ್ಟೆಯಲ್ಲಿ ಹಣ ನು ಹೂಡಿಕೆ ಮಾಡುವ ಮೊದಲು ಅಪಾಯದ ಬಗ್ಗೆಯೂ ಅರಿತುಕೊಳ್ಳಿ.

ಧನು ರಾಶಿ :

ಶನಿಯು ಧನು ರಾಶಿಯ ನಾಲ್ಕನೇ ಮನೆಯಲ್ಲಿದ್ದಾನೆ. ಈ ಮನೆ ಮನೆ, ಆಸ್ತಿ, ವಾಹನ ಮತ್ತು ಕುಟುಂಬಕ್ಕೆ (family) ಸಂಬಂಧಿಸಿದೆ. ಮನೆ ರಿಪೇರಿ, ಖರೀದಿ, ಆಸ್ತಿ ದಾಖಲೆಗಳು ಅಥವಾ ಕುಟುಂಬದ ಯಾವುದೇ ಜವಾಬ್ದಾರಿಗಾಗಿ ಖರ್ಚು ಮಾಡಬೇಕಾಗಬಹುದು. ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ. ಮನೆ ಮತ್ತು ಕಚೇರಿ ಕೆಲಸಗಳ ನಡುವೆ ಸಮತೋಲನ ಇರಲಿ. ಕುಟುಂಬದ ಸದಸ್ಯರಿಗೆ ನಿಮ್ಮ ಸಹಾಯ ಬೇಕಾಗಬಹುದು.

ಮಕರ ರಾಶಿ :

ಮಕರ ರಾಶಿಯವರಿಗೆ ಶನಿ ಮೂರನೇ ಮನೆಯಲ್ಲಿದ್ದಾನೆ. ಈ ಮನೆ ಕಠಿಣ ಪರಿಶ್ರಮ, ಸಂವಹನ, ಸಣ್ಣ ಪ್ರವಾಸಗಳು, ಬರವಣಿಗೆ ಮತ್ತು ಹೊಸ ಕೌಶಲ್ಯಗಳೊಂದಿಗೆ ಸಂಬಂಧ ಹೊಂದಿದೆ. ಹೊಸ ಪ್ರಯತ್ನಕ್ಕೆ ಕೈ ಹಾಕಬಹುದು. ಹೊಸ ಯೋಜನೆ, ಕೆಲಸದಲ್ಲಿ ಯಶಸ್ಸು ಸಿಗುವುದು. ಹಳೆಯ ಪ್ರಾಜೆಕ್ಟ್ ಪುನಃ ಪ್ರಾರಂಭವಾಗಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗುವುದು.

ಕುಂಭ ರಾಶಿ :

ಕುಂಭ ರಾಶಿಯ ಎರಡನೇ ಮನೆಯಲ್ಲಿದ್ದಾನೆ ಶನಿ. ಈ ಮನೆ ಹಣ, ಉಳಿತಾಯ, ಕುಟುಂಬ ಮತ್ತು ಮಾತನಾಡುವ ವಿಧಾನದೊಂದಿಗೆ ಸಂಬಂಧ ಹೊಂದಿದೆ. ಈ ಸಮಯದಲ್ಲಿ, ಹಣಕಾಸಿನ ಯೋಜನೆಯತ್ತ ಗಮನ ಹರಿಸುವುದು ಅಗತ್ಯ. ಆದಾಯ ಹೆಚ್ಚಾಗುವುದು. ಜೊತೆಗೆ ಖರ್ಚುಗಳೂ ಬರುವುದು. ಬಾಕಿ ಇರುವ ಹಣ ಕೈ ಸೇರುವ ಸಾಧ್ಯತೆ ಇದೆ. ಬೇರೆಯವರ ಜೊತೆ ಮಾತನಾಡುವಾಗ ಪದಗಳ ಬಗ್ಗೆ ಎಚ್ಚರ ಇರಲಿ. ಮಾತಿನಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.

ಮೀನ ರಾಶಿ :

ಮೀನ ರಾಶಿಯಲ್ಲಿಯೇ ಶನಿಯು (shani) ಹಿಮ್ಮುಖನಾಗಿರುತ್ತಾನೆ. ಈ ಕಾರಣದಿಂದ ಶನಿ ಸಂಚಾರ ನಿಮಗೆ ಹೆಚ್ಚು ವಿಶೇಷವಾಗಿರುತ್ತದೆ. ವ್ಯಕ್ತಿತ್ವ, ಆತ್ಮವಿಶ್ವಾಸ, ದೈನಂದಿನ ಜೀವನ ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದ ಮೊದಲ ಮನೆಯಲ್ಲಿ ಶನಿ ಇರುತ್ತಾನೆ. ಅರ್ಧಕ್ಕೆ ನಿಂತಿರುವ ಹಳೆಯ ಕೆಲಸ ಪೂರ್ಣವಾಗುವುದು. ವೃತ್ತಿಜೀವನ ಅಥವಾ ವೈಯಕ್ತಿಕ ಜೀವನದ ನಿರ್ಧಾರದ ಬಗ್ಗೆ ಗೊಂದಲ ಇದ್ದರೆ ಪರಿಹರಿಸಿಕೊಳ್ಳಿ. ಕೆಲಸದ ಒತ್ತಡ ಹೆಚ್ಚಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+