Samsapthaka Rajayoga 2024: ನವರಾತ್ರಿಯ ನಂತರ ಸಂಸಪ್ತಕ ರಾಜಯೋಗ: ಈ ರಾಶಿಗೆ ಕೋಟಿಗಟ್ಟಲೆ ಹಣ
ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಾಗಿದಾಗ ಹಾಗೂ ಬೇರೆ ಬೇರೆ ರಾಶಿಯ ಒಂದೇ ಮನೆಯನ್ನು ಸ್ಥಾನ ಪಡೆದುಕೊಂಡಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಹೀಗೆ ರೂಪಗೊಂಡ ಯೋಗಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಅಂದಹಾಗೆ ಗುರು-ಶುಕ್ರ ಸಂಯೋಗದಿಂದಾಗಿ ಸಂಸಪ್ತಕ ರಾಜಯೋಗ ರೂಪಗೊಳ್ಳುತ್ತದೆ. ಮೇಷ ರಾಶಿಯಲ್ಲಿ ಅಕ್ಟೋಬರ್ 10 ರಂದು ಗುರು ಸಂಚಾರ ಮಾಡುತ್ತದೆ. ಅಕ್ಟೋಬರ್ 13 ರಂದು ಶುಕ್ರ ಗ್ರಹ ವೃಶ್ಚಿಕ ರಾಶಿಗೆ ಪ್ರವೇಶ ಪಡೆಯಲಿದೆ. ಈ ಎರಡೂ ಗ್ರಹಗಳು ಮೇಷ ಹಾಗೂ ವೃಶ್ಚಿಕ ರಾಶಿಯ 7ನೇ ಮನೆಯನ್ನು ಆಕ್ರಮಿಸಿಕೊಂಡಿವೆ. ಗುರು-ಶುಕ್ರ ಈ ಎರಡೂ ಗ್ರಹಗಳ ಸ್ಥಾನದಿಂದಾಗಿ ಸಂಸಪ್ತಕ ರಾಜಯೋಗ ರೂಪಗೊಳ್ಳುತ್ತಿದೆ.
ಅಂದಹಾಗೆ ಶುಕ್ರ ಗ್ರಹವನ್ನು ಪ್ರೀತಿ, ಸಂಪತ್ತು, ಬುದ್ಧಿವಂತಿಕೆಯ ಅಂಶವೆಂದು ಕರೆಯಲಾಗುತ್ತದೆ. ಇನ್ನೂ ಗುರುವನ್ನು ಪ್ರಭಾವ, ಶಿಕ್ಷಂ ಸ್ಥಾನಮಾನ ಮತ್ತು ಸಂಪತ್ತಿನ ಗ್ರಹವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗುರುವನ್ನು ದೇವರ ಗುರು ಎಂದು ಕರೆಯಲಾಗುತ್ತದೆ. ಗುರು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷ ಇರುತ್ತದೆ. ಇಂತಹ ಫಲ ನೀಡುವ ಗ್ರಹಗಳ ಸ್ಥಾನದಿಂದ ರೂಪಗೊಳ್ಳುವ ಸಂಸಪ್ತಕ ರಾಜಯೋಗ ಮಂಗಳಕರ ಯೋಗಗಳಲ್ಲಿ ಒಂದಾಗಿದೆ. ಹಾಗಾದರೆ ರಾಶಿಗಳ ಮೇಲೆ ಈ ರಾಜಯೋಗದ ಪರಿಣಾಮವನ್ನು ತಿಳಿಯೋಣ.

ಮೇಷ ರಾಶಿ
ಸಮಾಸಪ್ತಕ ರಾಜಯೋಗ ಮೇಷ ರಾಶಿಯವರಿಗೆ ಮಂಗಳಕರ ಫಲಿತಾಂಶವನ್ನು ನೀಡುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಸಂಬಳವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಅನೇಕ ಲಾಭಗಳನ್ನು ತರುತ್ತದೆ. ವ್ಯಾಪಾರಿಗಳು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಜೀವನದಲ್ಲಿ ವಿವಿಧ ಸಂತೋಷಗಳನ್ನು ಅನುಭವಿಸುವ ಸಮಯ ಇದಾಗಿದೆ.
ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮೇಷ ರಾಶಿ ಅವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಕಾಣುತ್ತಾರೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಅವಧಿಯಲ್ಲಿ ಅವಕಾಶಗಳು ಸಿಗುತ್ತವೆ. ಈ ಯೋಗ ಅನಿರೀಕ್ಷಿತ ಆರ್ಥಿಕ ಲಾಭವನ್ನು ತರುತ್ತದೆ. ಶತ್ರುಗಳಿಂದ ಮುಕ್ತಿ ಸಿಗಲಿದೆ. ಶತ್ರು ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸುವ ಸಮಯ ಇದಾಗಿದೆ.

ಸಿಂಹ ರಾಶಿ
ನವರಾತ್ರಿಯ ಸಮಯದಲ್ಲಿ ಸಮಾಸಪ್ತಕ ರಾಜಯೋಗ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಶುಭ ಫಲವನ್ನು ನೀಡಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಧನಲಾಭ ಸಿಗಲಿದೆ. ಜೀವನದಲ್ಲಿ ಸಂತೋಷದ ಘಟನೆಗಳು ಒಂದರ ನಂತರ ಒಂದರಂತೆ ನಡೆಯುತ್ತವೆ. ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣದಿಂದಾಗಿ ಮನೆಯ ಸದಸ್ಯರೆಲ್ಲರೂ ಸಂತೋಷದಿಂದಿರುತ್ತಾರೆ.
ಸಿಂಹ ರಾಶಿಯವರಿಗೆ ಹೆಚ್ಚಿನ ಸಂತೋಷ ಅನುಭವಿಸುವ ಯೋಗವಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯೊಂದಿಗೆ ನೆಮ್ಮದಿ ನೆಲೆಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅಂದುಕೊಂಡ ಜೀವನ ಸಂಗಾತಿ ಸಿಗಲಿದ್ದಾಳೆ. ನೀವು ವ್ಯಾಪಾರಕ್ಕಾಗಿ ಪ್ರಯಾಣಿಸಬೇಕಾಗುತ್ತದೆ. ಇದು ವೃತ್ತಿ ಮತ್ತು ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಕನ್ಯಾ ರಾಶಿ
ನವರಾತ್ರಿಯ ಸಮಯ ಕನ್ಯಾ ರಾಶಿಯವರಿಗೆ ಮಂಗಳಕರವಾಗಿದೆ. ಸಂಸಪ್ತಕ ರಾಜಯೋಗದಿಂದಾಗಿ ಕನ್ಯಾ ರಾಶಿಯ ಉದ್ಯಮಿಗಳಿಗೆ ಆರ್ಥಿಕವಾಗಿ ಪ್ರಗತಿ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಉತ್ತಮ ಆರೋಗ್ಯಕ್ಕಾಗಿ ಹೊರಗಿನ ಆಹಾರ ತ್ಯಜಿಸುವುದು ಉತ್ತಮ. ದುರ್ಗಾದೇವಿಯ ಕೃಪೆಯಿಂದ ಸಂಪತ್ತು ಹೆಚ್ಚಾಗಲಿದೆ.
ಸಮಾಜದಲ್ಲಿ ಖ್ಯಾತಿ ಹೆಚ್ಚಾಗಲಿದೆ. ಜೀವನದಲ್ಲಿ ಬಹಳ ಸಂತೋಷದ ಅವಧಿ ಇದಾಗಿದೆ. ನೀವು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಹುಡುಕಿಕೊಂಡು ಬರಲಿದೆ. ಈ ರಾಶಿಯ ವಿದ್ಯಾರ್ಥಿಗಳ ಬುದ್ಧಿಶಕ್ತಿ ಹೆಚ್ಚಾಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications