Saturn Transit: ಕಷ್ಟಪಟ್ಟವರಿಗೆ ಸಿಹಿ ಸುದ್ದಿ: ಈ ರಾಶಿಯವರಿಗೆ ಏಳೂವರೆ ಶನಿಯಿಂದ ಮುಕ್ತಿ, ಜೀವನದಲ್ಲಿ ಹೊಸ ತಿರುವು!

Saturn Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಗ್ರಹ. ಸಾಮಾನ್ಯವಾಗಿ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶನಿಯ ಈ ಚಲನೆಯ ಪ್ರಭಾವ ಕೆಲವು ರಾಶಿಯವರ ಮೇಲೆ ಉತ್ತಮ ಫಲಿತಾಂಶಗಳನ್ನು ಬೀರುವುದು. ಇಲ್ಲಿವರೆಗೆ ಅನುಭವಿಸಿದ ಸಮಸ್ಯೆಗಳಿಗೆ ಮುಕ್ತಿ ಸಿಗುವುದು.

ಒಂಭತ್ತು ಗ್ರಹಗಳಲ್ಲಿ ಶನಿಗ್ರಹವನ್ನು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಹೇಳಲಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇದ್ದು, ನಂತರ ಮುಂದಿನ ರಾಶಿಗೆ ಚಲಿಸುತ್ತಾನೆ. ಆದ್ದರಿಂದ, ಜ್ಯೋತಿಷ್ಯದಲ್ಲಿ ಶನಿಯ ಪ್ರತಿಯೊಂದು ಸಂಚಾರವು ಕೂಡಾ ಬಹಳ ಮುಖ್ಯ. ಶನಿಯ ಸಂಚಾರವು ಅನೇಕ ರಾಶಿಯವರ ಜೀವನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.

Saturn Transit 2027 Shani Dasha Will End For Aquarius Brings Great Luck Success For Some Zodiac Sign

ಪ್ರಸ್ತುತ ಮೀನ ರಾಶಿಯಲ್ಲಿ ಸಾಗುತ್ತಿರುವ ಶನಿಯು ಜೂನ್ 3, 2027ಕ್ಕೆ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ಈ ಪರಿವರ್ತನೆಯು ಕೆಲವು ರಾಶಿಯವ ಜಾತಕದಲ್ಲಿನ ಶನಿ ದೆಸೆಯನ್ನು ಕೊನೆಗೊಳಿಸುವುದು. ಶನಿಯು ಮೇಷ ರಾಶಿಗೆ ಚಲಿಸಿದಾಗ, ಕೆಲವು ರಾಶಿಯವರ ಕಷ್ಟಗಳೂ ಕೊನೆಯಾಗುವುದು.

ಕುಂಭ ರಾಶಿ (Aquarius)

ಜೂನ್ 3, 2027 ರಂದು ಶನಿಯು ಮೇಷ ರಾಶಿಗೆ ಕಾಲಿಡುತ್ತಿದ್ದ ಹಾಗೆಯೇ ಕುಂಭ ರಾಶಿಯವರ ಏಳೂವರೆ ವರ್ಷದ ಶನಿ ದೆಸೆ ಕೊನೆಗೊಳ್ಳುವುದು. ದೀರ್ಘಕಾಲದವರೆಗೆ ಕೆಲಸ ಕಾರ್ಯಗಳಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು. ಎಲ್ಲಾ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಈ ಬದಲಾವಣೆಯ ನಂತರ ಪರಿಸ್ಥಿತಿಗಳು ಕ್ರಮೇಣ ಉತ್ತಮವಾಗಿ ಬದಲಾಗಬಹುದು. ನಿಂತು ಹೋಗಿರುವ ಕೆಲಸಗಳು ಮತ್ತೆ ಆರಂಭವಾಗುವುದು. ಹೊಸ ಹೊಸ ಅವಕಾಶಗಳು ಸಿಗುವುದು. ಕೆಲಸ ಮಾಡುತ್ತಿರುವವರಿಗೆ ಕೆಲಸದಲ್ಲಿ ಬಡ್ತಿ ಸಿಕ್ಕಿ ಉನ್ನತ ಸ್ಥಾನಕ್ಕೆ ಏರುವ ಅವಕಾಶ ಸಿಗುವುದು.

ಹೆಚ್ಚುವರಿ ಜವಾಬ್ದಾರಿಗಳು ಅಥವಾ ಅವರು ಬಯಸಿದ ಕೆಲಸವನ್ನು ಪಡೆಯಲು ಅವಕಾಶಗಳು ಸಿಗಬಹುದು. ದೀರ್ಘಕಾಲದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಬಹುದು. ಭವಿಷ್ಯದಲ್ಲಿ ವಿಶ್ವಾಸ ಹೆಚ್ಚಾಗಬಹುದು. ಏಳೂವರೆ ಶನಿಯ ಪ್ರಭಾವ ಕಡಿಮೆಯಾಗುವುದರಿಂದ ಒತ್ತಡವೂ ಕಡಿಮೆಯಾಗುವುದು. ಕುಟುಂಬ ಮತ್ತು ಸಾಮಾಜಿಕ ವಲಯದಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಯಾಗುವುದು.

ಕರ್ಕಾಟಕ ರಾಶಿ (Cancer)

ಶನಿಯ ಸಂಚಾರದ ನಂತರದ ಅವಧಿಯು ಕರ್ಕಾಟಕ ರಾಶಿಯವರಿಗೆ ಬಹಳ ಮುಖ್ಯವಾಗಿರುವುದು. ತಾಳ್ಮೆಯಿಂದ ಕೆಲಸ ಮಾಡಲು ಮತ್ತು ಪ್ರಗತಿ ಸಾಧಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಬಹುದು. ಬಾಕಿ ಉಳಿದಿರುವ ಕೆಲಸಗಳನ್ನು ಒಂದೊಂದಾಗಿ ಪೂರ್ಣಗೊಳಿಸಲು ಅವಕಾಶ ಸಿಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು. ಬಡ್ತಿ ಅಥವಾ ಸಂಬಳ ಹೆಚ್ಚಳಕ್ಕೆ ಅವಕಾಶಗಳು ಸಿಗುವುದು. ಜವಾಬ್ದಾರಿಗಳು ಹೆಚ್ಚಾದರೂ, ವೃತ್ತಿಜೀವನದ ಬೆಳವಣಿಗೆಗೆ ಅಡಿಪಾಯವಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಹೆಚ್ಚಾಗುವುದು. ಸ್ನೇಹಿತರು ಮತ್ತು ಪ್ರೀತಿಪಾತ್ರರ ಬೆಂಬಲ ಸಿಗುವುದು.

ತುಲಾ ರಾಶಿ (Libra)

ಶನಿಯ ಸಂಚಾರವು ತುಲಾ ರಾಶಿಯವರ ಇದುವರೆಗಿನ ಪ್ರಯತ್ನಗಳಿಗೆ ಫಲ ನೀಡುವುದು. ನಿಮ್ಮ ಪಾಲಿನ ಉತ್ತಮ ಸಮಯ ಇದಾಗಿರುವುದು. ಆದಾಯ ಹೆಚ್ಚಿಸಲು ಹೊಸ ಅವಕಾಶಗಳು ಒದಗಿ ಬರುವುದು. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣ ಹರಿದುಬರುವುದು. ಅನಗತ್ಯ ಒತ್ತಡ ಕ್ರಮೇಣ ಕಡಿಮೆಯಾಗಬಹುದು. ಭವಿಷ್ಯಕ್ಕಾಗಿ ಸ್ಪಷ್ಟ ಯೋಜನೆಗಳನ್ನು ರೂಪಿಸಲು ವಾತಾವರಣ ಸೃಷ್ಟಿಯಾಗುವುದು. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿದರೆ ಫಲ ಸಿಗುವುದು. ತಾಳ್ಮೆಯಿಂದಿದ್ದರೆ ಶಿಸ್ತನ್ನು ಅಭ್ಯಾಸ ಮಾಡಿಕೊಂಡರೆ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಾಣಬಹುದು.

ಮಕರ ರಾಶಿ (Capricorn)

ಶನಿಯ ಸಂಚಾರದ ನಂತರ, ಮಕರ ರಾಶಿಯವರ ಜೀವನದಲ್ಲಿ ಕೆಲವು ಬದಲಾವಣೆಗಳಾಗಬಹುದು. ಹಿಂದೆ ಅನುಭವಿಸಿದ ಕಷ್ಟಗಳೆಲ್ಲಾ ಪರಿಹಾರವಾಗುವುದು. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುವುದು. ಬಾಕಿ ಇರುವ ಕೆಲಸಗಳು ಮತ್ತೆ ಚುರುಕು ಪಡೆಯುವುದು. ವೃತ್ತಿಪರ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಅವಕಾಶಗಳು ಒಲಿದು ಬರಬಹುದು. ಆದಾಯವನ್ನು ಹೆಚ್ಚಿಸುವ ಅವಕಾಶಗಳು ಸಿಗುವುದು. ಕುಟುಂಬದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವಿರಿ. ಮನಸ್ಸಿನ ಶಾಂತಿ ಹೆಚ್ಚಾಗುವುದು.

ಮೇಷ ರಾಶಿ (Aries)

ಜ್ಯೋತಿಷ್ಯದ ಪ್ರಕಾರ, ಜೂನ್ 3, 2027 ರಂದು ಶನಿಯು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಮೇಷ ರಾಶಿಯವರಿಗೆ ಶನಿಯ ಹೊಸ ಹಂತವು ಪ್ರಾರಂಭವಾಗುತ್ತದೆ. ಈ ಅವಧಿಯ ಆರಂಭದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹೆಗಲೇರುವುದು ಕೆಲವು ಸವಾಲುಗಳನ್ನು ಕೂಡಾ ಎದುರಿಸಬೇಕಾಗಬಹುದು. ಈ ಹಂತದ ಕೊನೆಗೆ ಎಲ್ಲವೂ ಮತ್ತೆ ಹಳಿಗೆ ಮರಳುವುದು. ನಿಂತು ಹೋಗಿರುವ ಕೆಲಸಗಳು ಮತ್ತೆ ಶುರುವಾಗುವುದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ. ಈ ಅವಧಿಯಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆ, ಸಂಯಮದಿಂದ ಮುಂದುವರೆದರೆ ನಿಮ್ಮ ಪ್ರಯತ್ನಕ್ಕೆ ಬೆಲೆ ಸಿಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+