ಸಾಮುದ್ರಿಕಾ ಶಾಸ್ತ್ರದಲ್ಲಿ ಹೆಣ್ಣಿನ ಭುಜ ತಿಳಿಸುವ ಗುಣ-ನಡತೆ-ಭವಿಷ್ಯ
ಮಹಿಳೆಯರ ಸಾಮುದ್ರಿಕಾ ಶಾಸ್ತ್ರದ ಮುಂದುವರಿದ ಭಾಗವಾಗಿ ಈ ದಿನ ಭುಜದ ಬಗ್ಗೆ ತಿಳಿಸಲಾಗುತ್ತಿದೆ. ಸಾಮುದ್ರಿಕಾ ಶಾಸ್ತ್ರದಲ್ಲೇ ಇರಬಹುದು ಅಥವಾ ವಿಜ್ಞಾನದಲ್ಲೇ ಇರಬಹುದು ಭುಜಕ್ಕೆ ಪ್ರಾಶಸ್ತ್ಯ ಇದ್ದೇ ಇದೆ. ಹಾಗೆ ನೋಡಿದರೆ ಗಂಡಿಗಿಂತ ಹೆಣ್ಣಿಗೆ ಸಂಸಾರದ ಜವಾಬ್ದಾರಿ ಹೆಚ್ಚು ಭುಜದ ಮೇಲೆ ಬೀಳುತ್ತದೆ.
ಇಲ್ಲಿ ಭುಜ ಅಂದಾಕ್ಷಣ ಆಕೆಯ ಜವಾಬ್ದಾರಿ ಮತ್ತು ಸೌಂದರ್ಯದ ಬಗ್ಗೆ ತಿಳಿಸುವುದಷ್ಟೇ ಅಲ್ಲ, ವ್ಯಕ್ತಿತ್ವದ ಬಗ್ಗೆ ಕೂಡ ಗೊತ್ತಾಗುತ್ತದೆ. ದೇಹದ ರಚನೆಯ ಆಧಾರದಲ್ಲಿ ಆಯಾ ವ್ಯಕ್ತಿಯ ಗುಣ-ಸ್ವಭಾವದ ಬಗ್ಗೆ ಹೇಳಬಹುದು. ಭುಜದ ರಚನೆ ಮತ್ತು ಮಚ್ಚೆ ಆಧಾರದಲ್ಲಿ ಹೇಳಬಹುದಾದ ಹೆಣ್ಣಿನ ಗುಣ, ಸ್ವಭಾವ ಕೂಡ ಇಲ್ಲಿದೆ.
ಈ ಹಿಂದಿನ ಲೇಖನಗಳಲ್ಲಿ ಮಹಿಳೆಯ ಕಣ್ಣು, ತುಟಿ, ಕೂದಲು ನೋಡಿ ಹೇಳಬಹುದಾದ ಸಾಮುದ್ರಿಕಾ ಶಾಸ್ತ್ರದ ಬಗ್ಗೆ ಓದಿದ್ದೀರಿ. ಆ ಸರಣಿಯ ಮುಂದುವರಿದ ಭಾಗವಿದು. ಆಸಕ್ತಿಕರವಾಗಿದೆ. ಜತೆಗೆ ಹಿಂದಿನ ಲೇಖನಗಳನ್ನು ಸಹ ಒಮ್ಮೆ ಹೋಲಿಸಿಕೊಂಡು ನೋಡಿ. ಜತೆಗೆ ಈ ಬಾರಿಯದ್ದನ್ನು ಗಮನಿಸಿ. ನಿಮ್ಮ ಅಭಿಪ್ರಾಯ ತಿಳಿಸಿ.

ದಪ್ಪ ಭುಜಗಳಿದ್ದರೆ
ಯಾವ ಮಹಿಳೆಯ ಭುಜವು ದಪ್ಪನಾಗಿರುತ್ತದೋ ಅಂಥವರು ದೈಹಿಕವಾಗಿ ಬಲಶಾಲಿಗಳಾಗಿರುತ್ತಾರೆ. ಅಂಥ ಮಹಿಳೆಯರು ತಮ್ಮ ಅತ್ತೆ-ಮಾವನಿಗೆ ಸೇವೆ ಮಾಡುವುದಿಲ್ಲ.

ಭುಜ ಸಣ್ಣಕ್ಕಿದ್ದರೆ
ಭುಜಗಳು ಸಣ್ಣವಾಗಿದ್ದರೆ ಅಂಥವರು ಬಹಳ ಪ್ರಭಾವಶಾಲಿಗಳಾಗಿರುತ್ತಾರೆ. ಅವರ ಹೃದಯವು ಸಮಾಜ ಸೇವೆ ಮಾಡುವತ್ತ ತುಡಿಯುತ್ತಿರುತ್ತದೆ. ಈ ಮಹಿಳೆಯರ ಪತಿ ಕುಟುಂಬದವರು ಶ್ರೀಮಂತರಾಗಿರುತ್ತಾರೆ.

ಮೇಲ್ಮುಖವಾದ ಭುಜ
ಭುಜ ಮೇಲ್ಮುಖವಾಗಿದ್ದರೆ ಶ್ರೀಮಂತಿಕೆ ಹಾಗೂ ಕೀರ್ತಿ ಲಭಿಸುತ್ತದೆ. ಈ ಮಹಿಳೆಯರಲ್ಲಿ ವಿಶೇಷ ಪ್ರತಿಭೆ ಅಡಗಿರುತ್ತದೆ. ಇಂಥ ಮಹಿಳೆಯ ಪತಿ ಸುಂದರ, ಸಭ್ಯ ಹಾಗೂ ಆತ್ಮಗೌರವ ಇರುವವರಾಗಿರುತ್ತಾರೆ.

ಕೆಳ ಮುಖದ ಭುಜ
ಭುಜವು ಕೆಳಮುಖವಾಗಿದ್ದರೆ ಅಂಥವರು ಸಮಾಜಕ್ಕೆ ಹಾಗೂ ಕುಟುಂಬಕ್ಕಾಗಿ ಶ್ರಮಿಸುತ್ತಾರೆ. ದಾಂಪತ್ಯ ಜೀವನ ಸುದೀರ್ಘವಾಗಿರುತ್ತದೆ. ಈ ಮಹಿಳೆಯರಿಗೆ ಹಣದ ಬಗ್ಗೆ ವಿಶೇಷ ಆಕರ್ಷಣೆ ಇರುತ್ತದೆ.

ಬಲ ಭುಜದಲ್ಲಿ ಮಚ್ಚೆಯಿದ್ದರೆ
ಮಹಿಳೆಗೆ ಬಲ ಭುಜದಲ್ಲಿ ಮಚ್ಚೆ ಇದ್ದರೆ ಸೌಂದರ್ಯ ಹಾಗೂ ಪ್ರಕೃತಿ ಆರಾಧಕಿಯರಾಗಿರುತ್ತಾರೆ. ಮಾತಿನಲ್ಲಿ ಒರಟುತನ ಇದ್ದರೂ ಹೃದಯದಲ್ಲಿ ಒಳ್ಳೆ ಭಾವನೆಗಳಿರುತ್ತವೆ. ಹಣದ ವಿಚಾರದಲ್ಲಿ ಜಿಗುಟು ಸ್ವಭಾವದವರಾಗಿರುತ್ತಾರೆ.

ಎಡ ಭುಜದಲ್ಲಿ ಮಚ್ಚೆ ಇದ್ದರೆ
ಮಹಿಳೆಯರಿಗೆ ಎಡ ಭುಜದಲ್ಲಿ ಮಚ್ಚೆಯಿದ್ದರೆ ಪತಿಯ ಬಗ್ಗೆ ವಿಪರೀತ ಪ್ರೀತಿ ಮತ್ತು ಅವರಿಗಾಗಿಯೇ ಜೀವನ ಮುಡುಪಾಗಿಡುತ್ತಾರೆ. ಇಂಥ ಮಹಿಳೆಯರು ಸಂಗೀತ ಕ್ಷೇತ್ರದಲ್ಲಿ ಬಹಳ ಚಟುವಟಿಕೆಯಿಂದ ಇರುತ್ತಾರೆ. ತಮ್ಮ ವಸ್ತುಗಳ ಬಗ್ಗೆ ವಿಪರೀತ ಪ್ರೀತಿ, ಆಸಕ್ತಿ ಇರುತ್ತದೆ.

ಮೃದುವಾದ ಭುಜ
ಮೃದುವಾದ ಭುಜಗಳಿರುವ ಮಹಿಳೆಯರಿಗೆ ಕಲಾಪ್ರೇಮಿಗಳಾಗಿರುತ್ತಾರೆ. ಅವರ ಧ್ವನಿ ಬಹಳ ಚೆನ್ನಾಗಿರುತ್ತದೆ. ಇವರು ಗಾಯನ, ನಾಟ್ಯ, ನಟನೆ ಮುಂತಾದ ಕಲಾ ಕ್ಷೇತ್ರದಲ್ಲಿ ಬಹಳ ಹೆಸರು ಮಾಡುತ್ತಾರೆ.












Click it and Unblock the Notifications