Saturn Direct 2026: ಶನಿದೇವನ ಕೃಪೆಯಿಂದ ಈ ರಾಶಿಯವರಿಗೆ ರಾಜಯೋಗ! ಅಷ್ಟೈಶ್ವರ್ಯ, ಯಶಸ್ಸಿನ ಭಾಗ್ಯ
ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದೇ ಕರೆಯಲ್ಪಡುವ ಶನಿದೇವನ ಸಂಚಾರದಲ್ಲಿನ ಸಣ್ಣ ಬದಲಾವಣೆಗಳು ಕೂಡಾ ಹನ್ನೆರಡೂ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದೀಗ ಹಿಮ್ಮುಖ ಚಲನೆಯಲ್ಲಿರುವ ಶನಿಗ್ರಹ ಮತ್ತೆ ನೇರ ನಡೆಗೆ ಮರಳಲಿದ್ದಾನೆ. ಶನಿಯು ನೇರ ನಡೆಗೆ ಮರಳುವ ಮೂಲಕ ಕೆಲವೊಂದು ರಾಶಿಯವರ ಭಾಗ್ಯವನ್ನು ಬೆಳಗುವನು.
Saturn Direct 2026: ಶನಿಯ ನೇರ ನಡೆಯಿಂದ ಪರಿಣಾಮ
ಶನಿಯ ನೇರ ಸಂಚಾರವು ನಿಂತು ಹೋಗಿದ್ದ ಕೆಲಸಗಳನ್ನು ವೇಗಗೊಳಿಸುತ್ತದೆ. ಕೆಲವು ರಾಶಿಯವರ ಅದೃಷ್ಟವನ್ನು ದುಪ್ಪಟ್ಟಾಗಿಸುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ವೃತ್ತಿ ಮತ್ತು ವ್ಯಾಪಾರ ಉದ್ಯಮಗಳಲ್ಲಿ ಹೊಸ ಎತ್ತರಕ್ಕೆ ಏರುವ ಸಾಧ್ಯತೆ ಇದೆ. ವಿಶೇಷವಾಗಿ ಶನಿಯ ನೇರ ನಡೆಯಿಂದಾಗಿ 5 ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾಗುವುದು (Saturn Direct Effects).

Saturn Direct 2026: ಶನಿಯ ನೇರ ನಡೆಯಿಂದ ಈ ರಾಶಿಯವರಿಗೆ ಅದೃಷ್ಟ
ವೃಷಭ ರಾಶಿ (Taurus): ಶನಿಯ ಸಂಚಾರದಿಂದಾಗಿ ವೃಷಭ ರಾಶಿಯವರ ವೃತ್ತಿಜೀವನದಲ್ಲಿ ಅನಿರೀಕ್ಷಿತ ಪ್ರಗತಿ ಸಿಗುವುದು. ನಿರುದ್ಯೋಗಿಗಳಿಗೆ ಅವರು ಬಯಸಿದ ಉದ್ಯೋಗ ಒದಗಿ ಬರುವುದು. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಉದ್ಯೋಗದಲ್ಲಿ ಬಡ್ತಿ ಸಿಕ್ಕಿ ವೇತನ ಹೆಚ್ಚಾಗುವುದು. ಲಾಭ ಗಳಿಸಲು ಸಾಕಷ್ಟು ಅವಕಾಶಗಳು ಸಿಗುವುದು. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಿದವರಿಗೆ ದೊಡ್ಡ ಮಟ್ಟದ ಲಾಭವಾಗುವುದು.
ಮಿಥುನ ರಾಶಿ (Gemini) : ಬಾಕಿ ಇರುವ ನ್ಯಾಯಾಲಯದ ವಿವಾದಗಳು ಮತ್ತು ಆಸ್ತಿ ವಿವಾದಗಳ ತೀರ್ಪು ನಿಮ್ಮ ಪರವಾಗಿ ಬರುವುದು. ಅನುಕೂಲಕರ ವಾತಾವರಣ ನಿರ್ಮಾಣವಾಗುವುದು. ಪೂರ್ವಜರ ಆಸ್ತಿಗಳಲ್ಲಿ ಪಾಲು ಸಿಗುವ ಮೂಲಕ ಹಠಾತ್ ಸಂಪತ್ತು ಒದಗಿ ಬರುವುದು. ಸಮಾಜದಲ್ಲಿ ಖ್ಯಾತಿ ಮತ್ತು ಗೌರವ ಹೆಚ್ಚಾಗುವುದು.
ತುಲಾ ರಾಶಿ (Libra) : ಶನಿಯ ಸಂಚಾರವು ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರುವುದು. ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣ ಪರಿಹಾರ ಸಿಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವರು. ಕುಟುಂಬದಲ್ಲಿನ ದೀರ್ಘಕಾಲದ ವಿವಾದಗಳು ಬಗೆಹರಿಯುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ಧನು ರಾಶಿ (Sagittarius): ಶನಿಯ ನೇರ ಸಂಚಾರದಿಂದ ಧನು ರಾಶಿಯವರ ಆದಾಯದ ಮೂಲಗಳು ಹೆಚ್ಚಾಗುವುದು. ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಉದ್ಯಮಿಗಳು ವ್ಯವಹಾರ ವಿಸ್ತರಿಸಲು ಅವಕಾಶ ಸಿಗುವುದು. ಸ್ವಂತ ಮನೆ ನಿರ್ಮಾಣಕ್ಕೆ ಇಳಿಯುವಿರಿ. ಆರ್ಥಿಕ ಸ್ಥಿತಿ ಸದೃಢವಾಗುವುದು.
ಕುಂಭ ರಾಶಿ (Aquarius): ಶನಿಯ ನೇರ ಸಂಚಾರವು ಇದೇ ರಾಶಿಯಲ್ಲಿ ಆಗುವುದರಿಂದ ಇವರು ಇಡುವ ಪ್ರತಿ ಹೆಜ್ಜೆ ಯಶಸ್ಸಿನತ್ತ ಸಾಗುವುದು. ಮಾನಸಿಕ ಒತ್ತಡ ಮತ್ತು ಚಿಂತೆಗಳು ಸಂಪೂರ್ಣವಾಗಿ ದೂರವಾಗುವುದು. ವಿದೇಶ ಪ್ರಯಾಣದ ಯೋಗವಿದೆ. ಆರೋಗ್ಯವು ಸುಧಾರಿಸುವುದು.
ಶನಿದೇವರ ಕೃಪೆಗೆ ಪಾತ್ರರಾಗುವ ಮಾರ್ಗ :
ಶನಿದೇವರ ಆಶೀರ್ವಾದವನ್ನು ಪಡೆಯಲು ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು. ಅಶ್ವಥ ಮರಕ್ಕೆ ಪ್ರದಕ್ಷಿಣೆ ಹಾಕಬೇಕು, ನಂತರ ಮರಕ್ಕೆ ನೀರು ಅರ್ಪಿಸಿ ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಶನಿ ಗ್ರಹಕ್ಕೆ ಕಪ್ಪು ಎಳ್ಳು ಅಥವಾ ಉದ್ದು, ಸಣ್ಣ ತುಂಡು ಕಬ್ಬಿಣ, ಕಪ್ಪು ಬಟ್ಟೆ, ಶಂಖಪುಷ್ಪ ಹೂವು ಅರ್ಪಿಸಬೇಕು. ಶನಿವಾರ ಮಾಂಸಾಹಾರ ಬಿಟ್ಟರೆ ಒಳ್ಳೆಯದು. ಕಪ್ಪು ಬಟ್ಟೆ ಅಥವಾ ಆಹಾರವನ್ನು ಬಡವರಿಗೆ ದಾನ ಮಾಡುವುದರಿಂದ ಶನಿ ದೋಷಗಳು ದೂರವಾಗುವುದು. ಸಂಪೂರ್ಣ ಶುಭ ಫಲಿತಾಂಶಗಳು ದೊರೆಯುವುದು. ಅಲ್ಲದೆ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೂ ಶನಿಕೃಪೆಗೆ ಪಾತ್ರರಾಗಬಹುದು.


Click it and Unblock the Notifications
